- Sri Sathya Sai Balvikas - https://sssbalvikas.in/kn/ -

ಚಿನ್ನ ಕಥಾ

Print Friendly, PDF & Email [1]
[vc_row][vc_column el_class=”kn-nudi-uni01e”][vc_column_text el_class=”kn-nudi-uni01e”]

ಭಗವಾನರು ತಮ್ಮ ದಿವ್ಯೋಪನ್ಯಾಸದ ಸಂದರ್ಭಗಳಲ್ಲಿ, ತಮ್ಮ ವಾಕ್ಪ್ರವಾಹದ ನಡುವೆ, ‘ಒಕ ಚಿನ್ನ ಕಥಾ’ ಎಂದು ಹೇಳಿದಾಗ ಕೇಳುವ ಎಲ್ಲರ ಕಿವಿಗಳು ಚುರುಕಾಗುತ್ತವೆ, ಹೃದಯದಲ್ಲಿ ಕುತೂಹಲ ಮೂಡುತ್ತದೆ. ಆ ಕಥೆಗಳು ಜ್ಞಾನ ಕೊಡುವ ಬೆಳಕು, ಒಂದು ತಂಪಾದ ಜಲಧಾರೆ, ಕಚಗುಳಿ ಇಡುವ ಒಂದು ಹಾಸ್ಯ, ಉಪಶಮನ ನೀಡುವ ಒಂದು ಮಾತ್ರೆ ಇದ್ದಂತೆ. ಚಿನ್ನ ಕಥೆಯ ಬಗ್ಗೆ ನಾವು ಆಲೋಚಿಸಿದಾಗ, ಅದು ಭಗವಾನರು ನಮಗೆ ಬೋಧಿಸಲು ಬಳಸುವ ಒಂದು ಪರಿಣಾಮಕಾರಿ ಸಾಧನವೆಂಬುದು ಅರಿವಿಗೆ ಬರುತ್ತದೆ. ಅವರು ಹೇಳುವ ನೀತಿಕಥೆಗಳು ಅವರ ಪ್ರೇಮದ ಸಾಧನಗಳು. ಅವುಗಳಿಂದ ಹಾರಿಬರುವ ಕೆಲವು ಬೋಧೆಗಳು ನಮ್ಮ ಹೃದಯವನ್ನು ಸೇರಿ, ಅಲ್ಲಿ ಗೂಡು ಕಟ್ಟುವುವು. ನಾವು ಅವುಗಳನ್ನು ಇಷ್ಟಪಟ್ಟು, ಬೆಳೆಸಿ, ಅವನ್ನು ನಮ್ಮ ಆಲೋಚನೆ ಮತ್ತು ವರ್ತನೆಯ ಭಾಗವನ್ನಾಗಿ ಮಾಡಿಕೊಳ್ಳಬೇಕಾದುದು ಅವಶ್ಯಕ.

Ref :- ಪ್ರಶಾಂತಿ ನಿಲಯಂ, ಸಂಕ್ರಾಂತಿ ೧೪. ೦೧. ೧೯೭೮ – ದಿವಂಗತ ನಾ .ಕಸ್ತೂರಿ

‘ಚಿನ್ನ ಕಥಾ’ ಎಂಬುದು ಭಗವಾನರು ತಮ್ಮ ದಿವ್ಯೋಪನ್ಯಾಸಗಳ ಸಂಧರ್ಭದಲ್ಲಿ ನಮ್ಮನ್ನು ಉದ್ಧರಿಸುವ, ಉತ್ತೇಜಿಸುವ ಸಲುವಾಗಿ ಹೇಳಿರುವ ಸಣ್ಣ, ಸಣ್ಣ ಕಥೆಗಳು. ನಮ್ಮ ಬಾಲವಿಕಾಸ ಮಕ್ಕಳನ್ನು ಆಕರ್ಷಿಸಿ, ಪ್ರೇರೇಪಿಸುವ ಸಲುವಾಗಿ ಅಂತಹ ಕೆಲವು ಕಥೆಗಳನ್ನು ಪಠ್ಯವಸ್ತುವಿನಲ್ಲಿ ಸೇರಿಸಲಾಗಿದೆ. ಅವುಗಳಲ್ಲಿ ಅಡಗಿರುವ ನೈತಿಕ ಮೌಲ್ಯಗಳನ್ನು ಮಕ್ಕಳು ಅರಿತು, ಅದರಂತೆ ಜೀವಿಸಬೇಕೆಂಬುದೇ ಅದರ ಮೂಲೋದ್ದೇಶ. ಆ ಕಥೆಗಳು ಅವರ ಹೃದಯ ಮತ್ತು ಮನಸ್ಸುಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಬಲ್ಲದು.

ಹಲವಾರು ಆಧ್ಯಾತ್ಮಿಕ ವಿಚಾರಗನ್ನು ಎಲ್ಲರಿಗೂ ಮನವರಿಕೆಯಾಗುವಂತೆ ವಿವರಿಸಲು ಹಾಗೂ ಅವುಗಳ ಬಗ್ಗೆ ಚಿಂತನೆ ಮಾಡುವಂತೆ ಮಾಡಲು, ಸ್ವಾಮಿಯವರು ಇಂತಹ ಚಿಕ್ಕ ಕಥೆಗಳನ್ನು ತಮ್ಮ ದಿವ್ಯೋಪನ್ಯಾಸಗಳ ನಡುನಡುವೆ ಸೇರಿಸುತ್ತಿದ್ದರು.

ಸ್ವಾಮಿಯವರು ಹೇಳಿರುವ ಅಂತಹ ಬೋಧಪ್ರದ ನೀತಿಕಥೆಗಳನ್ನು, ಈ ವಿಭಾಗದಲ್ಲಿ ಸೇರಿಸಲಾಗಿದೆ.

‘ಚಿನ್ನ ಕಥಾ – ಭಾಗ ೧ ಮತ್ತು ೨’ನ್ನು ಗುರುಗಳು ಓದಿ, ಮಕ್ಕಳ ವಯಸ್ಸು ಮತ್ತು ಬೌದ್ಧಿಕ ಬೆಳವಣಿಗೆಗೆ ಅನುಗುಣವಾಗಿ, ಹಲವಾರು ಕಥೆಗಳನ್ನು ಆರಿಸಿಕೊಂಡು, ಅವರಿಗೆ ಹೇಳಬಹುದು.

[/vc_column_text][/vc_column][/vc_row]