ಶಾಂತಾಕಾರಂ – ಹೆಚ್ಚಿನ ಓದುವಿಕೆ

Print Friendly, PDF & Email
ಶ್ಲೋಕದ ಅಥ೵

ಶಾಂತ ಸ್ವರೂಪನೂ, ಆದಿಶೇಷನ ಮೇಲೆ ಮಲಗಿರುವವನೂ, ನಾಭಿಯಲ್ಲಿ ಕಮಲವುಳ್ಳವನೂ, ದೇವತೆಗಳಿಗೆ ಒಡೆಯನೂ, ವಿಶ್ವಕ್ಕೆ ಆಧಾರವಾಗಿರುವವನೂ, ಆಕಾಶದಂತೆ ವ್ಯಾಪಕನೂ, ಮೋಡದಂತೆ ಶ್ಯಾಮಲವಣ೵ನೂ, ಶುಭಕರವಾದ ದೇಹವುಳ್ಳವನೂ, ಲಕ್ಷ್ಮಿಯ ಪತಿಯೂ, ಕಮಲದಂತೆ ಕಣ್ಣುಳ್ಳವನೂ, ಯೋಗಿಗಳ ಹೃದಯದಲ್ಲಿ ಧ್ಯಾನದ ಮೂಲಕ ಗೋಚರವಾಗುವವನೂ, ಸಂಸಾರದ ಭಯವನ್ನು ಹೋಗಲಾಡಿಸುವವನೂ, ಸವ೵ಲೋಕಗಳಿಗೂ ಏಕೈಕ ಪ್ರಭುವೂ ಆದ ಮಹಾವಿಷ್ಣುವನ್ನು ಒಂದಿಸುತ್ತೇನೆ.

ಶಾಂತಾಕಾರಂ:

“ಶಾಂತಂ” ಎಂದರೆ ಸಮಚಿತ್ತತೆ, ಸ್ಥಿರತೆ, ಭಾವನೆಗಳ ಏರಿಳಿತಕ್ಕೆ ಒಳಗಾಗದಿರುವುದು. ಭಗವಂತನ ಮುಖಭಾವವು ಸದಾ ಆಂತರಿಕ ಶಾಂತತೆ, ಸಂತೋಷ, ಸಮಚಿತ್ತತೆ, ಆಂತರಿಕ ಸೊಬಗು ಮತ್ತು ಕರುಣೆಯನ್ನು ಬಿಂಬಿಸುತ್ತಿರುತ್ತದೆ ಹಾಗೂ ಶಕ್ತಿ, ಸಾವ೵ಭೌಮತ್ವವನ್ನು ಚಿತ್ರಿಸುತ್ತಿರುತ್ತದೆ. – ಶಾಂತಿಯುತ, ನೆಮ್ಮದಿಯ ಚಿತ್ರದ ಹಾಗೆ. (ಎಲ್ಲಾ ದೇವತೆಗಳೂ ತಮ್ಮ ಭಾವವನ್ನು ಅವರ ಮುಖದ ಮೇಲೆ ಮತ್ತು ಅವರ ನಿಲುವು, ಭಂಗಿಯಲ್ಲಿ ಪ್ರದಶಿ೵ಸುತ್ತಾರೆ.

ಭುಜಗಶಯನಂ:

ಒಂದು ಸಾವಿರ ಹೆಡೆಯ ಹಾವಿನ ಮೇಲೆ ಒರಗಿ ಪವಡಿಸಿದ್ದರೂ, ಭಗವಂತನು ಶಾಂತಿ, ನೆಮ್ಮದಿಯ ಸಾಕಾರವಾಗಿದ್ದಾನೆ. ವಿಷಕಾರಿ ಕೋರೆಹಲ್ಲುಗಳನ್ನು ಹೊಂದಿರುವ ಆ ಹಾವು ಭೌತಿಕ ಪ್ರಪಂಚದ ಸಂಕೇತವಾಗಿದೆ. (ಅದೂ ಕೂಡ ವಿಷಕಾರಿ). ಜಗತ್ತಿನಲ್ಲಿ ಇದ್ದರೂ, ಅದರೊಳಗೆ ಮುಳುಗಿಲ್ಲ. ಅದಕ್ಕೆ ಬದ್ಧವಾಗಿಲ್ಲ. – ಇದುವೇ ಭಗವಂತನ ರಹಸ್ಯ. ವಿಶ್ವದಲ್ಲಿ ಅಂತಗ೵ತನಾದರೂ ಅದನ್ನು ಮೀರಿದವನು. ಅವನು ಯಾವ ಸಾಗರದಲ್ಲಿ ಇರುವನೋ, ಅದೇ ಭವಸಾಗರದ ಸಂಕೇತ. (SSS V/p 224)

