- Sri Sathya Sai Balvikas - https://sssbalvikas.in/kn/ -

ಅಷ್ಟೋತ್ತರ 55-108

Print Friendly, PDF & Email [1]
[vc_row][vc_column][vc_column_text el_class=”kn-nudi-uni01e”]
ಶ್ರೀ ಸತ್ಯಸಾಯಿ ಅಷ್ಟೋತ್ತರ-ಶತ–ನಾಮರತ್ನಮಾಲಾ
[/vc_column_text][/vc_column][/vc_row][vc_row css_animation=”fadeIn” css=”.vc_custom_1612410497958{padding-top: 0px !important;}” el_class=”scheme_default”][vc_column][vc_column_text el_class=”video-sty” css=”.vc_custom_1648042103297{margin-bottom: 10px !important;}”][/vc_column_text][vc_custom_heading text=”ಆಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648042123909{margin-top: 0px !important;}”][vc_column_text el_class=”title-para postaudio” css=”.vc_custom_1648042132610{margin-bottom: 10px !important;}”] http://sssbalvikas.in/wp-content/uploads/2021/06/ashtotram55-108.mp3 [2] [/vc_column_text][vc_custom_heading text=”ಶ್ಲೋಕ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1651420895898{margin-top: 0px !important;}”][vc_column_text el_class=”content-box kn-nudi-uni01e”]
  1. ಓಂ ಶ್ರೀ ಸಾಯಿ ಅನಂತನುತ-ಕತೃಣೇ ನಮಃ

    ಸೃಷ್ಟಿಕರ್ತನೂ ಹಾಗೂ ಅನವರತ ಸ್ತುತಿಸಲ್ಪಡುವವನೂ ಆದ ಭಗವಂತನಿಗೆ ನಮಸ್ಕಾರ

  2. ಓಂ ಶ್ರೀ ಸಾಯಿ ಆದಿಪುರುಷಾಯ ನಮಃ

    ಭಗವಂತನೇ ಆದಿಪುರುಷ. ಇಂತಹ ಆದಿಪುರುಷನಿಗೆ ನಮಸ್ಕಾರ.

  3. ಓಂ ಶ್ರೀ ಸಾಯಿ ಆದಿಶಕ್ತಯೇ ನಮಃ

    ಭಗವಂತನೇ ಆದಿ ಶಕ್ತಿ. ಇಂತಹ ಆದಿಶಕ್ತಿಗೆ ನಮಸ್ಕರಿಸುತ್ತೇನೆ.

  4. ಓಂ ಶ್ರೀ ಸಾಯಿ ಅಪರೂಪ ಶಕ್ತಯೇ ನಮಃ

    ಅದ್ಭುತವಾದ ಹಾಗೂ ಅತ್ಯಾನಂದಕರವಾದ ಶಕ್ತಿಯನ್ನು ಹೊಂದಿರುವ ಭಗವಂತನಿಗೆ ವಂದಿಸುತ್ತೇನೆ.

  5. ಓಂ ಶ್ರೀ ಸಾಯಿ ಅವ್ಯಕ್ತರೂಪಿಣೇ ನಮಃ

    ಅವ್ಯಕ್ತ (ನಿರಾಕಾರ) ರೂಪಿಯಾದ ಭಗವಂತನಿಗೆ ನಮಸ್ಕಾರ.

  6. ಓಂ ಶ್ರೀ ಸಾಯಿ ಕಾಮಕ್ರೋಧ ಧ್ವಂಸಿನೇ ನಮಃ

    ಕಾಮ ಕ್ರೋಧಗಳನ್ನು ನಾಶಮಾಡುವ ಸ್ವಾಮಿಗೆ ನಮಸ್ಕಾರ.

