ಓಂ ನಮೋ ಭಗವತೇ ಭಜನೆ – ಚಟುವಟಿಕೆ
ಓಂ ನಮೋ ಭಗವತೇ ಭಜನೆ– ಚಟುವಟಿಕೆ
ಚಟುವಟಿಕೆ : ಪಾತ್ರನಿವಹಣೆ/ನಾಟಕ
ಗುರು – ಮಾಕಂಡೇಯ, ಪ್ರಹ್ಲಾದ, ಧ್ರುವ ಇವರ ಕಥೆಗಳನ್ನು ಹೇಳುವುದು. ಮಕ್ಕಳಿಗೆ ನಾಟಕ ಮಾಡಲು ಹೇಳುವುದು. ಮಕ್ಕಳು ಸ್ವಂತವಾಗಿ ಸಂಭಾಷಣೆಯನ್ನು ಬರೆಯುವುದು, ಅವರೇ ಪಾತ್ರಗಳು, ರಂಗಪರಿಕರಗಳು, ದೃಶ್ಯಗಳು ಇತ್ಯಾದಿಗಳನ್ನು ನಿಧರಿಸುವುದು.
ಧ್ರುವನ ಕಥೆ
ಒಂದು ದಿನ ಉತ್ತಮ, ಅವನ ತಂದೆಯ ತೊಡೆಯ ಮೇಲೆ ಆಡುತ್ತಿದ್ದ. ಧ್ರುವ ಕೂಡ ಅವನ ಹಾಗೆ ಆಡಬೇಕೆಂದು ಬಯಸಿದ. ಆದರೆ ಸುರುಚಿ ಬಹಳ ಹೊಟ್ಟೆಕಿಚ್ಚು ಹಾಗೂ ಅಹಂಕಾರ ಸ್ವಭಾವದವಳು. ಧ್ರುವನನ್ನು ಹೀಯಾಳಿಸಿ ಹೇಳಿದಳು, “ನೀನು ರಾಜನ ಹಿರಿಯ ಮಗನಿರಬಹುದು. ಆದರೆ ಅವನ ಪ್ರೀತಿ ಪಾತ್ರನಾಗಲು ಮತ್ತು ಅವನ ತೊಡೆಯ ಮೇಲೆ ಆಡಲು ನೀನು ತಪಸ್ಸು ಮಾಡಬೇಕು, ವರವನ್ನು ಪಡೆದುಕೋ ಮತ್ತು ನನ್ನ ಮಗನಾಗಿ ಮತ್ತೆ ಹುಟ್ಟಿ ಬಾ”. ಬೇಸರದಿಂದ ಕಣ್ತುಂಬ ನೀರು ತುಂಬಿಕೊಂಡು, ಧ್ರುವ ಅವರ ಅಪ್ಪನನ್ನು ನೋಡಿದ. ರಾಜ ಉತ್ತಾನಪಾದ ಸುರುಚಿಯ ಪರವಾಗಿದ್ದು, ಏನೂ ಮಾತನಾಡಲಿಲ್ಲ. ಅವನು ಅವಳನ್ನು ಅಸಮಾಧಾನಗೊಳಿಸಲಿಲ್ಲ. ಧ್ರುವ ಐದು ವಷದ ಬಾಲಕನಾಗಿದ್ದರೂ ಸೂಕ್ಷ್ಮ ಸ್ವಭಾವದವನಾಗಿದ್ದ. ಅವನು ತಾಯಿಯ ಹತ್ತಿರ ಓಡಿ ಬಂದನು. ಉದಾತ್ತ ತಾಯಿ ಅವನನ್ನು ಮೃದು, ಪ್ರೇಮಭರಿತ ಮಾತುಗಳಿಂದ ಸಮಾಧಾನ ಪಡಿಸಿದಳು ಮತ್ತು ಅವನಿಗೆ ಹೇಳಿದಳು, “ದುಃಖಿಸಬೇಡ ಮಗು, ದೇವರಿದ್ದಾನೆ ಮತ್ತು ಪ್ರತಿಯೊಬ್ಬರು ಅವರು ಮಾಡಿದ ಕಮವನ್ನು ಅನುಭವಿಸಲೇಬೇಕು. ಒಳ್ಳೆಯದಾಗಲೀ, ಕೆಟ್ಟದಾಗಲೀ, ಸಿಟ್ಟನ್ನು ಮಾಡಿಕೊಳ್ಳುವ ಬದಲು, ಅವಳ ಬಗ್ಗೆ ಸಹಾನುಭೂತಿ ತೋರಿಸು. ಆದರೆ ಅವಳು ನಿನಗೆ ಒಂದು ಸತ್ಯವನ್ನು ಹೇಳಿದ್ದಾಳೆ. ತಪಸ್ಸಿನಿಂದ ಮತ್ತು ನಾರಾಯಣನ ಕೃಪೆಯಿಂದ ಎಲ್ಲವೂ ಸಾಧ್ಯವೆಂದು”. ಧ್ರುವನಿಗೆ ಈ ‘ನಾರಾಯಣ’ನು ಯಾರು? ಹಾಗೂ ಅವನನ್ನು ಎಲ್ಲಿ ಹುಡುಕಬಹುದು? ಎಂಬುದನ್ನು ತಿಳಿಯಬೇಕೆನಿಸಿತು.ಸುನೀತಿ ಹೇಳಿದಳು, “ಅವನು ಭಗವಂತ, ದುಃಖವನ್ನು ನಿಮೂಲನೆ ಮಾಡುವವನು ಮತ್ತು ಎಲ್ಲವನ್ನೂ ತ್ಯಜಿಸಿ ಆತನನ್ನು ಆಶ್ರಯಿಸಿದವರ ಆಸೆಗಳನ್ನು ಈಡೇರಿಸುವವನು. ಆದರೆ ಅವನನ್ನು ತಲುಪುವುದು ಅಷ್ಟು ಸುಲಭವಲ್ಲ. ಯೋಗಿಗಳು, ಹಲವಾರು ವಷಗಳ ಸಂಯಮ ಮತ್ತು ಕಠಿಣ ತಪಸ್ಸುಗಳಿಂದ, ಅನನ್ಯ ಭಕ್ತಿಯಿಂದ, ಹೃದಯವಾಸಿ ಭಗವಂತನನ್ನು ಕಂಡು ಕೊಂಡಿದ್ದಾರೆ.”
ಧ್ರುವ ಸಮಯವನ್ನು ಹಾಳು ಮಾಡಲಿಲ್ಲ. ಅವನು ನಾರಾಯಣನ ದಶನಕ್ಕಾಗಿ ಆಕ್ರಂದಿಸುತ್ತ, ಕಾಡಿಗೆ ತೆರಳಿದ. ‘ನಾರದ’ರು ಆ ಕೂಗನ್ನು ಕೇಳಿ, ಆ ಮಗುವನ್ನು ಭೇಟಿಯಾದರು ಮತ್ತು ಅವನ ಪ್ರಾಮಾಣಿಕತೆಯನ್ನು ಪರೀಕ್ಷಿಸಲು ಬಯಸಿದರು. ಅವರು ಧ್ರುವನಿಗೆ “ನನ್ನ ಮಗನೇ, ದೇವರನ್ನು ಹುಡುಕುವುದಕ್ಕೆ ನೀನಿನ್ನು ಚಿಕ್ಕ ಬಾಲಕ. ದೇವರು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಮನೆಗೆ ಹಿಂದಿರುಗು. ಯೋಗ್ಯವಾದ ಜೀವನವನ್ನು ನಡೆಸು ಮತ್ತು ನಿನ್ನ ವೃದ್ಧಾಪ್ಯದಲ್ಲಿ, ನಿನ್ನ ಕಾಯಗಳೆಲ್ಲವೂ ಮುಗಿದ ಮೇಲೆ, ನೀನು ದೇವರನ್ನು ಧ್ಯಾನಿಸು”. ಎಂದು ಹೇಳಿದರು. ಧ್ರುವ ಗೌರವಯುತವಾಗಿ, ಜೋಡಿಸಿದ ಕೈಗಳಿಂದ “ನಾನು ನನ್ನ ಮನಸ್ಸನ್ನು ದೃಢ ಮಾಡಿಕೊಂಡಿದ್ದೇನೆ ಮತ್ತು ನಾನು ದೇವರನ್ನು ತಿಳಿದುಕೊಳ್ಳಲು ಬಯಸುತ್ತೇನೆ. ದಯವಿಟ್ಟು ನನಗೆ ಮಾಗವನ್ನು ತೋರಿಸಿ”. ಎಂದು ಉತ್ತರಿಸಿದನು.
ನಾರದರು ಮಗುವಿನ ದೃಢನಿಧಾರವನ್ನು ಮೆಚ್ಚಿದರು. ಅವನಿಗೆ ದ್ವಾದಶಾಕ್ಷರ ಮಂತ್ರವಾದ “ಓಂ ನಮೋ ಭಗವತೇ ವಾಸುದೇವಾಯ” ಎಂಬ ಮಂತ್ರವನ್ನು ನೀಡಿದರು. ಅದನ್ನೇ ನಿರಂತರವಾಗಿ ಧ್ಯಾನಿಸಲು ಹೇಳಿದರು. ಮನಸ್ಸನ್ನು ಉಳಿದೆಲ್ಲಾ ವಿಚಾರಗಳಿಂದ ದೂರವಿರಿಸಿದರೆ, ಧ್ಯಾನದಲ್ಲಿ ದೇವರನ್ನು ಕಾಣಬಹುದು ಎಂದರು. ಯಮುನಾ ನದಿಯ ಪವಿತ್ರ ದಡದ ಮಧುವನದಲ್ಲಿ ಧ್ರುವ ತೀವ್ರ ತಪಸ್ಸಿಗೆ ಕುಳಿತ. ಅವನು ತೀವ್ರವಾದ ಉಪವಾಸಗಳನ್ನು ಕೈಗೊಂಡನು ಮತ್ತು ಮಂತ್ರಗಳನ್ನು ಉಚ್ಚರಿಸುತ್ತಾ ಸಮಾಧಿ ಸ್ಥಿತಿಗೆ ತಲುಪಿದನು. ಅವನ ತಪಸ್ಸು ಎಷ್ಟು ತೀವ್ರವಾಗಿತ್ತೆಂದರೆ, ಆರು ತಿಂಗಳ ನಂತರ ಭಕ್ತನನ್ನು ನೋಡಲು ಭಗವಂತನೇ ಹಂಬಲಿಸುತ್ತಿದ್ದನು.
ದೇವರು ಗರುಡನನ್ನು ಏರಿ ಧ್ರುವನ ಎದುರು ಪ್ರತ್ಯಕ್ಷನಾದ. ದೇವರ ಉಪಸ್ಥಿತಿಯನ್ನು ನೋಡಿ, ಧ್ರುವ ದಿಗ್ಭ್ರಮೆಯಿಂದ ಮೂಕನಾದ. ಆದರೆ ದೀಘದಂಡ ನಮಸ್ಕಾರ ಮಾಡಿದನು. ದೇವರು ನಗುತ್ತಾ ಧ್ರುವನ ಕೆನ್ನೆಯನ್ನು ಶಂಖದಿಂದ ಮುಟ್ಟಿದರು. ಧ್ರುವನ ಹೃದಯ ಸಂತೋಷದಿಂದ ತುಂಬಿತು ಮತ್ತು ಅವನು ಯಾವಾಗಲೂ ಇದೇ ಉಪಸ್ಥಿತಿಯನ್ನು ಆನಂದಿಸಬೇಕು ಮತ್ತು ದೇವರ ಪಾದಪದ್ಮಗಳನ್ನು ಆಲೋಚಿಸುವುದರಲ್ಲಿ ನಿರತನಾಗಿರುವಂತೆ ಮಾಡಬೇಕು ಎಂದು ಪ್ರಾಥಿಸಿದ.
ನಾರಾಯಣ ದೇವರು, ಅವನಿಗೆ ಈ ವರವನ್ನು ಅನುಗ್ರಹಿಸಿ ಹೇಳಿದರು -“ನಿನ್ನ ಪೋಷಕರಿದ್ದಲ್ಲಿ ಹೋಗು. ನಿನಗೆ ಈ ಭೂಮಿಯ ಮೇಲೆ ನಿಗದಿಪಡಿಸಿದ ಸಮಯದವರೆಗೂ ರಾಜ್ಯವನ್ನು ಆಳು. ನಂತರ ನೀನು ಆಕಾಶದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆಯುವೆ. ಎಲ್ಲರೂ ನಿನ್ನನ್ನು ಧ್ರುವ ನಕ್ಷತ್ರ ಎಂದು ಕರೆಯುತ್ತಾರೆ. ಮುಂಬರುವ ವಷಗಳಲ್ಲಿ ಮಾನವರು ತಮ್ಮ ಮಾಗದಶನವನ್ನು ನಿನ್ನಿಂದ ಪಡೆಯುತ್ತಾರೆ.” ಧ್ರುವ, ದೇವರು ಹೇಳಿದಂತೆ ಪಾಲಿಸಿದ. ತಂದೆಯ ನಂತರ ಅವನು ರಾಜ್ಯವನ್ನು ಬುದ್ಧಿವಂತಿಕೆಯಿಂದ ಆಳಿದ. ಅಂತ್ಯದಲ್ಲಿ ಅವನು ಹಿಮಾಲಯದಲ್ಲಿರುವ ಬದರಿಕಾಶ್ರಮಕ್ಕೆ, ತನ್ನ ಬಾಲ್ಯಾವಸ್ಥೆಯ ದಿವ್ಯ ಅನುಭವಗಳನ್ನು ಮರಳಿ ಪಡೆಯಲು ತೆರಳಿದನು. ಅವನು ತನ್ನ ಅಂತಿಮ ದಿನಗಳನ್ನು ಆಳವಾದ ಧ್ಯಾನದಲ್ಲಿ ಕಳೆದನು. ಅವನು ದೇಹವನ್ನು ತ್ಯಜಿಸುವ ಸಮಯದಲ್ಲಿ ಒಂದು ಅದ್ಭುತ ದೃಶ್ಯವನ್ನು ನೋಡಿದನು. ಹೊಳೆಯುತ್ತಿರುವ ರಥ. ಅದರೊಂದಿಗೆ ವಿಷ್ಣುವಿನ ಇಬ್ಬರು ದೂತರು – ದ್ವಾರಪಾಲಕರು. ‘ಧ್ರುವ ನಕ್ಷತ್ರ’ನಾಗಲು ಅವರು ಧ್ರುವನನ್ನು ವಿಷ್ಣು ಲೋಕಕ್ಕೆ ಕರೆದುಕೊಂಡು ಹೋದರು. ಇದು ನಮ್ಮೆಲ್ಲರಿಗೂ ಮಾಗದಶನ ನೀಡುವ ನಕ್ಷತ್ರವಾಗಿದೆ.
ಮಾಕಂಡೇಯನ ಕಥೆ:
ಬಹಳ ಹಿಂದೆ ‘ಮೃಕಂಡು’ ಎಂಬ ಹೆಸರಿನ ಒಬ್ಬ ಋಷಿಯಿದ್ದನು. ಅವನು ತನ್ನ ಪತ್ನಿ ‘ಮಾಯಾವತಿ’ ಜೊತೆಗೆ ದಟ್ಟಕಾಡಿನಲ್ಲಿ ಒಂದು ಗುಡಿಸಿಲಿನಲ್ಲಿ ಇದ್ದನು. ಅವರು ಅವರದೇ ಆದ ರೀತಿಯಲ್ಲಿ ಸಂತೋಷವಾಗಿದ್ದರು. ಆದರೆ ಅವರಿಗೆ ಮಕ್ಕಳಿರಲಿಲ್ಲ. ಅವರು ಶಿವನನ್ನು ಪ್ರಾಥಿಸಿ, ಪೂಜಿಸಿದರು. ಯಾವ ಪ್ರಯೋಜನವಾಗಲಿಲ್ಲ. ನಂತರ ಅವರು ತಮ್ಮ ಗುಡಿಸಲನ್ನು ಬಿಟ್ಟು ಪವತಕ್ಕೆ, ತೀವ್ರ ತಪಸ್ಸು ಮಾಡಲು ಹೋದರು. ಸ್ವಲ್ಪ ವಷಗಳವರೆಗೆ ತಪಸ್ಸು ಮಾಡಿದರು. ಶಿವನು ಅವರ ಸಾಧನೆಗೆ ಮೆಚ್ಚಿ, ಅವರ ಮುಂದೆ ಪ್ರತ್ಯಕ್ಷನಾದನು. ಅವರಿಗೆ ಏನು ಬೇಕೆಂದು ಕೇಳಿದನು. ಮೃಖಂಡು ದೇವರ ಮುಂದೆ ತಲೆಬಾಗಿ ಹೇಳಿದನು, ತಮ್ಮ ಜೀವನದಲ್ಲಿ ತಾವು ಸಂತೋಷವಾಗಿದ್ದೇವೆ ಆದರೆ ಈ ಜೀವನವನ್ನು ಪೂಣಗೊಳಿಸಲು ಒಬ್ಬ ಮಗ ಬೇಕೆಂದು ಹೇಳಿದನು. ಶಿವನು ನಕ್ಕು ಹೇಳಿದನು, “ನಿನಗೆ ನೂರು ವಷ ಬದುಕಿರುವ ಮಂದಬುದ್ಧಿ ಇರುವ ಮಗ ಬೇಕಾ? ಅಲ್ಪಾಯುಷಿಯಾದ ಒಳ್ಳೆಯ ಮಗ ಬೇಕಾ?”
ಋಷಿ ಉತ್ತರಿಸಿದನು, “ಓ ದೇವರೇ, ನನಗೆ ಅಲ್ಪಾಯುಷ್ಯ ಉಳ್ಳ ಒಳ್ಳೆಯವನು ಮತ್ತು ದಯಾಳುವಾದ ಮಗನನ್ನು ನೀಡಿರಿ”. ಶಿವನು ಆಶೀವದಿಸಿ ಕಣ್ಮರೆಯಾದನು. ಸ್ವಲ್ಪ ಸಮಯದ ನಂತರ, ಆ ದಂಪತಿಗೆ ಮಗನೊಬ್ಬ ಜನಿಸಿದ. ಅವನನ್ನು ‘ಮಾಕಂಡೇಯ’ ಎಂದು ಹೆಸರಿಸಿದರು. ಮಾಕಂಡೇಯ, ಒಬ್ಬ ಅದ್ಭುತ ಬಾಲಕನಾಗಿ ಬೆಳೆದ. ಅವನು ಅವನ ಸ್ನೇಹಿತರನ್ನು, ಪೋಷಕರನ್ನು ಮತ್ತು ದೇವರನ್ನು ಅತಿಯಾಗಿ ಪ್ರೀತಿಸುತ್ತಿದ್ದ. ಅವನಿಗೆ ೧೬ ವಷಗಳಾಗುವ ವೇಳೆಗೆ ತನ್ನ ತಾಯಿಯು ಸದಾ ಅಳುತ್ತಾ ಕುಳಿತಿರುವುದನ್ನು ಅವನು ಗಮನಿಸಿದನು. ಅವಳ ಈ ದುಃಖಕ್ಕೆ ಕಾರಣವೇನೆಂದು ಕೇಳಿದನು. ಶಿವನು ಅವನಿಗೆ ಅತ್ಯಲ್ಪ ಅವಧಿಯ ಹದಿನಾರು ವಷಗಳ ಜೀವನಾವಧಿಯನ್ನು ನೀಡಿರುವುದಕ್ಕಾಗಿ ದುಃಖ ಪಡುತ್ತಿದ್ದೇನೆ ಎಂದು ಹೇಳಿದಳು.
ಇದನ್ನು ಕೇಳಿದ ಮಾಕಂಡೇಯ ಮನೆಯನ್ನು ತ್ಯಜಿಸಿ ಶಿವನನ್ನು ಪ್ರಾಥಿಸತೊಡಗಿದ. ಶಿವಲಿಂಗಕ್ಕೆ ಅಂಟಿಕೊಂಡು ಆಳವಾಗಿ ಪ್ರಾಥಿಸತೊಡಗಿದ. ಅವನ ಜೀವನದ ಅಂತಿಮ ಕ್ಷಣ ಬಂದಾಗ ಮೃತ್ಯುವಿನ ದೇವರಾದ ಯಮನು, ತನ್ನ ದೂತರನ್ನು ಮಾಕಂಡೇಯನನ್ನು ಕರೆ ತರಲು ಕಳುಹಿಸಿದನು. ಅವರು ಅವನನ್ನು ಕರೆತರಲು ಎಷ್ಟೇ ಪ್ರಯತ್ನಪಟ್ಟರೂ ಯಶಸ್ವಿಯಾಗಲಿಲ್ಲ. ಯಮ ಸ್ವತಃ ತಾನೇ ಬಂದ. ಆದರೆ ಶಿವಲಿಂಗವನ್ನು ತಬ್ಬಿಕೊಂಡಿದ್ದರಿಂದಾಗಿ ಮಾಕಂಡೇಯನ ಕೊರಳಿಗೆ ಪಾಶವನ್ನು ಬೀಸಲು ಅವನಿಗೆ ಅವಕಾಶವಾಗಲಿಲ್ಲ. ಕುಣಿಕೆ ಹಾಕಿದರೆ, ಲಿಂಗವನ್ನು ಸೇರಿಸಿಯೇ ಹಾಕಬೇಕಾಗಿತ್ತು. ಏನು ಮಾಡಿದರೂ ಭಕ್ತನನ್ನು ಭಗವಂತನಿಂದ ಬೇಪಡಿಸಲು ಸಾಧ್ಯವಾಗಲಿಲ್ಲ. ಶಿವನು ಪ್ರತ್ಯಕ್ಷನಾದನು ಮತ್ತು ಅವನ ಸ್ಥಿರವಾದ ಶ್ರದ್ಧೆ ಹಾಗೂ ಅಚಲ ಭಕ್ತಿಗೆ ಮೆಚ್ಚಿದನು. ಅವನಿಗೆ ಚಿರಂಜೀವಿ, ಅಮರತ್ವದ ಆಶೀವಾದ ಮಾಡಿದನು. ಮಾಕಂಡೇಯನು ‘ಮೃತ್ಯುಂಜಯ’ನಾದ. ಅವನು ತನ್ನ ದೃಢ ಭಕ್ತಿ ಮತ್ತು ಒಳ್ಳೆಯ ಜೀವನದಿಂದಾಗಿ ಸಾವನ್ನೇ ಜಯಿಸಿ ಅಮರನಾದ.
ಪ್ರಹ್ಲಾದನ ಕಥೆ:
ಪ್ರಹ್ಲಾದನ ಕಥೆಯು ಭಗವಂತನ ಸವವ್ಯಾಪಿತ್ವ, ಸವಜ್ಞತ್ವ ಮತ್ತು ಸವ ಶಕ್ತಿತ್ವಗಳ ಬಗೆಗೆ ಅಚಲವಾದ ಶ್ರದ್ಧೆಯ ನಿದಶನ.
ಪ್ರಹ್ಲಾದನು ಅಸುರ ರಾಜ ಹಿರಣ್ಯಕಶಿಪುವಿನ ನಾಲ್ವರು ಮಕ್ಕಳಲ್ಲಿ ಕೊನೆಯವನು. ಹಿರಣ್ಯಕಶಿಪು ಸದಾ ದೇವತೆಗಳೊಂದಿಗೆ ಯುದ್ಧ ಮಾಡುತ್ತಿದ್ದನು. ಪ್ರಹ್ಲಾದನಾದರೋ ಹುಟ್ಟಿನಿಂದಲೇ ಭಗವಾನ್ ವಿಷ್ಣುವಿನ ಮಹಾಭಕ್ತನಾದವನು. ಶ್ರೀ ಹರಿಯ ಮಹಿಮೆಗಳನ್ನು ಅವನು ನಿರಂತರವಾಗಿ ಹಾಡುತ್ತಿದ್ದನು. ತಾನೇ ದೇವರೆಂದೂ, ತನ್ನನ್ನು ಬಿಟ್ಟು ಬೇರೆ ಯಾವ ದೇವರನ್ನೂ ಯಾರೂ ಪೂಜಿಸಬಾರದೆಂದೂ ಹಿರಣ್ಯಕಶಿಪು ಪ್ರಜೆಗಳಿಗೆ ಕಟ್ಟಾಜ್ಞೆ ಮಾಡಿದ್ದ. ಪ್ರಹ್ಲಾದನಿಗೆ ಇದರಿಂದ ತುಂಬಾ ಮುಜುಗರವಾಗುತ್ತಿತ್ತು. ಶುಕ್ರಾಚಾಯರ ಮಕ್ಕಳಾಗಿದ್ದ ‘ಶಂಡ’ ಮತ್ತು ‘ಅಮಕ’ರನ್ನು ಪ್ರಹ್ಲಾದನಿಗೆ ಗುರುಗಳನ್ನಾಗಿ ನೇಮಿಸಲಾಯಿತು. ಪ್ರಹ್ಲಾದನಿಗೆ ರಾಕ್ಷಸ ಸಹಜವಾದ ಜೀವನವನ್ನು ಕಲಿಸಿಕೊಡಬೇಕಾದ್ದು ಅವರ ಕತವ್ಯವಾಗಿತ್ತು. ಆದರೆ ಪ್ರಹ್ಲಾದನಾದರೋ ತನ್ನ ಜೊತೆಯ ಬಾಲಕರನ್ನೆಲ್ಲ ಆಗಲೇ ಪರಿವತಿಸಿ ಬಿಟ್ಟಿದ್ದನು. ಭಗವದ್ಭಕ್ತಿಯ ಕಡೆಗೆ ಅವರು ಒಲಿಯುವಂತೆ ಮಾಡಿದ್ದನು. ತಮ್ಮ ಹಿರಿಯರು ನಡೆದುಕೊಳ್ಳುತ್ತಿದ್ದಂತೆ ನಡೆಯದೆ, ಎಲ್ಲಾ ಜೀವಿಗಳನ್ನೂ ಪ್ರೇಮಿಸಬೇಕು, ಏಕೆಂದರೆ ಎಲ್ಲರೂ ದೇವರ ಮಕ್ಕಳು, ದೇವರ ಸೃಷ್ಟಿ. ಎಲ್ಲ ಜೀವಿಗಳ ಬಗೆಗೂ ದಯೆಯಿಂದ ಅನುಕಂಪೆಯಿಂದ ವತಿಸಬೇಕು ಎಂದು ಅವರಿಗೆ ಕಲಿಸಿದ್ದನು.
ಒಂದು ದಿನ ಪ್ರಹ್ಲಾದನ ತಂದೆಯು ಅವನು ಕಲಿತಿರುವ ಅತ್ಯುತ್ತಮವಾದ ವಿಷಯ ಯಾವುದು ಎಂದು ಕೇಳಿದನು. ಪ್ರತಿಯೊಂದನ್ನೂ ತನ್ನಷ್ಟಕ್ಕೆ ತಾನು ನಡೆಯುವಂತೆ ಬಿಟ್ಟು ಬಿಡಬೇಕು, ಭಗವಂತನಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳಬೇಕು, ಅದೊಂದೇ ಸರಿಯಾದ ಮಾಗ ಎಂದು ಕಲಿತಿದ್ದೇನೆ ಎಂದು ಉತ್ತರವಿತ್ತನು ಪ್ರಹ್ಲಾದ.
ಉಪಾಧ್ಯಾಯರನ್ನು ಕರೆಸಿ ಪ್ರಹ್ಲಾದನು ವಿಷ್ಣುಭಕ್ತನಾಗದಿರುವಂತೆ ಕಟ್ಟೆಚ್ಚರ ವಹಿಸತಕ್ಕದ್ದು ಎಂದು ಹಿರಣ್ಯಕಶಿಪು ಆಜ್ಞೆ ಮಾಡಿದನು. ಗುರುಗಳು ಭಗವಂತನ ವಿಷಯವನ್ನು ಹೊರತು ಮಿಕ್ಕ ಎಲ್ಲ ವಿಷಯಗಳನ್ನು ಕಲಿಸಿದರು. ಮಗುವು ಎಲ್ಲವನ್ನೂ ಕಲಿತನು. ಗುರುಗಳು ಪ್ರಹ್ಲಾದನನ್ನು ಹಿರಣ್ಯಕಶಿಪುವಿನ ಬಳಿಗೆ ಕರೆತಂದರು. ಏನನ್ನು ಕಲಿತಿದ್ದೀಯೆ? ಎಂದು ತಂದೆ ಕೇಳಿದ್ದಕ್ಕೆ, ಪ್ರಹ್ಲಾದ ಉತ್ತರ ಕೊಟ್ಟನು, “ಮಹಾವಿಷ್ಣುವಿನಲ್ಲಿ ಭಕ್ತಿ, ಅವನ ಮಹಿಮೆಗಳ ಶ್ರವಣ, ಮಾತಿನಲ್ಲಿ, ನಡವಳಿಕೆಯಲ್ಲಿ ಆ ಮಹಿಮೆಗಳನ್ನು ಪ್ರಕಟಿಸುವುದು, ನಿರಂತರವಾಗಿ ಶ್ರೀ ವಿಷ್ಣುವನ್ನು ಸ್ಮರಿಸುತ್ತಿರುವುದು, ಅವನ ಸೃಷ್ಟಿಯ ಜೀವಿಗಳಿಗೆ (ಹಸಿದವರಿಗೆ, ಅಗತ್ಯವುಳ್ಳವರಿಗೆ) ಸೇವೆ ಮಾಡುವುದರ ಮೂಲಕ ಅವನ ಸೇವೆ ಮಾಡುವುದು, ಅವನನ್ನು ಪೂಜಿಸುವುದು, ಪ್ರಾಥಿಸುವುದು, ದಾಸನಂತೆ ಅವನ ಪಾದಸೇವೆ ಮಾಡುವುದು, ಅವನ ಮಿತ್ರನಾಗಿರುವುದು, ಸಂಪೂಣವಾಗಿ ಅವನಲ್ಲಿ ಶರಣಾಗತನಾಗುವುದು ಇದು ನವವಿಧ ಭಕ್ತಿಯೆನಿಸುತ್ತದೆ. ಸದಾಕಾಲವೂ ವ್ಯಕ್ತಿಯು ಅದನ್ನು ಆಚರಿಸಬೇಕು.“
ಇದನ್ನು ಕೇಳಿ ಹಿರಣ್ಯಕಶಿಪುವಿಗೆ ಮಹಾಕ್ರೋಧ ಬಂದಿತು. ಪ್ರಹ್ಲಾದನನ್ನು ತನ್ನ ದಾರಿಗೆ ತರುವುದು ಸಾಧ್ಯವಾಗದು ಎಂದು ಅವನಿಗೆ ಮನವರಿಕೆಯಾಯಿತು. ಆದ್ದರಿಂದ ಅವನನ್ನು ಕೊಂದುಬಿಡಿ ಎಂದು ಆಜ್ಞೆ ಮಾಡಿದನು. ಬಾಲಕನನ್ನು ಅತ್ಯಂತ ಕ್ರೂರವಾದ ಹಿಂಸೆಗಳಿಗೆ ಗುರಿಮಾಡಿದರು. ವಿಷವನ್ನು ಬಳಿದ ಭಜಿಗಳಿಂದ ಚುಚ್ಚಿದರು. ಹುಚ್ಚು ಹತ್ತಿದ ಆನೆಯಿಂದ ತುಳಿಸಿದರು. ಎತ್ತರವಾದ ಪವತ ಶಿಖರದಿಂದ ಕೆಳಕ್ಕೆ ನೂಕಿದರು, ವಿಷಮಿಶ್ರಿತ ಆಹಾರ ತಿನ್ನಿಸಿದರು. ವಿಷ ಸಪಗಳಿಂದ ಕಚ್ಚಿಸಿದರು, ಸಾಗರಕ್ಕೆ ಎಸೆದರು, ಬೆಂಕಿ ಹಚ್ಚಿ ಸುಡಲೆತ್ನಿಸಿದರು. ಆದರೆ ಒಂದೊಂದು ಹಿಂಸೆಯಿಂದಲೂ ಕೂದಲೂ ಕೊಂಕದಂತೆ ಪ್ರಹ್ಲಾದನು ಗೆದ್ದು ಬಂದನು. ಹಿಂದಿಗಿಂತ ಹೆಚ್ಚು ಉತ್ಸಾಹದಿಂದ, ಶ್ರದ್ಧೆಯಿಂದ ಭಗವದ್ಭಕ್ತಿಯನ್ನು ಉಪದೇಶಿಸತೊಡಗಿದನು.
ಇದನ್ನು ನೋಡಿ ಹಿರಣ್ಯಕಶಿಪುವಿಗೆ ರೋಷ ಉಕ್ಕೇರಿತು. ಪ್ರಹ್ಲಾದನನ್ನು ಬಳಿಗೆ ಕರೆದು “ಏನೋ ಅವಿಧೇಯ, ನೀನು ನನ್ನ ಆದೇಶವನ್ನು, ಅಧಿಕಾರವನ್ನು ಸ್ವಲ್ಪವೂ ಭೀತಿಯಿಲ್ಲದೆ ತಿರಸ್ಕರಿಸುತ್ತಿದ್ದೀಯೆ. ನಾನು ಮೂರು ಲೋಕಗಳ ಪ್ರಭು. ಈ ಕ್ಷಣವೇ ನಿನ್ನನ್ನು ಕೊಂದು ಬಿಡಬಲ್ಲೆ. ನನ್ನನ್ನು ಎದುರಿಸುವ ಧೈಯ ನಿನಗೆ ಎಲ್ಲಿಂದ ಬಂದಿತು ಬೊಗಳು?” ಎಂದನು.
ಪ್ರಹ್ಲಾದನು ವಿನಯ, ಗೌರವಗಳಿಂದ ಕೈ ಮುಗಿದುಕೊಂಡು ನುಡಿದನು, “ನನ್ನ ಏಕೈಕ ಬಲ. ಏಕೈಕ ಧೈಯ ಶ್ರೀ ಮಹಾವಿಷ್ಣು. ಅವನು ನನ್ನ ಶಕ್ತಿ ಆಗಿರುವುದು ಮಾತ್ರವಲ್ಲ, ನಿನ್ನ ಶಕ್ತಿಯೂ ಅವನೇ ಆಗಿದ್ದಾನೆ. ಅವನೇ ಇಡೀ ವಿಶ್ವದ ಶಕ್ತಿಯಾಗಿದ್ದಾನೆ.”
“ಎಲೋ ಮೂಖ,” ಹಿರಣ್ಯಕಶಿಪು ಆಭಟಿಸಿದನು. “ವಿಷ್ಣು ಎನ್ನುವವನು ಇಲ್ಲ. ನಾನೇ ಏಕೈಕ ಭಗವಂತ, ಏಕೈಕ ಈಶ್ವರ.”
“ಇಲ್ಲ ತಂದೆಯೇ, ಶ್ರೀ ಹರಿಯೇ ಸಕಲ ವಿಶ್ವದ ಪ್ರಭು. ಅವನು ಅನಾದಿ, ಅನಂತ. ಎಲ್ಲೆಲ್ಲೂ ಅವನೇ ಇದ್ದಾನೆ, ಎಲ್ಲರಲ್ಲೂ ಎಲ್ಲ ವಸ್ತುಗಳಲ್ಲೂ ಇದ್ದಾನೆ. ಆದ್ದರಿಂದ ಅವನನ್ನು ಮಾತ್ರವೇ ಪೂಜಿಸಬೇಕು.” “ಹಾಗೋ, ಈ ಕಂಬದಲ್ಲೂ ನಿನ್ನ ವಿಷ್ಣು ಇದ್ದಾನೆಯೋ? ಹಾಗಾದರೆ, ಈಗ ನನಗೆ ಅವನು ಕಾಣಿಸಲಿ ನೋಡುವಾ”, ಎಂದು ಹಿರಣ್ಯಕಶಿಪು ಗದೆಯಿಂದ ಕಂಬಕ್ಕೆ ಹೊಡೆದನು. ಒಡನೆಯೆ ಕಂಬವು ಮಹಾಶಬ್ದದಿಂದ ಎರಡು ಭಾಗವಾಗಿ ಸೀಳಿತು. ಕಿವಿಗಡಚಿಕ್ಕುವಂತಹ ಆ ಮಹಾಶಬ್ದವು ಮೂರು ಲೋಕಗಳನ್ನು ನಡುಗಿಸಿತು. ಸಮಸ್ತ ಜೀವಕೋಟಿಯೂ ತಲ್ಲಣಿಸಿ ಹೋಯಿತು.
