ತಿಳುವಳಿಕೆ ಮತ್ತು ಸಂಯಮ

Print Friendly, PDF & Email

ತಿಳುವಳಿಕೆ ಮತ್ತು ಸಂಯಮ

Cyclist riding without light

ಇದೊಂದು ಯುವಕನ ಕಥೆ. ಅವನು ಒಂದು ಕತ್ತಲೆಯ ರಾತ್ರಿ ಜನ ಸಂದಣಿಯ ನಡುವೆ ಸೈಕಲ್ಲನ್ನು ಓಡಿಸುತ್ತಿದ್ದ. ಅದನ್ನು ನೋಡಿದ ಕರ್ತವ್ಯ ನಿರತ ಪೋಲೀಸನು ಅವನಿಗೆ ಸೈಕಲ್ ನಿಲ್ಲಿಸಲು ಸೂಚಿಸಿದನು ಮತ್ತು ಸೈಕಲ್ಲಿನಲ್ಲಿ ಲೈಟ್ ಇರದ ಬಗ್ಗೆ ವಿಚಾರಿಸಿದನು. ಆದರೆ ಆ ಯುವಕನು ಸೈಕಲ್ಲನ್ನು ಜೋರಾಗಿ ಓಡಿಸುತ್ತಾ “ಎಲೈ ಪೋಲೀಸನೇ, ಜಾಗರೂಕನಾಗಿರು, ನನ್ನ ಸೈಕಲ್ಲಿಗೆ, ಲೈಟ್ ಮಾತ್ರವಲ್ಲ, ಬ್ರೇಕ್ ಕೂಡ ಇಲ್ಲ.” ಎಂದು ಬೊಬ್ಬೆ ಹಾಕಿದನು.

Man too has wisdom and Self Control

ಇದು ಇಂದಿನ ಎಲ್ಲರ ಕರುಣಾಜನಕ ಪರಿಸ್ಥಿತಿ. ಯಾರಲ್ಲಿಯೂ ತಿಳುವಳಿಕೆಯ ದೀಪ ಅಥವಾ ಸಂಯಮ ಎಂಬ ತಡೆ ಇಲ್ಲವಾಗಿದೆ. ಹಾಗಾಗಿ ಅವರು ತಮಗೆ ಹಾಗು ಇತರರಿಗೆ ತೊಂದರೆ ಉಂಟುಮಾಡದೆ ಆನಂದ ಮಾರ್ಗದಲ್ಲಿ ಹೇಗೆ ಸಾಗುವರು? ಸೈಕಲ್ ಸವಾರಿ ನಡೆಸುವವನಿಗೆ ‘ಲೈಟ್’ ಮತ್ತು ‘ಬ್ರೇಕ್’ ಅಗತ್ಯವಿರುವಂತೆ ಮನುಷ್ಯನಿಗೆ ತಿಳುವಳಿಕೆ ಮತ್ತು ಸಂಯಮದ ಅಗತ್ಯವಿದೆ. ಇಲ್ಲವಾದಲ್ಲಿ ಅವನು ತನ್ನನ್ನು ತಾನು ರಕ್ಷಿಸಿಕೊಳ್ಳಲು ಇರುವ ಅವಕಾಶಗಳೆಲ್ಲವನ್ನು ಕಳೆದುಕೊಳ್ಳುತ್ತಾನೆ.

ತಿಳುವಳಿಕೆಯು ಬಾಳಿನ ದಾರಿ ದೀಪವಾದರೆ, ಸಂಯಮ ಜೀವನದ ಹಾದಿಯನ್ನು ಸುರಕ್ಷಿತವಾಗಿಸುತ್ತದೆ.

 Illustrations by Ms. Sainee
Digitized by Ms.Saipavitraa
(Sri Sathya Sai Balvikas Alumni)

[Ref: China Katha-I, Stories & Parables Pg:]

Leave a Reply

Your email address will not be published. Required fields are marked *