  7. ಓಂ ಶ್ರೀ ಸಾಯಿ ಕನಕಾಂಬರಧಾರಿಣೇ ನಮಃ

    ಕನಕಾಂಬರವನ್ನು ಧರಿಸಿರುವ ಸ್ವಾಮಿಗೆ ನಮಸ್ಕಾರ

  8. ಓಂ ಶ್ರೀ ಸಾಯಿ ಅದ್ಭುತ ಚರ್ಯಾಯ ನಮಃ

    ನಾವು ದೇಶ-ಕಾಲ ಬದ್ಧರಾದ್ದರಿಂದ, ಭಗವಂತನು ದೇಶಕಾಲಾತೀತನಾದುದರಿಂದ ಅವನ ಸಹಜ ನಡವಳಿಕೆಯೇ ನಮಗೆ ಆಶ್ಚರ್ಯಕರವಾಗುತ್ತದೆ. ಇಂತಹ ನಡವಳಿಕೆಯುಳ್ಳ ಭಗವಂತನಿಗೆ ನಮಸ್ಕಾರ.

  9. ಓಂ ಶ್ರೀ ಸಾಯಿ ಆಪದ್ಬಾಂಧವಾಯ ನಮಃ

    ಕಷ್ಟದ ಸಮಯದಲ್ಲಿ ಬಂಧುವಿನಂತೆ ಜೊತೆಗಿದ್ದು, ಮಾರ್ಗದರ್ಶನ ಮಾಡುವ ಭಗವಂತನಿಗೆ ನಮಸ್ಕಾರ.

  10. ಓಂ ಶ್ರೀ ಸಾಯಿ ಪ್ರೇಮಾತ್ಮನೇ ನಮಃ

    ಪ್ರೇಮಾತ್ಮನೇ ಆದ ಭಗವಂತನಿಗೆ ನಮಸ್ಕಾರ.

  11. ಓಂ ಶ್ರೀ ಸಾಯಿ ಪ್ರೇಮಮೂರ್ತಯೇ ನಮಃ

    ಪ್ರೇಮವೇ ಮೂರ್ತಿವೆತ್ತಂತಿರುವ ಸ್ವಾಮಿಗೆ ನಮಸ್ಕಾರ

  12. ಓಂ ಶ್ರೀ ಸಾಯಿ ಪ್ರೇಮ ಪ್ರದಾಯ ನಮಃ

    ಪ್ರೇಮವನ್ನು ಕೊಡುವ ಸ್ವಾಮಿಗೆ ನಮಸ್ಕಾರ.

  13. ಓಂ ಶ್ರೀ ಸಾಯಿ ಪ್ರಿಯಾಯ ನಮಃ

    ಎಲ್ಲರಿಗೂ ಪ್ರಿಯನಾದ ಭಗವಂತನಿಗೆ ನಮಸ್ಕಾರ.

  14. ಓಂ ಶ್ರೀ ಸಾಯಿ ಭಕ್ತಪ್ರಿಯಾಯ ನಮಃ

    ಭಕ್ತರಿಗೆ ಪ್ರಿಯಕರನಾದವನು, ಭಕ್ತರನ್ನು ಪ್ರೀತಿಸುವವನು ಭಗವಂತ. ಅಂತಹ ಸ್ವಾಮಿಗೆ ನಮಸ್ಕಾರ.

  15. ಓಂ ಶ್ರೀ ಸಾಯಿ ಭಕ್ತಮಂದಾರಾಯ ನಮಃ

    ಭಕ್ತರಿಗೆ ಸ್ವರ್ಗದಂತಿರುವ ಬಾಬಾ ಅವರಿಗೆ ನಮಸ್ಕಾರ.

  16. ಓಂ ಶ್ರೀ ಸಾಯಿ ಭಕ್ತ ಜನ ಹೃದಯ ವಿಹಾರಾಯ ನಮಃ

    ಭಕ್ತ ಜನರ ಹೃದಯಗಳಲ್ಲಿ ಭಗವಂತನು ವಿಹರಿಸುತ್ತಾನೆ. ಭಕ್ತರ ಹೃದಯದಲ್ಲಿ ಅವನು ನೆಲೆಸುತ್ತಾನೆ, ನಲಿಯುತ್ತಾನೆ. ಅವನಿಗೆ ನಮಸ್ಕಾರ.

  17. ಓಂ ಶ್ರೀ ಸಾಯಿ ಭಕ್ತ ಜನ ಹೃದಯಾಲಯಾಯ ನಮಃ

    ಭಕ್ತ ಜನರ ಹೃದಯವನ್ನೇ ನಿವಾಸವನ್ನಾಗಿ (ಹೃತ್ + ಆಲಯ) ಮಾಡಿಕೊಂಡಿರುವ ಸ್ವಾಮಿಗೆ ನಮಸ್ಕಾರ.

  18. ಓಂ ಶ್ರೀ ಸಾಯಿ ಭಕ್ತ ಪರಾಧೀನಾಯ ನಮಃ

    ಎಲ್ಲರೂ ಭಗವಂತನ ಅಧೀನರು, ಆದರೆ ಭಗವಂತ ಭಕ್ತರ ಅಧೀನ. ಇಂತಹ ಸ್ವಾಮಿಗೆ ನಮಸ್ಕಾರ.

  19. ಓಂ ಶ್ರೀ ಸಾಯಿ ಭಕ್ತಿ ಜ್ಞಾನ ಪ್ರದೀಪಾಯ ನಮಃ

    ಭಗವಂತನೆಂಬ ದೀಪಸ್ತಂಭವು ಭಕ್ತಿ ಮತ್ತು ಜ್ಞಾನ ಎಂಬ ಬೆಳಕನ್ನು ಹರಡುತ್ತದೆ. ಆ ಬೆಳಕಿನಲ್ಲಿ ಮಿಂದವರು ಧನ್ಯರು. ಭಕ್ತಿ ಜ್ಞಾನಗಳ ಬೆಳಗಿದ ಸ್ವಾಮಿಗೆ ನಮಸ್ಕಾರ.

  20. ಓಂ ಶ್ರೀ ಸಾಯಿ ಭಕ್ತಿ ಜ್ಞಾನ ಪ್ರದಾಯ ನಮಃ

    ಜ್ಞಾನ ಮಾರ್ಗಕ್ಕೆ ಕರೆದೊಯ್ಯುವ, ಭಕ್ತಿಯನ್ನು ಅನುಗ್ರಹಿಸುವ ಸ್ವಾಮಿಗೆ ನಮಸ್ಕಾರ.

  21. ಓಂ ಶ್ರೀ ಸಾಯಿ ಸುಜ್ಞಾನ ಮಾರ್ಗದರ್ಶಕಾಯ ನಮಃ

    ಜ್ಞಾನ ಸಿದ್ಧಿಗೆ ಗುರುವಿನ ಅವಶ್ಯಕತೆ ಇದೆ. ಭಗವಂತನೇ ಈ ವಿಷಯದಲ್ಲಿ ಮಾರ್ಗದರ್ಶನ ಮಾಡುವ ಸದ್ಗುರು. ಜ್ಞಾನದ ಮಾರ್ಗವನ್ನು ತೋರಿಸಿಕೊಡುವ ಸ್ವಾಮಿಗೆ ನಮಸ್ಕಾರ.

  22. ಓಂ ಶ್ರೀ ಸಾಯಿ ಜ್ಞಾನ ಸ್ವರೂಪಾಯ ನಮಃ

    ಸಮಸ್ತ ಜ್ಞಾನದ ವ್ಯಕ್ತರೂಪವೇ ಭಗವಂತ. ಜ್ಞಾನ ಸ್ವರೂಪಿಯಾದ ದೇವನಿಗೆ ನಮಸ್ಕಾರ.

  23. ಓಂ ಶ್ರೀ ಸಾಯಿ ಗೀತಾ ಬೋಧಕಾಯ ನಮಃ

    ಸರ್ವಕಾಲಿಕ ಗೀತೆಯನ್ನು ಬೋಧಿಸಿದ ಸ್ವಾಮಿಗೆ ನಮಸ್ಕಾರ.

  24. ಓಂ ಶ್ರೀ ಸಾಯಿ ಜ್ಞಾನಸಿದ್ಧಿದಾಯ ನಮಃ

    ಜ್ಞಾನಸಿದ್ಧಿಯನ್ನು ಉಂಟುಮಾಡುವ ಭಗವಂತನಿಗೆ ನಮಸ್ಕಾರ.

  25. ಓಂ ಶ್ರೀ ಸಾಯಿ ಸುಂದರ ರೂಪಾಯ ನಮಃ

    ಸುಂದರ ರೂಪವನ್ನು ಹೊಂದಿರುವ ಭಗವಂತನಿಗೆ ನಮಸ್ಕಾರ.

  26. ಓಂ ಶ್ರೀ ಸಾಯಿ ಪುಣ್ಯ ಪುರುಷಾಯ ನಮಃ

    ಪುಣ್ಯವೇ ಮೈವೆತ್ತಂತಿರುವ ಸ್ವಾಮಿಗೆ ನಮಸ್ಕಾರ./p>

  27. ಓಂ ಶ್ರೀ ಸಾಯಿ ಫಲಪ್ರದಾಯ ನಮಃ

    ಸಮಸ್ತ ಕರ್ಮಗಳಿಗೆ, ಒಳ್ಳೆಯ, ಕೆಟ್ಟ ಯಾವುದೇ ಸಾಧನೆಗೆ ಸೂಕ್ತ ಫಲವನ್ನು ನೀಡುವ ದೇವನಿಗೆ ನಮಸ್ಕಾರ.

  28. ಓಂ ಶ್ರೀ ಸಾಯಿ ಪುರುಷೋತ್ತಮಾಯ ನಮಃ

    ಪುರುಷರಲ್ಲಿ ಅತ್ಯುತ್ತಮನಾದ ಸ್ವಾಮಿಗೆ ನಮಸ್ಕಾರ

  29. ಓಂ ಶ್ರೀ ಸಾಯಿ ಪುರಾಣ ಪುರುಷಾಯ ನಮಃ

    ಪುರಾತನ ಹಾಗೂ ಪರಮ ಶ್ರೇಷ್ಠನಾದ ಭಗವಂತನಿಗೆ ನಮಸ್ಕಾರ

  30. ಓಂ ಶ್ರೀ ಸಾಯಿ ಗುಣಾತೀತಾಯ ನಮಃ

    ಭಗವಂತ ಗುಣಗಳಿಗೆ ಅತೀತನು, ಅವುಗಳನ್ನು ಮೀರಿದವನು. ಇಂತಹ ಪ್ರಭುವಿಗೆ ನಮಸ್ಕಾರ.

  31. ಓಂ ಶ್ರೀ ಸಾಯಿ ಕಾಲಾತೀತಾಯ ನಮಃ

    ಭಗವಂತನಿಗೆ ಭೂತ, ವರ್ತಮಾನ, ಭವಿಷ್ಯತ್ ಎಂಬ ಕಾಲಗಣನೆ ಇಲ್ಲ. ಅವನು ಅಕಾಲ. ಇಂತಹ ಕಾಲಾತೀತ ಪ್ರಭುವಿಗೆ ನಮಸ್ಕಾರ

  32. ಓಂ ಶ್ರೀ ಸಾಯಿ ಸಿದ್ಧಿರೂಪಾಯ ನಮಃ

    ಸಕಲ ಸಿದ್ಧಿಗಳ ಸ್ವರೂಪನಾದ ಭಗವಂತನಿಗೆ ನಮಸ್ಕಾರ

  33. ಓಂ ಶ್ರೀ ಸಾಯಿ ಸಿದ್ಧ ಸಂಕಲ್ಪಾಯ ನಮಃ

    ಸ್ವಾಮಿಯು ಸಂಕಲ್ಪಿಸಿದೊಡನೆಯೇ ಸಿದ್ಧಿಸುತ್ತದೆ. ಇಂತಹ ಸಿದ್ಧ ಸಂಕಲ್ಪನಾಗಿರುವ ಭಗವಂತನಿಗೆ ನಮಸ್ಕಾರ

  34. ಓಂ ಶ್ರೀ ಸಾಯಿ ಆರೋಗ್ಯ ಪ್ರದಾಯ ನಮಃ

    ಆರೋಗ್ಯವನ್ನು ನೀಡುವವನಿಗೆ ನಮಸ್ಕಾರ.

  35. ಓಂ ಶ್ರೀ ಸಾಯಿ ಅನ್ನವಸ್ತ್ರದಾಯ ನಮಃ

    ಅನ್ನ, ವಸ್ತ್ರಗಳನ್ನು ನೀಡಿ ಸಲಹುವ ಒಡೆಯನಿಗೆ ನಮಸ್ಕಾರ.

  36. ಓಂ ಶ್ರೀ ಸಾಯಿ ಸಂಸಾರ ದುಃಖ ಕ್ಷಯಕರಾಯ ನಮಃ

    ಸಾಂಸಾರಿಕ ದುಃಖಗಳನ್ನು ಹೋಗಲಾಡಿಸುವ ಭಗವಂತನಿಗೆ ನಮಸ್ಕಾರ.

  37. ಓಂ ಶ್ರೀ ಸಾಯಿ ಸರ್ವಾಭೀಷ್ಟ ಪ್ರದಾಯ ನಮಃ

    ಎಲ್ಲಾ ಅಭೀಷ್ಟ ಆಸೆ, ಕೋರಿಕೆಗಳನ್ನು ನೆರವೇರಿಸುವ ಸ್ವಾಮಿಗೆ ನಮಸ್ಕಾರ.

  38. ಓಂ ಶ್ರೀ ಸಾಯಿ ಕಲ್ಯಾಣ ಗುಣಾಯ ನಮಃ

    ಮಂಗಳಕರವಾದ ಗುಣಗಳುಳ್ಳ ಸ್ವಾಮಿಗೆ ನಮಸ್ಕಾರ.

  39. ಓಂ ಶ್ರೀ ಸಾಯಿ ಕರ್ಮಧ್ವಂಸಿನೇ ನಮಃ

    ಭಕ್ತರ ಕರ್ಮಗಳನ್ನು (ಬಂಧಿಸುವ ಕರ್ಮ) ನಾಶಮಾಡುವ ಸ್ವಾಮಿಗೆ ನಮಸ್ಕಾರ

  40. ಓಂ ಶ್ರೀ ಸಾಯಿ ಸಾಧು ಮಾನಸ ಶೋಭಿತಾಯ ನಮಃ

    ಸಂತರು ಮತ್ತು ಭಕ್ತರ ಮನಸ್ಸಿನಲ್ಲಿ ಶೋಭಿಸುವ ಭಗವಂತನಿಗೆ ನಮಸ್ಕಾರ

  41. ಓಂ ಶ್ರೀ ಸಾಯಿ ಸರ್ವಮತ ಸಮ್ಮತಾಯ ನಮಃ

    ಎಲ್ಲಾ ಮತಗಳನ್ನೂ ಸಮ್ಮತಿಸುವ ಸ್ವಾಮಿಗೆ ನಮಸ್ಕಾರ

  42. ಓಂ ಶ್ರೀ ಸಾಯಿ ಸಾಧು ಮಾನಸ ಪರಿಶೋಧಕಾಯ ನಮಃ

    ಭಕ್ತರ ಹೃದಯವನ್ನು ಪರಿಶೋಧಿಸುವ ಸ್ವಮಿಗೆ ನಮಸ್ಕಾರ

  43. ಓಂ ಶ್ರೀ ಸಾಯಿ ಸಾಧಕಾನುಗ್ರಹ ವಟವೃಕ್ಷ ಪ್ರತಿಷ್ಠಾಪಕಾಯ ನಮಃ

    ಸಾಧು ಜನರ ಅನುಕೂಲಕ್ಕಾಗಿ ಅರಳಿ ಮರವನ್ನು ಪ್ರತಿಷ್ಠಾಪಿಸಿರುವ ಸ್ವಾಮಿಗೆ ನಮಸ್ಕಾರ.

  44. ಓಂ ಶ್ರೀ ಸಾಯಿ ಸಕಲ ಸಂಶಯ ಹರಾಯ ನಮಃ

    ಸಂಶಯಗಳನ್ನು ಹೋಗಲಾಡಿಸುವ ಸ್ವಾಮಿಗೆ ನಮಸ್ಕಾರ.

  45. ಓಂ ಶ್ರೀ ಸಾಯಿ ಸಕಲ ತತ್ವ ಬೋಧಕಾಯ ನಮಃ

    ಎಲ್ಲಾ ತತ್ವಗಳನ್ನು ಬೋಧಿಸುವ ಸ್ವಾಮಿಗೆ ನಮಸ್ಕಾರ.

  46. ಓಂ ಶ್ರೀ ಸಾಯಿ ಯೋಗೀಶ್ವರಾಯ ನಮಃ

    ಯೋಗೀಶ್ವರನಾದ ಭಗವಂತನಿಗೆ ನಮಸ್ಕಾರ.

  47. ಓಂ ಶ್ರೀ ಸಾಯಿ ಯೋಗೀಂದ್ರವಂದಿತಾಯ ನಮಃ

    ಓಂ ಶ್ರೀ ಸಾಯಿ ಸರ್ವ ಮಂಗಳಕರಾಯ ನಮಃ

  48. ಓಂ ಶ್ರೀ ಸಾಯಿ ಸರ್ವ ಮಂಗಳಕರಾಯ ನಮಃ

    ಸಕಲ ಮಂಗಳಗಳನ್ನೂ ಉಂಟುಮಾಡುವ ಸ್ವಾಮಿಗೆ ನಮಸ್ಕಾರ.

  49. ಓಂ ಶ್ರೀ ಸಾಯಿ ಸರ್ವ ಸಿದ್ಧಿಪ್ರದಾಯ ನಮಃ

    ಸಿದ್ಧಿಪ್ರದಾಯಕನಾದ ಭಗವಂತನಿಗೆ ನಮಸ್ಕಾರ.

  50. ಓಂ ಶ್ರೀ ಸಾಯಿ ಆಪನ್ನಿವಾರಿಣೇ ನಮಃ

    ಆಪತ್ತುಗಳನ್ನು ನಿವಾರಿಸುವ ಬಂಧುವಾದ ಭಗವಂತನಿಗೆ ನಮಸ್ಕಾರ.

  51. ಓಂ ಶ್ರೀ ಸಾಯಿ ಆರ್ತಿ ಹರಾಯ ನಮಃ

    ಎಲ್ಲಾ ಯಾತನೆ, ದುಃಖ, ಸಂಕಟಗಳನ್ನು ನಿವಾರಿಸುವ ಭಗವಂತನಿಗೆ ನಮಸ್ಕಾರ.

  52. ಓಂ ಶ್ರೀ ಸಾಯಿ ಶಾಂತಮೂರ್ತಯೇ ನಮಃ

    ಸದಾ ಶಾಂತಿ, ಸುಪ್ರಸನ್ನತೆಗಳಿಂದ ಕೂಡಿರುವ ಮಂಗಳಕರನಾದ ಸ್ವಾಮಿಗೆ ನಮಸ್ಕಾರ.

  53. ಓಂ ಶ್ರೀ ಸಾಯಿ ಸುಲಭ ಪ್ರಸನ್ನಾಯ ನಮಃ

    ಬಹು ಸುಲಭವಾಗಿ ಪ್ರಸನ್ನನಾಗುವ ಸ್ವಾಮಿಗೆ ನಮಸ್ಕಾರ.

  54. ಓಂ ಶ್ರೀ ಸಾಯಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾಯ ನಮಃ

    ಭಗವಂತನಾದ ಶ್ರೀ ಸತ್ಯಸಾಯಿ ಬಾಬಾರವರಿಗೆ ನಮಸ್ಕರಿಸುತ್ತೇನೆ.

ಭಗವಾನ್ – ಎಂದರೆ ಈ ಕೆಳಗಿನ ೬ ಗುಣಲಕ್ಷಣಗಳನ್ನು ಸಂಪೂರ್ಣವಾಗಿ ಹೊಂದಿರುವವನು.

ಪ್ರತಿಯೊಂದು ಜೀವಿಯ ಆದಿ ಮತ್ತು ಅಂತ್ಯ ಬಲ್ಲವನು. ಆದುದರಿಂದ ಈ ದೃಢೀಕರಣದೊಂದಿಗೆ ೧೦೮ ಅನರ್ಘ್ಯ ರತ್ನಗಳ ಈ ಮಾಲೆಯು ಪರಿಸಮಾಪ್ತಿಗೊಳ್ಳುತ್ತದೆ.

[/vc_column_text][/vc_column][/vc_row][vc_column][/vc_column][vc_column_inner css=”.vc_custom_1611844766263{padding-top: 0px !important;}”][/vc_column_inner]