- Sri Sathya Sai Balvikas - https://sssbalvikas.in/kn/ -

ಶ್ರೀ ಸತ್ಯಸಾಯಿ ಅಷ್ಟೋತ್ತರ-ಶತ–ನಾಮರತ್ನಮಾಲಾ1-27

Print Friendly, PDF & Email [1]
[vc_row css=”.vc_custom_1623406677897{margin-top: 0px !important;border-top-width: 0px !important;padding-top: 0px !important;}”][vc_column][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e”][vc_column_text el_class=”video-sty”][/vc_column_text][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e”][vc_column_text el_class=”title-para postaudio” css=”.vc_custom_1648043413311{margin-bottom: 10px !important;}”] http://sssbalvikas.in/wp-content/uploads/2021/04/Ashtothram1-27.mp3 [2] [/vc_column_text][vc_custom_heading text=”ಶ್ಲೋಕ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e”][vc_column_text el_class=”kn-nudi-uni01e content-box”]
  1. ಓಂ ಶ್ರೀ ಸತ್ಯಸಾಯಿಬಾಬಾಯ ನಮಃ |

    ನಮ್ಮೆಲ್ಲರ ತಂದೆಯೂ ತಾಯಿಯೂ ಆದ ಸತ್ಯಸಾಯಿ ಸ್ವಾಮಿಗೆ ನಮಸ್ಕಾರ.

  2. ಓಂ ಶ್ರೀ ಸತ್ಯ ಸ್ವರೂಪಾಯ ನಮಃ |

    ಸತ್ಯರೂಪಿಯಾದವನಿಗೆ ನಮಸ್ಕಾರ.

  3. ಓಂ ಶ್ರೀ ಸತ್ಯಧರ್ಮ ಪರಾಯಣಾಯ ನಮಃ |

    ಸತ್ಯ ಮತ್ತು ಧರ್ಮಗಳಲ್ಲೇ ನಿರತನಾಗಿರುವವನಿಗೆ ನಮಸ್ಕಾರ.

  4. ಓಂ ಶ್ರೀ ವರದಾಯ ನಮಃ |

    ವರಗಳನ್ನು, ದಿವ್ಯಾನುಗ್ರಹವನ್ನು ನೀಡುವವನಿಗೆ ನಮಸ್ಕಾರ.

  5. ಓಂ ಶ್ರೀ ಸತ್ಪುರುಷಾಯ ನಮಃ |

    ಸತ್ಪುರುಷನಿಗೆ, ನಿತ್ಯ ಅಸ್ತಿತ್ವವುಳ್ಳ ಭಗವಂತನಿಗೆ ನಮಸ್ಕಾರ. ಭಗವಂತ ಸತ್ ಆಗಿದ್ದಾನೆ. ಅಲ್ಲದೆ ಅವನು ಪುರುಷ, ಸಮಸ್ತ ಜಗತ್ತು – ಪ್ರಕೃತಿಗೂ ಒಡೆಯ.

  6. ಓಂ ಶ್ರೀ ಸತ್ಯಗುಣಾತ್ಮನೇ ನಮಃ |

    ಸತ್ಯಗುಣವನ್ನು ಹೊಂದಿರುವವನಿಗೆ ನಮಸ್ಕಾರ. ‘ಸತ್ಯವೇ ನನ್ನ ಆಚಾರ’ ಎಂದು ಸ್ವಾಮಿ ಹೇಳುತ್ತಾರೆ.

  7. ಓಂ ಶ್ರೀ ಸಾಧುವರ್ಧನಾಯ ನಮಃ |

    ಸಾಧುಗುಣಗಳನ್ನು ವರ್ಧಿಸುವವನಿಗೆ ನಮಸ್ಕಾರ.

  8. ಓಂ ಶ್ರೀ ಸಾಧುಜನ ಪೋಷಣಾಯ ನಮಃ |

    ಸಾಧುಜನರನ್ನು, ಸಜ್ಜನರನ್ನು ಪೋಷಿಸುವವನಿಗೆ ನಮಸ್ಕಾರ.

  9. ಓಂ ಶ್ರೀ ಸರ್ವಜ್ಞಾಯ ನಮಃ |

    ಸರ್ವಜ್ಞನಿಗೆ, ಸರ್ವವನ್ನೂ ತಿಳಿದವನಿಗೆ ನಮಸ್ಕಾರ.

  10. ಓಂ ಶ್ರೀ ಸರ್ವಜನಪ್ರಿಯಾಯ ನಮಃ |

    ಎಲ್ಲ ಜನರಿಗೂ ಪ್ರಿಯನಾದ ಸ್ವಾಮಿಗೆ ನಮಸ್ಕಾರ.

  11. ಓಂ ಶ್ರೀ ಸರ್ವಶಕ್ತಿಮೂರ್ತಯೇ ನಮಃ |

    ಎಲ್ಲ ಶಕ್ತಿಗಳ ಸಾಕಾರವಾದ ಭಗವಂತನಿಗೆ, ಸರ್ವಶಕ್ತನಿಗೆ, ನಮಸ್ಕಾರ.

  12. ಓಂ ಶ್ರೀ ಸರ್ವೇಶಾಯ ನಮಃ |

    ಸರ್ವೇಶನಿಗೆ, ಎಲ್ಲರಿಗೂ ಒಡೆಯನಾದವನಿಗೆ ನಮಸ್ಕಾರ.

  13. ಓಂ ಶ್ರೀ ಸರ್ವಸಂಗ ಪರತ್ಯಾಗಿನೇ ನಮಃ |

    ಅನಾಸಕ್ತನಾದವನಿಗೆ, ಎಲ್ಲ ಬಗೆಯ ಬಂಧನಗಳನ್ನು ತ್ಯಾಗಮಾಡಿದವನಿಗೆ, ನಮಸ್ಕಾರ.

  14. ಓಂ ಶ್ರೀ ಸರ್ವಾಂತರ್ಯಾಮಿನೇ ನಮಃ |

    ಸರ್ವ ಚರಾಚರಗಳ ಅಂತರಂಗದಲ್ಲಿರುವವನಿಗೆ, ಎಲ್ಲರ ಒಳಗೆ ವ್ಯಾಪಿಸಿರುವವನಿಗೆ ನಮಸ್ಕಾರ.

  15. ಓಂ ಶ್ರೀ ಮಹಿಮಾತ್ಮನೇ ನಮಃ |

    ಅಪಾರ ಮಹಿಮೆಯಿಂದ ಕೂಡಿದವನಿಗೆ ನಮಸ್ಕಾರ

  16. ಓಂ ಶ್ರೀ ಮಹೇಶ್ವರ ಸ್ವರೂಪಾಯ ನಮಃ |

    ಮಹೇಶ್ವರ ಸ್ವರೂಪನಾದ ಸ್ವಾಮಿಗೆ ನಮಸ್ಕಾರ.

  17. ಓಂ ಶ್ರೀ ಪರ್ತಿಗ್ರಾಮೋದ್ಭವಾಯ ನಮಃ |

    ಪರ್ತಿ, ಪುಟ್ಟಪರ್ತಿ ಎಂಬ ಗ್ರಾಮದಲ್ಲಿ ಜನಿಸಿದವನಿಗೆ ನಮಸ್ಕಾರ.

  18. ಓಂ ಶ್ರೀ ಪರ್ತಿಕ್ಷೇತ್ರ, ನಿವಾಸಿನೇ ನಮಃ |

    ಪರ್ತಿಕ್ಷೇತ್ರದಲ್ಲಿ ವಾಸಮಾಡುವವನಿಗೆ ನಮಸ್ಕಾರ.

  19. ಓಂ ಶ್ರೀ ಯಶಃಕಾಯ ಶಿರ್ಡಿವಾಸಿನೇ ನಮಃ |

    ಹಿಂದಿನ ದೇಹದಲ್ಲಿ ಶಿರ್ಡಿಯಲ್ಲಿ ವಾಸಮಾಡುತ್ತಿದ್ದವನಿಗೆ ನಮಸ್ಕಾರ. ಶಿರ್ಡಿಯಲ್ಲಿದ್ದ ಸಾಯಿಬಾಬಾ ಅವರೇ ಪರ್ತಿಯ ಶ್ರೀ ಸತ್ಯಸಾಯಿಬಾಬಾಆಗಿ ಅವತರಿಸಿದ್ದಾರೆ.

  20. ಓಂ ಶ್ರೀ ಜೋಡಿ ಆದಿಪಲ್ಲಿ ಸೋಮಪ್ಪಾಯ ನಮಃ |

    ಮೊದಲ ಹಳ್ಳಿಯಲ್ಲಿ (ಕೈಲಾಸ) ಸೋಮಪ್ಪದಂಪತಿಯಾಗಿ (ಶಕ್ತಿ ಸಮೇತಶಿವ) ಶೋಭಿಸಿದ ಸ್ವಾಮಿಗೆ ನಮಸ್ಕಾರ.

  21. ಓಂ ಶ್ರೀ ಭರದ್ವಾಜ ಋಷಿ ಗೋತ್ರಾಯ ನಮಃ |

    ಭರದ್ವಾಜ ಮುನಿಯ ಗೋತ್ರದಲ್ಲಿ ಹುಟ್ಟಿದವನಿಗೆ ನಮಸ್ಕಾರ.

  22. ಓಂ ಶ್ರೀ ಭಕ್ತವತ್ಸಲಾಯ ನಮಃ |

    ಭಕ್ತರನ್ನು ವಾತ್ಸಲ್ಯದಿಂದ ಕಾಪಾಡುವ ಸ್ವಾಮಿಗೆ ನಮಸ್ಕಾರ.

  23. ಓಂ ಶ್ರೀ ಅಪಾಂತರಾತ್ಮನೇ ನಮಃ |

    ಎಲ್ಲ ಅವತಾರಗಳ ಮೂರ್ತಿರೂಪನಾದವನಿಗೆ ನಮಸ್ಕಾರ.

  24. ಓಂ ಶ್ರೀ ಅವತಾರ ಮೂರ್ತಯೇ ನಮಃ |

    ಎಲ್ಲಾ ಅವತಾರಗಳ ಮೂರ್ತಿರೂಪನಾದವನಿಗೆ ನಮಸ್ಕಾರ.

  25. ಓಂ ಶ್ರೀ ಸರ್ವಭಯ ನಿವಾರಿಣೇ ನಮಃ |

    ಎಲ್ಲ ಬಗೆಯ ಭಯಗಳನ್ನು ಪರಿಹರಿಸುವವನಿಗೆ ನಮಸ್ಕಾರ.

  26. ಓಂ ಶ್ರೀ ಆಪಸ್ತಂಬ ಸೂತ್ರಾಯ ನಮಃ |

    ಆಪಸ್ತಂಬ ಸೂತ್ರಕ್ಕೆ ಸೇರಿದ ಸ್ವಾಮಿಗೆ ನಮಸ್ಕಾರ.

  27. ಓಂ ಶ್ರೀ ಅಭಯ ಪ್ರದಾಯ ನಮಃ |

    ಅಭಯ ನೀಡುವ, ರಕ್ಷಣೆಕೊಡುವ ಸ್ವಾಮಿಗೆ ನಮಸ್ಕಾರ.

[/vc_column_text][vc_separator style=”shadow” border_width=”5″][/vc_column][/vc_row]