ಸಮಯ ಪ್ರಜ್ಞೆ

Print Friendly, PDF & Email
ಸಮಯ ಪ್ರಜ್ಞೆ

ನಾವು ಆಗಾಗ ಮನೆಗೆ ಬೆಂಕಿಹತ್ತಿದ ವಿಷಯ, ಕಾರು ಮರಕ್ಕೆ ಢಿಕ್ಕಿ ಹೊಡೆದ ಪ್ರಸಂಗ, ಮಗು ಬಾವಿಗೆ ಬಿದ್ದ ಸಂಗತಿ ಇಂಥವನ್ನು ಕೇಳುತ್ತಲೇ ಇರುತ್ತೇವೆ. ಇಂತಹ ಆಕಸ್ಮಿಕಗಳು ನಡೆದಾಗ ಅನೇಕ ಜನರು ಅಲ್ಲಿಗೆ ಧಾವಿಸಿ ಹೋಗುತ್ತಾರೆ. ಆದರೆ ಅವರಲ್ಲಿ ಬಹು ಜನರು ಸುಮ್ಮನೆ ನಿಂತುಬಿಡುತ್ತಾರೆ, ಭಯಪಡುತ್ತಾರೆ, ಇದೇನಾಗಿ ಹೋಯಿತು ಎಂದು ಚಿಂತೆಗೀಡಾಗುತ್ತಾರೆ. ತಮ್ಮಿಂದ ಏನೂ ಮಾಡಲಿಕ್ಕಾಗುವುದಿಲ್ಲವೆಂದು ಗೋಳಾಡುತ್ತಾರೆ. ಎಲ್ಲೋ ಕೆಲವರು ಮಾತ್ರ ಅಂತಹ ಪ್ರಸಂಗದಲ್ಲಿಯೂ ಶಾಂತರಾಗಿದ್ದು ಮಾಡಬೇಕಾದ ಕೆಲಸವೇನೆಂದು ತಕ್ಷಣವೇ ತೀರ್ಮಾನಿಸಿ ಕಾರ‍್ಯಪ್ರವೃತ್ತರಾಗುತ್ತಾರೆ. ಇದರಿಂದ ಅನೇಕರ ಪ್ರಾಣಗಳು ಉಳಿಯುತ್ತವೆ, ಆಸ್ತಿಪಾಸ್ತಿ ರಕ್ಷಣೆಯಾಗುತ್ತದೆ. ಈ ಬಗೆಯ ಪ್ರಸಂಗಾವಧಾನತೆ ತುಂಬಾ ದೊಡ್ಡ ಗುಣ.

Boys playing cricket

ಒಂದು ತೋಟದಲ್ಲಿ ಕೆಲವರು ಹುಡುಗರು ಚೆಂಡಾಟ ಆಡುತ್ತಿದ್ದರು. ಒಬ್ಬನು ಜೋರಾಗಿ ಹೊಡೆದಾಗ ಚೆಂಡು ಬಹುದೂರ ಹೋಗಿ ಒಂದು ಆಲದ ಮರದ ಪೊಟರೆಯೊಳಕ್ಕೆ ಬಿದ್ದು ಹೋಯಿತು. ಆಡುತ್ತಿದ್ದ ಪ್ರತಿಯೊಬ್ಬನೂ ಅದನ್ನು ಹೊರತೆಗೆಯಲು ಪ್ರಯತ್ನಿಸಿ ವಿಫಲನಾದನು. ಅವರ ಕೈ ಆ ಪೊಟರೆಯ ತಳದವರೆಗೆ ಹೋಗುತ್ತಲೇ ಇರಲಿಲ್ಲ. ಆಗ ಎಲ್ಲ ಮಕ್ಕಳೂ ಸೇರಿ ಜೋರಾಗಿ ಚೆಂಡನ್ನು ಹೊಡೆದ ಹುಡುಗನನ್ನು ಬಯ್ಯತೊಡಗಿದರು. ಇದು ಅತಿಯಾಗಿ ಅವನಿಗೆ ಅಳು ಬಂದಿತು.

Ball fell into a hole of a tree

ಆ ವೇಳೆಗೆ ತೋಟದಲ್ಲಿ ತಿರುಗಾಡುತ್ತಿದ್ದ ಒಬ್ಬ ಚುರುಕು ಬುದ್ಧಿಯ ಬಾಲಕನು ಅಲ್ಲಿಗೆ ಬಂದನು. ಹುಡುಗನ ಅಳುವನ್ನು ನೋಡಿ ಏನು ನಡೆಯಿತು ಎಂದು ವಿಚಾರ ಮಾಡಿ ತಿಳಿದುಕೊಂಡನು. “ಇಷ್ಟೇ ತಾನೇ?, ಚಿಂತೆ ಮಾಡಬೇಡಿ, ನಿಮ್ಮ ಚೆಂಡನ್ನು ನಾನು ತೆಗೆದುಕೊಡುತ್ತೇನೆ. ಒಂದು ಬಕೆಟ್ ತುಂಬಾ ನೀರು ತಂದುಕೊಡಿ” ಎಂದನು.

Intelligent lad paring water to bring up the ball

ಒಬ್ಬ ಹುಡುಗನು ತೋಟಗಾರನ ಹತ್ತಿರಕ್ಕೆ ಓಡಿಹೋಗಿ ಅವನ ಸಹಾಯದಿಂದ ಒಂದು ಬಕೆಟ್ ನೀರು ತಂದನು. ಚುರುಕು ಬಾಲಕನು ನೀರನ್ನು ಮರದ ಪೊಟರೆಯೊಳಕ್ಕೆ ಸುರಿದನು. ನೀರು ತುಂಬಿಕೊಂಡಂತೆ ಹಗುರವಾದ ಚೆಂಡೂ ತೇಲಿಕೊಂಡು ಮೇಲಕ್ಕೆ ಬಂದಿತು. ತಕ್ಷಣವೇ ಒಬ್ಬ ಹುಡುಗನು ಅದನ್ನು ಎತ್ತಿಕೊಂಡು ಸಂತೋಷದಿಂದ ಕುಣಿದಾಡಿದನು. ಎಲ್ಲರ ಮುಖಗಳೂ ಉಲ್ಲಾಸದಿಂದ ಅರಳಿದವು. ಚೆಂಡನ್ನು ತೆಗೆದುಕೊಂಡವರೇ ಮತ್ತೆ ಆಟಕ್ಕೆ ಓಡಿದರು.

ಮಕ್ಕಳಿಗೆ ಸಹಾಯ ಮಾಡಿದ ಚುರುಕು ಬುದ್ಧಿಯ ಬಾಲಕ ಯಾರು ಗೊತ್ತೇ? ನಮ್ಮ ನೆಚ್ಚಿನ ಜವಹರಲಾಲ್ ನೆಹರೂ.

ಪ್ರಶ್ನೆಗಳು:
  1. ಸಮಯ ಪ್ರಜ್ಞೆ ಎಂದರೇನು? ಅದನ್ನು ಹೇಗೆ ಬೆಳೆಸಿಕೊಳ್ಳಬಹುದು?
  2. ನೀವು ಯಾವಾಗಲಾದರೂ ಕಷ್ಟದ ಸಮಯದಲ್ಲಿ ಸಮಯ ಪ್ರಜ್ಞೆ ತೋರಿಸಿರುವಿರಾ? ಹೌದಾಗಿದ್ದರೆ, ಯಾವಾಗ ಮತ್ತು ಹೇಗೆ?
  3. ಒಂದು ಆಕ್ಸಿಡೆಂಟ್ ನಡೆದಿದೆ ಎಂದು ಊಹಿಸಿಕೊಳ್ಳಿ. ನೀವು ಆ ಸ್ಥಳದಲ್ಲಿದ್ದಿದ್ದರೆ, ಹೇಗೆ ನಿಮ್ಮ ಸಮಯ ಪ್ರಜ್ಞೆಯ ಮೂಲಕ ಜನರಿಗೆ ಸಹಾಯ ಮಾಡುತ್ತಿದ್ದಿರಿ? ಎಂಬುದರ ಬಗ್ಗೆ ಬರೆಯಿರಿ.

Leave a Reply

Your email address will not be published. Required fields are marked *

error: