- Sri Sathya Sai Balvikas - https://sssbalvikas.in/kn/ -

ಅಹಿಂಸೆ

Print Friendly, PDF & Email [1]
[vc_row][vc_column el_class=”kn-nudi-uni01e”][vc_column_text el_class=”kn-nudi-uni01e”]

ಸತ್ಯ, ಧರ್ಮ, ಶಾಂತಿ, ಪ್ರೇಮ, – ಈ ಎಲ್ಲ ಮಹಾನ್ ಮೌಲ್ಯಗಳ ಅಂತರ್ಗತ ಪ್ರವಾಹವೇ ‘ಅಹಿಂಸೆ.’ ಇದು ‘ಪ್ರೇಮ’ದ ಒಂದು ನೈತಿಕ ಮುಖ. ಸಮಸ್ತ ಜೀವಿಗಳ ಬಗ್ಗೆ ಗೌರವ. ಮಾನವರು, ಪ್ರಾಣಿಗಳು, ಸಸ್ಯಗಳು, ಸರೋವರಗಳು, ಬೆಟ್ಟ ಗುಡ್ಡಗಳು, ಹಿಮ ಪ್ರವಾಹಗಳು, ಇತ್ಯಾದಿಯಾಗಿ ಎಲ್ಲವೂ ಆ ಭಗವಂತನಿಂದ ಬೇರ್ಪಡಿಸಲಾಗದ ಭಾಗಗಳು.

ಪ್ರೇಮ+ ಅರಿವು= ಅಹಿಂಸೆ. ಒಂದು ವೇಳೆ, ನಾವು ಹೋಗುವ ದಾರಿಯಲ್ಲಿ ಒಬ್ಬ ಕುರುಡನು ಬಂದು ನಮಗೆ ಢಿಕ್ಕಿ ಹೊಡೆದರೆ, ನಾವು ಅವನನ್ನು ನಿಂದಿಸಲಾಗದು. ತಾನೇನು ಮಾಡಿದೆ ಎಂಬುದನ್ನು ಅವನು ಅರಿಯಲಾಗಲಿಲ್ಲ ಎಂಬುದನ್ನು ನಾವು ತಿಳಿಯಬೇಕಾಗುತ್ತದೆ. ಅಂತೆಯೇ ‘ನೈಜತೆ’ಯ ಅರಿವಿಲ್ಲದವರನ್ನು ಕ್ಷಮಿಸಬೇಕು. ನಿಂದೆ, ಹಿಂಸೆಗಳನ್ನು ಅವರು ಕೈಗೊಂಡಾಗ ನಾವು ಸಹನೆಯಿಂದ ವರ್ತಿಸಬೇಕು. ಸಮಸ್ತ ಸೃಷ್ಟಿಯಲ್ಲಿ ಅಡಗಿರುವ ಐಕ್ಯತೆಯ ಅರಿವು ನಮಗಿಲ್ಲದಿದ್ದಲ್ಲಿ, ಇಂತಹ ಲೋಪ ದೋಷಗಳನ್ನು ಮರೆತು, ಅವರನ್ನು ಕ್ಷಮಿಸಲು ಸಾಧ್ಯವಾಗದು.

ಅಹಿಂಸೆಯ ಬಗೆಗಿನ ನಮ್ಮ ಸಾಮಾಜಿಕ ಹೊಣೆಯನ್ನು, ‘ವ್ಯರ್ಥಮಾಡದಿರು, ಬೇಕು ಎನ್ನದಿರು’ ಎಂಬ ಕಥೆಯು ಸಾರುತ್ತದೆ.

[/vc_column_text][/vc_column][/vc_row]