ದಿವ್ಯ ಉಪನ್ಯಾಸ

Print Friendly, PDF & Email
ದಿವ್ಯ ಉಪನ್ಯಾಸ

೨೦೦೯, ಏಪ್ರಿಲ್ ೨೯ ರಂದು ಕೊಡೈಕನಾಲ್‍ನ ಸಾಯಿ ಶ್ರುತಿಯಲ್ಲಿ ನೀಡಿದ ದಿವ್ಯ ಉಪನ್ಯಾಸ.

ಸೃಷ್ಟಿಯು ಸತ್ಯದಿಂದ ಉಗಮವಾಗುತ್ತದೆ. ಹಾಗೂ ಸತ್ಯದಲ್ಲೇ ಲೀನವಾಗುತ್ತದೆ. ಈ ಬ್ರಹ್ಮಾಂಡದಲ್ಲಿ ಸತ್ಯವಿಲ್ಲದ ಜಾಗ ಎಲ್ಲಿದೆ?. ಈ ಶುದ್ಧ ಹಾಗೂ ನಿಮ೵ಲ ಸತ್ಯದ ಹೊಳಪನ್ನು ಕಾಣು (ತೆಲುಗು ಪದ್ಯ).

ನೀನು ಶ್ರದ್ಧೆಯನ್ನು ಕಳೆದುಕೊಂಡರೆ ಭಗವಂತನನ್ನು ಕಳೆದುಕೊಂಡಂತೆ.

ಎಲ್ಲರಿಗೂ ಶಾಂತಿ ಮತ್ತು ಸಂತೋಷವು ಬೇಕು. ದು:ಖ ಮತ್ತು ಕಷ್ಟ ಯಾರಿಗೂ ಬೇಡ. ಪೋಪ್ ತನ್ನ ಪ್ರವಚನದಲ್ಲಿ ಹೀಗೆ ಹೇಳಿದ್ದಾರೆ. “ಎಲ್ಲವೂ ಭಗವಂತನ ಪ್ರತಿರೂಪ. ದ್ವೈತ ಎಂಬುದು ಇಲ್ಲ. ದ್ವೈತವು ಇದೆಯೆಂದು ನೀನು ಭಾವಿಸಿದರೆ ಅದು ಮಿಥ್ಯ. ಆದುದರಿಂದ ದ್ವೈತ ಎಂಬದು ಇಲ್ಲ.”

ಎಲ್ಲವೂ ಒಂದೇ ಆಗಿರುವುದು

ಅತೀ ಸಣ್ಣ ಪ್ರಾಣಿಗಳಾದ ಇರುವೆ, ಸೊಳ್ಳೆ ಹಾಗೂ ಪಕ್ಷಿಗಳಿಂದ ಹಿಡಿದು ದೊಡ್ಡದಾದ ಆನೆಗಳ ಸಹಿತ ಎಲ್ಲವೂ ಭಗವಂತನಿಂದಲೇ ಉಗಮವಾಗಿದೆ. ಮರ, ಬೆಟ್ಟ ಮುಂತಾದ ಪ್ರಕೃತಿಯೂ ಭಗವಂತನ ಪ್ರತಿರೂಪವೇ ಆಗಿರುತ್ತದೆ. ಹಾಗಿರುವಾಗ ಬೇರೆ ಏನಿದೆ? ಹಾಗಾಗಿ ಭಗವಂತನನ್ನು ಬಿಟ್ಟು ಬೇರೆ ಎಂಬುದು ನಿನ್ನ ಭ್ರಮೆ ಮತ್ತು ಕಲ್ಪನೆ. ನಿನ್ನದೇ ಸೃಷ್ಟಿ. ನಿನ್ನ ದೇಹವು ಎಲ್ಲಿಂದ ಬಂತು? ಎಂಬುದನ್ನು ಆಲೋಚಿಸು. ಅದು ನಿನ್ನ ಹೆತ್ತವರಿಂದ ನಿನಗೆ ದೊರಕಿದೆ ಎಂದು ನೀನು ಭಾವಿಸಿದ್ದಿ. ಇಲ್ಲ, ನೀನು ನಿನ್ನ ಹೆತ್ತವರಿಂದ ಜನಿಸಿರುವುದಲ್ಲ. ನಿನ್ನಿಂದಲೇ ನಿನ್ನ ಸೃಷ್ಟಿಯಾಗಿದೆ. ಆದುದರಿಂದ ಅದ್ವೈತ ಮಾತ್ರವೇ ಇದೆ. ಹಾಗಾಗಿ ದ್ವೈತ ಎಲ್ಲಿದೆ? ಆದರೆ ಈಗ ಜನರು ಏಕತೆಯಲ್ಲಿ ವಿಶ್ವಾಸ ಇಡದೇ ವಿವಿಧತೆಯನ್ನು ನಂಬುತ್ತಾರೆ. ಏಕತೆ ಎಂದರೆ ಏನು? ಅದು ವಿವಿಧತೆಯ ಸಂಯೋಜನೆ ಅಲ್ಲ. ಅದು ಅನನ್ಯತೆಯ ಅರಿವು. ನಿನ್ನ ಸುತ್ತಲೂ ಕನ್ನಡಿ ಇರುವಾಗ ಆ ಕನ್ನಡಿಗಳಲ್ಲಿ ನಿನ್ನ ಅನೇಕ ಪ್ರತಿಬಿಂಬ ಮೂಡುತ್ತದೆ. ಅವು ಕೇವಲ ನಿನ್ನ ಪ್ರತಿಬಿಂಬಗಳು. ನೀನಲ್ಲ. ಅಲ್ಲಿ ನೀನು ಏನಾದರೂ ಮಾತನಾಡಿದರೆ ಪ್ರಶ್ನೆ ಕೇಳುವವನು ಮತ್ತು ಉತ್ತರ ಹೇಳುವವನು ಒಬ್ಬನೇ ಆಗಿರುತ್ತಾನೆ. ಎಲ್ಲರ ಮೂಲಸ್ವರೂಪವು ಒಂದೇ ಆಗಿರುತ್ತದೆ. ‘ದೈವಂ ಮಾನುಷ ರೂಪೇಣ.’ (ಮನುಷ್ಯ ರೂಪದಲ್ಲಿರುವ ಭಗವಂತ) ಒಂದೇ ವ್ಯಕ್ತಿಯು ಅನೇಕ ರೂಪದಲ್ಲಿ ಕಾಣಿಸುತ್ತಾನೆ. ಆದರೆ ಪ್ರತಿಯೊಂದು ರೂಪವು, ಬೇರೆ ಬೇರೆ ಎಂದು ಭಾವಿಸುವುದು ಮೂಖ೵ತನ. ನಾನು ಧ್ವನಿವಧ೵ಕದಲ್ಲಿ ಮಾತನಾಡುತ್ತಿರುವಾಗ, ನೀವೆಲ್ಲರೂ ನನ್ನ ಧ್ವನಿಯನ್ನು ಕೇಳುತ್ತಿರುವಿರಿ. ಒಂದೇ ಧ್ವನಿವಧ೵ಕದಿಂದ ಬರುತ್ತಿರುವ ಧ್ವನಿಯನ್ನು ಅನೇಕರು ಕೇಳುತ್ತಾರೆ. ‘ಏಕೋಹಂ ಸವ೵ ಭೂತಾನಾಂ’ (ಎಲ್ಲರಲ್ಲಿಯೂ ನಾನೇ ನೆಲೆಸಿದ್ದೇನೆ) ‘ಏಕಂ ಸತ್ ವಿಪ್ರ ಬಹುಧಾವದಂತಿ’ (ಒಂದೇ ಸತ್ಯವನ್ನು ಪಂಡಿತರು ಅನೇಕ ವಿಧಗಳಲ್ಲಿ ಹೇಳುತ್ತಾರೆ). ಆಕಾಶದಲ್ಲಿ ಒಬ್ಬನೇ ಸೂಯ೵ ಬೆಳಗುತ್ತಾನೆ. ಆದರೆ ಅವನ ಪ್ರತಿಬಿಂಬವು ನದಿಯಲ್ಲಿ, ಸರೋವರದಲ್ಲಿ ಹಾಗೂ ಪಾತ್ರೆಗಳಲ್ಲಿಯೂ ಕಾಣುತ್ತದೆ. ಸೂಯ೵ನು ಒಬ್ಬನೇ. ಆದರೆ, ಎಲ್ಲೆಲ್ಲಿ ನೀರಿದೆಯೋ ಅಲ್ಲಲ್ಲಿ ಅವನ ಪ್ರತಿಬಿಂಬವನ್ನು ನೀವು ಕಾಣುವಿರಿ. ನೀನು ಒಂದು ಪಾತ್ರೆಯಲ್ಲಿ ನೀರು ಹಾಕಿದರೆ ಅದರಲ್ಲಿಯೂ ಸೂಯ೵ನ ಪ್ರತಿಬಿಂಬವು ಕಾಣುವುದು. ಅಂದರೆ ಪಾತ್ರೆಯಲ್ಲಿ ಸೂಯ೵ನು ಇರುವನು ಎಂದು ಅಥ೵ವೇ? ಇಲ್ಲ. ಅದು ಕೇವಲ ಸೂಯ೵ನ ಪ್ರತಿಬಿಂಬ. ಅದರಂತೆಯೇ ಆತ್ಮವು ಒಂದೇ. ಮನಸ್ಸು, ಬುದ್ಧಿ, ಚಿತ್ತ, ಪ್ರಜ್ಞೆ ಹಾಗೂ ಅಹಂಕಾರಗಳು ಪಾತ್ರೆ ಇದ್ದಂತೆ. ಅವು ಕೇವಲ ಆತ್ಮವನ್ನು ಪ್ರತಿಫಲಿಸುತ್ತದೆ. ಆದುದರಿಂದ ಎಲ್ಲರಲ್ಲಿಯೂ ಒಂದೇ ಆತ್ಮತತ್ವವು ನೆಲೆಸಿದೆ..

ಶುದ್ಧ ಹೃದಯದಲ್ಲಿ ಭಗವಂತನು ಕಾಣಿಸುತ್ತಾನೆ.

ಭಗವಂತನು ಸವಾ೵ಂತಯಾ೵ಮಿ. ಅದು ಸುಳ್ಳೆಂದು ನೀನು ಭಾವಿಸಿದರೆ, ಅದು ಕೇವಲ ನಿನ್ನ ಭ್ರಮೆ ಅಂದರೆ ‘ಮಾಯೆ’. ಸೂಯ೵ನು ಆಕಾಶದಲ್ಲಿ ಬೆಳಗುತ್ತಿರುವಾಗೆಲ್ಲಾ ಕೊಳದಲ್ಲಿ ಅವನ ಪ್ರತಿಬಂಬವನ್ನು ನೋಡಬಹುದು. ನೀರು ಸ್ವಲ್ಪ ಮಲಿನವಾಗಿದ್ದರೆ, ಸೂಯ೵ ಪ್ರತಿಫಲಿಸುತ್ತಾನೆ. ಆದರೆ ನೀರು ಬಹಳವಾಗಿ ಮಲಿನಗೊಂಡರೆ ಸೂಯ೵ನ ಬಿಂಬವು ಕಾಣಿಸುವುದಿಲ್ಲ. ಹಾಗೆಯೇ ನಿನ್ನ ಹೃದಯ ಶುದ್ಧ ಮತ್ತು ನಿಮ೵ಲವಾಗಿ ಇದ್ದರೆ, ಭಗವಂತನು ನಿನಗೆ ಅಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಾನೆ. ಆದರೆ ನಿನ್ನ ಹೃದಯವು ಅಶುದ್ಧವಾಗಿದೆ. ಅದನ್ನು ನಿಮ೵ಲವಾಗಿರಿಸಿದರೆ ನಿನಗೆ ಭಗವಂತನು ಕಾಣಿಸುತ್ತಾನೆ. ಭಗವಂತನು ಸವಾ೵ಂತಯಾ೵ಮಿ. ಅವನು ಆಗತಾನೇ ಹುಟ್ಟಿದ ಮಗುವಿನಿಂದ ಹಿಡಿದು, ವೃದ್ಧನಲ್ಲಿ ಸಹ ಇರುತ್ತಾನೆ. ಸಣ್ಣ ಮಗುವು ಬೆಳೆದು ವಯಸ್ಕಳಾಗಿ ನಂತರ ವೃದ್ಧೆಯಾಗುತ್ತಾಳೆ. ಮಗು, ಹೆಂಗಸು ಮತ್ತು ಮುದುಕಿ ಈ ಮೂರೂ ಒಂದೇ ಆತ್ಮದ ಬೇರೆ ಬೇರೆ ರೂಪಗಳಾಗಿವೆ. ಅವರವರ ಭಾವಕ್ಕೆ ತಕ್ಕಂತೆ ಜನರು ಅನೇಕ ರೂಪಗಳನ್ನು ಕಾಣುತ್ತಾರೆ. ಭಗವಂತನಿಗೆ ಅನೇಕ ಆಕಾರಗಳಿಲ್ಲ. ನಿಜವಾಗಿ ಹೇಳಬೇಕೆಂದರೆ ಅವನು ನಿರಾಕಾರ. ಆದರೆ ಅವನಿಗೆ ತುಂಬಾ ಹೆಸರುಗಳಿವೆ. ಈ ಎಲ್ಲಾ ಹೆಸರುಗಳು ಒಬ್ಬನೇ ಭಗವಂತನ ಪ್ರತೀಕಗಳಾಗಿವೆ. ಸೂಯ೵ನ ಪ್ರತಿಬಿಂಬ, ಹರಿಯುವ ನೀರು ಮತ್ತು ನಿಂತ ನೀರಿನಲ್ಲಿ ಬೇರೆ ಬೇರೆಯಾಗಿ ಕಾಣುತ್ತದೆ. ಹರಿಯುವ ನೀರಿನಲ್ಲಿ ಚಂಚಲವಾಗಿ ಹಾಗೂ ನಿಂತ ನೀರಿನಲ್ಲಿ ನಿಶ್ಚಲವಾಗಿ ಕಾಣುತ್ತದೆ. ನಿನ್ನ ಅಜ್ಞಾನದಿಂದ ಲೌಕಿಕ ವಸ್ತುಗಳಲ್ಲಿ ನಿನಗೆ ಮೋಹ ಉಂಟಾಗುತ್ತದೆ. ಈ ಜಗತ್ತು ಕೇವಲ ಒಂದು ಮಾಯಾಜಾಲ. ಹಿರಣ್ಯಕಶಿಪು ತನ್ನ ಮಗ ಪ್ರಹ್ಲಾದನಲ್ಲಿ ಕೇಳಿದನು. ‘ದೇವರು ಎಲ್ಲಿದ್ದಾನೆ? ನೀನು ಸದಾ ನಾರಾಯಣ, ನಾರಾಯಣ, ಎಂದು ಜಪಿಸುತ್ತಿರುವೆ. ಈ ನಾರಾಯಣ ಯಾರು?’ ಅದಕ್ಕೆ ಪ್ರಹ್ಲಾದ ಉತ್ತರಿಸಿದನು “ಮನುಷ್ಯ ಸ್ವಯಂ ನಾರಾಯಣ ಸ್ವರೂಪ. ನೀನು ನಿನ್ನ ದೃಷ್ಟಿ ಹಾಯಿಸಿದಲ್ಲೆಲ್ಲಾ ನಿನಗೆ ನಾರಾಯಣ ಕಾಣಿಸುತ್ತಾನೆ. ಅವನು ನನ್ನಲ್ಲಿದ್ದಾನೆ, ನಿನ್ನಲ್ಲಿದ್ದಾನೆ ಎಲ್ಲದರಲ್ಲಿಯೂ ಇದ್ದಾನೆ” ಆಗ ಹಿರಣ್ಯಕಶಿಪು ಕೇಳುತ್ತಾನೆ. ‘ಹಾಗಾದರೆ ಈ ಕಂಬದಲ್ಲಿ ನಾರಾಯಣ ಇದ್ದಾನೆಯೇ?’ ಖಂಡಿತವಾಗಿಯೂ ಇದ್ದಾನೆ’ ಎಂದು ಉತ್ತರಿಸಿದ ಪ್ರಹ್ಲಾದ. ಹಿರಣ್ಯಕಶಿಪು ಒಂದು ಗದೆಯಿಂದ ಆ ಕಂಬವನ್ನು ಒಡೆದನು. ಕೂಡಲೇ ಭಗವಾನ್ ವಿಷ್ಣುವು ನರಸಿಂಹ ರೂಪದಲ್ಲಿ ಅಲ್ಲಿ ಪ್ರತ್ಯಕ್ಷನಾದನು. ಆದುದರಿಂದ ನೀನು ನೋಡಿದಲ್ಲೆಲ್ಲಾ ಭಗವಂತ ಇರುತ್ತಾನೆ. ಆದರೆ ಹಿರಣ್ಯಕಶಿಪುನಂತಹ ರಾಕ್ಷಸರು ಭಗವಂತನಲ್ಲಿ ವಿಶ್ವಾಸವನ್ನು ಇರಿಸುವುದಿಲ್ಲ.

ಏಕತೆಯನ್ನು ನೋಡುವ ದೃಷ್ಟಿಯನ್ನು ಬೆಳೆಸಿಕೊಳ್ಳಿ

ಸೃಷ್ಟಿಯಲ್ಲಿ ಏಕತೆ ಇದೆಯೆ? ಎಂಬುದನ್ನು ವೈವಿಧ್ಯತೆಯ ಕೋನದಿಂದ ನೋಡುತ್ತೇವೆ. ನಾವು ಹೇಳುತ್ತೇವೆ, ಅವರು ನನ್ನ ತಂದೆ, ಅವರು ನನ್ನ ತಾಯಿ, ಅವಳು ನನ್ನ ಹಿರಿಯ ಸಹೋದರಿ, ಅವಳು ನನ್ನ ಕಿರಿಯ ಸಹೋದರಿ, ನಾವು ಈ ಸಂಬಂಧಗಳನ್ನು ರೂಪಗಳ ಆಧಾರದ ಮೇಲೆ ಬೆಳೆಸುತ್ತೇವೆ. ಈ ಎಲ್ಲಾ ಸಂಬಂಧಗಳು ಎಲ್ಲಿಂದ ಬಂತು.? ಏಕತೆಯ ತತ್ವವಿಲ್ಲದೆ ಯಾವುದೂ ಅಸ್ತಿತ್ವದಲ್ಲಿಲ್ಲ. ಇಲ್ಲಿ ಒಂದು ಉದಾಹರಣೆ ಇದೆ. ಸುತ್ತಲೂ ಕನ್ನಡಿಗಳನ್ನು ಹೊಂದಿರುವ ಕೋಣೆಗೆ ನಾಯಿಯು ಪ್ರವೇಶ ಮಾಡುತ್ತದೆ. ಕನ್ನಡಿಯಲ್ಲಿ ಹಲವು ನಾಯಿಗಳನ್ನು ನೋಡಿತು. ಕೋಣೆಯಲ್ಲಿ ಹಲವಾರು ನಾಯಿಗಳಿವೆ ಎಂದು ತಿಳಿದು ಭಯಗೊಂಡು ತನ್ನ ಜೀವನಕ್ಕೆ ಅಪಾಯವಿದೆ ಎಂದು ತಿಳಿಯಿತು. ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು, ಒಂದು ಕನ್ನಡಿ ಮೇಲೆ ಹಾರಿದಾಗ ಅದರಲ್ಲಿ ತನ್ನದೇ ಆದ ಬಿಂಬವನ್ನು ನೋಡಿ ಮತ್ತೊಂದು ನಾಯಿ ಎಂದು ಪರಿಗಣಿಸಿತು. ಅದು ಹಾಗೆ ಮಾಡಿದಂತೆ ಕನ್ನಡಿಯಲ್ಲಿರುವ ನಾಯಿ ಕೂಡಾ ಅದರ ಮೇಲೆ ಹಾರಿತು. ಹೀಗೆ ಮಾಡಿದಾಗ ಕನ್ನಡಿಯು ಒಡೆಯಿತು. ಆ ಸ್ಥಳದಲ್ಲಿ ಬೇರೆ ನಾಯಿ ಇಲ್ಲ ಎಂದು ಭಾವಿಸಿತು. ಹೀಗೆ ಅದು ಕೋಣೆಯಿಂದ ಪಲಾಯನಗೊಂಡಿತು. ಹಲವಾರು ನಾಯಿಗಳಿಂದ ತನ್ನನ್ನು ತಾನೇ ರಕ್ಷಿಸಿಕೊಂಡಿತು ಎಂದು ಬಹಳ ಸಮಾಧಾನಪಟ್ಟಿತು. ಆದರೆ ಹಲವಾರು ನಾಯಿಗಳು ಎಲ್ಲಿದ್ದವು?

ಕನ್ನಡಿಗಳಲ್ಲಿ ತನ್ನದೇ ಆದ ಪ್ರತಿಫಲನಗಳನ್ನು ನೋಡಿತ್ತು. ಇವತ್ತಿನ ಜನರಲ್ಲಿ ಅದನ್ನೇ ನಾವು ಕಾಣುತ್ತಿದ್ದೇವೆ. ಪ್ರಪಂಚದ ಕನ್ನಡಿಯಲ್ಲಿ ತನ್ನದೇ ಆದ ಪ್ರತಿಬಿಂಬವಾಗಿ ಇತರ ಎಲ್ಲಾ ರೂಪಗಳನ್ನು ನೋಡಿದರೆ, ಪ್ರತಿಯೊಬ್ಬರೂ ಏಕತೆಯ ತತ್ವವನ್ನು ಅರಿತುಕೊಳ್ಳುತ್ತಾರೆ. ಆದ್ದರಿಂದ ತಂದೆ, ತಾಯಿ, ಸಹೋದರ, ಸಹೋದರಿಯಂತಹ ಪ್ರತ್ಯೇಕ ಘಟಕಗಳಿಲ್ಲ. ಆದರೆ ಭ್ರಮೆಯಿಂದಾಗಿ ಲೌಕಿಕ ಸಂಬಂಧವನ್ನು ಬೆಳೆಸುತ್ತಾರೆ ಮತ್ತು ಹೇಳುತ್ತಾರೆ, ಅವಳು ನನ್ನ ಸಹೋದರಿ, ಅವನು ನನ್ನ ಸಹೋದರ, ಅವರು ನನ್ನ ತಂದೆ, ಅವರು ನನ್ನ ತಾಯಿ ಎಂದು. ಇವುಗಳೆಲ್ಲವೂ ದೈಹಿಕ ಸಂಬಂಧಗಳು. ನಿಮ್ಮ ದೈವಿಕ ವಾಸ್ತವತೆಯ ಆಧಾರದ ಮೇಲೆ ಯಾವುದೇ ಸಂಬಂಧವಿಲ್ಲ.

ಎಲ್ಲರಲ್ಲಿಯೂ ಒಂದೇ ಆತ್ಮವಿರುವುದು ಎಂಬುದನ್ನು ತಿಳಿಯಲು ಪ್ರಯತ್ನಪಡಿ. ಆದರೆ ನೀವು ಆತ್ಮದ ತತ್ವವನ್ನು ಮರೆತು, ಲೌಕಿಕ ಸಂಬಂಧಗಳನ್ನು ಬೆಳೆಸುತ್ತೀರಿ. ನೀವು ಹೇಳುವಿರಿ, ಅವಳು ನನ್ನ ಹೆಂಡತಿ. ಆದರೆ ಮದುವೆಯ ಮುಂಚಿತ ಅವಳು ಬೇರೆ, ನೀವು ಬೇರೆಯಾಗಿದ್ದಿರಿ. ಮದುವೆಯ ನಂತರ ಮಾತ್ರ ನೀವು ಹೇಳಬಹುದು ‘ನನ್ನ ಹೆಂಡತಿ’, ಎಂದು. ನೀವು ನಿಮ್ಮ ಗಂಡ ಹೆಂಡತಿಯರ ಸಂಬಂಧಗಳನ್ನು ಹೇಗೆ ಬೆಳೆಸಿರುವಿರಿ? ಇದು ನಿಮ್ಮ ಭ್ರಮೆಯ ಕಾರಣಗಳಿಂದ ಮಾತ್ರ ಸಾಧ್ಯ. ಭ್ರಮೆಯ ಕಾರಣಗಳಿಂದ ಅನೇಕ ತಪ್ಪುಗಳನ್ನು ಮಾಡುತ್ತಾರೆ ಮತ್ತು ಅನೇಕ ಅನಪೇಕ್ಷಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ನೀವು ಎಲ್ಲಿ ನೋಡಿದರೂ ಅಲ್ಲಿ ಭಗವಂತನಿರುತ್ತಾನೆ. ದೇವರು ಒಬ್ಬನೇ. ಜನರು ಹೇಳುತ್ತಾರೆ. ಅವನು ರಾಮ, ಅವನು ಕೃಷ್ಣ, ಅವನು ಶಿವ, ಅವನು ವಿಷ್ಣು. ಏನಿದರ ಅಥ೵? ವಿಷ್ಣು, ಶಿವ, ರಾಮ ಮತ್ತು ಕೃಷ್ಣ ಇವರೆಲ್ಲರೂ ಬೇರೆ ಬೇರೆ ಎಂದಥ೵ವಲ್ಲವೇ? ಇಲ್ಲ. ಇದೆಲ್ಲವೂ ಒಂದೇ ದೇವರ ಬೇರೆ ಬೇರೆ ನಾಮಗಳು. ನಿಮ್ಮ ಸ್ವಂತ ಕಲ್ಪನೆಯ ಆಧಾರದ ಮೇಲೆ ನಿದಿ೵ಷ್ಟ ರೂಪದಲ್ಲಿ ದೇವರು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತಾನೆ. ರವಿವಮ೵ನಂತಹ ಕಲಾವಿದರು ಚಿತ್ರಿಸಿದ ಕೃಷ್ಣನ ರೂಪವನ್ನು ನೀವು ಆಲೋಚಿಸಿದಾಗ, ದೇವರು ನಿಮ್ಮ ಮುಂದೆ ಕೃಷ್ಣನ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ಇದೇ ರೀತಿಯಲ್ಲಿ ದೇವರು ನಿಮ್ಮ ಮುಂದೆ ರಾಮನ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ಆದರೆ ದೇವರು, ರಾಮನೂ ಆಗಿರಬಹುದು, ಅಥವಾ ಕೃಷ್ಣನೂ ಆಗಿರಬಹುದು. ರಾಮ ಮತ್ತು ಕೃಷ್ಣ ಇಬ್ಬರೂ ಒಂದೇ. ರಾಮ, ಕೃಷ್ಣರ ರೂಪಗಳು ನಿಮ್ಮ ಸ್ವಂತ ಪ್ರತಿಬಿಂಬವನ್ನು ಹೊರತುಪಡಿಸಿ ಬೇರೇನೂ ಅಲ್ಲ. ನೀವು ‘ನನಗೆ ರಾಮ ಬೇಕು’, ಎಂದು ಹೇಳಿದಾಗ ದೇವರು ನಿಮ್ಮ ಮುಂದೆ ರಾಮನ ರೂಪದಲ್ಲಿ ಪ್ರಕಟವಾಗುತ್ತಾನೆ. ನೀವು ‘ನನಗೆ ಕೃಷ್ಣ ಬೇಕು’ ಎಂದು ಹೇಳಿದಾಗ ದೇವರು ನಿಮ್ಮ ಮುಂದೆ ಕೃಷ್ಣನ ರೂಪಲ್ಲಿ ಪ್ರತ್ಯಕ್ಷನಾಗುತ್ತಾನೆ. ಈ ಎಲ್ಲಾ ರೂಪಗಳು ನಿಮ್ಮ ಸ್ವಂತ ಪ್ರತಿಬಿಂಬವನ್ನು ಹೊರತುಪಡಿಸಿ ಬೇರೇನೂ ಅಲ್ಲ.

ಆಸೆಗಳ ಹೊರೆಯನ್ನು ಕಡಿಮೆ ಮಾಡಿಕೊಳ್ಳಿ

ಸಂತೋಷ ಮತ್ತು ದು:ಖಗಳೆರಡೂ ಈ ಜಗತ್ತಿನಲ್ಲಿದೆ. ಒಬ್ಬನು ಕಷ್ಟದಲ್ಲಿದ್ದರೆ ಅವನು “ಅಯ್ಯೋ!, ದೇವರೇ! ನನಗೆ ಯಾಕೆ ಈ ಕಷ್ಟ? ನಾನೇನು ಪಾಪ ಮಾಡಿದೆ?” ಎಂದು. ಹಾಗೆಯೇ ಅವನು ಒಳ್ಳೆಯ ಹಣ ಸಂಪಾದನೆ ಮಾಡಿ ಸಂತೋಷದಲ್ಲಿದ್ದರೆ, ‘ಇದು ನನ್ನ ಪುಣ್ಯ’, ಎನ್ನುವನು. ಮೇಲೆ ಹೇಳಿದ ಕಷ್ಟ ಹಾಗೂ ಸುಖ ಎಂಬುದು ಎರಡೂ ಇಲ್ಲ. ಮನಸ್ಸಿನಲ್ಲಿ ಚಿಂತನೆ ಸದ್ಭಾವನೆಗಳಿದ್ದರೆ ಅದರ ಪರಿಣಾಮ ಒಳ್ಳೆಯದಾಗಿರುತ್ತದೆ. ಅದೇ ರೀತಿ ಒಬ್ಬನಲ್ಲಿ ದುಷ್ಟ ಚಿಂತನೆಗಳಿದ್ದರೆ ಅದರ ಪರಿಣಾಮ ದುಷ್ಪರಿಣಾಮವಾಗಿರುತ್ತದೆ. ಒಳ್ಳೆಯದು ಕೆಟ್ಟದು ಎಂಬುದು ಹೊರಗಿನಿಂದ ಬರುವಂತದ್ದು ಅಲ್ಲ. ಎಲ್ಲವೂ ಭಗವಂತ. ಆದರೆ ಮನುಷ್ಯನು ಒಂದು ಹಾವನ್ನು ಕಂಡರೆ ಅದು ಕಚ್ಚಬಹುದು ಎಂದು ಭಯಪಡುತ್ತಾನೆ. ಆ ಹಾವಿನಲ್ಲೂ ಭಗವಂತನಿರುತ್ತಾನೆ. ಭಗವಂತನಿಲ್ಲದ ವಸ್ತು, ಜೀವಿಗಳಿಲ್ಲ. ಆದರೆ ನಾವು ಭ್ರಮೆಯ ಲೋಕದಿಂದ ಹೊರಬರಬೇಕು. ಮನುಷ್ಯನ ಅತಿಯಾದ ಆಸೆಯ ಪರಿಣಾಮದಿಂದ ಭ್ರಮೆಗೆ ಒಳಪಡುತ್ತಾನೆ. ಆದ ಕಾರಣ ಮನುಷ್ಯನು ಆಸೆಯ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ಇದನ್ನು ಹೇಗೆ ಮಾಡುವುದು? ಎಲ್ಲಾ ಆಸೆಗಳು ಮನಸ್ಸಿನಿಂದ ಸೃಷ್ಟಿಸಲ್ಪಟ್ಟಿದೆ ಹಾಗೂ ಚಂಚಲತೆಯಿಂದ ವಿಸ್ತರಿಸುತ್ತದೆ. (ಮನಃ ಏವಾ ಮನುಷ್ಯಾನಾಂ ಕಾರಣಂ ಬಂಧ ಮೋಕ್ಷಯೋ) ಮನುಷ್ಯನ ವಿಮೋಚನೆ ಹಾಗೂ ಬಂಧನಕ್ಕೆ ಮನಸ್ಸೇ ಕಾರಣವಾಗಿರುತ್ತದೆ.

ನಾವು ವಿಮೋಚನೆಯ (ಮುಕ್ತಿಯ) ಹಾದಿಯಲ್ಲಿ ನಡೆಯಬೇಕಾದರೆ ಪ್ರಯತ್ನ ಪಡಬೇಕು. ಆವಾಗ ಭ್ರಮೆಗೆ ಒಳಗಾಗುವ ಅವಕಾಶ ಇರುವುದಿಲ್ಲ. ಆದರೆ ಮನುಷ್ಯನೂ ಅತೀ ಆಸೆಗೆ ಒಳಪಟ್ಟಿರುತ್ತಾನೆ. ಈ ಅತೀ ಆಸೆಗೆ ಕಾರಣ ಅವನ ಮನಸ್ಸು. ಆದ್ದರಿಂದ ಮೊದಲಿಗೆ ಮನಸ್ಸಿನ ನಿಗ್ರಹವು ಅತೀ ಅವಶ್ಯಕ. ಇದರ ಪರಿಣಾಮವಾಗಿ ಒಂದೂ ಆಸೆಯು ಆತನ ಮನಸ್ಸಿನಲ್ಲಿ ಉಳಿಯುವುದಿಲ್ಲ. `ಕಡಿಮೆ ಹೊರೆ, ಹೆಚ್ಚು ಆರಾಮ’ ಎಂಬ ಗಾದೆಯಂತೆ. ಅಂದರೆ ಪ್ರಯಾಣದಲ್ಲಿ ಕಡಿಮೆ ಹೊರೆಯಿಂದ ಪ್ರಯಾಣ ಸುಖಕರವಾಗಿ ಆರಾಮದಾಯಕವಾಗಿರುತ್ತದೆ.

ನಿಮ್ಮ ಹೊರೆ ಎಂಬ ಆಸೆಯು ಕಡಿಮೆ ಆದಾಗ ಮಾತ್ರ, ಭಗವಂತನು ನಿಮ್ಮಲ್ಲಿ ಸಂತೃಪ್ತಿಗೊಳ್ಳುತ್ತಾನೆ. ಅತೀ ಆಸೆಯು ನಿಮ್ಮ ಜೀವನವನ್ನು ದೊಡ್ಡ ಹೊರೆಯನ್ನಾಗಿಸಿಕೊಂಡು ಜೀವನವು ದುಗ೵ಮಗೊಳ್ಳುತ್ತದೆ. ಕಡಿಮೆ ಆಸೆಯಿಂದ ನೀವು ಸಂತೋಷವಾಗಿರುತ್ತೀರಿ. ಒಬ್ಬ ಮದುವೆ ಆಗದ ಮನುಷ್ಯನು ಈ ರೀತಿ ಯೋಚಿಸುತ್ತಾನೆ. ‘ನನ್ನಲ್ಲಿ ಇರುವುದರಲ್ಲಿ ಸಂತೋಷದಲ್ಲಿರಬಹುದು. ಏನಿಲ್ಲದಿದ್ದರೂ ಬದುಕಬಹುದು.’ ಅದೇ ರೀತಿ ಒಬ್ಬ ಗೃಹಸ್ಥನಿಗೆ ಅನೇಕ ಚಿಂತನೆಗಳಿರುತ್ತವೆ. ಈ ಹೆಂಡತಿ ಮಕ್ಕಳು ಎಲ್ಲಿಂದ ಬಂದಿರುವರು? ನೀವು ಎಲ್ಲಿಂದ ಬಂದಿರುವಿರೋ ಅಲ್ಲಿಂದ ಅವರೂ ಬಂದಿರುವರು. ಒಬ್ಬಳನ್ನು ನೀವು ಹೆಂಡತಿ ಎಂದು ತಿಳಿಯುತ್ತೀರಿ. ಅವಳೊಂದಿಗೆ ನೀವು ಸಂಬಂಧಗಳನ್ನು ಬೆಳೆಸುವಿರಿ. ಎಲ್ಲಾ ಹೆಂಗಸರು ನಿಮ್ಮ ಹೆಂಡತಿಯರೇ? ಇಲ್ಲ, ಇಲ್ಲ. ನೀವು ಹಾಗೆ ಹೇಳಿದರೆ ನೀವು ಪೆಟ್ಟು ತಿನ್ನುವಿರಿ. ಹೀಗೆ ಮಾತನಾಡಬಾರದು. ಈ ಗಂಡ -ಹೆಂಡತಿ ಎಂಬ ಸಂಬಂಧ ದೇಹಕ್ಕೆ ಸೀಮಿತ. ಈ ಸಂಬಂಧದ ಬೆಸುಗೆಯಿಂದಲೇ ಅನೇಕ ಸಮಸ್ಯೆ ಉದ್ಭವಿಸುತ್ತದೆ. ಒಬ್ಬ ಹಣವಂತನನ್ನು ಶ್ರೀಮಂತನೆಂದು ಕರೆಯುತ್ತಾರೆ. ಅದೇ ಶ್ರೀಮಂತನಲ್ಲಿ ಹಣವಿಲ್ಲದೇ ಇರುವಾಗ ಆತನನ್ನು ಭಿಕ್ಷುಕನೆನ್ನುತ್ತಾರೆ. ಶ್ರೀಮಂತನಾದರೆ ನೀವು ದೊಡ್ಡವರಾಗಿರುತ್ತೀರಿ. ಬಡವನಾಗಿದ್ದರೆ ಭಿಕ್ಷುಕನ ಹಾಗೆ ಕಾಣುತ್ತೀರಿ. ಒಬ್ಬನೇ ಮನುಷ್ಯನನ್ನು ಶ್ರೀಮಂತ ಹಾಗೂ ಬಡವನೆಂದು ಕರೆಯಲ್ಪಡುತ್ತದೆ. ಸಮಚಿತ್ತತೆಯನ್ನು ಬೆಳೆಸಿಕೊಳ್ಳಿ, ಆಗ ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ. ಯಾರಾದರೂ ನಿಮಗೆ ವಿನಾಕಾರಣ ಹೊಡೆದರೂ, ಆ ಮನುಷ್ಯ ಬೇರಾರೂ ಅಲ್ಲ. ಭಗವಂತ ಎಂದು ತಿಳಿಯಬೇಕು. ಭಗವಂತ ನನಗೆ ಹೊಡೆದದ್ದು ನನ್ನಲ್ಲಿರುವ ದೋಷಕ್ಕಾಗಿ. ಈ ದೇಹವು ಮಾಡಿದ ತಪ್ಪಿಗಾಗಿ ಶಿಕ್ಷೆಯನ್ನು ಪಡೆಯಬೇಕಾಯಿತು ಎಂದು ತಿಳಿಯಬೇಕು.

