ರಾವಣನ ಪತನ

Print Friendly, PDF & Email
೧೨. ರಾವಣನ ಪತನ

Ravana Meets His End

ರಾಕ್ಷಸರಿಗೂ ವಾನರರಿಗೂ ಭೀಕರ ಕಾಳಗವು ಪ್ರಾರಂಭವಾಯಿತು. ಸುಗ್ರೀವ, ಹನುಮಂತ, ಅಂಗದ, ಜಾಂಬವಂತ ಮತ್ತು ಇತರ ವಾನರ ಮುಖಂಡರಿಂದ ರಾವಣನ ಬಲಿಷ್ಠ ಸೇನಾನಿಗಳು ಒಬ್ಬೊಬ್ಬರಾಗಿ ಮೃತಿಯನ್ನೈದಿದರು. ಯುದ್ಧದ ಗತಿ ರಾಕ್ಷಸರಿಗೆ ಪ್ರತಿಕೂಲವಾಗಿ ಹೋಗುತ್ತಿರುವುದು ರಾವಣನಿಗೆ ತೋರಿತು.

ತನ್ನ ಮುಖ್ಯ ಸೈನ್ಯಾಧಿಕಾರಿ ಪ್ರಹಸ್ಥನು ಯುದ್ಧದಲ್ಲಿ ಕೊಲ್ಲಲ್ಪಟ್ಟಾಗ ರಾವಣನೇ ಸೈನ್ಯದ ಮುಂದಾಳಾಗಿ ಯುದ್ಧ ಭೂಮಿಯನ್ನು ಪ್ರವೇಶಿಸಿದನು. ರಾವನು ರಾವಣನನ್ನು ಮೊದಲ ಬಾರಿ ಕಂಡನು. ಅವನಲ್ಲಿ ಗೌರವವೂ ಮೆಚ್ಚಿಗೆಯೂ ಮೂಡಿಬಂದವು. ಆತನ ಪಾಪಕೃತ್ಯವೊಂದನ್ನು ಬಿಟ್ಟರೆ ಎಂಥ ಬಲಾಡ್ಯ ವ್ಯಕ್ತಿ ಅವನು. ಹೀಗೆ ರಾಮನು ಯೋಚಿಸಿದನು. ರಾಮ-ರಾವಣರು ಎದುರುಬದುರಾಗಿ ನಿಂತರು. ರಾವಣನ ಕಿರೀಟವನ್ನು ಭಂಗಿಸಿ ರಥವನ್ನು ಪುಡಿ ಮಾಡಿ ರಾಮನು ಆತನ ಎಲ್ಲ ಆಯುಧಗಳನ್ನು ನಾಶ ಮಾಡಿದಾಗ ರಾವಣನು ಗಾಬರಿಗೊಂಡು ನಿರುಪಾಯನಾಗಿ ನಿಂತನು.

ಆದರೆ ರಾಮನು ದಯಾದ್ರ೵ನಾಗಿ ಅವನಿಗೆ ಹೇಳಿದನು. “ರಾವಣ, ನಾನು ನಿಃಶಸ್ತ್ರನಾದ ಯೋಧನೊಂದಿಗೆ ಕದನ ಮಾಡೆನು, ಹೋಗು ನೂತನ ಶಸ್ತ್ರಾಸ್ತ್ರಗಳೊಂದಿಗೆ ನಾಳೆ ಮರಳಿ ಬಾ.” ಅಧೀರನಾಗಿ ರಾವಣನು ತನ್ನ ಅರಮನೆಗೆ ಮರಳಿದನು.

ರಾವಣನ ಮನದಲ್ಲಿ ಬಿರುಗಾಳಿ ಬೀಸುತ್ತಿತ್ತು. ಅಂದಿನವರೆಗೂ ಅವನನ್ನು ಯಾರೂ ಸೋಲಿಸಿರಲಿಲ್ಲ. ತಾನು ತಪ್ಪಿತಸ್ಥನೆಂಬ ಅನಿಸಿಕೆ, ಅವನಿಗೆ ಅದೇ ಮೊದಲ ಬಾರಿ ಉಂಟಾಯಿತು. ಆದರೆ ಅವನ ದುರಭಿಮಾನ ಮತ್ತು ಅಹಂಕಾರಗಳು ಅವನನ್ನು ಆಕ್ರಮಿಸಿದವು. ಅವನು ತನ್ನ ತಮ್ಮ ಕುಂಭಕರ್ಣನನ್ನು ನಿದ್ರೆಯಿಂದೆಬ್ಬಿಸಿ ರಣರಂಗಕ್ಕೆ ಕಳಿಸಬೇಕೆಂದು ಆಜ್ಞೆ ಮಾಡಿದನು.

ಕುಂಭಕರ್ಣನು ಎದ್ದು ರಾವಣನ ಅರಮನೆಗೆ ಬಂದನು. ರಾವಣನು ತಮ್ಮ ಪರಿಸ್ಥಿತಿ ಎಲ್ಲವನ್ನು ವರ್ಣಿಸಿದಾಗ ಕುಂಭಕರ್ಣನು ಅಣ್ಣನ ಮೇಲೆ ಕೋಪಿಸಿಕೊಂಡು ಹೇಳಿದನು, “ಪರಪುರುಷನ ಪತ್ನಿಯನ್ನು ಕದ್ದು ತಂದು ನೀನು ಅಪಕೀರ್ತಿಯನ್ನು ತರುವ ಕಾಯ೵ವನ್ನು ಮಾಡಿದೆ. ಮೊದಲು, ನೀನು ಆತನನ್ನು ಯುದ್ಧದಲ್ಲಿ ಸೋಲಿಸಿ ಅನಂತರ ಆತನ ಹೆಂಡತಿಯನ್ನು ತರಬಹುದಾಗಿತ್ತು. ಅಂದಿನಿಂದ ಇಂದಿನವರೆಗೆ ಕೇವಲ ಹೊಗಳಿಕೆ ಮಾತುಗಳನ್ನು ಮಾತ್ರ ಕೇಳಿಕೊಂಡು ಹಿತವಚನಗಳನ್ನು ತೊಡೆದು ಹಾಕಿದೆ. ಹಾಗಿದ್ದಾಗ್ಯೂ ನೀನು ಘೋರ ಸಂಕಟದಲ್ಲಿರುವ ನನ್ನ ಅಣ್ಣನಾದ್ದರಿಂದ ನಿನ್ನ ಪರವಾಗಿ ನಾನು ಯುದ್ಧಕ್ಕೆ ನಿಲ್ಲುವುದು ನನ್ನ ಧಮ೵”

ಹೀಗೆ ಹೇಳಿದ ಕುಂಭಕರ್ಣನು ರಣಭೂಮಿಗೆ ಹೋದನು. ರಾಮನನ್ನು ಹಾಗೂ ಅವನ ಸೈನ್ಯವನ್ನು ಆಕ್ರಮಿಸಿ ದೊಡ್ಡ ಉತ್ಪಾತವನ್ನೇ ಎಬ್ಬಿಸಿದನು. ಇದನ್ನು ಸಹಿಸಲಾರದ ರಾಮನು ಭೀಕರವಾದ ಕಾಳಗವನ್ನು ಹೂಡಿ ಕುಂಭಕರ್ಣನನ್ನು ವಧಿಸಿದನು. ಅನಂತರ ಲಕ್ಷ್ಮಣನ ಕೈಯಿಂದ ಮೃತ್ಯುವಶನಾದನು ಇಂದ್ರಜಿತು. ಇದರಿಂದ ರಾವಣನು ಅತ್ಯಂತ ಕಳವಳಕ್ಕೀಡಾದನು. ಅವನು ತನ್ನ ತಪ್ಪುಗಳನ್ನು ಪರಿಶೀಲಿಸಲು ಪ್ರಾರಂಭಿಸಿದನು. ಆದರೆ ಈಗವನು ಹತಾಶನಾಗಿದ್ದನು. ಉಗ್ರಪ್ರತಾಪಿಯಾದ ಅವನು ಕೊನೆಯ ಘಳಿಗೆಯವರೆಗೂ ಹೋರಾಡಿದನು. ಎಲ್ಲ ವಿಧದ ಆಯುಧಗಳಿಂದ ಅಲಂಕೃತವಾದ ದಿವ್ಯ ರಥವು ಹೊರಡಲು ಸಿದ್ಧವಾಯಿತು. ಅವನು ರಣರಂಗವನ್ನು ಪ್ರವೇಶಿಸಿ ಮಾರಾಂತ ಎಲ್ಲ ವಾನರ ಸೈನ್ಯವನ್ನೂ ಪಕ್ಕಕ್ಕೆ ತಳ್ಳಿ ರಾಮನ ಮೇಲೇರಿ ಹೋದನು.

ರಾಮನು ತನ್ನ ಧನುರ್ವಿದ್ಯಾ ಕೌಶಲವನ್ನೆಲ್ಲಾ ರಾವಣನೊಂದಿಗೆ ಹೂಡಿದ ಸೆಣಸಾಟದಲ್ಲಿ ತೋರಿದನು. ದೇವರಾಜನಾದ ಇಂದ್ರನು ತನ್ನ ರಥವನ್ನು ಸಾರಥಿ ಮಾತಲಿಯೊಂದಿಗೆ ರಾಮನ ಸಹಾಯಕ್ಕೆ ಕಳಿಸಿದನು. ಆ ದಿವ್ಯ ರಥಕ್ಕೆ ಪ್ರಣಾಮ ಮಾಡಿ ರಾಮನು ಅದನ್ನು ಏರಿ ಒಂದಾದ ಮೇಲೊಂದರಂತೆ ರಾವಣನ ಶಿರಗಳನ್ನು ಛೇದಿಸಿದನು. ಆದರೆ ಅವು ಪುನಃ ಚಿಗುರುವುದನ್ನು ಕಂಡು ರಾಮನಿಗೆ ಆಶ್ಚಯ೵ವಾಯಿತು. ಆಗ ಅವನಿಗೆ ಮಾತಲಿಯು ಅಗಸ್ಯ ಋಷಿಗಳು ದಯಪಾಲಿಸಿದ ದಿವ್ಯಾಸ್ತ್ರದ ನೆನಪನ್ನು ಮಾಡಿಕೊಟ್ಟನು. ಕೃತಜ್ಞತಾಪೂರ್ವಕವಾಗಿ ಆತನ ಸಲಹೆಯನ್ನು ಸ್ವೀಕರಿಸಿ ರಾಮನು ಆ ಅಸ್ತ್ರವನ್ನು ಪ್ರಯೋಗಿಸಿದನು. ಆ ಬಲಾಢ್ಯವಾದ ಅಸ್ತ್ರವು ಗಾಳಿಯನ್ನು ಸೀಳಿ ಬಂದು ಸಮಸ್ತ ಪ್ರತಾಪಗಳ ಕೇಂದ್ರ ಸ್ಥಾನವಾದ ರಾವಣನ ಎದೆಯನ್ನು ಇರಿಯಿತು. ವಾನರರಿಗೂ ಆಗಸದೆಡೆಯಿಂದ ಅವಲೋಕಿಸುತ್ತಿರುವ ದೇವತೆಗಳಿಗೂ ರಾವಣನ ಪತನವು ತುಂಬು ಆನಂದವನ್ನು ಉಂಟುಮಾಡಿತು. ವಿಭೀಷಣನಿಗೆ ತನ್ನ ದುಗುಡವನ್ನಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾಮನು ಆತನನ್ನು ಸಮಾಧಾನಪಡಿಸಿದನು. “ವಿಭೀಷಣ, ಕಟ್ಟಕಡೆಗೆ ನಿನ್ನ ಅಣ್ಣ ವೀರಮರಣವನ್ನು ಪಡೆದಿದ್ದಾನೆ. ಪೂಜ್ಯಭಾವದಿಂದ ಅವನ ಅಂತ್ಯಸಂಸ್ಕಾರಗಳನ್ನು ನೆರವೇರಿಸು.”

ಅನಂತರ ಲಕ್ಷ್ಮಣನಿಗೆ ಹೇಳಿದನು, “ರಾವಣನಂಥ ಮಹೋನ್ನತ ವ್ಯಕ್ತಿಯೆಂಬುದನ್ನು ನೀನು ನೋಡಿದೆಯಲ್ಲ. ಆದರೆ ವ್ಯಾಮೋಹ ಮತ್ತು ದುರಹಂಕಾರಗಳಿಂದ ಅವನು ನಾಶವಾದನು.”

ಪ್ರಶ್ನೆಗಳು :
  1. ಯುದ್ಧದ ಪರಿಣಾಮಗಳ ಬಗ್ಗೆ ರಾವಣನು ಚಿಂತಿಸಿದ್ದೇನು?
  2. ಯುದ್ಧಕ್ಕೆ ಹೊರಡಲು ಹೇಳಿದಾಗ ಕುಂಭಕರ್ಣನ ಪ್ರತಿಕ್ರಿಯೆ ಏನು?
  3. ರಾವಣನ ಬಗ್ಗೆ ರಾಮನ ಅಭಿಪ್ರಾಯವೇನು?

Leave a Reply

Your email address will not be published. Required fields are marked *

error: