ಕೃತಜ್ಞತೆ

Print Friendly, PDF & Email
ಕೃತಜ್ಞತೆ

ಕೃತಜ್ಞತೆ ಎನ್ನುವುದೊಂದು ದೈವೀ ಗುಣ. ಇದನ್ನು ಸ್ವಾಮಿಯವರ ಕಾರ್ಯದಲ್ಲಿ ಬಹಳವಾಗಿ ಕಾಣುತ್ತೇವೆ.

ವರ್ಷಗಳ ಹಿಂದೆ ಬಾಬಾರವರು ಭಕ್ತರ ಸಮೂಹದೊಡನೆ ಹಾರ್ಸ್ಲೇ ಹಿಲ್ಸ್ನಲ್ಲಿ ತಂಗಿದ್ದರು. ಈ ಸುಂದರ ರಮಣೀಯ ಪ್ರದೇಶವು ಸಮುದ್ರಮಟ್ಟದಿಂದ ೩೮೦೦ ಅಡಿಗಳ ಎತ್ತರದಲ್ಲಿದೆ.

ಬೆಟ್ಟ ಗುಡ್ಡಗಳ ಮಧ್ಯದಲ್ಲಿರುವ ಈ ಶಿಬಿರ ಪ್ರದೇಶವನ್ನು ಸೇರಬೇಕಾದರೆ ಜೀಪ್ನಲ್ಲಿ ಮಾತ್ರ ಸಾಧ್ಯ. ಬೆಟ್ಟಗಳ ಬುಡದಲ್ಲಿರುವ ಸಣ್ಣ ಸಣ್ಣ ಹಳ್ಳಿಗಳಿಂದ ಗ್ರಾಮಸ್ಥರು ಆಹಾರ ಮತ್ತು ನೀರನ್ನು ಮೇಲಕ್ಕೆ ತರಬೇಕಾಗುತ್ತದೆ. ಬೆಟ್ಟದ ಮೇಲಿನ ಬಂಗಲೆಯಲ್ಲಿರುವ ಕೋಣನ ಮೇಲೆ ತೂಗು ಹಾಕಿದ ಚರ್ಮದ ಚೀಲಗಳಲ್ಲಿ ನೀರು ತುಂಬಿ, ದಿನಕ್ಕೆ ಹಲವಾರು ಬಾರಿ ನೀರನ್ನು ಸಾಗಿಸಬೇಕಾಗುತ್ತದೆ.

ಅವರ ವಿವೇಕಯುತವೂ ಮಧುರವೂ ಆದ ಮಾತುಗಳನ್ನು ಕೇಳುತ್ತಾ ಬಾಬಾರವರ ಜೊತೆ ಕಳೆದ ಆ ಪ್ರಶಾಂತ, ಆನಂದಮಯ ದಿನಗಳನ್ನು ಪ್ರತಿಯೊಬ್ಬರೂ ಅನುಭೋಗಿಸಿದರು.

ವಾಪಸ್ ಹೊರಡುವ ಕಾಲ ಬಂದಿತು. ಎಲ್ಲರೂ ಒಟ್ಟಿಗೆ, ನಡೆಯುತ್ತಾ ಕೆಳಗಿಳಿಯಲು ಬಾಬಾರವರು ಸೂಚಿಸಿದರು. ಎಲ್ಲರೂ ಹೊರಟರು. ಇದ್ದಕ್ಕಿದ್ದಂತೆ, “ಸ್ವಲ್ಪ ಇರಿ. ಒಂದು ನಿಮಿಷ, ನಾನು ಬಂದು ಬಿಡುತ್ತೇನೆ. ಪ್ರಮುಖ ವ್ಯಕ್ತಿಯೊಬ್ಬರಿಗೆ ಹೇಳಿ ಬರಬೇಕು,” ಎಂದು ಹೇಳಿದರು. ಕೆಲವು ಭಕ್ತರು ಅವರನ್ನು ಸದ್ದಿಲ್ಲದೆ ಹಿಂಬಾಲಿಸಿದರು. ಬಾಬಾರವರು, ನೀರು ಹೊತ್ತು ತರುತ್ತಿದ್ದ ಆ ಕೋಣನ ಬಳಿ ಹೋದರು. ಅವರು ಅದನ್ನು ತಟ್ಟುತ್ತಾ, “ಬಂಗಾರು, ನೀನು ನನಗೆ ಒಳ್ಳೆಯ ಸೇವೆ ಮಾಡಿದ್ದೀಯೆ,” ಎಂದು ಹೇಳಿದರು. (ಬಂಗಾರು ಎಂದರೆ ಚಿನ್ನ. ಅದು ಅತ್ಯಂತ ಪ್ರೇಮದಿಂದ ಹೇಳುವ ಪದ.)

ಅದೆಷ್ಟೇ ಸಣ್ಣ ಸೇವೆಯಾದರೂ ಬಾಬಾರವರು ಅದನ್ನು ಗಮನಿಸುತ್ತಾರೆ, ಮೆಚ್ಚುತ್ತಾರೆ.

[Source : Lessons from the Divine Life of Young Sai, Sri Sathya Sai Balvikas Group I, Sri Sathya Sai Education in Human Values Trust, Compiled by: Smt. Roshan Fanibunda]

Leave a Reply

Your email address will not be published. Required fields are marked *