ಗುರುಗಳಿಗೆ

ಮೊದಲ ವರ್ಷಗಳ ಕಲಿಕೆ ಶಾಶ್ವತವಾಗಿರುತ್ತದೆ

ಇದು ತಯಾರಿಕೆಯ ಮತ್ತು ಕ್ರಿಯಾಶಿಲತೆಯ ವಯಸ್ಸು. “ಬೇಗನೆ ಹೊರಡಿ, ನಿಧಾನವಾಗಿ ಚಲಿಸಿ, ಕ್ಷೇಮವಾಗಿ ಸೇರಿ” ಎಂಬುದು ನಮ್ಮ ಸ್ವಾಮಿಯ ದೈವಿಕ ನಿರ್ದೇಶನ. ಇದನ್ನು ಗಮನದಲ್ಲಿಟ್ಟುಕೊಂಡು, 6 ವರ್ಷದ ವಯಸ್ಸಿನಲ್ಲೇ ಮಕ್ಕಳನ್ನು ಈ ಕಾರ್ಯಕ್ರಮಕ್ಕೆ ಸೇರಿಸಿಕೊಳ್ಳಲಾಗುವುದು. ಮಾನವನಲ್ಲಿ ಉತ್ಕೃಷ್ಟತೆಯ ಬೀಜಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಬಿತ್ತಿದಾಗ, ಮಕ್ಕಳಲ್ಲಿ ಮೌಲ್ಯಗಳು ಬೇರೂರಿ, ಅವುಗಳನ್ನು ನೆನಪಿಟ್ಟುಕೊಂಡು, ಜೀವನದುದ್ದಕ್ಕೂ ಅನುಸರಿಸಲು ಸಾಧ್ಯವಾಗುವುದು. ಈ ಹಂತದಲ್ಲಿ, ಮಗುವು ಕ್ರಿಯಾಶೀಲತೆಯಿಂದ ವಸ್ತುಗಳನ್ನು ತಯಾರಿಸಲು ಬಯಸುವುದು; ಆದ್ದರಿಂದ ಬಾಲಕಾಸ ಗುರುಗಳು ಕೇವಲ ಉಪನ್ಯಾಸ ಮಾಡುವುದಕ್ಕಿಂತ ಹೆಚ್ಚಾಗಿ, ಚಿತ್ರಗಳ ಪ್ರದರ್ಶನಗಳು, ಆಟಗಳು, ಫಲಕಗಳು (charts), ಸಾಮೂಹಿಕ ಚಟುವಟಿಕೆಗಳು, ಪಾತ್ರಾಭಿನಯಗಳು, ಮನೋವೃತ್ತಿಯ ಪರೀಕ್ಷೆ (attitude test), ಸಮೂಹ ಗಾಯನ, ಕಥನ ಕಲೆ, ಪ್ರಾರ್ಥನೆಗಳು, ಮೌನಾಸನ-ಇವುಗಳನ್ನು ಅಭ್ಯಸಿಸುವತ್ತ ಗಮನ ಹರಿಸಬೇಕಾಗುವುದು.

Coming soon...

ಗ್ರೂಪ್ II (9 ರಿಂದ 12 ವರ್ಷಗಳು)

2 ಅಂಕಿಗಳ ವಯಸ್ಸಿನವರ ಪುಷ್ಟೀಕರಣ

ಇದು ತಯಾರಿಕೆಯ ಮತ್ತು ಯೋಜನೆಯ ಹಂತವಾಗಿದೆ. ಗ್ರೂಪ್-1ರ ಹಂತದಲ್ಲಿ ಹಾಕಿದ ಅಡಿಪಾಯವು ಇಲ್ಲಿ ರೂಪು ತಳೆಯಲು ಪ್ರಾರಂಭವಾಗುವುದು. ಈ ಅವಧಿಯಲ್ಲಿ, ವಿದ್ಯಾರ್ಥಿಯು ಕೇವಲ ಕಥೆಗಳು, ಹಾಡುಗಳು ಮತ್ತು ಸಾಮೂಹಿಕ ಆಟಗಳಿಂದ ತೃಪ್ತನಾಗುವುದಿಲ್ಲ; ತನ್ನದೇ ಆದ ಕಲ್ಪನೆ ಮತ್ತು ಕುತೂಹಲಕ್ಕನುಗುಣವಾಗಿ, ಇನ್ನೂ ಹೆಚ್ಚಿನದನ್ನು ಬಯಸುವನು. ಆತನ ಆಲೋಚನೆಗಳಿಗೆ ಪುಷ್ಟಿ ಬೇಕಾಗುವುದು; ಆದ್ದರಿಂದ ಆತನ ಮನಸ್ಸನ್ನು ಹತೋಟಿಯಲ್ಲಿರಿಸಲು, ಇಂದ್ರಿಯಗಳನ್ನು ನಿಗ್ರಹಿಸಲು ಮತ್ತು 5 ‘ಡಿ’ಗಳನ್ನು ಅಭಿವೃದ್ಧಿಪಡಿಸಲೆಂದು ಐದು ಬೋಧನಾ ತಂತ್ರಗಳು ವಿನ್ಯಾಸಗೊಂಡಿವೆ. ಹೀಗೆ ಆತನಲ್ಲಿ ಮಾತು ಮತ್ತು ಕೃತಿಯ ಸಾಮರಸ್ಯದ ಬುನಾದಿಯನ್ನು ಹಾಕಲಾಗುವುದು. ಆದ್ದರಿಂದ ಬಾಲವಿಕಾಸ ಗುರುಗಳು ಗ್ರೂಪ್ -2ರ ಮಟ್ಟದಲ್ಲಿ, ಮಕ್ಕಳ ಆಸಕ್ತಿ ಮತ್ತು ಕಲ್ಪನೆಯನ್ನು ಜೀವಂತವಾಗಿರಿಸುವತ್ತ ಗಮನ ಹರಿಸಬೇಕಾಗುವುದು.

Coming soon...

ಗ್ರೂಪ್ III (12 ರಿಂದ 15 ವರ್ಷಗಳು)

ಹದಿಹರೆಯದ ವಯಸ್ಸು- ಕ್ಲಿಷ್ಟಕರವಾದ ವಯಸ್ಸು

ಇದು ಯೋಜನೆಯ ಮತ್ತು ಸಾಧನೆಯ ವಯಸ್ಸು. ವಾಸ್ತವವಾಗಿ, ನಿಜ ಜೀವನದ ಸನ್ನಿವೇಶಗಳಲ್ಲಿ ಮೌಲ್ಯಗಳ ಆಚರಣೆಯು ಈ ವಯಸ್ಸಿನಲ್ಲಿಯೇ ಪ್ರಾರಂಭವಾಗುವುದು. ಈ ಹಂತದ ವಿದ್ಯಾರ್ಥಿಯು ತಾನು ಕಲಿತದ್ದನ್ನು ಪರೀಕ್ಷಿಸಲು ಕಾರ್ಯಕ್ಷೇತ್ರವನ್ನು ಬಯಸುವನು. ಆದ್ದರಿಂದ ಗುರುವು ಯೋಜನೆಗಳ ಮತ್ತು ಚರ್ಚಾಗೋಷ್ಠಿಗಳ ಮೂಲಕ ತರಗತಿಯಲ್ಲಾಗಲಿ, ಶಾಲೆಯ ಆವರಣದಲ್ಲಾಗಲಿ ಅಥವಾ ಸಂಸ್ಥೆಯ ಚಟುವಟಿಕೆಗಳಲ್ಲಾಗಲಿ, ವಿದ್ಯಾರ್ಥಿಯು ತಾನು ಕಲಿತದ್ದನ್ನು ಅಭ್ಯಸಿಸಲು ಸಾಕಷ್ಟು ಅವಕಾಶಗಳನ್ನು ಒದಗಿಸಿ ಕೊಡಬೇಕು. ಗ್ರೂಪ್ -3ರ ಮಟ್ಟದಲ್ಲಿ, ಗುರುವು ತಾಯಿಗಿಂತ ಅಥವಾ ಶಿಕ್ಷಕಿಗಿಂತ ಮಿಗಿಲಾಗಿ, ವಿದ್ಯಾರ್ಥಿಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಅವರ ವಿಶ್ವಾಸಾರ್ಹ ಗೆಳತಿಯ ಪಾತ್ರವನ್ನು ನಿರ್ವಹಿಸಬೇಕಾಗುವುದು.