- Sri Sathya Sai Balvikas - https://sssbalvikas.in/kn/ -

ಧರ್ಮ (ಸದ್ವರ್ತನೆ)

Print Friendly, PDF & Email [1]
[vc_row][vc_column el_class=”kn-nudi-uni01e”][vc_column_text el_class=”kn-nudi-uni01e”]

ಸತ್ಯವು ನಮ್ಮ ಆಚರಣೆಯಲ್ಲಿ ವ್ಯಕ್ತವಾದಾಗ, ಅದು ‘ಸದ್ವರ್ತನೆ’ಯಾಗಿ ಪರಿವರ್ತನೆಯಾಗುವುದು. ಮಾತಿನಲ್ಲಿ’ ‘ಸತ್ಯ,’ ಆಚರಣೆಯಲ್ಲಿ ‘ಸದ್ವರ್ತನೆ’ – ಇದನ್ನೇ ‘ಸತ್ಯಂ ವದ, ಧರ್ಮಮ್ ಚರ’ ಎಂದು ವೇದಗಳು ಸಾರಿವೆ. ‘ಸತ್ಯ’ವನ್ನು ಆಚರಣೆಯಲ್ಲಿಡುವುದೇ ನಿಜವಾದ ‘ಧರ್ಮ.’ ಆದುದರಿಂದಲೇ ಧರ್ಮ ಮಾರ್ಗದಲ್ಲಿ ನಡೆಯಬೇಕಾದುದು ಅತ್ಯಗತ್ಯ.

ಧರ್ಮದ ಆಚರಣೆಯು ಚಿಕ್ಕ ವಯಸ್ಸಿನಿಂದಲೇ ಪ್ರಾರಂಭವಾಗಬೇಕು. ಆಗ ವ್ಯಕ್ತಿಯು ಮಾತ್ರವಲ್ಲದೇ ಇಡೀ ದೇಶವೇ ಧರ್ಮಮಾರ್ಗದಲ್ಲಿ ಮುನ್ನಡೆಯುತ್ತದೆ. “ ಹೃದಯದಲ್ಲಿ ಸದಾಚಾರವಿದ್ದರೆ, ಚಾರಿತ್ರ್ಯದಲ್ಲಿ ಸೌಂದರ್ಯ; ಚಾರಿತ್ರ್ಯದಲ್ಲಿ ಸೌಂದರ್ಯವಿದ್ದಲ್ಲಿ, ಗೃಹದಲ್ಲಿ ಸೌಹಾರ್ದತೆ; ಗೃಹದಲ್ಲಿ ಸೌಹಾರ್ದತೆಯಿದ್ದಲ್ಲಿ, ರಾಷ್ಟ್ರದಲ್ಲಿ ವ್ಯವಸ್ಥೆ; ರಾಷ್ಟ್ರದಲ್ಲಿ ಸುವ್ಯವಸ್ಥೆಯಿದ್ದಲ್ಲಿ, ಭೂಮಿಯ ಮೇಲೆ ಶಾಂತಿ” ನೆಲೆಸುತ್ತದೆ.

ಸನ್ನಡತೆಯ ಮಹತ್ವವನ್ನು ಮೊದಲನೆಯ ಗ್ರೂಪಿನ ಮಕ್ಕಳ ಮನಸ್ಸಿನಲ್ಲಿ ಮೂಡಿಸುವ ಸಲುವಾಗಿ, ಸನ್ನಡತೆಯ ಉಪಮೌಲ್ಯಗಳಾದ ಪ್ರಾಮಾಣಿಕತೆ, ಮಾನವ ಸೇವೆಯೇ ಮಾಧವ ಸೇವೆ, ದುಡಿಮೆಯೇ ಪುರುಷ ಲಕ್ಷಣ ಮತ್ತು ಮಾತಾ ಪಿತೃ ಭಕ್ತಿ- ಇವುಗಳಿಗೆ ಸಂಬಂಧಿಸಿದ ಕಥೆಗಳನ್ನು ಸೇರಿಸಲಾಗಿದೆ.

[/vc_column_text][/vc_column][/vc_row]