ಗೋಪಾಲ ರಾಧೆ ಕೃಷ್ಣ – ಚಟುವಟಿಕೆ

Print Friendly, PDF & Email

ಒಟ್ಟಿಗೆ ಆಡುವುದು… ಗೋಪಾಲ ಹೇಳಿ

ಅನುಸರಿಸಬೇಕಾದ ಮೌಲ್ಯಗಳು:

ಗಣಿತದಲ್ಲಿ ನಿಪುಣತೆ, ಜಾಗರೂಕತೆ ಹೆಚ್ಚಿಸುವುದು.

ಆಡುವ ವಿಧಾನ:

ಮಕ್ಕಳನ್ನು ವೃತ್ತಾಕಾರದಲ್ಲಿ ಕೂಡಿಸಿ. 1,2,3,4 ಹೇಳಿಕೊಂಡು ಹೋಗಲು ಹೇಳಿ. ಪ್ರತಿ ಸಲ ಸಂಖ್ಯೆ-‘5’ ಬಂದಾಗ ಅಥವಾ ‘5’ರ ಗುಣಲಬ್ಧ ಅಂದರೆ 5, 10, 15, 20,…. ಈ ಸಂಖ್ಯೆಗಳು ಬಂದಾಗ ಅದನ್ನು ಹೇಳುವ ಬದಲು ‘ಗೋಪಾಲ’ ಎಂದು ಹೇಳಬೇಕು. 50 ಅಥವಾ 100 ರವರೆಗೆ ಎಣಿಸಲು ಹೇಳಬಹುದು. ತಪ್ಪಾಗಿ ಹೇಳಿದ ಮಗು ಔಟ್ ಆಗುತ್ತಾನೆ.

ಹೆಚ್ಚಿನ ಸುತ್ತು:

ಬೇರೆ ಸಂಖ್ಯೆಯನ್ನು ಸಹ ಹೇಳಬಹುದು. ಉದಾ..6 ಹಾಗು 6ರ ಗುಣಲಬ್ಧ ಹಾಗೂ 6, 16, 26, 36 ಈ ಸಂಖ್ಯೆಗಳು ಬಂದಾಗ ‘ಗೋಪಾಲ’ ಎಂದು ಹೇಳಬೇಕು. ಹಾಗೂ ಆರರ ಗುಣಲಬ್ದ ಬಂದಾಗ ‘ಗೋಪಾಲ’ ಎಂದು ಹೇಳಬೇಕು.

Leave a Reply

Your email address will not be published. Required fields are marked *

error: