ಕಮಲ ಪುಷ್ಪ

Print Friendly, PDF & Email
National Flower Lotus

ಕಮಲ ಪುಷ್ಪ

ಪ್ರ್ರೇತಿಯ ಮಕ್ಕಳೇ! ನೀವು ಒಂದು ಕೊಳದ ಬಳಿ ನಡೆದಾಡುತ್ತಿರುವಂತೆ ಮನದಲ್ಲಿ ಊಹಿಸಿಕೊಳ್ಳಿ. ಆ ಕೊಳಕ್ಕೆ ಹತ್ತಿರದಲ್ಲೇ ಒಂದು ದೇವಾಲಯವೂ ಕಾಣುತ್ತಿದೆ. ಕೊಳದಲ್ಲಿ ಅದೆಷ್ಟು ಕಮಲಗಳು ಅರಳಿವೆ, ಗಮನಿಸಿ! ದೇವಿ ಮಹಾಲಕ್ಷ್ಮಿಗೆ ಕಮಲಗಳೆಂದರೆ ಬಹಳ ಇಷ್ಟ. ಕಮಲದ ಬಣ್ಣ, ನಸುಗೆಂಪು. ಇದು ನಮ್ಮ ‘ರಾಷ್ಟ್ರೀಯ ಪುಷ್ಪ’ ವೆಂದು ಗುರುತಿಸಲ್ಪಟ್ಟಿದೆ.

ನಮ್ಮ ಹೃದಯವೂ ಸಹ ಕಮಲದ ಹಾಗೆಯೇ ಮೃದು ಮತ್ತು ಕೋಮಲ. ಸೂರ್ಯೋದಯವಾದಾಗಲೇ, ಕಮಲದ ಎಸಳುಗಳು ಒಂದೊಂದಾಗಿ ಅರಳತೊಡಗುತ್ತವೆ. ಕಮಲವು ನಮಗೆಲ್ಲಾ ‘ಪವಿತ್ರತೆ’ ಮತ್ತು ‘ವೈರಾಗ್ಯ’ಗಳೆಂಬ ಪಾಠಗಳನ್ನು ಸಹ ಕಲಿಸುತ್ತದೆ. ನೋಡಿ! ಆ ಕೊಳದ ನೀರೋ ನಿಂತಿರುವ ಕೆಸರು ನೀರು. ಅದರಲ್ಲಿ ಅರಳಿರುವ ಕಮಲಗಳಾದರೋ ತಮ್ಮ ಕಾಂಡದ ಕೆಳಗಿರುವ ಕೆಸರು ಮಣ್ಣನ್ನು ಅಂಟಿಸಿಕೊಳ್ಳದೇ, ಪರಿಶುದ್ಧವಾಗಿ ಮೇಲೆದ್ದು ಅರಳಿವೆ. ನಾವು ‘ಒಳ್ಳೆಯತನ’ ಮತ್ತು ‘ಪರಿಶುದ್ಧತೆ’ ಗಳನ್ನು ಹೊಂದಿರಲು ಸುತ್ತಲಿನ ಪರಿಸರವು ಹೇಗಿದೆ ಎಂಬುದರ ಅಗತ್ಯವಿಲ್ಲ ಎಂಬುದನ್ನು ಇದು ತಿಳಿಸುತ್ತಿದೆ. ಕಮಲದ ಎಲೆಗಳ ಮೇಲೆ, ಅವುಗಳಿಗೆ ಅಂಟಿಕೊಳ್ಳದೆ, ಅಲ್ಲಿಂದಿಲ್ಲಿಗೆ ಚಲಿಸುತ್ತಿರುವ ನೀರಿನ ಹನಿಗಳನ್ನು ಗಮನಿಸಿದಿರಾ? ಇದು ನಮಗೆ ‘ವೈರಾಗ್ಯ’ ವೆಂಬ ಪಾಠ ವನ್ನು ಕಳಿಸಿ ಕೊಡುತ್ತಿದೆ.

ನಾವು ಒಳ್ಳೆಯವರಾಗಿರಬೇಕು ಮತ್ತು ನಮ್ಮ ಸುತ್ತಲೂ ಇರುವ ಎಲ್ಲರಿಗೂ ಆನಂದವನ್ನು ಹಂಚಬೇಕೆಂಬುದೇ, ಇದು ನಮಗೆ ಕಲಿಸುತ್ತಿರುವ ಮತ್ತೊಂದು ಪಾಠ!

ಚಟುವಟಿಕೆ:

ತಾವು ಮನಸ್ಸಿನಲ್ಲಿ ಊಹಿಸಿಕೊಂಡ ಈ ದೃಶ್ಯದ ಚಿತ್ರವನ್ನು ಬರೆಯುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ.

[Source : Early Steps to Self Discovery Step – 2, Institute of Sathya Sai Education (India), Dharmakshetra, Mumbai.]

Leave a Reply

Your email address will not be published. Required fields are marked *

error: