ಗುರುರ್ಬ್ರಹ್ಮಾ ಶ್ಲೋಕ – ಚಟುವಟಿಕೆ

Print Friendly, PDF & Email
ಗುರುರ್ಬ್ರಹ್ಮಾ ಶ್ಲೋಕ – ಚಟುವಟಿಕೆ

ಚಟುವಟಿಕೆಯ ಗುರಿ – ಮೊದಲ ಗುಂಪಿನ ಬಾಲವಿಕಾಸ ಮಕ್ಕಳಿಗೆ ತ್ರಿಮೂರ್ತಿ ದೇವರುಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಪ್ರತಿನಿಧಿಸುವ ಚಟುವಟಿಕೆಯಾದ ಸೃಷ್ಟಿ, ಪೋಷಣೆ ಮತ್ತು ವಿನಾಶದ ಪರಿಕಲ್ಪನೆಯನ್ನು ಅರ್ಥಮಾಡಿಸಿ ಕೊಡುವುದು.

ಅಗತ್ಯವಿರುವ ವಸ್ತುಗಳು – ಮಡಕೆ ಅಥವಾ ಮೊಳಕೆ ಬರಿಸುವ ಟ್ರೇ / ಪಾತ್ರೆ – ಸೆರಾಮಿಕ್, ಜೇಡಿಮಣ್ಣು ಅಥವಾ ಬೆರಕೆ ಗೊಬ್ಬರ (ಕಾಂಪೋಸ್ಟ್), ರಾಗಿಯ ಕೆಲವು ಬೀಜಗಳು, ಸಾಸಿವೆ ಇತ್ಯಾದಿ.

