ಪ್ರಾರ್ಥನೆಗಳು

Print Friendly, PDF & Email
ಪ್ರಾಥನೆ

ಕಿರಣ ತಂದೆತಾಯಿಗಳಿಗೆ ಒಬ್ಬನೇ ಮಗ. ಮನೆಯಲ್ಲಿ ಹಿರಿಯರಿಗೆ ವಿಧೇಯನೂ ಶಾಲೆಯಲ್ಲಿ ಉತ್ತಮ ನಡವಳಿಕೆಯವನೂ ಆಗಿ ಅವನು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದನು.

ಕೇವಲ ಹತ್ತು ವಷ೵ದ ಬಾಲಕನಾಗಿದ್ದರೂ ತನ್ನ ತಂದೆ, ತಾಯಿ ಮಾಡುವುದನ್ನೆಲ್ಲಾ ಕಿರಣ ಆಸಕ್ತಿಯಿಂದ ಗಮನಿಸುತ್ತಿದ್ದನು. ಅವನ ತಂದೆ ಜಿಲ್ಲಾ ನ್ಯಾಯಾಧೀಶರು. ಅತ್ಯಂತ ಪ್ರಾಮಾಣಿಕರಾಗಿ ಬಡವ-ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ನ್ಯಾಯ ವಿತರಣೆ ಮಾಡುವುದರಲ್ಲಿ ಅವರು ಪ್ರಸಿದ್ಧರಾಗಿದ್ದರು. ಕಿರಣನ ತಾಯಿ ದೈವಭಕ್ತೆ. ಪ್ರತಿದಿನವೂ ಪೂಜೆ ಪ್ರಾಥ೵ನೆಯಲ್ಲಿ ತೊಡಗಿರುತ್ತಿದ್ದುದಲ್ಲದೆ, ಕಷ್ಟದಲ್ಲಿರುವವರಿಗೆ ಕರುಣೆಯಿಂದ ನೆರವಾಗುತ್ತಿದ್ದಳು. ತನ್ನ ತಂದೆ, ತಾಯಿಯರ ಬಗೆಗೆ ಕಿರಣನಿಗೆ ತುಂಬಾ ಅಭಿಮಾನ, ಪ್ರೀತಿ. ಅವರು ಅಷ್ಟೊಂದು ಸಮಯ ದೇವರ ಪೂಜೆ ಪ್ರಾಥ೵ನೆಗಳಲ್ಲಿ ಏಕೆ ಕಳೆಯುತ್ತಾರೆ ಎಂದು ಅವನಿಗೆ ಆಗಾಗ ಅನ್ನಿಸುತ್ತಿತ್ತು. ಒಮ್ಮೆ ಅವನು ತಾಯಿಯನ್ನು ಕೇಳಿದ್ದೂ ಉಂಟು. “ಅಮ್ಮ, ಅಪ್ಪ ದೊಡ್ಡ ನ್ಯಾಯಾಧೀಶರು. ಆದರೂ ಅವರು ಪ್ರತಿ ಭಾನುವಾರವೂ ಸಾಮಾನ್ಯ ಹಳ್ಳಿಗರ ಹಾಗೆ ಶಿವ ದೇವಾಲಯಕ್ಕೆ ಹೋಗಿ ಪೂಜೆ ಸತ್ಸಂಗಗಳಲ್ಲಿ ಏಕೆ ಭಾಗವಹಿಸಬೇಕು? ನೀನು ಕೂಡ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅಷ್ಟು ಹೊತ್ತು ದುಗಾ೵ಮಾತೆಯ ಎದುರಿಗೆ ಕಣ್ಣುಮುಚ್ಚಿ ಕುಳಿತು ಧ್ಯಾನ ಮಾಡುವಿಯಲ್ಲ. ಅದರಿಂದ ಏನು ಪ್ರಯೋಜನ? ಅಷ್ಟೆಲ್ಲ ಮಂತ್ರಗಳನ್ನು ಹೇಳಿ ಮಾತೆಯನ್ನು ಪೂಜಿಸಬೇಕೆ? ಅದಕ್ಕೆ ಬದಲು ಅಷ್ಟು ಸಮಯವನ್ನು ಬೇರೆ ಒಳ್ಳೆಯ ಕೆಲಸಗಳಿಗೆ ಬಳಸಬಹುದಲ್ಲ.”

