ಏಕಾಗ್ರತೆ
ಏಕಾಗ್ರತೆ
ಸ್ವಾಮಿ ವಿವೇಕಾನಂದರನ್ನು ಚಿಕ್ಕಂದಿನಲ್ಲಿ ಪ್ರೀತಿಯಿಂದ ‘ಬಿಲೆಯ್’ ಎಂದು ಕರೆಯುತ್ತಿದ್ದರು. ಅವರು ಗೆಳೆಯರೊಂದಿಗೆ ಆಡುತ್ತಿದ್ದ ಆಟಗಳಲ್ಲಿ ‘ಧ್ಯಾನ’ವೂ ಒಂದು. ಎಲ್ಲ ಮಕ್ಕಳೂ ಕಣ್ಣು ಮುಚ್ಚಿ ಕುಳಿತು ತಮ್ಮ ಇಷ್ಟ ದೇವತೆಯನ್ನು ಧ್ಯಾನಿಸುತ್ತಿದ್ದರು. ಒಂದು ದಿನ ಅವರು ಈ ಆಟ ಆಡುತ್ತಿರುವಾಗ ಅವರಲ್ಲೊಬ್ಬನಿಗೆ ಏನೋ ಮೆತ್ತಗೆ ಹರಿದಾಡುತ್ತಿರುವಂತೆ ಭಾಸವಾಯಿತು. ಕಣ್ಣು ತೆರೆದು ನೋಡಿದರೆ ದೊಡ್ಡದೊಂದು ಹಾವು ಅವರೆಡೆಗೆ ಹರಿದು ಬರುತ್ತಿತ್ತು. “ಹಾವು, ಹಾವು” ಎಂದು ಆತ ಕೂಗಿದ. ಎಲ್ಲರೂ ಎದ್ದು ಓಡಿಹೋಗಿ ದೂರ ನಿಂತರು. “ಬಿಲೆಯ್, ಏಳು ಹಾವು ಬರುತ್ತಿದೆ. ನಿನ್ನನ್ನು ಕಚ್ಚುವುದು” ಎಂದು ಕೂಗಿದರೂ ಬಿಲೆಯ್ ಎಚ್ಛರಗೊಳ್ಳಲಿಲ್ಲ. ಅವನು ದೇವರ ಧ್ಯಾನದಲ್ಲಿ ತನ್ಮಯನಾಗಿ ಕುಳಿತಿದ್ದನು. ತನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಪರಿವೆಯೇ ಅವನಿಗೆ ಇರಲಿಲ್ಲ.
ಹಾವು ಏನು ಮಾಡಿತು? ಸುಮ್ಮನೆ ಅತ್ತಿತ್ತ ಸುಳಿದಾಡಿ ಹೊರಟುಹೋಯಿತು. ಬಿಲೆಯ್‍ನ ದೈವಭಕ್ತಿ, ಏಕಾಗ್ರತಾ ಶಕ್ತಿಗಳನ್ನು ಕಂಡು ಅವನ ಗೆಳೆಯರಿಗೆ, ತಾಯ್ತಂದೆಯರಿಗೆ, ನೆರೆಹೊರೆಯವರಿಗೆ ಆಶ್ಚರ್ಯವಾಯಿತು.
ಬಿಲೆಯ್‍ನಲ್ಲಿ ಇಂತಹ ಏಕಾಗ್ರತಾ ಶಕ್ತಿ ಇದ್ದುದರಿಂದಲೇ ಆತನು ಒಂದೆರಡು ಸಲ ಕೇಳಿದ ಪಾಠಗಳನ್ನು ಮರೆಯದೆ ನೆನಪಿನಲ್ಲಿಟ್ಟುಕೊಳ್ಳಲು ಸಮರ್ಥನಾಗಿದ್ದನು. ಕಾಲೇಜ್‍ನಲ್ಲೂ ಆತ ಪ್ರತಿಭಾವಂತ ವಿದ್ಯಾರ್ಥಿಯೆಂದು ಹೆಸರಾಗಿದ್ದನು. ಮುಂದೆ ಆತನು ಸ್ವಾಮಿ ವಿವೇಕಾನಂದರಾಗಿ ಬೆಳೆದಾಗ ಈ ಏಕಾಗ್ರತಾ ಶಕ್ತಿಯು ಅವರಿಗೆ ತುಂಬಾ ಸಹಾಯಮಾಡಿತು.
ಒಂದು ಸಾರಿ ಅವರು ಚಿಕಾಗೋ ನಗರಕ್ಕೆ ಹೋಗಿದ್ದರು. ಅಲ್ಲಿ ಒಂದು ದಿನ ಕೆಲವು ಹುಡುಗರು ನದಿಯಲ್ಲಿ ತೇಲುತ್ತಿದ್ದ ಮೊಟ್ಟೆಗಳ ಕೋಶಗಳಿಗೆ ಗುರಿಯಿಟ್ಟು ಹೊಡೆಯಲು ಪ್ರಯತ್ನಿಸುತ್ತಿದ್ದರು.
ಆದರೆ ಅವರೆಷ್ಟೇ ಪ್ರಯತ್ನಿಸಿದರೂ ಅವರಲ್ಲಿ ಒಬ್ಬನಿಗೂ ಒಂದು ಮೊಟ್ಟೆಯನ್ನೂ ಹೊಡೆಯುವುದು ಸಾಧ್ಯವಾಗಲಿಲ್ಲ. ತಮ್ಮ ಬಂದೂಕಿನಾಟವನ್ನು ಸ್ವಾಮಿ ವಿವೇಕಾನಂದರು ಕುತೂಹಲದಿಂದ
ಡುತ್ತಿರುವುದನ್ನು ಗಮನಿಸಿದ ಆ ಹುಡುಗರು, “ಸ್ವಾಮಿ ಬಹಳ ಹೊತ್ತಿನಿಂದ ನಮ್ಮ ಈ ಪ್ರಯತ್ನವನ್ನು ನೋಡುತ್ತಿದ್ದೀರಿ, ನೀವೇನಾದರೂ ಗುರಿ ಹೊಡೆಯಬಲ್ಲಿರಾ?” ಎಂದು ಕೇಳಿದರು. ಸ್ವಾಮಿ ವಿವೇಕಾನಂದರು “ಏನೋ, ಪ್ರಯತ್ನ ಮಾಡಿ
ಡಬೇಕೆನಿಸುತ್ತಿದೆ” ಎಂದರು. ಬಂದೂಕವನ್ನು ಕೈಗೆತ್ತಿಕೊಂಡು ಮೊಟ್ಟೆಗಳತ್ತ ಗುರಿಯಿಟ್ಟು ಸ್ವಲ್ಪ ಹೊತ್ತು ಗುರಿಯ ಮೇಲೆಯೇ ಚಿತ್ತವನ್ನು ಏಕಾಗ್ರಗೊಳಿಸಿದರು. ಸ್ವಾಮೀಜಿ ಹನ್ನೆರಡು ಸಲ ಗುಂಡು ಹಾರಿಸಿದರು. ಪ್ರತಿಸಾರಿಯೂ ಒಂದೊಂದು
ಮೊಟ್ಟೆ ಒಡೆಯಿತು. ಸ್ವಾಮೀಜಿಯ ಈ ಕೌಶಲ್ಯವನ್ನು ಕಂಡು ಹುಡುಗರೆಲ್ಲ ಬೆಕ್ಕಸಬೆರಗಾದರು. “ಸ್ವಾಮಿ ಬಂದೂಕಿನ ಅಭ್ಯಾಸವೇ ಇಲ್ಲದೆ ಇಷ್ಟು ಸರಿಯಾಗಿ ಹೇಗೆ ನೀವು ಗುರಿ ಹೊಡೆದಿರಿ?” ಎಂದು ಕೇಳಿದರು. ವಿವೇಕಾನಂದರು ಸುತ್ತಲೂ ಡಿ
ಗುತ್ತಾ ಹೇಳಿದರು, “ಇಲ್ಲಿ ನೋಡಿ ನಿಮಗೊಂದು ಗುಟ್ಟನ್ನು ಹೇಳುತ್ತೇನೆ. ನೀವು ಏನನ್ನೇ ಮಾಡುತ್ತಿದ್ದರೂ ಅದರ ಮೇಲೆ ನಿಮ್ಮ ಚಿತ್ತವನ್ನು ಏಕಾಗ್ರಗೊಳಿಸಿರಿ. ಬೇರೆ ಯಾವ ಅಲೋಚನೆಯೂ ನಿಮ್ಮ ಮನಸ್ಸಿನಲ್ಲಿ ಸುಳಿಯದಿರಲಿ. ನೀವು ದೂಕಿನ ಅಭ್ಯಾಸ ಮಾಡುತ್ತಿದ್ದರೆ ಮನಸ್ಸೆಲ್ಲ ಗುರಿಯ ಮೇಲೆಯೇ ಇರಲಿ. ಆಗ ಗುರಿ ಹುಸಿಹೋಗುವುದಿಲ್ಲ. ಚಿತ್ತೈಕಾಗ್ರತೆ ಪವಾಡಗಳನ್ನೇ ಸಾಧಿಸುತ್ತದೆ. ಅಭ್ಯಾಸ ಮಾಡುತ್ತಿರುವಾಗ ಕೂಡ ಅಷ್ಟೇ. ಆ ನಿರ್ದಿಷ್ಟ ವಿಷಯವೊಂದನ್ನೇ ಕುರಿತು ಯೋಚಿಸಿ. ಆಗ
ವು ಓದಿದ್ದೆಲ್ಲ ಸ್ಮೃತಿಪಟಲದ ಮೇಲೆ ಅಳಿಯದಂತೆ ಅಚ್ಚಾಗಿಬಿಡುತ್ತದೆ. “ಇಂತಹ ಚಿತ್ತೈಕಾಗ್ರತೆಯಿಂದಲೇ ಸ್ವಾಮಿ ವಿವೇಕಾನಂದರು ಲೋಕ ಕಲ್ಯಾಣದ ಮಹಾಕಾರ್ಯಗಳನ್ನು ಸಾಧಿಸಲು ಸಾಧ್ಯವಾಯಿತು.
ಪ್ರಶ್ನೆಗಳು:
- ಏಕಾಗ್ರತೆಯ ಉಪಯೋಗಗಳೇನು?
- ಈ ಕೆಳಗಿನ ವಿಷಯಗಳಲ್ಲಿ ಏಕಾಗ್ರತೆ ಇಲ್ಲದಿದ್ದರೆ ಏನಾಗುತ್ತದೆ?
- ರಸ್ತೆ ದಾಟುವಾಗ
- ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿರುವಾಗ
- ನಿಮ್ಮ ಮನೆಗೆಲಸ ಮಾಡುತ್ತಿರುವಾಗ
- ಭಜನೆ ಹಾಡುತ್ತಿರುವಾಗ
- ಪರೀಕ್ಷೆಗೆ ಓದುತ್ತಿರುವಾಗ
- ಊಟ ಮಾಡುತ್ತಿರುವಾಗ
- ಚಲನಚಿತ್ರ ವೀಕ್ಷಿಸುತ್ತಿರುವಾಗ
- ಕ್ರಿಕೆಟ್ ಆಡುತ್ತಿರುವಾಗ
- ಅತ್ಯುತ್ತಮ ಏಕಾಗ್ರತೆಯಿಂದ ಮಾಡಿದ ಕೆಲಸದಿಂದ ಬಂದ ಫಲಿತಾಂಶದ ಬಗ್ಗೆ ಹಾಗೂ ಏಕಾಗ್ರತೆಯಿಲ್ಲದೆ ಮಾಡಿದ ಕೆಲಸದಿಂದ ಬಂದ ಫಲಿತಾಂಶದ ಬಗ್ಗೆ ಬರೆಯಿರಿ.