ಓಂಕಾರ -ಪ್ರಣವ ನಾದ

Print Friendly, PDF & Email
ಓಂಕಾರ -ಪ್ರಣವ ನಾದ
ಭಗವಾನ್ ಬಾಬಾರವರ ಪ್ರಕಾರ,

“ನಿಮ್ಮ ಹೃದಯದಲ್ಲಿ ಮತ್ತು ಈ ಬ್ರಹ್ಮಾಂಡದ ಹೃದಯದಲ್ಲಿ ಪ್ರತಿಧ್ವನಿಸುತಿರುವ ಅನಾದಿ ನಿತ್ಯ ಪ್ರಣವ ನಾದವನ್ನು ಕೇಳಿ.” ಓಂಕಾರವು ಅನಾದಿ, ಅವ್ಯಯ, ಎಲ್ಲವನ್ನೂ ವ್ಯಾಪಿಸಿರುವ ಪರಮಾತ್ಮನ ಸಂಕೇತವಾಗಿದೆ.

ಚಿರಸ್ಥಾಯಿಯಾಗಿ ನಿಂತಿರುವ ನಕ್ಷತ್ರಗಳ ಚಲನ ಶಬ್ದವೇ ಓಂಕಾರವು.

ನಿರಾಕಾರ ಪರಬ್ರಹ್ಮನು ಸೃಷ್ಟಿಯ ಸಂಕಲ್ಪವನ್ನು ತಾಳಿದಾಗ ಹೊರಹೊಮ್ಮಿದ ಓಂಕಾರ ಎಂಬ ಸಾಕಾರ ಶಬ್ದದಿಂದ ಈ ಸೃಷ್ಟಿಯ ಪ್ರಾರಂಭವಾಯಿತು.

ವಾಸ್ತವದಲ್ಲಿ ನೋಡಿದಾಗ, ಸಮತೋಲನದಲ್ಲಿ ಸೂಕ್ಷ್ಮ ವ್ಯತ್ಯಾಸವಾದರೂ ಹೊಮ್ಮುವ ನಾದವೂ ಹೌದು. ಕಣ್ಣಿನ ರೆಪ್ಪೆಯನ್ನು ಮಿಟುಕಿಸಿದಾಗಲೂ ಶಬ್ದ ಬರುತ್ತದೆ, ಅದು ಕಿವಿಗೆ ಕೇಳಿಸದಷ್ಟು ಸೂಕ್ಷ್ಮವೇ ಇರಬಹುದು. ಈ ರೀತಿಯ ಕಿವಿಗೆ ಕೇಳಿಸದ ಸೂಕ್ಷ್ಮ ಶಬ್ದವು ಲೆಕ್ಕವಿಲ್ಲದಷ್ಟು ಇದೆ. ಆದ್ದರಿಂದ ನೀವೀಗಾಗಲೇ ಗ್ರಹಿಸಿರುವಂತೆ ಓಂಕಾರದಿಂದಲೇ ಪಂಚಭೂತಗಳು ಹೊರಹೊಮ್ಮಿ ಸೃಷ್ಟಿಯ ರಚನೆಯಾಯಿತು.
ಈ ಶಬ್ದವು ಅನಾದಿ”.

[http://media.radiosai.org/journals/Vol_07/01FEB09/quiz.htm]

ಓಂಕಾರದ ಅನಾದಿ ಶಬ್ದದಿಂದಲೇ ಇತರೆ ಎಲ್ಲಾ ವರ್ಣಾಕ್ಷರ ಶಬ್ದಗಳಿಗೆ ಪ್ರಾಣ ಶಕ್ತಿ ಇರುವುದು. ಓಂಕಾರವು ಸರ್ವಸಮ್ಮತವಾದ ಭಗವಂತನ ನಾಮ.

ಕ್ರೈಸ್ತ ಧರ್ಮೀಯರು ತಮ್ಮ ಪ್ರಾರ್ಥನೆಯಲ್ಲಿ “ಆಮೇನ್” ಎಂದು ಹೇಳುವುದು ಓಂಕಾರದ ಮತ್ತೊಂದು ರೂಪಾಂತರ. ಓಂಕಾರವು ಎಲ್ಲರಿಗೂ ಅನ್ವಯವಾಗಿದೆ ಮತ್ತು ಎಲ್ಲಾ ಕಾಲಕ್ಕೂ ಅಪ್ಯಾಯಮಾನವಾದದ್ದು. ಅದು ದೇಶ-ಕಾಲ ಧರ್ಮ ಮತ್ತು ಸಂಸ್ಕೃತಿಯ ಚೌಕಟ್ಟನ್ನು ಮೀರಿದ್ದು ಪ್ರತಿಯೊಬ್ಬರೂ ಉಚ್ಚರಿಸಬಹುದಾದ ಶಬ್ದವಾಗಿದೆ.