ಕಿರಣನ ಪ್ರಶ್ನೆಗೆ ಉತ್ತರ ಕೊಡದೆ ತಾಯಿ ಮೃದುವಾಗಿ ನಕ್ಕು ಬಿಡುತ್ತಿದ್ದಳು. ಮೌನವಾಗಿ ದೇವಿಯನ್ನು ಪ್ರಾಥಿ೵ಸುತ್ತಿದ್ದಳು, “ಅಮ್ಮ, ನನ್ನ ಕಿರಣ ಇನ್ನೂ ಮುಗ್ಧನಾದ ಹುಡುಗ. ಅವನಿಗೆ ತಿಳಿದಿಲ್ಲ. ಭಕ್ತಿ, ಶ್ರದ್ಧೆಗಳನ್ನು ಅವನಿಗೆ ಕೊಟ್ಟು ಕಾಪಾಡು” ಎಂದು.

ಒಂದು ದಿನ ಸಂಜೆ ಕಿರಣ ಶಾಲೆಯಿಂದ ಮನೆಗೆ ಬಂದೊಡನೆ ಪಕ್ಕದ ಮನೆಯವರು ಅವನಿಗೆ ಗಾಬರಿಯಾಗುವ ಸಮಾಚಾರ ಕೊಟ್ಟರು. ಕಿರಣನ ತಂದೆ ಅಂದು ಬೆಳಿಗ್ಗೆ ಕಚೇರಿಗೆ ಹೋಗುವಾಗ ಕಾರು ಅಪಘಾತಕ್ಕೆ ಒಳಗಾಗಿ ತುಂಬಾ ಗಾಯಗೊಂಡು ಆಸ್ಪತ್ರೆಯಲ್ಲಿ ಇದ್ದಾರೆ. ಇನ್ನೂ ಪ್ರಜ್ಞೆ ಬಂದಿಲ್ಲ.

ಈ ಮಾತು ಕೇಳಿದೊಡನೆ ಕಿರಣ ಗಾಬರಿಯಿಂದ ಆಸ್ಪತ್ರೆಗೆ ಓಡಲು ಹೊರಟ. ಆದರೆ ಅಷ್ಟರಲ್ಲೇ ಅವನಿಗೆ ಮನೆಯ ಪೂಜಾ ಕೊಠಡಿಯಲ್ಲಿ ಅಮ್ಮನು ಪ್ರತಿದಿನ ಪೂಜೆ ಮಾಡುವ ದುಗಾ೵ಮಾತೆಯ ನೆನಪಾಯಿತು. ಅವನು ಒಳಗೆ ಹೋದನು. ಎಂದಿನಂತೆ ಅಂದೂ ಅವನ ತಾಯಿಯು ಬಣ್ಣಬಣ್ಣದ ಹೂವುಗಳಿಂದ ವಿಗ್ರಹವನ್ನು ಸುಂದರವಾಗಿ ಅಲಂಕರಿಸಿದ್ದರು. ದುಗಾ೵ದೇವತೆ ಶಕ್ತಿ ಮಾತೆ. ಅವಳು ಸಕಲ ಜೀವಿಗಳಿಗೂ ತಾಯಿ. ಸವ೵ಶಕ್ತಿಮಯಿ ಎಂದು ತಾಯಿ

