ಸೂರ್ಯ
ಸೂರ್ಯ
ಮಕ್ಕಳೇ! ನೇರವಾಗಿ ಕುಳಿತುಕೊಳ್ಳಿ! ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಂಡು, ನಿಧಾನವಾಗಿ ಹೊರಗೆ ಬಿಡಿ. ಕಣ್ಣುಗಳನ್ನು ಮುಚ್ಚಿಕೊಳ್ಳಿ. ನೀವು ಸೂರ್ಯದೇವನನ್ನು ದರ್ಶಿಸಲು ಪ್ರವಾಸಹೊರಟಿರುವುದಾಗಿ ಊಹಿಸಿಕೊಳ್ಳಿ. ಸೂರ್ಯನು ದೊಡ್ಡ ಅಗ್ನಿ ಗೋಳ.
ಅದು ಕೆಂಪು, ಕಿತ್ತಳೆ ಮತ್ತು ಹಳದಿಯ ವರ್ಣಗಳಿಂದ ಕೂಡಿದೆ. ನಾವು ಸೂರ್ಯನನ್ನು ಸಮೀಪಿಸುತ್ತಾ ಹೋದಂತೆಲ್ಲಾ, ಅದರ ಶಾಖದ ಅನುಭವವು ನಮಗಾಗುತ್ತಾ ಬರುತ್ತದೆ. ಸೂರ್ಯನಿಗೆ ಅತಿ ಸಮೀಪವಾಗಿ ಹೋಗುವುದು ಸಾಧ್ಯವಾಗುವ ವಿಷಯವಲ್ಲ.
ಸೂರ್ಯನಿಂದಲೇ ನಮಗೆ ಶಾಖ, ಬೆಳಕು. ಕ್ರಮಬದ್ಧವಾಗಿ, ಬೆಳಗ್ಗೆ ಉದಯಿಸಿ, ಸಂಜೆಗೆ ಮುಳುಗುವ ಸೂರ್ಯನು, ನಮಗೆ ಶಿಸ್ತಿನ ಪಾಠವನ್ನು ಕಲಿಸುತ್ತಾನೆ. ಸೂರ್ಯನಿಂದಾಗಿಯೇ ಭೂಮಿಯ ಮೇಲೆ ಜೀವನ ಸಾಧ್ಯ. ಸೂರ್ಯನ ಬೆಳಕಿನ ಸಹಾಯದಿಂದಲೇ, ಸಸ್ಯಗಳು ತಮ್ಮ ಆಹಾರವನ್ನು ತಯಾರಿಸಿ ಕೊಳ್ಳುತ್ತವೆ.
ಅದೇ ರೀತಿಯಲ್ಲೇ ನಾವೂ ಸಹ ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡುವ ಮತ್ತು ನಿಸ್ವಾರ್ಥತೆಯಿಂದ ಬದುಕುವ ಪಾಠವನ್ನು ಕಲಿಯೋಣ.
ಸೂರ್ಯನ ಚಲನೆಯನ್ನು ನೋಡುವುದೆಂದರೆ ನಿಮಗೆ ಬಹಳ ಉತ್ಸಾಹ, ಅಲ್ಲವ? ಆದರೆ, ಚಲಿಸುವುದು ಸೂರ್ಯನಲ್ಲ, ಭೂಮಿ.
ಅದೇ ಉತ್ಸಾಹದಿಂದ, ಆನಂದದಿಂದ ನೀವು ವಾಪಸ್ಸಾಗಿ ನಿಮ್ಮ ನಿಮ್ಮ ಸ್ಥಳಗಳಲ್ಲಿ ಕುಳಿತುಕೊಳ್ಳಿ. ನಿಧಾನವಾಗಿ ಕಣ್ತೆರೆಯಿರಿ.
ಸೂರ್ಯನು ನಮಗೆಲ್ಲ ಬೆಳಕನ್ನು ನೀಡುತ್ತಾ, ತನ್ನ ಶಾಖದಿಂದ ನಮ್ಮನ್ನೆಲ್ಲಾ ಬೆಚ್ಚಗಿಟ್ಟಿರುವಂತೆ, ನಾವೂ ಸಹ ನಮ್ಮಲಿರುವ ಪ್ರೇಮವನ್ನು ಪ್ರತಿಯೊಬ್ಬರಿಗೂ ನೀಡೋಣ.
ಚಟುವಟಿಕೆ:
ಮಾನಸಿಕ ಪ್ರಯಾಣದ ಸಮಯದಲ್ಲಿ, ನೀವು ಏನೆಲ್ಲಾ ಕಂಡರೆಂಬುದರ ಬಗ್ಗೆ ಒಂದು ಚಿತ್ರವನ್ನು ಬಿಡಿಸಿ.
[Source : Early Steps to Self Discovery Step – 2, Institute of Sathya Sai Education (India), Dharmakshetra, Mumbai.]