ದೈವಿಕ ಭವ್ಯತೆ
ದಿವ್ಯ ಮಾಗದಶನ
ಮಕ್ಕಳಲ್ಲಿ ಧಮಗಳ ಬಗ್ಗೆ ಗೊಂದಲಗಳು ಮೂಡಬಾರದೆಂಬ ಉದ್ದೇಶದಿಂದ ಬಾಲವಿಕಾಸದ ಆರಂಭದ ತರಗತಿಗಳಲ್ಲಿ ವಿವಿಧ ಧಮಗಳು, ಅವುಗಳ ವಿಶೇಷತೆಗಳ ಬಗ್ಗೆ ಪಾಠಗಳನ್ನು ಮಾಡಬಹುದು. ಧಾಮಿಕ ಆಚರಣೆಗಳು, ಕಟ್ಟುಪಾಡುಗಳು, ಬೆರೆ ಬೇರೆ ಧಮಗಳಲ್ಲಿ ಬೇರೆ ಬೇರೆ ರೀತಿಯದಾಗಿದ್ದರೂ, ಒಂದಕ್ಕೊಂದು ಭಿನ್ನಾಭಿಪ್ರಾಯಗಳನ್ನು ಉಂಟು ಮಾಡುವಂತಿದ್ದರೂ, ವಾಸ್ತವವಾಗಿ ಎಲ್ಲಾ ಧಮಗಳ ಮೂಲತತ್ವಗಳು ಒಂದೇ ಆಗಿರುತ್ತವೆ. ಮಕ್ಕಳಿಗೆ ಧಮಗಳ ನಡುವಿನ ಸಾಮರಸ್ಯ, ಅವುಗಳ ಸ್ಪಷ್ಟ ಚಿತ್ರಣ, ವ್ಯತ್ಯಾಸ ಇವುಗಳ ಬಗ್ಗೆ ಅಥಮಾಡಿಕೊಳ್ಳಲು ಕಷ್ಟಸಾಧ್ಯವಾಗುವುದರಿಂದ, ಧಮಗಳ ಆಳವಾದ ಅಧ್ಯಯನವನ್ನು ಮಾಡುವುದಿಲ್ಲ. ಬದಲಾಗಿ ನಾವು ಎಲ್ಲಾ ಧಮಗಳಲ್ಲಿ ಹೇಳಿರುವ ಸಮಾನ ಉದ್ದೇಶ ತತ್ವಗಳನ್ನು ತಿಳಿಸುತ್ತೇವೆ.
ಪ್ರಾಥನೆಯ ಪ್ರಾಮುಖ್ಯತೆ, ಆರಾಧನೆಯ ಅಗತ್ಯತೆ, ಸೋದರತ್ವ ಹಾಗೂ ಪಿತೃತ್ವದ ಸಿದ್ಧಾಂತ, ಎಲ್ಲದರಲ್ಲೂ ಪ್ರೀತಿಯನ್ನು ಬೆಳೆಸಿಕೊಳ್ಳುವ ಗುಣ ಇತ್ಯಾದಿಗಳನ್ನು ಎಲ್ಲಾ ಧಮಗಳಲ್ಲಿಯೂ ಕಾಣಬಹುದಾಗಿದೆ. ಅಷ್ಟೇ ಅಲ್ಲದೆ ಇವುಗಳನ್ನು ಎಲ್ಲಾ ಧಮಗಳೂ ಪಾಲಿಸಿಕೊಂಡು ಬರುತ್ತಿವೆ.
ಎಲ್ಲ ಧಮಗಳ ಗುರಿ ಒಂದೇ ಆಗಿದ್ದರೂ ಅದನ್ನು ಸಾಧಿಸುವ ಮಾಗಗಳು ಮಾತ್ರ ಬೇರೆ ಬೇರೆಯದಾಗಿರುತ್ತದೆ. (ಭಿನ್ನವಾಗಿರುತ್ತದೆ). ಆಭರಣಗಳ ವಿನ್ಯಾಸ ಬೇರೆ ಬೇರೆಯದಾಗಿದ್ದರೂ, ಅವುಗಳಿಗೆ ಉಪಯೋಗಿಸಲ್ಪಡುವ ಮೂಲ ಕಚ್ಚಾ ವಸ್ತು ಅಂದರೆ `ಚಿನ್ನ’ ಒಂದೇ. ಬಣ್ಣ ಬಣ್ಣದ ದನಗಳಿರಬಹುದು, ಆದರೆ ಅವುಗಳು ನೀಡುವ ಹಾಲು ಒಂದೇ. ಅದು ಬಿಳಿ ಮಾತ್ರ. ಅಂತೆಯೇ ಜನರು ಧರಿಸುವ ಉಡುಪುಗಳು ಬೇರೆ ಬೇರೆ ಹೆಸರು, ಬಣ್ಣ, ಆಕಾರಗಳಿಂದ ಕೂಡಿದ್ದರೂ, ಇವೆಲ್ಲವುಗಳನ್ನು ಬಟ್ಟೆಯಿಂದಲೇ ತಯಾರಿಸಲಾಗುತ್ತದೆ. ಅಂತೆಯೇ ಧಮಗಳು ವಿಭಿನ್ನವಾಗಿದ್ದರೂ, ಅವುಗಳ ತತ್ವ, ಆದಶ, ಸಿದ್ಧಾಂತ, ಗುರಿ ಎಲ್ಲವೂ ಒಂದೇ ಆಗಿದೆ. ಅವರವರ ಸಂಪ್ರದಾಯಕ್ಕೆ ಅನುಸಾರವಾಗಿ ವೇದಗಳಲ್ಲಿ ಉಲ್ಲೇಖಿಸಿರುವಂತೆ ಹಿಂದೂಗಳು, ಖುರಾನ್ನಂತೆ ಮುಸ್ಲಿಮರೂ, ಬೈಬಲಿನಂತೆ ಕ್ರೈಸ್ತರೂ ತಮ್ಮ ತಮ್ಮ ಸಂಪ್ರದಾಯವನ್ನು ಅನುಸರಿಸಿ ದೇವರನ್ನು ಆರಾಧಿಸುತ್ತಾರೆ. ಹೊರಗಿನಿಂದ ನೋಡುವಾಗ ನಾನಾ ಧಮದವರು ವಿಧವಿಧವಾಗಿ ಆರಾಧಿಸಿಕೊಂಡು ಬಂದರೂ ಎಲ್ಲರ ಗುರಿ ದೇವರ ಆಶೀವಾದವನ್ನು ಪಡೆಯುವುದೇ ಆಗಿದೆ.
ಎಲ್ಲಾ ಧಮಗಳೂ ಮೂಲಭೂತವಾಗಿ ಪ್ರೀತಿ, ದಯೆ, ಸಹೋದರತ್ವದ ಗುಣಗಳನ್ನೇ ಬೋಧಿಸುತ್ತವೆ. ಮನುಷ್ಯ ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡಬೇಕು, ಪ್ರೀತಿಸಬೇಕು, ಎಂಬುದಾಗಿ ಎಲ್ಲ ಧಮಗಳೂ ಬೋಧಿಸುತ್ತವೆ. ಸದ್ಗುಣ ಹಾಗೂ ಸಹಿಷ್ಣುತೆಗೆ ಮಹತ್ವವನ್ನು ನೀಡುತ್ತವೆ. ವೇದ, ಕುರಾನ್, ಬೈಬಲ್ಗಳಲ್ಲಿಯೂ ಇದನ್ನೇ ಬೋಧಿಸಲಾಗುತ್ತದೆ. ಜೋರಾಷ್ಟರ್ ಹೇಳುವಂತೆ, ಜೀವನದಲ್ಲಿ ಪ್ರಾಥನೆಯು ಅತ್ಯಗತ್ಯವಾಗಿದೆ. ಪ್ರಾಥನೆ ನಮ್ಮ ಮನಸ್ಸನ್ನು ಶಾಂತಗೊಳಿಸುವುದಲ್ಲದೆ, ದುಷ್ಟ ಪ್ರವೃತ್ತಿಯನ್ನೂ ಹೋಗಲಾಡಿಸುತ್ತದೆ. ನಮ್ಮಲ್ಲಿರುವ ದುಗುಣಗಳನ್ನು ಬೆಂಕಿಗೆ ಆಹುತಿ ನೀಡುವುದೇ ನಾವು ದೇವರಿಗೆ ನೀಡುವ ದೊಡ್ಡ ಸಮಪಣೆ. ಒಳ್ಳೆಯ ಆಲೋಚನೆ, ಒಳ್ಳೆಯ ಮಾತು, ಒಳ್ಳೆಯ ಕೆಲಸ ಈ ಮೂರು ಧಾಮಿಕ ಬದುಕಿಗೆ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.
ಉಪನಿಷತ್ತಿನಲ್ಲಿ ಉಲ್ಲೇಖಿಸಿರುವಂತೆ, ಗೌತಮ ಬುದ್ಧರು ಇಡೀ ಪ್ರಪಂಚ ಹಾಗೂ ಜೀವನ ದು:ಖಮಯವಾಗಿದೆ “ಸವಂ ದು:ಖಂ” ಎಂದಿದ್ದಾರೆ. ಮಾತ್ರವಲ್ಲದೆ ಈ ದು:ಖದಿಂದ ಮುಕ್ತರಾಗಲು ಅವರು ೮ ಮಾಗೋಪಾಯಗಳನ್ನು ಹೇಳಿದ್ದಾರೆ.
ಹೊರಗಿನಿಂದ ನೋಡುವಾಗ ಧಾಮಿಕ ಆಚರಣೆ, ಕಟ್ಟುಪಾಡುಗಳು ಬೇರೆ ಬೇರೆಯಾಗಿದ್ದರೂ ಮೂಲ ಉದ್ದೇಶ ಎಲ್ಲಾ ಧಮಗಳದ್ದೂ ಒಂದೇ ಆಗಿದೆ.
ಆದರೆ ನಮ್ಮ ಮನಸ್ಸಿನ ಆಲೋಚನೆಗಳು ಭಿನ್ನವಾಗಿರುವುದರಿಂದ, ನಾವು ಇವೆಲ್ಲವುಗಳನ್ನು ಭಿನ್ನವಾಗಿ ಕಾಣುತ್ತೇವೆ. ಎಲ್ಲಾ ಧಮಗಳ ಮೂಲ ಅಥ, ಧಮಗಳಲ್ಲಿನ ಏಕತೆಯನ್ನು ಅರಿತುಕೊಂಡು ನಾವು ಮಕ್ಕಳಿಗೆ ಬೋಧಿಸಬೇಕು. ಅವರಿಗೆ ಅವರವರ ಧಮದ ಮೇಲೆ ಪ್ರೀತಿ ಮಾತ್ರವಲ್ಲದೆ, ಎಲ್ಲಾ ಧಮಗಳ ಬಗ್ಗೆ ಗೌರವ ಮೂಡುವಂತೆ ಮಾಡಬೇಕು. ಆಲೋಚನೆಗಳಲ್ಲಿ ವ್ಯತ್ಯಾಸ, ಇಷ್ಟಪಡದಿರುವುದು, ಅಸಹಿಷ್ಣುತೆ ಇತ್ಯಾದಿಗಳು ಮಕ್ಕಳ ಮನಸ್ಸಿಗೆ ಬಾರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅಂತಹ ಗುಣಗಳು ಕಂಡುಬಂದರೆ, ಅವುಗಳನ್ನು ಸಮಾಜದ ಒಳಿತಿಗಾಗಿ ತೊಡೆದು ಹಾಕಬೇಕು.
ನೈತಿಕ ಹಾಗೂ ಆಧ್ಯಾತ್ಮಿಕ ಸತ್ಯಗಳನ್ನು ತಿಳಿಸಲು ಭಗವಂತನೂ, ಧಮಗುರುಗಳೂ, ಜನ್ಮ ತಳೆಯುತ್ತಾರೆ. ಪ್ರತಿಯೊಬ್ಬರೂ ಬೇರೆ ಬೇರೆ ಆಯಾಮಗಳಲ್ಲಿ ಸಮಯ, ಸಂದಭಗಳಿಗೆ ಅನುಸಾರವಾಗಿ, ಜನರ ಪರಿಸ್ಥಿತಿಗೆ ಅನುಗುಣವಾಗಿ ಅಥವಾ ಆಕಸ್ಮಿಕವಾಗಿ ಕೆಲವು ವಿಷಯಗಳಿಗೆ ಒತ್ತು ನೀಡಿದರೂ, ಮೂಲಭೂತ ತತ್ವಗಳು ಎಲ್ಲರದ್ದು ಒಂದೇ ಆಗಿದೆ. ಎಲ್ಲಾ ಧಮಗಳೂ ಸತ್ಯದ ವಿವಿಧ ಆಯಾಮಗಳು. ಬಾಲವಿಕಾಸದಲ್ಲಿ ಇಂತಹ ಮೂಲ ಸತ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಮೂಡುವಂತೆ ಮಾಡಿ, ಬೆಳೆಸಿ, ಪೋಷಿಸಿದರೆ ಭವಿಷ್ಯದಲ್ಲಿ ಮಕ್ಕಳು ಎಲ್ಲಾ ಧಮಗಳ ಮೇಲೆ ನಂಬಿಕೆ ಹಾಗೂ ಒಂದೇ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತಾರೆ.
ಎಲ್ಲಾ ಕಡೆಗಳಲ್ಲಿಯೂ ಬಾಲವಿಕಾಸದ ತರಗತಿಗಳಲ್ಲಿ ಬೇರೆ ಬೇರೆ ಧಮದ ಮಕ್ಕಳು ಇರುವುದಿಲ್ಲ. ಆದರೆ ಎಲ್ಲೆಲ್ಲಿ ಅಂತಹ ತರಗತಿಗಳು ಇವೆಯೋ, ಅಂತಹ ತರಗತಿಗಳಲ್ಲಿ ಬಾಲವಿಕಾಸದ ಗುರುಗಳು ಎಲ್ಲಾ ಧಮಗಳ ಕುರಿತು ಅಧ್ಯಯನ ನಡೆಸಿ ಮಕ್ಕಳಿಗೆ ಬೋಧಿಸಬೇಕು.
Divine Guidelines to Balvikas [Balvikas gurus’ Conference-1978]