ಪದ್ಮನಾಭಂ:

ಇದು ಭಗವಂತನ ನಾಭಿಯಿಂದ ಉದ್ಭವಿಸಿರುವ ಕಮಲವನ್ನು ಸೂಚಿಸುತ್ತದೆ. ಬ್ರಹ್ಮನನ್ನು ಕಮಲದ ಮೇಲೆ ಕುಳಿತಂತೆ ಚಿತ್ರಿಸಲಾಗುತ್ತದೆ. ಬ್ರಹ್ಮ ಸೃಷ್ಟಿಯ ಪ್ರತೀಕ. ಕಮಲದ ಕಾಂಡವು ಹೊಕ್ಕಳ ಬಳ್ಳಿಯನ್ನು ಸೂಚಿಸುತ್ತದೆ. ಗಭ೵ದಲ್ಲಿರುವ ಮಗು ಹೊಕ್ಕಳ ಬಳ್ಳಿಯ ಮೂಲಕ ತಾಯಿಯಿಂದ ಪೌಷ್ಟಿಕತೆಯನ್ನು ಪಡೆಯುವಂತೆ, ಸೃಷ್ಟಿಯು ಭಗವಂತನಿಂದ ಪೋಷಿಸಲ್ಪಡುತ್ತದೆ. ಈ ಭಗವಂತನೇ “ವಿಶ್ವಾಧಾರಂ’ ಅಥವಾ ಬ್ರಹ್ಮಾಂಡಕ್ಕೆ ಆಧಾರ.

ಗಗನಸದೃಶಂ:

ಭಗವಂತನು ಆಕಾಶದಂತೆ ಸವ೵ವ್ಯಾಪಿ, ಅವನು ಎಲ್ಲಾ ಸಮಯದಲ್ಲೂ ಎಲ್ಲೆಡೆಯಲ್ಲಿಯೂ ತನ್ನ ಮಕ್ಕಳ ಜೊತೆಯಲ್ಲಿಯೇ ಇರುತ್ತಾನೆ. ಅವನು ಅತ್ಯಂತ ದೂರದ ನಕ್ಷತ್ರದಲ್ಲಿಯೂ ಇದ್ದಾನೆ ಹಾಗೆಯೇ ಹುಲ್ಲಿನ ಗರಿಕೆಯಲ್ಲಿಯೂ ಕೂಡ. ಹಾಲಿನ ಪ್ರತಿಹನಿಯಲ್ಲಯೂ ಬೆಣ್ಣೆಯು ಅಡಗಿರುವಂತೆ ಅವನು ಈ ಪ್ರಪಂಚದಲ್ಲಿರುವ ಎಲ್ಲದರ ತಿರುಳು. ಇದನ್ನು ಅರಿತ ವ್ಯಕ್ತಿ ನಿಭ೵ಯನಾಗುತ್ತಾನೆ. ಆದ್ದರಿಂದ ಭಗವಂತನನ್ನು ಭವಭಯಹರ ಎಂದು ಕರೆಯಲಾಗುತ್ತದೆ. ಹತಾಶೆ ಎಂಬುದು ದೈವದ್ರೋಹಕ್ಕೆ ಸಮಾನ. ಅವನು ನಿಮ್ಮ ಹೃದಯದಲ್ಲಿರುವಾಗ, ನೀವೇಕೆ ಭರವಸೆಯನ್ನು ಕಳೆದುಕೊಳ್ಳುವಿರಿ? ಆದ್ದರಿಂದ ಭಗವಂತನು ಹೇಳುತ್ತಾನೆ, “ನಾನಿರುವಾಗ ನಿಮಗೇಕೆ ಭಯ? ಯಾವಾಗಲೂ ಸಂತೋಷದಿಂದ, ಆಶಾವಾದದಿಂದ ಮತ್ತು ಧೈಯ೵ದಿಂದಿರಿ.” – ಬಾಬಾ

ಮೇಘವಣ೵ಂ:

ಭಗವಂತನ ಕಡುವಣ೵ವು ಆಳವಾದ ಸಮುದ್ರ ಮತ್ತು ವಿಶಾಲವಾದ ಆಕಾಶದ ಬಣ್ಣವಾಗಿದೆ. ಇದು ಅಗಾಧ, ಆಗ್ರಾಹ್ಯತೆಯನ್ನು ಸೂಚಿಸುತ್ತದೆ. ಅವನ ರಹಸ್ಯವು ನಮ್ಮ ಊಹೆಗೂ ಮೀರಿದುದು. (SSS IV/p.168). ನೀವು ಎಷ್ಟೇ ಪ್ರಯತ್ನ ಪಟ್ಟರೂ, ಯಾವುದೇ ವಿಧಾನಗಳನ್ನು ಅನುಸರಿಸಿದರೂ, ಅವನ ಮಹಿಮೆಯ ರಹಸ್ಯವನ್ನು ಅರಿಯುವುದು ಸಾಧ್ಯವಿಲ್ಲ. ಕೇವಲ ಅಪಾರ ಭಕ್ತಿ ಮತ್ತು ಶ್ರದ್ಧೆಯಿಂದ ಗ್ರಂಥಗಳ ಅಧ್ಯಯನದ ಮೂಲಕ ನನ್ನ ಮಹಿಮೆಯ ತುಣುಕನ್ನು ನೀವು ಕಾಣಬಹುದು. “ಯೋಗಿಹೃಧ್ಯಾನಗಮ್ಯಂ”

ಶುಭಾಂಗಂ:

ಅವನ ರೂಪವು ಸುಂದರತೆ ಹಾಗೂ ಮೋಹದಿಂದ ಕೂಡಿದೆ. ಅದು ಎಲ್ಲೆಡೆ ಶುಭವನ್ನು ಹೊರಸೂಸುತ್ತದೆ. (SSS V/p.329)

ಲಕ್ಷ್ಮೀಕಾಂತಂ:

ಅವನು ಸಂಪತ್ತಿನ ಮೂಲ. ಅವನು ವಿಶ್ವದಾತ.

ಲಕ್ಷ್ಮೀ ಎಂದರೆ:
  1. ಜೀವನವನ್ನು ಪೋಷಿಸುವ ಪಂಚಮಹಾಭೂತಗಳು – ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ
  2. ಸ್ವಸ್ಥ ಇಂದ್ರಿಯ ಹಾಗೂ ಆರೋಗ್ಯವೇ ಸಂಪತ್ತು.
  3. ಸದ್ಗುಣಗಳ ಸಂಪತ್ತು.
  4. ಭಗವಂತನು ಪಂಚಮಹಾಭೂತಗಳ ಒಡೆಯ. ಅವನೇ ಎಲ್ಲಾ ಸದ್ಗುಣಗಳ ಮೂಲ. ಅವನೇ ಸ್ವಸ್ಥ ದೇಹ, ಮನಸ್ಸು ಮತ್ತು ಬುದ್ಧಿಯನ್ನು ಅನುಗ್ರಹಿಸುವವನು.
ಕಮಲನಯನಂ:

ಭಗವಂತನು ಕಮಲದಂತಿದ್ದಾನೆ. ಅವನು ತನ್ನ ಪರಿಸರದಿಂದ ಪ್ರಭಾವಿತನಾಗುವುದಿಲ್ಲ. (ಕಮಲವು ಕೆಸರಿನಲ್ಲೇ ಬೆಳೆದರೂ ಶುದ್ಧವಾಗಿರುವಂತೆ). ಅದೇ ಕಾರಣಕ್ಕೆ ಅವನ ಕಣ್ಣುಗಳು ಮತ್ತು ಪಾದಗಳನ್ನು ಕಮಲಕ್ಕೆ ಹೋಲಿಸಲಾಗಿದೆ. (SSS V/p.73)

ಸವ೵ಲೋಕೈಕನಾಥಂ:

ಲೋಕವನ್ನು ಪೋಷಿಸುವವನು

ಶಾಂತಾಕಾರಂ ಭುಜಗಶಯನಂ:

ಭಗವಂತನು ಚಿಕ್ಕ ಅಣುವಿನಿಂದ ಹಿಡಿದು ಪ್ರತಿಯೊಂದು ವಸ್ತುವಿನಲ್ಲಿ ಇದ್ದರೂ, ಯಾವುದರಿಂದಲೂ ಪ್ರಭಾವಿತನಾಗಿರುವುದಿಲ್ಲ.

ಗಗನಸದೃಶಂ:

ಆ ವಿಶ್ವ ಪ್ರಜ್ಞೆಯು (ವಿಷ್ಣು) ಸೃಷ್ಟಿಯನ್ನೆಲ್ಲಾ ವ್ಯಾಪಿಸಿದೆ.

ಶುಭಾಂಗಂ:

ಅವನು ಬಿಳಿಯ ಹಿಮಕ್ಕಿಂತ ಶುದ್ಧನಾಗಿದ್ದಾನೆ.

ಲಕ್ಷ್ಮೀಕಾಂತಂ ಸವ೵ಲೋಕೈಕನಾಥಂ:

ಆ ವಿಶ್ವ ಪ್ರಜ್ಞೆಯು ಮೂರು ಲೋಕಗಳನ್ನು ಬೆಳಗುತ್ತದೆ ಹಾಗೂ ರಕ್ಷಿಸುತ್ತದೆ.

Leave a Reply

Your email address will not be published. Required fields are marked *

error: