- Sri Sathya Sai Balvikas - https://sssbalvikas.in/kn/ -

ಬಾಲ ಸಾಯಿ

Print Friendly, PDF & Email [1]
[vc_row][vc_column el_class=”kn-nudi-uni01e”][vc_column_text el_class=”kn-nudi-uni01e”]

ಭಗವಂತನು ಭೂಮಿಯ ಮೇಲೆ ನಡೆದಾಡಿದಾಗ, ಅವನ ವಿಶ್ವವ್ಯಾಪಿ ಮತ್ತು ದೈವೀಕ ಪ್ರೇಮವನ್ನು, ಭೂಮಿ, ಸಸ್ಯಗಳು, ಪ್ರಾಣಿಗಳು ಮತ್ತು ಮಾನವಕುಲವು, ಆನಂದವಾಗಿ ಅನುಭವಿಸುತ್ತವೆ. ಎಲ್ಲೆಲ್ಲೂ ಸಂತೋಷ, ಸೌಹಾರ್ದತೆ ಮತ್ತು ಪರಿವರ್ತನೆಯ ಪವಾಡವೇ ಹರಡುತ್ತದೆ. ಸುಮಾರು ಎಂಟು ದಶಕಗಳ ಹಿಂದೆ, ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರು, ೨೩ನೆಯ ನವೆಂಬರ್, ೧೯೨೬ರಲ್ಲಿ ಧರೆಯ ಮೇಲೆ ಅವತರಿಸಿ, ನಮ್ಮ ನಡುವೆಯೇ ನಡೆದಾಡಿದಾಗ, ನಡೆದುದು ಇದೇ ರೀತಿಯಲ್ಲಿ.

‘ಬಾಲ ಸಾಯಿ’ ಎಂಬುದು, ಮಕ್ಕಳ ವಯಸ್ಸನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಆತ್ಮೀಯ ಭಗವಾನರ ಜನನ ಮತ್ತು ಬಾಲ್ಯದ ದಿನಗಳ ಬಗ್ಗೆ ಹೇಳುವ ಕಥೆಗಳ ಸಂಗ್ರಹ. ತನ್ನ ಮುಂದಿನ ಕಾರ್ಯಾಚರಣೆಗಾಗಿ ಬಾಲಕ ಸತ್ಯನು ಈ ಸಮಯದಲ್ಲೇ ಅಂಕುರಾರ್ಪಣೆಯನ್ನು ಹೇಗೆ ಮಾಡಿದರೆಂಬುದನ್ನು ಇವು ತೋರಿಸುತ್ತವೆ. ‘ನನ್ನ ಜೀವನವೇ ನನ್ನ ಸಂದೇಶ’ವೆಂದು ಹೇಳುತ್ತಾ, ಅದರಂತೆಯೇ ನಡೆದುಕೊಂಡವರು.

ಬಾಲವಿಕಾಸ ಗುರುವು ಮಕ್ಕಳ ವಯಸ್ಸನ್ನು ಗಮನದಲ್ಲಿಟ್ಟುಕೊಂಡು, ಈ ಸಂಗ್ರಹದಿಂದ ಘಟನೆಗಳನ್ನು ಆರಿಸಿಕೊಳ್ಳಬಹುದು. ಈ ನಿರೂಪಣೆಯ ವೈಶಿಷ್ಟ್ಯತೆ ಎಂದರೆ ಇವು ಭಗವಂತನಿಗೆ ಸಂಬಂಧಿಸಿದ ಕೇವಲ ಕಥೆಗಳಾಗಿರದೆ, ಜೀವನ್ ಮೌಲ್ಯಗಳ ಬಗ್ಗೆ ತಿಳಿಸುವುದು. ಆ ಕಥೆಗಳಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಎತ್ತಿ ಹಿಡಿದು, ಅವುಗಳ ಬಗ್ಗೆ ಹೆಚ್ಚು ಬೆಳಕನ್ನು ಬೀರುವುದು ಗುರುಗಳಾದವರ ಕರ್ತವ್ಯ.

ಬಾಲವಿಕಾಸ ಗುರುಗಳು ‘ರಸಪ್ರಶ್ನೆ’ಯ ವಿಭಾಗದಿಂದಲೂ ಪ್ರಶ್ನೆಗಳನ್ನು ಆರಿಸಿ, ಅದನ್ನು ಕೇಳುವುದರ ಮೂಲಕ ಮಕ್ಕಳು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಂಡಿದ್ದಾರೆಂಬುದನ್ನು ಮೌಲ್ಯಮಾಪನ ಮಾಡಬಹುದು.

[/vc_column_text][/vc_column][/vc_row]