ದೇವರು ಒಬ್ಬನೇ
ದೇವರು ಒಬ್ಬನೇ
ಒಮ್ಮೆ ಪಸಿ, ಅರಬ್, ಟಕಿ ಮತ್ತು ಗ್ರೀಕ್ ದೇಶದ ನಾಲ್ಕು ಮಂದಿ ಒಟ್ಟಿಗೆ ಗುಂಪಾಗಿ ಹಳ್ಳಿಯಲ್ಲಿ ನಡೆಯುತ್ತಾ ಸಾಗಿದ್ದರು. ಜೊತೆಯಲ್ಲಿ ದಾರಿ ಕ್ರಮಿಸುತ್ತಾ ಇರುವಾಗ ಅವರಲ್ಲಿ ಚಚೆ ಶುರುವಾಯಿತು. ಏಕೆಂದರೆ ಅವರ ಹತ್ತಿರ ಒಂದೇ ಒಂದು ನಾಣ್ಯವಿತ್ತು. ಪ್ರತಿಯೊಬ್ಬರೂ ಅವರಿಗೆ ಇಷ್ಟವಾದ ರೀತಿಯಲ್ಲಿ ಅದನ್ನು ಖಚು ಮಾಡಲು ಬಯಸಿದ್ದರು.
ಪಸಿ ತನಗೆ ‘ಅಂಗೂರ್’ (Angur) ಬೇಕೆಂದು ಬಯಸಿದ. ಅರಬ್ ದೇಶದವನು ‘ಇನಾಬ್’ (Inab) ತಿನ್ನಲು ಇಚ್ಛಿಸಿದ. ಟಕಿಯವನು ಸಾಧ್ಯವಿಲ್ಲ ‘ಉಝುಮ್’ (Uzum) ಹಣ್ಣನ್ನು ಕೊಂಡುಕೊಳ್ಳೋಣ ಎಂದ. ಗ್ರೀಕ್ ನಿವಾಸಿ ‘ಸ್ಟಾಪಿಲ್’ (Stafil) ಬಿಟ್ಟು ಬೇರೇನನ್ನೂ ಒಲ್ಲೆ ಎಂದ.
ಅಲ್ಲಿಯೇ ಹತ್ತಿರ ಪಯಣಿಸುತ್ತಿದ್ದ ಬುದ್ಧಿವಂತ ವ್ಯಕ್ತಿ, ಆ ನಾಲ್ವರ ಒಳಜಗಳವನ್ನು ಕೇಳಿಸಿಕೊಂಡ. ಅವನಿಗೆ ಈ ನಾಲ್ವರ ಭಾಷೆಯೂ ಗೊತ್ತಿದ್ದರಿಂದ ಅವನು, ‘ಆ ನಾಣ್ಯವನ್ನು ನನಗೆ ಕೊಡಿ ನಿಮ್ಮೆಲ್ಲರನ್ನೂ ನಾನು ಸಂತೃಪ್ತಿಗೊಳಿಸುತ್ತೇನೆ’ ಎಂದು ಹೇಳಿದ. ಮೊದಲಿಗೆ ಅವನ ಮೇಲೆ ಯಾರಿಗೂ ನಂಬಿಕೆ ಬರಲಿಲ್ಲ. ಆದರೂ ಒಲ್ಲದ ಮನಸ್ಸಿನಿಂದ ಆ ನಾಣ್ಯವನ್ನು ಅವನಿಗೆ ಕೊಟ್ಟರು. ಅವನು ಹಣ್ಣಿನ ಅಂಗಡಿಗೆ ಹೋಗಿ ಆ ಒಂದು ನಾಣ್ಯದಿಂದ ನಾಲ್ಕು ಚಿಕ್ಕ, ಚಿಕ್ಕ ದ್ರಾಕ್ಷಿ ಗೊಂಚಲನ್ನು ತಂದುಕೊಟ್ಟನು.
[Illustrations by A.Jeyanth, Sri Sathya Sai Balvikas Student]
[Adapted from “Spiritual Science- Book 3”- P.N]
`ಇದು ನನ್ನ ‘ಅಂಗುರ್’ ಎಂದ ಪಸಿಯವನು, ಇದುವೇ ನಾನು ಹೇಳುವ ‘ಉಝುಮ್’ ಎಂದ ಟಕಿಯವ. ನೀನು ನನಗೆ ‘ಇನಾಬ್’ ತಂದುಕೊಟ್ಟೆ ಎಂದ ಅರಬ್ಬಿಯವನು. ಇದನ್ನು ನನ್ನ ಭಾಷೆಯಲ್ಲಿ ‘ಸ್ಟಾಪಿಲ್’ ಎಂದು ಕರೆಯುತ್ತಾರೆ. ಎಂಬುದಾಗಿ ಗ್ರೀಕ್ ದೇಶದವನು ಹೇಳಿದ.. ಒಬ್ಬರು, ಇನ್ನೊಬ್ಬರ ಭಾಷೆಯನ್ನು ಅರ್ಥಮಾಡಿಕೊಳ್ಳದೇ ಇದ್ದುದು ಜಗಳಕ್ಕೆ ಕಾರಣವಾಯಿತೆಂಬ ಸತ್ಯ ಅವರಿಗೆಲ್ಲರಿಗೂ ತಿಳಿಯಿತು.
“ದಿವ್ಯಾತ್ಮ ಸ್ವರೂಪಿಗಳೇ, ಇಲ್ಲಿಗೆ ಬಂದ ಮೇಲೆ, ಒಂದು ಮುಖ್ಯವಾದ ವಿಷಯವನ್ನು ನೀವೆಲ್ಲರೂ ಗುರುತಿಸಬೇಕು ಮತ್ತು ಅಥಮಾಡಿಕೊಳ್ಳಬೇಕು. ನೀವೆಲ್ಲಾ ಜಾತಿ, ಮತ, ಭೇದಗಳನ್ನು ಮರೆತು ಮೇಲು, ಕೀಳು ಎಂಬ ಭಾವನೆಗಳನ್ನು ತೊರೆಯಬೇಕು. ನಾವೆಲ್ಲಾ ಒಂದೇ ದೇವರ ಮಕ್ಕಳು ಎಂಬುದನ್ನು ತಿಳಿಯಬೇಕು.”
[Bhagawan Baba’s Divine Discourse on 20th October 1988]
ಹೌದು, ದೇವರೊಬ್ಬನೇ. ನಾವೆಲ್ಲರೂ ಆ ಭಗವಂತನ ಮಕ್ಕಳು. ಹಸುಗಳ ಬಣ್ಣ ಹಲವಿದ್ದರೂ ಹಾಲಿನ ಬಣ್ಣ ಬಿಳಿ. ನಕ್ಷತ್ರಗಳು ಹಲವು ಆದರೆ ಆಕಾಶ ಒಂದೇ. ಹಾಗೆಯೇ ಜಗತ್ತಿಗೆಲ್ಲಾ ಪರಮಾತ್ಮ ಒಬ್ಬನೇ. “ಏಕಂ ಸತ್ ವಿಪ್ರಾಃ ಬಹುಧಾವದಂತಿ” ಎಂದು ವೇದಗಳು ಹೇಳಿವೆ. ಜ್ಞಾನಿಗಳು ಒಂದೇ ಆದ ಸತ್ಯವನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿದರು.
‘ಅಲ್ಲಾಹ್’ ಎಂದು ಮುಸ್ಲಿಮರು,
‘ಜಿಹೋವಾ’ ಎಂದು ಕ್ರಿಶ್ಚಿಯನ್ನರು,
‘ಕಮಲನಯನ ವಿಷ್ಣು’ ಎಂದು ವೈಷ್ಣವರು,
‘ಶಂಭೋ’ ಎಂದು ಶೈವರು ಒಬ್ಬನೇ ದೇವರನ್ನು ಆರಾಧಿಸುತ್ತಾರೆ,
ಇವರೆಲ್ಲರೂ ಒಬ್ಬನೇ ಆದ ದೇವರನ್ನು ಆರಾಧಿಸಿ,
ತಮಗೆ ಬೇಕಾದ ಐಶ್ವರ್ಯ, ಅಂತಸ್ತು, ಸುಖ, ಸಂತೋಷಗಳನ್ನು ಪಡೆಯುತ್ತಾರೆ.
‘ಏಕೈಕ ಪರಮಾತ್ಮನೇ ಆತ್ಮ.’ ‘’ಅಂತರಾತ್ಮನಾದ ಶಕ್ತಿಯೇ ಅಖಂಡ ಪರಮಾತ್ಮ ಶಕ್ತಿ”.
ಎಂದು ಸ್ವಾಮಿ ಹೇಳುತ್ತಾರೆ
ಧಮಗಳು ಭಿನ್ನತೆಯನ್ನು ಉಪದೇಶಿಸುವುದಿಲ್ಲ