ಒಡೆದ ಕಂಬದಿಂದ ಒಂದು ಮಹಾಕಾಯವು ಹೊರಬಂದಿತು. ಅಧ ಮನುಷ್ಯ, ಅಧ ಸಿಂಹಾಕೃತಿ. ಅದು ಮಹಾವಿಷ್ಣುವಿನ ನರಸಿಂಹಾವತಾರ. ಅಲ್ಲಿ ನೆರೆದಿದ್ದ ದೈತ್ಯರಿಗೆ ಹತ್ತಿರ ಸುಳಿಯಲೂ ಧೈಯವಾಗಲಿಲ್ಲ. ಹಿರಣ್ಯಕಶಿಪು ನಾಲಗೆ ಸತ್ತಂತೆ ಸುಮ್ಮನೆ ನಿಂತು ಬಿಟ್ಟನು. ನರಸಿಂಹನು ಅವನನ್ನು ಅನಾಮತ್ತಾಗಿ ಎತ್ತಿಕೊಂಡು ತನ್ನ ತೊಡೆಯ ಮೇಲೆ ಹಾಕಿಕೊಂಡನು. ಚೂಪು ಉಗುರುಗಳಿಂದ ಅವನ ಹೊಟ್ಟೆಯನ್ನು ಸೀಳಿದನು. ಮೃತ ದೇಹವನ್ನು ಅತ್ತ ಬಿಸಾಡಿದನು. ಅಸುರ ರಾಜನ ಬೆಂಬಲಿಗರಾಗಿದ್ದ ರಾಕ್ಷಸರನ್ನೆಲ್ಲ ಧ್ವಂಸ ಮಾಡಿದನು. ಆಮೇಲೆ ಹೋಗಿ ಸಿಂಹಾಸನವನ್ನು ಹತ್ತಿ ಕುಳಿತನು. ಆಗಲೂ ಅವನ ಕ್ರೋಧವು ಶಾಂತವಾಗಿರಲಿಲ್ಲ. ಪ್ರಹ್ಲಾದನು ಅವನಿಗೆ ದೀಘದಂಡ ನಮಸ್ಕಾರ ಮಾಡಿದನು. ಭಗವಂತನು ಅವನ ತಲೆದಡವಿ ಮೇಲೆಬ್ಬಿಸಿದನು. ಪ್ರಹ್ಲಾದನ ಕೃಶ ಶರೀರವು ಭಗವತ್ ಸ್ಪಶದ ದಿವ್ಯಾನಂದದಿಂದ ಪುಳಕಿತವಾಯಿತು. ಅವನು ಪರಿಪರಿಯಾಗಿ ಭಗವಂತನನ್ನು ಸ್ತುತಿಸತೊಡಗಿದನು.
ಭಗವಂತನು ವರವನ್ನು ಬೇಡುವಂತೆ ಪ್ರಹ್ಲಾದನಿಗೆ ಹೇಳಿದನು. ಪ್ರಹ್ಲಾದನಿಗೆ ಬೇರೇನು ವರಬೇಕಾಗಿತ್ತು? ‘ದಿವ್ಯದಶನ, ಸ್ಪಶನ’ಗಳ ಆನಂದ ಅವನಿಗೆ ದೊರಕಿತ್ತು. ಭಗವಂತನ ಶ್ರೀ ಚರಣಗಳಲ್ಲಿ ಅವಿರತವಾದ ಭಕ್ತಿಯಿರುವಂತಾಗಲಿ ಎಂದು ಕೇಳಿಕೊಂಡನು. ಬೇರೆ ಏನನ್ನಾದರೂ ಕೋರಬೇಕೆಂದು ಭಗವಂತನು ಒತ್ತಾಯ ಪಡಿಸಿದಾಗ, ತನ್ನ ತಂದೆಗೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಕೇಳಿಕೊಂಡನು. “ಪ್ರಹ್ಲಾದ ನಾನು ಮುಟ್ಟಿದೊಡನೆಯೇ ಅವನಿಗೆ ಮೋಕ್ಷವು ದೊರೆತಾಯಿತು. ಈಗ ನೀನು ನಿನ್ನ ತಂದೆಯ ದೇಹಕ್ಕೆ ಅಂತ್ಯ ಸಂಸ್ಕಾರಗಳನ್ನು ಮಾಡಿ. ನಿನ್ನ ಜೀವವಿರುವವರೆಗೂ ಸುಖವಾಗಿ, ಧಮದಿಂದ ರಾಜ್ಯವನ್ನು ಪರಿಪಾಲಿಸು. ಆಮೇಲೆ ನೀನು ನನ್ನ ಬಳಿಗೆ ಬಂದು ನನ್ನಲ್ಲಿ ಐಕ್ಯ ಹೊಂದುವೆ,” ಎಂದು ಭಗವಂತನು ವರವಿತ್ತನು. ಪ್ರಹ್ಲಾದನು ಭಗವದಾದೇಶಕ್ಕೆ ಒಪ್ಪಿ ನಮಸ್ಕರಿಸಿದನು.
Reference : http://www.ramakrishnavivekananda.info/vivekananda/volume_4/lectures_and_discourses/the_story_of_prahlada.htm]