 ಹೇಳುತ್ತಿದ್ದುದು ಕಿರಣನಿಗೆ ನೆನಪಾಯಿತು. ಅವನು ವಿಗ್ರಹದ ಮುಂದೆ ಮಂಡಿಯೂರಿ ಕುಳಿತನು. ಕೈಮುಗಿದು, ಕಣ್ಣಲ್ಲಿ ನೀರು ತುಂಬಿಕೊಂಡಿರಲು ಹೇಳಿದನು, “ಅಮ್ಮ, ದುಗಾ೵ಮಾತೆ, ಅಪ್ಪನನ್ನು ಅಗಲಿ ನಾನು ಒಂದು ಕ್ಷಣವೂ ಇರಲಾರೆ ಎಂದು ನಿನಗೆ ಗೊತ್ತಲ್ಲವೇ? ದಯವಿಟ್ಟು ನನ್ನ ಅಪ್ಪನನ್ನು ನನಗೆ ಉಳಿಸಿಕೊಡು.” ಎಂದು ಪ್ರಾಥ೵ನೆ ಮಾಡಿ ಕಿರಣನು ದೇವಿಯ ಪಾದಗಳ ಮೇಲಿರಿಸಿದ್ದ ಒಂದು ಕೆಂಪು ಹೂವನ್ನು ತೆಗೆದುಕೊಂಡು ಆಸ್ಪತ್ರೆಗೆ ಓಡಿದನು.

ಆಸ್ಪತ್ರೆಯಲ್ಲಿ ಅವನ ತಂದೆ ಎಚ್ಚರವಿಲ್ಲದೆ ಮಲಗಿದ್ದರು. ಅವನಿಗೆ ಅಳು ಬಂತು. ಆದರೆ ಹಾಸಿಗೆಯ ಪಕ್ಕದಲ್ಲೇ ಕಣ್ಣು ಮುಚ್ಚಿ ಕುಳಿತು ಧ್ಯಾನ ಮಾಡುತ್ತಿದ್ದ ತಾಯಿಯ ಮುಖ ನೋಡಿ ಅವನಿಗೆ ಸಮಾಧಾನವಾಯಿತು. ಶಾಂತಿ ಸಮಾಧಾನಗಳ ಸೌಮ್ಯ ಕಾಂತಿ ಅವಳ ಮುಖದ ಮೇಲೆ ಹರಡಿತ್ತು. ಕಿರಣನು ಮೆಲ್ಲನೆ ಅವಳ ಕಿವಿಯಲ್ಲಿ ಉಸುರಿದನು.

“ಅಮ್ಮ, ದುಗಾ೵ಮಾತೆಯ ಪಾದದ ಮೇಲಿನ ಹೂವನ್ನು ತಂದಿದ್ದೇನೆ, ಅಪ್ಪನಿಗೋಸ್ಕರ,” ತಾಯಿ ಕಣ್ಣು ತೆರೆದು ಪ್ರೀತಿ ಅಭಿಮಾನಗಳಿಂದ ಅವನನ್ನು ನೋಡಿದಳು. ಕಿರಣನು ಆ ಹೂವನ್ನು ತಂದೆಯ ಹಣೆಯ ಮೇಲಿರಿಸಿದನು. ಅದರಿಂದ ಆಶ್ಚಯ೵ಕರವಾದ ಪರಿಣಾಮವಾಯಿತು. ಬೆಳಗ್ಗಿನಿಂದ ಎಚ್ಚರವಿಲ್ಲದೆ ಮಲಗಿದ್ದ ತಂದೆ ನಿಧಾನವಾಗಿ ಕಣ್ಣು ತೆರೆದರು. ಅವರಿಗೆ ಪ್ರಜ್ಞೆ ಮರಳಿತು. ಸ್ವಲ್ಪ ಹೊತ್ತಿಗೆ ವೈದ್ಯರು ಬಂದು ಪರೀಕ್ಷೆ ಮಾಡಿ, “ಇನ್ನು ಭಯವಿಲ್ಲ. ಪ್ರಾಣಾಪಾಯ ತಪ್ಪಿತು, ಜೀವ ಉಳಿಯಿತು” ಎಂದರು.

ಈ ಘಟನೆಯಿಂದ ಕಿರಣನು ಬಹು ದೊಡ್ಡ ಪಾಠ ಕಲಿತನು. ತಂದೆ ಮನೆಗೆ ಹಿಂದಿರುಗಲು ಒಂದು ತಿಂಗಳು ಹಿಡಿಯಿತು. ಅಷ್ಟರಲ್ಲಿ ತಮ್ಮ ಮುದ್ದಿನ ಮಗನ ನಡವಳಿಕೆಯಲ್ಲಿ ಉತ್ತಮವಾದ ಪರಿವತ೵ನೆಯಾಗಿರುವುದನ್ನು ಅವರು ಗಮನಿಸಿದರು.

ಈಗ ಕಿರಣನು ತಾಯಿ ಧ್ಯಾನ ಮಾಡುವಾಗ ತಾನೂ ಕಣ್ಣು ಮುಚ್ಚಿ ಧ್ಯಾನ ಮಾಡುತ್ತಾ ಕುಳಿತು ಕೊಳ್ಳುವನು, ಪೂಜೆಗೆ ಸಹಾಯ ಮಾಡುವನು. ಆಗಾಗ ತಂದೆಯ ಜೊತೆಯಲ್ಲಿ ಶಿವ ದೇವಾಲಯಕ್ಕೆ ಹೋಗುವನು. ಶಾಲೆಯ ಅಭ್ಯಾಸ ಮುಗಿದಾಗ, ಬಿಡುವಿನ ಸಮಯದಲ್ಲಿ ಸ್ವಾಮಿ ವಿವೇಕಾನಂದ, ಯೇಸುಕ್ರಿಸ್ತ, ಗೌತಮ ಬುದ್ಧ, ಮೊದಲಾದ ಮಹಾತ್ಮರ ಜೀವನ ಕುರಿತ ಸರಳ ಪುಸ್ತಕಗಳನ್ನು ಓದುವನು. ಕಿರಣನಿಗೆ ಭಕ್ತಿಯಲ್ಲಿ, ಪ್ರಾಥ೵ನೆಯಲ್ಲಿ, ಪೂಜೆಯಲ್ಲಿ ವಿಶೇಷವಾದ ಶಕ್ತಿಯಿದೆ ಎಂದು ಗೊತ್ತಾಯಿತು. ಪ್ರಾಥ೵ನೆಯಿಂದ ನಮ್ಮಲ್ಲಿ ಸತ್ಯ, ಪ್ರೀತಿ, ಜೀವಿಗಳನ್ನು ಕುರಿತ ದಯೆ, ಅನುಕಂಪ, ಪರೋಪಕಾರ ಬುದ್ಧಿ, ಸೇವಾ ಮನೋಭಾವ ಇವು ಬೆಳೆಯುತ್ತವೆ. ನಾವು ಸನ್ಮಾಗ೵ದಲ್ಲಿ ನಡೆಯುವಂತಾಗುತ್ತದೆ.

ಪ್ರಶ್ನೆಗಳು:

  1. ನಿಮ್ಮ ಪ್ರಕಾರ ಒಳ್ಳೆಯ ಹುಡುಗ ಅಥವಾ ಒಳ್ಳೆಯ ಹುಡುಗಿ ಎಂದರೇನು ಎಂಬುದನ್ನು ವಿವರಿಸಿ (10 ಸಾಲುಗಳಲ್ಲಿ)
  2. ನಮಗೆ ಏಕೆ ಭಕ್ತಿ ಮತ್ತು ನಂಬಿಕೆ ಇರಬೇಕು
  3. ಕಿರಣ ತನ್ನ ಪರೀಕ್ಷೆಯಲ್ಲಿ ಉತ್ತೀಣ೵ನಾಗಲು ದೇವರ ಸಹಾಯ ಬಯಸಿದ್ದಿದ್ದರೆ ಏನಾಗುತ್ತಿತ್ತು ಎಂದು ನಿಮಗನ್ನಿಸುತ್ತದೆ? ಆಗ ಅವನು ಕಷ್ಟಪಟ್ಟು ಓದುವುದು ಬೇಕಿರಲಿಲ್ಲವೇ?

Narration: Ms. Shreya Pulli
[Sri Sathya Sai Balvikas Alumna]