[ಬೇಸಿಗೆ ಶಿಬಿರ ಬೃಂದಾವನ 1979 p124-125].

“……ಓಂಕಾರ ನಾದದಿಂದ ಈ ಸೃಷ್ಟಿಯ ಪ್ರಕ್ರಿಯೆ ಮತ್ತು ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿ ಎಂಬ ಪಂಚಭೂತಗಳ ಸೃಷ್ಟಿಯಾಯಿತು. ಓಂಕಾರವು ಸೃಷ್ಟಿ ಪ್ರಕ್ರಿಯೆಯ ಜೀವಾಳ. ಅದಕ್ಕಾಗಿ ಇದನ್ನು “ಪ್ರಣವ” ಎಂದು ಕರೆಯುತ್ತಾರೆ ಅಂದರೆ ಪ್ರಾಣಶಕ್ತಿಯಲ್ಲಿ ಸಂಚರಿಸುವ ಮತ್ತು ಎಲ್ಲಾ ಜೀವರಲ್ಲಿ ತುಂಬಿರುವ ಎಂದು.”

“ಓಮಿತ್ಯೇಕಾಕ್ಷರಂ ಬ್ರಹ್ಮ”, ಭಗವಾನರು ಓಂಕಾರದ ಮಹತ್ವವನ್ನು ತಿಳಿಸುತ್ತ ಓಂಕಾರವೆಂದರೆ ಪರಬ್ರಹ್ಮವೇ ಎಂದು ಹೇಳಿದ್ದಾರೆ. ಮಂತ್ರವೆಂದರೇನು ಮತ್ತೆ ಅದರ ಮಹತ್ವವೇನು ಎನ್ನುವುದರ ಕುರಿತಾಗಿ ಭಗವಾನ್ ಬಾಬಾರವರು ಅಕ್ಟೋಬರ್ 1, 1984 ರ ಪೂರ್ಣಚಂದ್ರ ಸಭಾಭವನ, ಪ್ರಶಾಂತಿ ನಿಲಯಂನಲ್ಲಿ ತಮ್ಮ ದಿವ್ಯ ಉಪನ್ಯಾಸದಲ್ಲಿ ಹೇಳಿದ್ದಾರೆ.

ಮಂತ್ರವೆಂದರೆ ಬರೀ ಪದಗಳ ಸಮೂಹವಲ್ಲ. ಅದೊಂದು ಅತ್ಯಂತ ಮಹತ್ವವುಳ್ಳ ಪದಗಳು ಒಳಗೊಂಡ ಒಂದು ಸಂಕೀರ್ಣ. ಅಂತಹ ದಿವ್ಯ ಶಕ್ತಿಗಳು ಒಳಗೊಂಡಿರುವ ಮಂತ್ರಗಳನ್ನು ಸರಿಯಾಗಿ ಉಚ್ಚಾರಣೆ ಮಾಡಿದಾಗ ಮಾನವನಲ್ಲಿ ಇರುವಂತಹ ದಿವ್ಯತ್ವ ಹೊರಹೊಮ್ಮುತ್ತದೆ.

ಈ ಮಂತ್ರಗಳ ಉಚ್ಚಾರಣೆಯಿಂದ ಹೊಮ್ಮುವ ತರಂಗಗಳು, ಸೃಷ್ಟಿಯ ಎಲ್ಲೆಡೆ ತುಂಬಿರುವ ಪ್ರಣವನಾದದೊಂದಿಗೆ ಬೆರೆತು ವಿಶ್ವಪ್ರಜ್ಞೆಯೊಂದಿಗೆ ಮೇಳೈಸುತ್ತದೆ. ಈ ತರಂಗಗಳೇ ಮಂತ್ರಗಳ ರೂಪತಾಳಿ ವೇದಗಳು ಎಂದು ಕರೆದರು.

[http://www.theprasanthireporter.org/2013/05/omkara/]

ಈ ಶಕ್ತಿಯ ಅಸ್ತಿತ್ವವನ್ನು ವಿಜ್ಞಾನದ ಜಗತ್ತು ಕೂಡ ಒಪ್ಪುತ್ತದೆ:

1978 ರಲ್ಲಿ ಅರ್ನೋ ಪೆನ್ಸಿಯಾಸ್ ಮತ್ತು ರಾಬರ್ಟ್ ವಿಲ್ಸನ್ ಎಂಬ ಇಬ್ಬರು ವಿಜ್ಞಾನಿಗಳಿಗೆ “ಕಾಸ್ಮಿಕ್ ಮೈಕ್ರೋ ಬ್ಯಾಕ್ಗ್ರೌಂಡ್ ರೇಡಿಯೇಷನ್” ಎಂಬ ತಮ್ಮ ವೈಜ್ಞಾನಿಕ ಸಂಶೋಧನೆಗೆ ನೋಬೆಲ್ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.

1964 ರಲ್ಲಿ ಬೆಲ್ ಸಂಶೋಧನಾಲಯಲ್ಲಿ ಈ ಇಬ್ಬರು ಸಂಶೋಧಕರು ಆಕಸ್ಮಿಕವಾಗಿ ಈ ಪ್ರಕ್ರಿಯೆಯನ್ನು ಗಮನಿಸಿದರು. ಮೊದಲಿಗೆ ಅವರು ಇದು ಉಪಕರಣದ ದೋಷದಿಂದ ಆಗುತ್ತಿದೆ ಎಂದು ಭಾವಿಸಿದ್ದರು. ಸ್ವಲ್ಪ ಸಮಯದವರೆಗೆ, ಅವರು “ವೈಟ್ ಡೈಎಲೆಕ್ಟ್ರಿಕ್ ಮೆಟೀರಿಯಲ್”-ಅಂದರೆ, ಪಕ್ಷಿಯ ಹಿಕ್ಕೆಗಳು (ಫಾಕ್ಸ್, 2002, ಪುಟ 78) ಎಂದು ಕರೆಯಲ್ಪಡುವ ಹಿನ್ನೆಲೆ ಶಬ್ದ ಎಂದು ಅವರು ಅಂದುಕೊಂಡರು. ಅವರು ಕಂಡಿದ್ದ ವಿದ್ಯುತ್ಕಾಂತೀಯ ವಿಕಿರಣವು ಅವರು ಆಂಟೆನಾವನ್ನು ಕೇಂದ್ರೀಕರಿಸುವ ಆಕಾಶದ ಸ್ಥಳದಿಂದ ಸ್ವತಂತ್ರವಾಗಿತ್ತು ಮತ್ತು ಮಸುಕಾದ “ಹಿಸ್” ಅಥವಾ “ಹಮ್” ಅಂತ ಕೇಳುವ ಶಬ್ದ ಆಗಿತ್ತು. ಸೂಕ್ಷ್ಮ ತರಂಗಗಳು, ತಾಪಮಾನಕ್ಕೆ ಸಂಬಂಧಿಸಿದಂತೆ, 7.3 ಸೆಂ.ಮೀ ತರಂಗಾಂತರದಲ್ಲಿ ಸರಿಸುಮಾರು 3.5 K ವಿಕಿರಣವನ್ನು ಉತ್ಪಾದಿಸುತ್ತದೆ (“K” ಎಂದರೆ ವೈಜ್ಞಾನಿಕ ತಾಪಮಾನ ಮಾಪಕ “ಕೆಲ್ವಿನ್”; 0 K ಅಂದರೆ ಸಂಪೂರ್ಣ ಶೂನ್ಯ-ಈ ತಾಪಮಾನದಲ್ಲಿ ಸೈದ್ಧಾಂತಿಕವಾಗಿ ಎಲ್ಲ ಪ್ರಕ್ರಿಯೆಗಳು ನಿಲ್ಲುತ್ತದೆ, -459°F ಅಥವಾ -273°C).

ಅವರು ಈ ವಿದ್ಯಮಾನವನ್ನು ಏಕೆ ಎದುರಿಸುತ್ತಿದ್ದಾರೆ ಎಂದು ನಿರ್ಧರಿಸಲು ಸಾಧ್ಯವಾಗಲಿಲ್ಲ, ನಂತರ ಪೆನ್ಜಿಯಾಸ್ ಮತ್ತು ವಿಲ್ಸನ್ ಅವರು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ರಾಬರ್ಟ್ ಡಿಕೆ ಅವರ ಸಹಾಯವನ್ನು ಕೋರಿದರು. ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ತಕ್ಷಣವೇ ಈ ಶಬ್ದವನ್ನು ಬಿಗ್ ಬ್ಯಾಂಗ್‌ನ “ಪ್ರತಿಧ್ವನಿ” ಎಂದು ಹೇಳಿದರು. ಬಿಗ್ ಬ್ಯಾಂಗ್ ನಿಜವಾಗಿದ್ದಲ್ಲಿ, ಬಾಹ್ಯಾಕಾಶದಲ್ಲಿ ಕೆಲವು ರೀತಿಯ ನಿರಂತರ ವಿಕಿರಣವಿರಬೇಕು ಎಂದು ತೀರ್ಮಾನಿಸಲಾಯಿತು.

(see Weinberg, 1977, p. 50; Hoyle, et al., 2000, p. 80).

[ಮೂಲ: ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ (UK) / ಸಾಯಿ ಓರಿಯೆಂಟೆಡ್ ಸೆಂಟರ್ಸ್ ಪ್ಯಾಕ್ – ಆವೃತ್ತಿ 1: ಮಾರ್ಚ್ 2004]

Leave a Reply

Your email address will not be published. Required fields are marked *