- Sri Sathya Sai Balvikas - https://sssbalvikas.in/kn/ -

ಶಾಂತಿ

Print Friendly, PDF & Email [1]
[vc_row][vc_column el_class=”kn-nudi-uni01e”][vc_column_text el_class=”kn-nudi-uni01e”]

‘ಶಾಂತಿ’ ಎಂಬುದು ಒಂದು ಅನುಭವ. ಎಲ್ಲಿ ‘ಸತ್ಯ’ ಮತ್ತು ‘ಧರ್ಮ’ಗಳಿವೆಯೋ, ಅಲ್ಲಿ ‘ಶಾಂತಿ’ಯು ಅವುಗಳನ್ನು ಅನುಸರಿಸುತ್ತದೆ. ‘ಶಾಂತಿ’ಯನ್ನು ಅನುಭವಕ್ಕೆ ತಂದುಕೊಳ್ಳಲು ಕಠಿಣ ಪರಿಶ್ರಮದ ಅಗತ್ಯವಿಲ್ಲ. ಸತ್ಯವನ್ನು ವಾಚಾ, ಮನಸಾ ಅನುಸರಿಸಿ, ಧರ್ಮವನ್ನು ಕಾರ್ಯರೂಪದಲ್ಲಿ ತಂದಾಗ, ಅಲ್ಲಿ ‘ಶಾಂತಿ’ಯು ಕಂಡುಬರುತ್ತದೆ. ಶಾಂತಿಯನ್ನು ಪಡೆಯಲು, ಮನೋನಿಗ್ರಹವು ಅಗತ್ಯವೆಂದು ಎಲ್ಲ ಧಾರ್ಮಿಕ ಗ್ರಂಥಗಳೂ ಸಾರುತ್ತಿವೆ. ಎಲ್ಲಿ ಮನಸ್ಸು ಮೌನವಾಗುವುದೋ, ಆ ಸ್ಥಿತಿಯೇ ನೈಜ ಶಾಂತಿ.

ಪರಂಪರಾಗತ ಅನುಭವದ ಪ್ರಕಾರ, ಪ್ರಾಪಂಚಿಕ, ಬಾಹ್ಯ ವಸ್ತುಗಳಿಂದ ಪಡೆದೆವೆಂದು ಭಾವಿಸುವ ಶಾಂತಿ ಮತ್ತು ಆನಂದಗಳು ಚಿರಕಾಲ ಉಳಿಯುವುದಿಲ್ಲ. ಇದೊಂದು ಮರೀಚಿಕೆಇದ್ದ ಹಾಗೆ. ನೈಜ ಶಾಂತಿಯ ಮೂಲವಿರುವುದು ನಮ್ಮ ಅಂತರಂಗದಲ್ಲಿ. ಆ ಆಂತರಿಕ ಶಾಂತಿಯಿಂದಲೇ ನಿಜವಾದ ಆನಂದ ಲಭ್ಯ. ಸಂತ ತ್ಯಾಗರಾಜರು ತಮ್ಮ ಒಂದು ಕೀರ್ತನೆಯಲ್ಲಿ ‘ಶಾಂತಿಯಿಲ್ಲದೇ ಆನಂದವಿಲ್ಲ’ ಎಂಬುದನ್ನು ಸಾರಿದ್ದಾರೆ.

ತನ್ನನ್ನು ಕಡಿಯುವ ಕೊಡಲಿಗೂ ಸಹ ತನ್ನ ಸುಗಂಧವನ್ನು ನೀಡುವ ಶ್ರೀಗಂಧದ ಮರದ ಹಾಗೆ ನೀವು ಇರಬೇಕು. ತನ್ನನ್ನೇ ಉರಿಸಿಕೊಂಡು ಸುವಾಸನೆಯನ್ನು ಪಸರಿಸುವ ಅಗರಬತ್ತಿಯ ಹಾಗೆ, ನಿಜವಾದ ಸಾಧಕರು, ಭಕ್ತರು ಎಲ್ಲ ಸಂದರ್ಭಗಳಲ್ಲೂ, ಎಂತಹ ಪರಿಸ್ಥಿತಿಯಲ್ಲೂ ಶಾಂತಿಯನ್ನು ಬಿಡದೆ, ಆನಂದವನ್ನು ಪಸರಿಸಬೇಕು.

ಇಲ್ಲಿ ಕೊಟ್ಟಿರುವ ಕಥೆಗಳು ಕೋಪದ ನಿಯಂತ್ರಣಕ್ಕೆ ಸಂಬಂಧಪಟ್ಟಿವೆ. ಮುಂಬರುವ ವರ್ಷಗಳಲ್ಲಿ, ನಮ್ಮ ಅಂತರಂಗ ಶತ್ರುಗಳನ್ನು ಹೇಗೆ ಗೆಲ್ಲುವುದರೆಂಬುದರ ಬಗ್ಗೆ ತಿಳಿಯೋಣ.

[/vc_column_text][/vc_column][/vc_row]