ವಿಧಾನ-

  1. ವಿದ್ಯಾರ್ಥಿಗಳ ಸಂಖ್ಯಾ ಬಲವನ್ನು ಅವಲಂಬಿಸಿ ಅವರನ್ನು ಮೂರು ಅಥವಾ ನಾಲ್ಕು ಗುಂಪುಗಳಾಗಿ ವಿಂಗಡಿಸಿರಿ.
  2. ಪ್ರತಿ ಗುಂಪಿಗೆ ಒಂದು ಮಡಕೆ / ಮೊಳಕೆ ಬರಿಸುವ ತಟ್ಟೆಯನ್ನು ನಿಗದಿಪಡಿಸಿರಿ.
  3. ಪ್ರತಿ ಗುಂಪಿಗೆ ಆಯಾ ಮಡಿಕೆಗಳು / ಟ್ರೇಗಳನ್ನು ಲೇಬಲ್ ಮಾಡಲು ಹೇಳಿರಿ. ಅವರ ಗುಂಪಿನ ಹೆಸರು ಮತ್ತು ಬೀಜದ ಹೆಸರನ್ನು ಬರೆಯಲು ಅವರಿಗೆ ಹೇಳಬಹುದು.
  4. ಪ್ರತಿ ಗುಂಪಿಗೆ ಆಯಾ ಮಡಿಕೆಗಳನ್ನು / ಟ್ರೇಗಳನ್ನು ಕಾಂಪೋಸ್ಟ್ ತುಂಬಲು ಹೇಳಿರಿ.
  5. ಬೀಜಗಳನ್ನು ಸೇರಿಸುವ ಮೊದಲು ಬೆರಕೆ ಗೊಬ್ಬರಕ್ಕೆ ನೀರು ಹಾಕಿ ಕೊಳ್ಳಲು ಹೇಳಿರಿ.
  6. ವಿವಿಧ ರೀತಿಯ ಬೀಜಗಳು, ಅವುಗಳ ಗಾತ್ರ, ಆಕಾರ, ಬಣ್ಣಗಳನ್ನು ನೋಡಲು ಹೇಳಿರಿ.
  7. ಬೀಜಗಳು ಮೊಳಕೆಯೊಡೆಯಲು ಮತ್ತು ಸುಂದರವಾದ ಸಸ್ಯಗಳಾಗಿ ಬೆಳೆಯಲು ಅವರು ನೀಡಬೇಕಾದ ಎಲ್ಲ ವಿಷಯಗಳನ್ನು ಚರ್ಚಿಸಿರಿ.
  8. ಪ್ರತಿ ಗುಂಪಿಗೆ ಬೀಜಗಳ ಸಂಖ್ಯೆಯನ್ನು ಎಣಿಸಲು ಹೇಳಿ ಮತ್ತು ಅದನ್ನು ಆಯಾ ಮಡಕೆಗಳಲ್ಲಿ ಇರಿಸಿ ಮತ್ತೆ ನೀರನ್ನು ಸಿಂಪಡಿಸಲು ಹೇಳಿರಿ.
  9. ಪ್ರತಿ ಗುಂಪಿಗೆ ಆಯಾ ಮಡಕೆಗಳನ್ನು ಕಿಟಕಿಯ ಬಳಿ ಅಥವಾ ಸಾಕಷ್ಟು ಸೂರ್ಯನ ಬೆಳಕು ಇರುವ ಸ್ಥಳದಲ್ಲಿ ಇರಿಸಲು ಹೇಳಿರಿ.
  10. ತಂಡದಲ್ಲಿನ ಪ್ರತಿ ಮಗುವಿಗೆ ಸರಣಿ ಪ್ರಕಾರ ಸಸ್ಯವನ್ನು ಪರೀಕ್ಷಿಸುವ ಜವಾಬ್ದಾರಿಯನ್ನು ವಹಿಸಬಹುದು. ಅವರು ಮಡಕೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರನ್ನು ಸಿಂಪಡಿಸಿ ಸೂರ್ಯನ ಬೆಳಕು ಕೂಡ ಸರಿಯಾದ ಪ್ರಮಾಣದಲ್ಲಿ ಬೀಳುತ್ತಿರುವುದನ್ನು ಖಚಿತಪಡಿಸಿಕೊಳ್ಳಬಹುದು.
  11. ಇಡೀ ಪ್ರಕ್ರಿಯೆಯಲ್ಲಿ ಅವರಿಗೆ ಮಾರ್ಗದರ್ಶನ ನೀಡುವ ಗುರುಗಳು, ಕಳೆ ಕೀಳುವ ಬಗ್ಗೆ ಅವರಿಗೆ ವಿವರಿಸುತ್ತಾ, ಕಳೆಗಳಿಂದ ಮುತ್ತಿಕೊಂಡಿರುವ ಸಣ್ಣ ಮೊಗ್ಗುಗಳು / ಸಸ್ಯಗಳನ್ನು ಎಚ್ಚರಿಕೆಯಿಂದ ತೆಗೆದುಹಾಕುವಂತೆ ಸಲಹೆ ನೀಡ ಬೇಕು.
  12. ಸಸ್ಯದ ಅಭಿವೃದ್ಧಿಯ ವಿವಿಧ ಹಂತಗಳ ಬಗ್ಗೆ ತರಗತಿಯಲ್ಲಿ ಚರ್ಚಿಸಿರಿ.
  13. ಮಕ್ಕಳು, ಕೆಲವೇ ದಿನಗಳಲ್ಲಿ, ಮೊಳಕೆಯೊಡೆಯುವ ಬೀಜಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಮತ್ತು ಒಂದು ವಾರದೊಳಗೆ, ಸಸಿಗಳು ಹೊರಹೊಮ್ಮುವುದನ್ನು ನೋಡಿ ಅವರು ಉತ್ಸುಕರಾಗುತ್ತಾರೆ!
  14. ಪ್ರತಿ ಗುಂಪಿನವರು ಈ ಚಟುವಟಿಕೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಕೇಳಿರಿ. ಅವರು ಏಕೆ ಮತ್ತು ಹೇಗೆ ಈ ಚಟುವಟಿಕೆಯನ್ನು ಆನಂದಿಸಿದರು ಮತ್ತು ಅನಗತ್ಯ ಕಳೆಗಳನ್ನು ನಾಶಪಡಿಸುತ್ತ, ಸಸ್ಯಗಳನ್ನು ನಿಯಮಿತವಾಗಿ ಪೋಷಿಸುವ ಮೂಲಕ ಬೀಜಗಳಿಂದ ಸಸ್ಯಗಳನ್ನು ರಚಿಸುವ ಈ ಪ್ರಕ್ರಿಯೆಯು ಸೃಷ್ಟಿ, ಪೋಷಣೆ ಮತ್ತು ವಿನಾಶದ ಪರಿಕಲ್ಪನೆಯಲ್ಲಿ ತಾವು ಭಾಗವಹಿಸಬಹುದು ಎಂಬುದನ್ನು ಹೇಗೆ ಅರ್ಥೈಸಿಕೊಂಡರು ಎಂಬುದನ್ನು ಚರ್ಚಿಸಿರಿ.

Seed

Sand

Plant

ತೀರ್ಮಾನ – ಸೃಷ್ಟಿಕರ್ತ ಬ್ರಹ್ಮನಂತೆ ಒಳ್ಳೆಯಗುಣಗಳ್ಳನ್ನು ಸೃಷ್ಟಿಸಿ, ಸಂರಕ್ಷಕ ವಿಷ್ಣುವಿನಂತೆ ಒಳ್ಳೆಯಗುಣಗಳನ್ನು ಬೆಳೆಸುತ್ತಾ, ಶಿಲ್ಪಿಯಂತೆ ನಮ್ಮ ನಕಾರಾತ್ಮಕ ಗುಣಗಳನ್ನುಕೆತ್ತುತ್ತಾ, ಹಾಳುಗುಣಗಳನ್ನು ನಾಶಮಾಡುವ ಶಿವನಂತೆ, ಸೃಷ್ಟಿ, ಪೋಷಣೆ ಮತ್ತು ವಿನಾಶದ ಸಂಪೂರ್ಣ ಪ್ರಕ್ರಿಯೆಯನ್ನು ನಮ್ಮ ಒಳಿತಿಗಾಗಿ, ನಮ್ಮನ್ನು ಒಳ್ಳೆಯ ಜೀವಿಗಳಾಗಿ ಮಾಡುವಲ್ಲಿ ಗುರುಗಳ ಪಾತ್ರ ಹೇಗೆ ಇರುತ್ತದೆ ಎಂಬುವುದನ್ನು ಚರ್ಚಿಸಿರಿ.

Leave a Reply

Your email address will not be published. Required fields are marked *

error: