- Sri Sathya Sai Balvikas - https://sssbalvikas.in/kn/ -

ಭಗವದ್ ರೂಪದ ಧ್ಯಾನ

Print Friendly, PDF & Email [1]
[vc_row][vc_column el_class=”kn-nudi-uni01e”][vc_column_text el_class=”kn-nudi-uni01e”]

ತನ್ನ ಹೃದಯವಾಸಿಯಾದ ಪರಮಾತ್ಮನಿಂದ ತನಗಾಗಿಯೇ ಬರುವ ಕರೆಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಪಡೆಯುವನೆಂದು ಸ್ವಾಮಿಯವರು ಹೇಳಿರುವರು. ಧ್ಯಾನಮಾಡಲೆಂದೇ ಒಂದು ಸೂಕ್ತ ಸ್ಥಳವನ್ನು ಆರಿಸಿಕೊಳ್ಳಿ. ಅಲ್ಲಿ ಮೌನವಾಗಿ ಕುಳಿತುಕೊಳ್ಳಿ. ಪರಮಾತ್ಮನ ರೂಪವು ನಿಮ್ಮ ಮುಂದಿರಲಿ, ಅವನ ನಾಮವು ನಿಮ್ಮ ಮನಸ್ಸಿನಲ್ಲಿರಲಿ. ಇವೆರಡನ್ನೂ ಬದಲಾಯಿಸದಿರಿ. ನಿಮಗೆ ಇಷ್ಟವಾದ ದೇವರ ರೂಪವನ್ನೂ ಅದರ ನಾಮವನ್ನೂ ಭದ್ರವಾಗಿ ಹಿಡಿಯಿರಿ. ಧ್ಯಾನಮಾಡಲೆಂದು ಕುಳಿತಾಗ ಚಂಚಲ ಮನಸ್ಸು ಅದನ್ನು ಬೇರೊಂದು ದಾರಿಯಲ್ಲಿ ಎಳೆದೊಯ್ಯಲು ಪ್ರಯತ್ನಿಸುತ್ತದೆ. ಆ ರೀತಿ ಅದು ಹೊರಗೆ ಓಡದೇ, ಆ ರೂಪ, ನಾಮಗಳ ಮೂಲಕ ಅದನ್ನು ತಡೆಗಟ್ಟಿರಿ. ಭಗವಂತನ ನಾಮ ಸ್ಮರಣೆಯು ಸತತವಾಗಿ, ಅವಿರತವಾಗಿ ನಡೆಯುವ ಹಾಗೆ, ಎಚ್ಚರವಹಿಸಿ. ಪುನಃ ಮನಸ್ಸು ಓಡಲು ಪ್ರಯತ್ನಿಸಿದರೆ, ಆ ಕೂಡಲೇ ಅದನ್ನು ಭಗವಂತನ ರೂಪ, ನಾಮಗಳ ಕಡೆಗೆ ಹಿಂದಕ್ಕೆ ತಿರುಗಿಸಿ.

ಧ್ಯಾನಮಾಡಲು ಹೊಸದಾಗಿ ಪ್ರಾರಂಭಿಸಿರುವವರು, ಧ್ಯಾನದಲ್ಲಿ ತೊಡಗುವ ಮೊದಲು ಭಗವಂತನ ಮಹಾನತೆಯನ್ನು ಸಾರುವ ಹಲವು ಶ್ಲೋಕಗಳನ್ನು ಪಠಿಸಿ. ಇದರಿಂದಾಗಿ, ಚದುರಿಹೋಗಿರುವ ಆಲೋಚನೆಗಳು ಒಂದೇ ಕಡೆಯಲ್ಲಿ ಸೇರುವಂತಾಗುತ್ತದೆ. ನಂತರ, ಕ್ರಮೇಣ ಅವನ ನಾಮವನ್ನು ಉಚ್ಚರಿಸುತ್ತಾ, ನಿಮ್ಮ ಮನೋನೇತ್ರದ ಮುಂದೆ, ಆ ನಾಮವು ಸೂಚಿಸುವ ಅವನ ರೂಪವನ್ನು ಚಿತ್ರಿಸಿಕೊಳ್ಳಿ.

[/vc_column_text][/vc_column][/vc_row]