ನಾವು ಮಾಡಿದ ಪ್ರತಿಯೊಂದು ಕಾಯ೵ವೂ ಪ್ರತಿಕ್ರಿಯೆ. ಪ್ರತಿಫಲ, ಪ್ರತಿಧ್ವನಿಯಾಗಿ ನಮಗೆ ಮರಳಿ ದೊರಕುತ್ತದೆ. ನಾವು ಈಗ ಅನುಭವಿಸುವುದು ಹಿಂದೆ ಮಾಡಿದ ಕಾಯ೵ದ ಫಲ. ಇದು ಭಗವಂತನು ದಯಪಾಲಿಸಿದ್ದಲ್ಲ. ಭಗವಂತನು ಆನಂದವನ್ನು ಬಿಟ್ಟು ಬೇರೇನೂ ಕೊಡುವುದಿಲ್ಲ.

ಭಗವಂತನ ಆನಂದವನ್ನು ಅನುಭವಿಸಿದ ಮೇಲೆ ಯಾರನ್ನೂ ದೂಷಿಸಬೇಡಿ. ಸುಖದು:ಖಗಳೆರಡೂ ನಿಮ್ಮ ಕಾಯಕದ ಪ್ರತಿಫಲವಾಗಿರುತ್ತದೆ. ಭಗವಂತನು ನಿಮ್ಮನ್ನು ಪ್ರೀತಿಸಿದ ಎಂದರೆ ಭಗವಂತ ಅವನನ್ನು ಪ್ರೀತಿಸಿದ ಎಂದಥ೵.

ದೇವರಿಗೆ ಯಾವುದೇ ಗುಣಲಕ್ಷಣಗಳಿಲ್ಲ. ಕೋಪ, ದ್ವೇಷ, ಅಸೂಯೆ ಮತ್ತು ಬೂಟಾಟಿಕೆ ಮುಂತಾದ ದುಷ್ಟ ಗುಣಗಳು ದೇವರಿಗೆ ಇಲ್ಲ. ಎಲ್ಲಾ ದುಷ್ಟ ಗುಣಗಳು ನಿಮಗೆ ದೇವರು ಕೊಟ್ಟದ್ದಲ್ಲ. ಇವೆಲ್ಲವೂ ನಿಮ್ಮ ಸ್ವಂತ ತಯಾರಿಕೆ. ಆದ್ದರಿಂದ ನಿಮ್ಮ ಭ್ರಮೆಯನ್ನು ತೊಡೆದು ಹಾಕಿ. “ನನ್ನ ಬಳಿ ಅದು ಇಲ್ಲ, ನನ್ನ ಬಳಿ ಇದು ಇಲ್ಲ” ಎಂಬ ಅನಗತ್ಯ ಚಿಂತನೆಗಳನ್ನು, ಆಲೋಚನೆಗಳನ್ನು ನೀವು ಬೆಳೆಸಿದ್ದಲ್ಲಿ, ನಿಮ್ಮನ್ನು ನೀವೇ ಮೋಸಗೊಳಿಸಿದಂತೆ. ನಿಮ್ಮ ಆಸೆ ಆಕಾಂಕ್ಷೆಗಳನ್ನು ಕಡಿಮೆ ಮಾಡಿ. ಆಗ ನೀವು ಹೆಚ್ಚು ಹೊರೆಗಳನ್ನು ಸಾಗಿಸಬೇಕಾಗಿಲ್ಲ. ಆಗ ಮಾತ್ರ ನೀವು ಸಂತೋಷವಾಗಿರಲು ಸಾಧ್ಯ.”

ಆತ್ಮತತ್ವವನ್ನು ತಿಳಿಯಿರಿ

ಭಗವಂತನ ಮೇಲೆ ನಿಜವಾದ ಪ್ರೇಮವಿದ್ದರೆ, ಆತ್ಮ ತತ್ವವನ್ನು ಅರಿಯಿರಿ. ಯಾವಾಗಲೂ ಅವನನ್ನೇ ಧ್ಯಾನಿಸಿ. ನಿಮಗೆ ರಾಮ ಇಷ್ಟವಾದರೆ ರಾಮನನ್ನೇ ಧ್ಯಾನಿಸಿ. ಅದೇ ರೀತಿ ಕೃಷ್ಣ ನಿನ್ನ ಆಯ್ಕೆಯ ದೇವರಾಗಿದ್ದರೆ, ಅವನ ಬಗ್ಗೆಯೇ ಆಲೋಚಿಸಿ. ಆದರೆ ಯಾವಾಗಲೂ ನೆನಪಿನಲ್ಲಿಡಿ ರಾಮ ಮತ್ತು ಕೃಷ್ಣ ಹೊರಗೆ ಇಲ್ಲ. ರಾಮ ಮತ್ತು ಕೃಷ್ಣ ನಿಮ್ಮ ಹೃದಯದಲ್ಲಿ ಇದ್ದಾರೆ. ನೀವು ರಾಮನ ಯಾವುದೇ ರೂಪವನ್ನು ಪರಿಗಣಿಸಿದರೂ, ಆ ರೂಪದ ಮೇಲೆ ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡಿರಿ. ನೀವು ಖಂಡಿತವಾಗಿಯೂ ಆ ರೂಪವನ್ನು ದಶಿ೵ಸುವಿರಿ. ಅಂತಿಮವಾಗಿ “ರಾಮ ಮತ್ತು ಕೃಷ್ಣರನ್ನು ನನ್ನಿಂದ ಪ್ರತ್ಯೇಕವಾಗಿ ಪರಿಗಣಿಸಿದ್ದು ನನ್ನ ಭ್ರಮೆ; ವಾಸ್ತವವಾಗಿ ನಾನೇ ರಾಮ” ಎಂಬುದರ ಅರಿವಾಗುತ್ತದೆ. ಯಾವಾಗ ನೀವು ರಾಮನನ್ನು ಧ್ಯಾನಿಸುವಿರೋ, ಆಗ ನಿಮ್ಮ ಆಲೋಚನೆಯ ಪ್ರತಿಬಿಂಬವಾಗಿ ಆ ರೂಪ ಕಾಣಿಸುತ್ತದೆ. ಅದೇ ರೀತಿ ಕೃಷ್ಣನನ್ನು ಆಲೋಚಿಸಿದಾಗ, ಕೃಷ್ಣನ ರೂಪವೇ ನಿಮಗೆ ಕಾಣಿಸುತ್ತದೆ. ನಿಮ್ಮ ಭ್ರಮೆಯಿಂದಲೇ ರಾಮ ಮತ್ತು ಕೃಷ್ಣರು ಬೇರೆ ಬೇರೆ ಎಂಬ ಆಲೋಚನೆ ಉದಯಿಸುವುದು.

ರಾಮನನ್ನು ಯಾರು ನೋಡಿದ್ದಾರೆ? ಕೃಷ್ಣನನ್ನು ಯಾರು ಕಂಡಿದ್ದಾರೆ? ಪವಿತ್ರ ಗ್ರಂಥಗಳ ವಿವರಣೆಯ ಅಧಾರದಿಂದ ಕಲಾವಿದ ರವಿವಮ೵ ಅವರನ್ನು ಚಿತ್ರಿಸಿದ್ದಾರೆ. ಇವು ಬರೇ ಚಿತ್ರಗಳಷ್ಟೇ. ಅವು ಸತ್ಯವನ್ನು ಬಿಡಿಸಿಡಲಿಲ್ಲ. ಅವರವರ ಆಯ್ಕೆಯಂತೆ ಪ್ರತಿಯೊಬ್ಬರೂ ‘ರಾಮ, ಕೃಷ್ಣ, ಗೋವಿಂದ’ ಎಂಬ ಹೆಸರಿನಿಂದ ಕರೆಯಬಹುದಲ್ಲದೆ ನಿದಿ೵ಷ್ಟ ರೂಪ ನಾಮಗಳಿಂದ ಧ್ಯಾನಿಸಬಹುದು. ಅದರಲ್ಲಿ ಯಾವ ತಪ್ಪೂ ಇಲ್ಲ. ಈಗಿನ ಅಭ್ಯಾಸವನ್ನು ಬಿಡಬೇಕೆಂದು ನಾನು ಹೇಳುವುದಿಲ್ಲ. ನಿಮಗೆ “ನಾನು ದೇವರು, ನನ್ನ ಆತ್ಮ ಕೂಡಾ ದೇವರು” ಎಂಬ ದೃಢವಾದ ನಿಧಾ೵ರವಿರಬೇಕು. ಆತ್ಮಕ್ಕೆ ಯಾವ ರೂಪವೂ ಇಲ್ಲ. ಬರೇ ಹೆಸರು ಮಾತ್ರ. ಪ್ರತಿಯೊಬ್ಬರಲ್ಲೂ ಸೂಯ೵ನಂತೆ ಆತ್ಮ ಹೊಳೆಯುತ್ತಿರುತ್ತದೆ. ಇದು ಪವಿತ್ರವಾದ ಹೃದಯದಿಂದ ಮಾತ್ರ ಕಾಣಲು ಸಾಧ್ಯ. ಅಪವಿತ್ರರಿಗೆ ಇದು ಕಾಣಸಿಗದು.

ಈ ಸತ್ಯವನ್ನು ಪ್ರವಹಿಸಲು ಹಲವು ದೈವೀ ಅವತಾರಗಳಾಗಿವೆ. ಸತ್ಯದ ಜ್ಞಾನವನ್ನು ಎಲ್ಲರಿಗೂ ನೀಡುವ ಸಲುವಾಗಿ ಬಂದಿದ್ದರೇ ಹೊರತು, ಅವರಿಗೋಸ್ಕರವಾಗಿ ಅವತಾರಗಳು ಧರೆಗಿಳಿಯಲಿಲ್ಲ ಅವರ ಉಪದೇಶಗಳನ್ನು ಅರಿತು ಅನುಸರಿಸಿರಿ. ಆತ್ಮತತ್ವವನ್ನು ಅಥ೵ ಮಾಡಿಕೊಳ್ಳಿರಿ. ಆತ್ಮತತ್ವವೇ ವಾಸ್ತವವೆಂದು ವೇದಾಂತಗಳು ಘೋಷಿಸಿವೆ.

ನೀರಿನಿಂದ ಅಲೆಗಳು ಉಂಟಾಗುತ್ತವೆ. ನೀರು ಇಲ್ಲವಾದರೆ ಅಲೆಗಳೇ ಇರುತ್ತಿರಲಿಲ್ಲ. ಅದೇ ರೀತಿ ಆತ್ಮ ಇಲ್ಲವಾದರೆ ರೂಪವೂ ಇರಲು ಸಾಧ್ಯವಿಲ್ಲ. ನೀವು ಆತ್ಮನ ಮೇಲೆ ಧ್ಯಾನಿಸಬೇಕು ಮತ್ತು “ಓಂ ನಮೋ ನಾರಾಯಣಾಯ (೩)” ಎಂಬ ಮಂತ್ರವನ್ನು ಉಚ್ಛರಿಸಬೇಕು. ಪೂಣ೵ ಮಂತ್ರವನ್ನು ಹೇಳಲು ಸಾಧ್ಯವಾಗದೇ ಇದ್ದಲ್ಲಿ “ಓಂ” ಪಠಿಸಿದರೂ ಸಾಕು. ಯಾಕೆಂದರೆ “ಓಂ” ನಲ್ಲಿ ಪ್ರತಿಯೊಂದೂ ಅಂತಗ೵ತವಾಗಿದೆ. ಆದಿಸ್ವರೂಪ “ಪ್ರಣವ” ವನ್ನು “ಓಂ” ಸೂಚಿಸುತ್ತದೆ. ಉಪನಿಷತ್ತುಗಳು ಅದನ್ನು ಆತ್ಮ ಎಂದು ವಿವರಿಸಿವೆ. ತೈತ್ರೇಯ ಉಪನಿಷತ್ತಿನಲ್ಲಿ ಇದನ್ನು ಸವಿಸ್ತಾರವಾಗಿ ತಿಳಿಸಲಾಗಿದೆ. ಅವತಾರಗಳ ಕಥೆಗಳಾದ ರಾಮಾಯಣ, ಮಹಾಭಾರತ, ಭಾಗವತಗಳು ಇದೇ ಸತ್ಯವನ್ನು ವ್ಯಕ್ತಪಡಿಸುತ್ತವೆ. ಎಲ್ಲವೂ ನಮ್ಮ ಒಳಗೇ ಇದೆ. ಹೊರಗೇನೂ ಇಲ್ಲ. ಸಂಪೂಣ೵ ಸೃಷ್ಟಿ ಒಂದೇ. ನಿಮ್ಮ ಭ್ರಾಂತಿಯನ್ನು ತೊಲಗಿಸಿಕೊಳ್ಳಿ ಮತ್ತು ನಾಮರೂಪಗಳ ಹಿಂದಿರುವ ಸತ್ಯವನ್ನು ಅಥ೵ಮಾಡಿಕೊಳ್ಳಲು ಪ್ರಯತ್ನಿಸಿ. ಹೆಸರು ಮತ್ತು ರೂಪವನ್ನು ಬೇಪ೵ಡಿಸಲಾಗುವುದಿಲ್ಲ. ನೀವು ಸಾಯಿರಾಮ್ ಎಂದು ಪಠಿಸಿರಿ. ಈ ಹೆಸರು ನನಗೆ ಇಡಲ್ಪಟ್ಟಿದೆ. ನಾನು ಈ ಹೆಸರಿನಿಂದ ಹುಟ್ಟಿಲ್ಲ. ಅದೆ ರೀತಿ ರಾಮ, ಕೃಷ್ಣರ ಹೆಸರುಗಳು ಅವರ ಹೆತ್ತವರಿಂದ ದಕ್ಕಿದವು. ಅವರೂ ಆ ಹೆಸರಿನಿಂದ ಹುಟ್ಟಿಬರಲಿಲ್ಲ. ನಾನು ರಾಮ ಎಂದು ಬಂದಾಗಲೇ ಹೇಳಿದ್ದನೇ? ಎಂದೂ ಇಲ್ಲವೇ ಇಲ್ಲ. ಅವನು ದಶರಥನ ಮಗನಾಗಿದ್ದನು. ರಾಮನೆಂಬ ಹೆಸರನ್ನು ಅವನಿಗೆ ಇಡಲಾಯಿತು. ದಶರಥ ಎಂಬ ಶಬ್ದದ ಅಥ೵ವೇನು? ಇದರ ಅಥ೵ ಹತ್ತು ಇಂದ್ರಿಯಗಳನ್ನು ಒಳಗೊಂಡ ದೇಹವೆಂಬ ರಥ. ನಿನ್ನ ಇಂದ್ರಿಯಗಳನ್ನು ಸಂಯಮದಲ್ಲಿಡು. ಸಂಪೂಣ೵ವಾಗಿ ಇಂದ್ರಿಯಗಳನ್ನು ಸಂಯಮದಲ್ಲಿ ಇರಿಸಿಕೊಂಡಾಗ, ಬೇರೆ ಯಾವುದರ ಅವಶ್ಯಕತೆಯೂ ಇರುವುದಿಲ್ಲ. ನೀನು ನಿನ್ನನ್ನೇ ಮರೆಯಬಹುದು. ನೀನು ನಿನ್ನ ಭೌತಿಕ ಶರೀರವನ್ನೇ ಮರೆಯಬಹುದು. ದೇಹ ಮತ್ತು ಇಂದ್ರಿಯಗಳನ್ನು ಮನಸ್ಸು ಹತೋಟಿಯಲ್ಲಿಡುತ್ತದೆ. ದೇಹ ಮತ್ತು ಇಂದ್ರಿಯಗಳು ತಾತ್ಕಾಲಿಕವಾದದ್ದು. ಮನಸ್ಸು ಕೂಡ ನಾಶದ ವಸ್ತುವೇ ಆಗಿದೆ. ನಾವು ಹೇಳುತ್ತೇವೆ. “ಮನಸ್ಸು, ಮನಸ್ಸು, ಮನಸ್ಸು” ಎಂದು. ಮನಸ್ಸು ಎಲ್ಲಿದೆ? ಮನಸ್ಸಿನ ರೂಪವೇನು? ಅದಕ್ಕೆ ರೂಪವೇ ಇಲ್ಲ. ಮನಸ್ಸೆಂಬುದೇ ಒಂದು ಭ್ರಮೆ. ಈ ವಿಚಾರದಲ್ಲಿ ಭಗವಂತ ಒಬ್ಬನೇ ಎಂಬುದು

ಅಥ೵ವಾಗುತ್ತದೆ. ಇದುವೇ ಸತ್ಯ. ಬೇರೆ ಎಲ್ಲವೂ ಮಾಯೆ. ಸಿನಿಮಾದಲ್ಲಿ ತೆರೆಯ ಮೇಲೆ ಬಹಳ ದೃಶ್ಯಗಳನ್ನು ಕಾಣುತ್ತೇವೆ. ಸೀತೆ ರಾಮನನ್ನು ಮದುವೆಯಾಗುವುದನ್ನು ನೋಡುತ್ತೇವೆ. ರಾವಣ ಸೀತೆಯನ್ನು ಅಪಹರಿಸುವುದು, ರಾಮ ರಾವಣನ ವಿರುದ್ಧ ಯುದ್ಧವನ್ನು ಸಾರುವುದು ಮತ್ತು ರಾಮನ ಹಲವು ಸ್ನೇಹಿತರು ಯುದ್ಧದಲ್ಲಿ ಭಾಗಿಯಾಗಿರುತ್ತಾರೆ. ಆದರೆ ಇವೆಲ್ಲವೂ ಕೂಡ ಬರೀ ಚಿತ್ರಗಳಾಗಿರುತ್ತವೆ. ವಾಸ್ತವಿಕದಲ್ಲಿ ಅದ್ಯಾವುದೂ ನಡೆದಿರುವುದಿಲ್ಲ. ಹಲವು ಜನರು ಅಲ್ಲಿರುವುದಿಲ್ಲ. ಎಲ್ಲರೂ ಒಂದೇ. “ಏಕಂ ಸತ್…… ನೀನು ಸತ್ಯವನ್ನು ಪಾಲಿಸಿದಾಗ, ಧಮ೵ ಅದರಿಂದ ಹೊರಹೊಮ್ಮುತ್ತದೆ. ಸತ್ಯ ಮತ್ತು ಧಮ೵ಒಟ್ಟಿಗೆ ಬಂದಾಗ ಶಾಂತಿ ಅಭಿವ್ಯಕ್ತವಾಗುತ್ತದೆ, ಎಲ್ಲಿ ಶಾಂತಿ ಇದೆಯೋ ಅಲ್ಲಿ ಪರಮ ಆನಂದವಿರುತ್ತದೆ. ಋಣಾತ್ಮಕ ಮತ್ತು ಧನಾತ್ಮಕ ಶಕ್ತಿಗಳು ಒಟ್ಟಿಗೆ ಬಂದಾಗ ಬೆಳಕು ಉತ್ಪತ್ತಿಯಾಗುತ್ತದೆ. ಪ್ರೇಮದಿಂದ ಶಾಂತಿ ಹೊರಹೊಮ್ಮುತ್ತದೆ. ಯಾರಲ್ಲಿ ಶಾಂತಿಯ ಕೊರತೆ ಇದೆಯೋ, ಅವರಲ್ಲಿ ಪ್ರೇಮ ಇರುವುದಿಲ್ಲ. ನಮ್ಮಲ್ಲಿ ಪ್ರೇಮ ವ್ಯಕ್ತವಾದಾಗ ಪ್ರತಿಯೊಬ್ಬರನ್ನೂ ನಮ್ಮವರೆಂದೇ ಪರಿಗಣಿಸುತ್ತೇವೆ. ಎಲ್ಲರೂ ಕೂಡಾ ನಮ್ಮ ರೂಪಗಳೇ. ಎಲ್ಲರೂ ಒಂದೇ. ಪ್ರತಿಯೊಬ್ಬರಿಗೂ ಸಮಾನವಾಗಿರು. ಈ ಸತ್ಯವನ್ನು ಅಥ೵ಮಾಡಿಕೊಳ್ಳಲು ಪ್ರಯತ್ನ ಮಾಡು. ಯಾವಾಗಲೂ ಗಾಳಿ ಬೀಸಿದಾಗ ಒಣಗಿದ ಎಲೆಗಳು ಹಾರಿ ಹೋಗುತ್ತವೆಯೋ ಹೊರತು ಹಸಿರು ಎಲೆಗಳಲ್ಲ. ಅವುಗಳು ಶಾಖೆಯೊಂದಿಗೆ ಉಳಿದುಕೊಳ್ಳುತ್ತವೆ. ನಿನ್ನ ಮಾನವೀಯತೆ ಗಾಳಿಗೆ ಹಾರಿ ಹೋದ ಒಣಗಿದ ಎಲೆಯಂತಿರಬಾರದು. ಪ್ರತಿಯೊಂದು ದೈವಿಕ ರಹಸ್ಯವಾದುದು.

  • ಶ್ರೀ ರಾಮನ ಕಥೆಗಳು ಅದ್ಭುತವಾದದ್ದು.,
  • ಜಗತ್ತಿನಲ್ಲಿರುವ ಎಲ್ಲಾ ಜನರ ಜೀವನವನ್ನು ಅದು ಪವಿತ್ರಗೊಳಿಸುತ್ತದೆ.,
  • ಪ್ರಾಪಂಚಿಕ ಬಂಧನದ ಬಳ್ಳಿಗಳನ್ನು ಕತ್ತಿಯಿಂದ ಕತ್ತರಿಸಿದ ಹಾಗೇ.,
  • ಅದು ನಿನ್ನ ಒಳ್ಳೆಯ ಸ್ನೇಹಿತ. ಅಗತ್ಯವಿರುವ ಸಮಯದಲ್ಲಿ ಸಹಾಯಮಾಡಿದ ಹಾಗೆ.,
  • ಕಾಡಿನಲ್ಲಿ ತಪಸ್ಸು ಮಾಡುವ ಸಾಧು ಸಂತರಿಗೆ ಆಶ್ರಯ ಕೊಟ್ಟ ಹಾಗೆ (ತೆಲುಗು ಪದ).

ದೃಢ ಭಕ್ತಿಯನ್ನು ಬೆಳೆಸಿಕೊಳ್ಳಿರಿ

ಒಂದು ನಾಯಿ ಅನೇಕ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿ ಅಲ್ಲಿ ಹಲವು ನಾಯಿಗಳು ಇಲ್ಲದಿದ್ದರೂ ಇವೆ ಎಂದು ಭ್ರಮಿತಗೊಳುತ್ತದೆ. ನಿಮ್ಮ ಮನಸ್ಸು ನಾಯಿಯಂತೆ ಭ್ರಮೆಗೆ ಒಳಗಾಗಲು ಬಿಡಬೇಡಿ. ನೀವು ನಾಯಿಯನ್ನು ನಾಯಿಯೆಂದೇ ತಿಳಿಯುತ್ತೀರಿ. ಆದರೆ ದೇವರು ಅದರೊಳಗೂ ಇರುತ್ತಾನೆ. ಮಿಡಿತವಿಲ್ಲದೆ (ಕಂಪನ) ನಾಯಿಗಳು ಕೂಡ ಬದುಕಿರಲಾರವು. ಹಾಗಾದರೆ ಆ ಮಿಡಿತ ಎಂದರೇನು? ಅದು ಜೀವಂತವಾಗಿರಲು ಅಗತ್ಯವಾದ ಜೀವನಾಂಶವಾಗಿದೆ. ಇದೇ ಜೀವನಾಂಶದಿಂದಾಗಿಯೇ ನಾಯಿಯು ತಿನ್ನುತ್ತದೆ, ತಿರುಗಾಡುತ್ತದೆ. ಆದ್ದರಿಂದ ಯಾರನ್ನು ಕೂಡಾ ಅವನು ಭಿಕ್ಷುಕ, ಶ್ರೀಮಂತ, ಹೊರಗಿನವ ಎಂಬ ಭೇದ ಭಾವನೆಯಿಂದ ನೋಡಬೇಡಿ.

ಎಲ್ಲರೂ ಒಂದೇ ಎಂದು ಅರಿಯಿರಿ. ಆಗ ಮಾತ್ರ ನೀವು ಒಬ್ಬ ನಿಜವಾದ ಧೃಢವಿಶ್ವಾಸವುಳ್ಳ ಭಕ್ತನಾಗಲು ಸಾಧ್ಯ. ಇಲ್ಲವಾದರೆ ಭಾವನೆಗಳ ಏರಿಳಿತಗಳನ್ನು ಅನುಭವಿಸಬೇಕಾಗುವುದು.

ಹಾಗಾದಾಗ ಭಕ್ತಿಯಲ್ಲೂ ಕ್ಷಣಕ್ಷಣಕ್ಕೆ ಬದಲಾವಣೆ ಆಗುತ್ತದೆ. ಹಲವು ಜನರು, ತಮ್ಮನ್ನು ತಾವು ಭಕ್ತರು ಎಂದು ತಿಳಿದುಕೊಳ್ಳುತ್ತಾರೆ. ಎಲ್ಲಿಯವರೆಗೆ ಅವರಿಗೆ ಭಗವಂತನಲ್ಲಿ ವಿಶ್ವಾಸವಿರುತ್ತದೆಯೋ ಅಲ್ಲಿಯವರೆಗೆ ಅವರ ಭಕ್ತಿ ದೃಢವಾಗಿರುತ್ತದೆ. ಅವರ ಭಕ್ತಿಯು ಅಲುಗಾಡಿದಾಗ ಮನಸ್ಸು ಕೂಡಾ ಹದಗೆಡುತ್ತದೆ, ಚಂಚಲವಾಗುತ್ತದೆ. ದೃಢ ವಿಶ್ವಾಸವು ಏನೇ ಬಂದರೂ ಯಾವುದೇ ಪರಿಸ್ಥಿತಿಯಲ್ಲೂ ನಮ್ಮನ್ನು ಕತ್ತರಿಸಿ ತುಂಡರಿಸುವ ಸಂದಭ೵ ಬಂದರೂ ಸ್ಥಿರವಾಗಿರಬೇಕು. ಅಂತಹ ನಿಸ್ವಾಥ೵ ದೃಢ ಭಕ್ತಿಯನ್ನು ಬೆಳೆಸಿಕೊಳ್ಳಿರಿ.

ಏಸುವಿನ ಉಪದೇಶವೂ ಕೂಡಾ ಇದೇ ತೆರನಾಗಿದೆ. ದೇವರು ಒಬ್ಬನೇ ಅವನನ್ನು ಸಾಕ್ಷಾತ್ಕರಿಸಲು ನಮ್ಮೊಳಗಿರುವ ಅಹಂಕಾರವನ್ನು ತುಂಡರಿಸಬೇಕು. ಇದುವೇ ಶಿಲುಬೆಯ ಸಂಕೇತವಾಗಿದೆ. ನಂಬಿಕೆ (ವಿಶ್ವಾಸ) ಕಳೆದುಕೊಳ್ಳದೆ ದೃಢವಾಗಿದ್ದರೆ, ನೀವು ಖಂಡಿತವಾಗಿಯೂ ನಿಮ್ಮ ನಿಜ ಸ್ವರೂಪವನ್ನು ತಿಳಿಯುತ್ತೀರಿ. ಮಾನವನು ಮಾನವತ್ವವನ್ನು ಸ್ಥಾಪಿಸಲು ಜನಿಸಿದ್ದಾನಲ್ಲದೆ ಅದನ್ನು ಹಾಳುಗೆಡವಲು ಅಲ್ಲ.

ಭಗವತ್ಪ್ರೇಮವೇ ಬದುಕಿನ ಪರಮ ಗುರಿ

ಸತ್ಯ, ಧಮ೵, ಶಾಂತಿ ಪ್ರೇಮ ಮತ್ತು ಅಹಿಂಸೆ ಎಂಬ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿರಿ. ಯಾವಾಗ ಸತ್ಯವು ಧಮ೵ದೊಂದಿಗೆ ಮಿಳಿತವಾಗುವುದೋ ಆಗ ಅಲ್ಲಿ ಶಾಂತಿ ಮತ್ತು ಪ್ರೇಮವು ಉದಯಿಸುವುದು. ಪ್ರೇಮವೇ ಎಲ್ಲರನ್ನೂ ಒಗ್ಗೂಡಿಸುವುದು. ಕೋಪಗೊಂಡಾಗ ನೀನು ನಿನ್ನ ಮಗನನ್ನು ಕೊಲ್ಲುವೆಯೇನು? ಇಲ್ಲ. ಇಲ್ಲಿ ನೀನು ಅವನನ್ನು ಬೈಯಬಹುದು. ಆದರೆ ಅವನಿಗೆ ಹಾನಿ ಮಾಡಲಾರೆ. ಅದೇ ರೀತಿ ನಿಮ್ಮೊಳಗಡೆ ಪ್ರೇಮವಿದ್ದಾಗ ನೀವು ಎಲ್ಲರನ್ನು ನಿಮ್ಮವರೇ ಎಂದು ಭಾವಿಸುತ್ತೀರಿ. ಪ್ರತಿ ಮಹಿಳೆಯನ್ನು ನಿಮ್ಮದೇ ತಾಯಿ, ಸಹೋದರಿ ಎಂಬಂತೆ ವ್ಯವಹರಿಸಿರಿ. ತಾಳ್ಮೆಯೇ ಈ ಪವಿತ್ರ ಭರತಖಂಡದ ಸೌಂದಯ೵ವಾಗಿದೆ. ಎಲ್ಲಾ ಧಮಾ೵ಚರಣೆಗಳಲ್ಲಿ ಸತ್ಯನಿಷ್ಠವಾಗಿರುವುದೇ ಶ್ರೇಷ್ಠ ಯಜ್ಞವಾಗಿದೆ. ಈ ದೇಶದಲ್ಲಿ ಮಧುರಭಾವನೆ ಎಂದರೆ ತನ್ನ ತಾಯಿಯ ಮೇಲೆ ಮಗುವಿಗಿರುವ ಪ್ರೇಮ ಭಾವನೆಯಾಗಿದೆ. (ತೆಲುಗು ಕವಿತೆ) ಅಂತಹ ಮಧುರ ಪ್ರೇಮ ಭಾವನೆಯನ್ನು ಎಲ್ಲಾ ಮಹಿಳೆಯರಿಗೂ ತೋರಿಸಿರಿ. (ಒಬ್ಬ ಮಹಿಳೆಯನ್ನು ನೀವು ಮದುವೆಯದಾಗ ಮಾತ್ರಾ ಅವಳನ್ನು ಪತ್ನಿ ಎಂದು ಕರೆಯುವಿರಿ. ಇಲ್ಲವಾದರೆ) ಎಲ್ಲಾ ಮಹಿಳೆಯರು ನಿಮ್ಮ ತಾಯಂದಿರು ಮತ್ತು ಸಹೋದರಿಯರು ಎಂದೇ ಭಾವಿಸಿರಿ. ದೇವರು ಒಬ್ಬನೇ ಅವನನ್ನು ಹೊರತುಪಡಿಸಿ ಉಳಿದವರು ಯಾರೂ ಪುರುಷರಲ್ಲ.

ಒಮ್ಮೆ ಗೋಪಿಕಾ ಸ್ತ್ರೀಯರು ಕೃಷ್ಣನ ಮನೆಗೆ ಅವನನ್ನು ಕಾಣಲು ಬಂದರು. ಅವನ ಮನೆಗೆ ಗೋಪಿಕೆಯರು ಪ್ರವೇಶಿಸಲು ಯತ್ನಿಸಿದಾಗ ದ್ವಾರಪಾಲಕರು “ಸ್ತ್ರೀಯರಿಗೆ (ಹೆಂಗಸರಿಗೆ) ಮನೆಯೊಳಗೆ ಪ್ರವೇಶವಿಲ್ಲ” ಎಂದು ಹೇಳಿ ತಡೆದನು. ಆಗ ಗೋಪಿಕಾ ಸ್ತ್ರೀಯರು “ಹಾಗಾದರೆ ನೀನು ಹೇಗೆ ಇಲ್ಲಿರಲು ಸಾಧ್ಯ?” ಎಂದು ಪ್ರಶ್ನಿಸಿದರು. ದ್ವಾರಪಾಲಕನು “ನಾನು ಪುರುಷ” ಎಂದು ಉತ್ತರಿಸಿದನು. ಆಗ ಗೋಪಿಕೆಯರು “ಪುರುಷರ ಉಡುಪನ್ನು ತೊಟ್ಟುಕೊಂಡ ಮಾತ್ರಕ್ಕೆ ನಿನ್ನನ್ನು ನೀನು ಪುರುಷ ಎಂದು ಕರೆದುಕೊಳ್ಳಲು ಸಾಧ್ಯವಿಲ್ಲ. ನಿನ್ನಲ್ಲೂ ನಮ್ಮಲ್ಲೂ ಇರುವ ಪಂಚಭೂತಗಳು ಪಂಚತನ್ಮಾತ್ರೆಗಳು ಒಂದೇ. ನೀನು ಪುರುಷರ ವಸ್ತ್ರ ಮತ್ತು ನಾವು ಸ್ತ್ರೀಯರ ವಸ್ತ್ರ ಧರಿಸಿಕೊಂಡ ಮಾತ್ರಕ್ಕೆ ನಾವು ನಿನ್ನಿಂದ ಭಿನ್ನವಾಗಲು ಹೇಗ ಸಾಧ್ಯ? ಒಂದೇ ದೈವತ್ವ ನಿನ್ನಲ್ಲೂ ನಮ್ಮಲ್ಲೂ ಇದೆ ನಿಜವಾಗಿ ಹೇಳುವುದಾದರೆ ಕೃಷ್ಣನೊಬ್ಬನೇ ಪುರುಷನಾಗಿದ್ದಾನೆ, ಉಳಿದವರೆಲ್ಲರೂ ಸ್ತ್ರೀಯರು” ಎಂದರು.

[From Bhagawan’s Divine Discourse in Sai Sruthi, Kodaikanal on 29 April 2009].

Leave a Reply

Your email address will not be published. Required fields are marked *