- Sri Sathya Sai Balvikas - https://sssbalvikas.in/kn/ -

ಸದ್ವರ್ತನೆ ಮತ್ತು ಪ್ರೇಮ

Print Friendly, PDF & Email [1]
[vc_row][vc_column el_class=”kn-nudi-uni01e”][vc_column_text el_class=”kn-nudi-uni01e”]

“ಪ್ರೇಮವಿಲ್ಲದೆ ಮಾಡಿದ ಕರ್ತವ್ಯ ಶೋಚನೀಯ, ಪ್ರೇಮದಿಂದ ಮಾಡಿದ ಕರ್ತವ್ಯವು ಅಪೇಕ್ಷಣೀಯ.”

ಪ್ರೇಮದಿಂದ ಮಾಡಿದ ಕಾಯಗಳು, ವ್ಯಕ್ತಿಯ ಮನಸ್ಸಿನಿಂದ ಹುಟ್ಟಿ ಬರುತ್ತವೆ, ಏಕೆಂದರೆ ಅದು ಅವನ ಸ್ವಭಾವ. ಅಂತಹ ಭಾವನೆಯಿಂದ ಕೂಡಿದ ಕರ್ತವ್ಯ ನಿರ್ವಹಣೆಯು ದೈವೀಕವೆನ್ನಿಸುತ್ತದೆ. ಅದರಿಂದ ನೈಜ ಆನಂದವು ಲಭಿಸುತ್ತದೆ. ಕೆಲವು ಕರ್ತವ್ಯಗಳನ್ನು ನಮಗಾಗಿ ಮಾಡಿಕೊಳ್ಳಬೇಕಾದರೆ, ಕೆಲವೊಂದನ್ನು ಇತರರಿಗಾಗಿಯೂ ಮಾಡಬೇಕು.

ಭಗವಂತನ ಮೇಲಿಟ್ಟಿರುವ ನಮ್ಮ ಪ್ರೇಮವು ಬೆಳೆದಂತೆಲ್ಲಾ ನಾವು ಮತ್ತೊಂದು ಹೆಜ್ಜೆಯನ್ನು ಮುಂದಿಡುತ್ತೇವೆ. ಅದೇ ಎಲ್ಲರಲ್ಲಿಯೂ ಇರುವ ದೇವರನ್ನು ಪ್ರ್ರೇತಿಸುವುದು. ಭಗವದ್ ಪ್ರೇಮವು ಸೇವೆಯಲ್ಲಿ ವ್ಯಕ್ತವಾಗಬೇಕು.

ಶ್ರೀ ಸತ್ಯಸಾಯಿ ಬಾಬಾರವರು, ತಮ್ಮ ಉಪದೇಶಗಳಲ್ಲಿ ಇದರ ಬಗ್ಗೆ ಹೇಳುತ್ತಾ, ನಿಸ್ವಾರ್ಥ ಸೇವೆಯು ಅತ್ಯಂತ ಶ್ರೇಷ್ಠ ಆಧ್ಯಾತ್ಮಿಕ ಆಚರಣೆಯೆಂದು ಮಾರ್ಗದರ್ಶನ ನೀಡಿದ್ದಾರೆ.

“ಪ್ರೇಮವೇ ದೇವರು, ದೇವರೇ ಪ್ರೇಮ” ಎಲ್ಲರನ್ನೂ ಪ್ರೀತಿಸು, ಸೇವೆಯನ್ನು ನಿಸ್ವಾರ್ಥತೆಯಿಂದ ಮಾಡಿ, ಅದನ್ನು ಪೂಜೆಯಾಗಿ ಪರಿವರ್ತಿಸು’ ಎಂದು ಆ ಅತ್ಯಂತ ಉನ್ನತ ಸಾಧನೆಯ ಶ್ರೇಷ್ಠತೆಯ ಬಗ್ಗೆ ತಿಳಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ, ಧರ್ಮ ಮತ್ತು ಪ್ರೇಮಗಳ ಮಹತ್ವದ ಬಗ್ಗೆ ಎರಡು ಕಥೆಗಳನ್ನು ಕೊಡಲಾಗಿದೆ.

  1. ‘ಮಾನವ ಸೇವೆಯೇ ಮಾಧವ ಸೇವೆ’ – ಅಬ್ರಹಾಂ ಲಿಂಕನ್ರ ಜೇವನದಿಂದ ಆಯ್ದ ಘಟನೆಯನ್ನು ಆಧಾರಿಸಿದ ಈ ಕಥೆಯ ಮೂಲಕ ಮಕ್ಕಳು ‘ಸೇವೆ’ ಎಂಬ ಪದದ ನಿಜವಾದ ಅರ್ಥವನ್ನು ಅರಿಯುವರು .
  2. ‘ಮಾನವ ಪ್ರಯತ್ನದಿಂದಾಗಿ ದೈವಕೃಪೆ’ -ಈ ಕಥೆಯು ಸ್ವಧರ್ಮ ಮತ್ತು ಭಗವಂತನ ಮೇಲಣ ಭಕ್ತಿ – ಈ ಎರಡಕ್ಕೂ ಸಮಾನ ಮಹತ್ವ ನೀಡುವುದರ ಬಗ್ಗೆ ತಿಳಿಸುತ್ತದೆ.
[/vc_column_text][/vc_column][/vc_row]