‘ಆಸೆಗಳ ನಿಯಂತ್ರಣ‘– ಸಲಹೆ ಮಾಡಲ್ಪಟ್ಟ ತರಗತಿಯ ಚಟುವಟಿಕೆಗಳು:
COD ಗೆ ಸಂಬಂಧಿಸಿದ ಆಟವನ್ನು ತರಗತಿಯಲ್ಲಿ ಆಡುವುದು ಹೇಗೆ?
- ಒಂದನೇ ಗುಂಪಿನ ಮಕ್ಕಳಿಗೆ ತಮಗೆ ಇಷ್ಟವಾದ ಆಟಿಗೆಗಳನ್ನು ಬಿ. ವಿ. ತರಗತಿಗೆ ತರುವಂತೆ ತಿಳಿಸಿ.
- ನೆಲದ ಮೇಲೆ ಒಂದು ವಾರ್ತಾ ಪತ್ರಿಕೆಯ ಹಾಳೆಯನ್ನು ಹರಡಿರಿ.
- ಮಕ್ಕಳಿಗೆ ತಮಗೆ ಇಷ್ಟವಾದ ಆಟಿಗೆಗಳನ್ನು ವಾರ್ತಾ ಪತ್ರಿಕೆಯ ಮೇಲೆ ಇಡುವಂತೆ ತಿಳಿಸಿ.
- ಈಗ ಆಟಿಗೆಗಳನ್ನು ತೆಗೆದು, ವಾರ್ತಾಪತ್ರಿಕೆಯನ್ನು ಅರ್ಧಕ್ಕೆ ಮಡಿಸಿ.
- ಮಡಿಸಿದ ವಾರ್ತಾ ಪತ್ರಿಕೆಯ ಮೇಲೆ ಅವರ ಆಟಿಕೆಗಳನ್ನು ಇಡುವಂತೆ ಮಕ್ಕಳಿಗೆ ತಿಳಿಸಿ. ಈಗ ವಾರ್ತಾಪತ್ರಿಕೆಯು ತನ್ನ ಮೊದಲಿನ ಗಾತ್ರದ ಅರ್ಧದಷ್ಟು ಮಾತ್ರ ಇದೆ. ಆದ್ದರಿಂದ ಕಡಿಮೆ ಆಟಿಕೆಗಳನ್ನು ಹೊಂದಿರುವ ಮಕ್ಕಳಿಗೆ, ಅದರಲ್ಲಿ ತಮ್ಮ ಎಲ್ಲಾ ಆಟಿಕೆಗಳಿಗೆ ಸ್ಥಳ ಹೊಂದಿಸಲು ಸಾಧ್ಯವಾಗಬಹುದು; ಆದರೆ, ಹೆಚ್ಚು ಆಟಿಕೆಗಳನ್ನು ಹೊಂದಿರುವ ಮಕ್ಕಳು ಲಭ್ಯವಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ ಒಂದು ಅಥವಾ ಎರಡು ಆಟಿಕೆಗಳನ್ನು ತೆಗೆಯಬೇಕಾಗಬಹುದು. (ಯಾವುದಾದರೂ ಒಂದು ಮಗು, ತನ್ನ ಎಲ್ಲಾ ಆಟಿಕೆಗಳನ್ನು ಇಡುವ ಪ್ರಯತ್ನದಲ್ಲಿ ಇತರರೊಡನೆ ಹೋರಾಟಕ್ಕೂ ಮುಂದಾಗಬಹುದಾದ ಸಾಧ್ಯತೆಯನ್ನು ಗುರುಗಳು ಗಮನಿಸಬಹುದು.)
- ಪುನಃ ಎಲ್ಲಾ ಆಟಿಕೆಗಳನ್ನೂ ತೆಗೆದು, ವಾರ್ತಾಪತ್ರಿಕೆಯನ್ನು ಇನ್ನೊಂದು ಮಡಿಕೆ ಮಡಿಸಿ. ಈಗ ವಾರ್ತಾ ಪತ್ರಿಕೆಯ ಗಾತ್ರ ಮೊದಲಿಗಿಂತ ಇನ್ನೂ ಚಿಕ್ಕದಾಯಿತು. ಮಕ್ಕಳಿಗೆ ಈಗ ಪುನಃ ತಮ್ಮ ಆಟಿಕೆಗಳನ್ನು ಇಡುವಂತೆ ತಿಳಿಸಿ. ಮಕ್ಕಳು ಈಗ ತಮ್ಮ ಇನ್ನೂ ಕೆಲವು ಆಟಿಕೆಗಳನ್ನು ತೆಗೆಯಬೇಕಾಗಬಹುದು.
- ಪ್ರತಿಯೊಂದು ಮಗುವಿನ ಒಂದೊಂದು ಆಟಿಗೆಯನ್ನು ಮಾತ್ರ ಇಡಲು ಸಾದ್ಯವಾಗುವಷ್ಟು ಜಾಗ ಉಳಿಯುವವರೆಗೂ ಈ ಆಟವನ್ನು ಮುಂದುವರಿಸಿ.
ಕಲಿಕೆ
‘ಮಕ್ಕಳು ಕೆಲವೇ ಆಟಿಕೆಗಳನ್ನು ತೆಗೆಯಲು ಏಕೆ ನಿರ್ಧರಿಸಿದರು?, ಅವರಿಗೆ ನಿಜವಾಗಿಯೂ ಆ ಆಟಿಕೆಗಳ ಅಗತ್ಯವಿದ್ದಿತೆ? ಎಲ್ಲ ಆಟಿಕೆಗಳನ್ನೂ ಹೊಂದಿಸಿಡಲು ಅಲ್ಲಿ ಏಕೆ ಸಾಕಷ್ಟು ಸ್ಥಳಾವಕಾಶ ಇರಲಿಲ್ಲ? ಮುಂತಾಗಿ, ಗುರುಗಳು ಮಕ್ಕಳೊಡನೆ ಚರ್ಚಿಸಿ ಕಂಡುಕೊಳ್ಳಬಹುದು. ಅಂತಿಮವಾಗಿ, ಗುರುಗಳು “COD ಯನ್ನು ಅಭ್ಯಾಸ ಮಾಡುವುದರ ಮೂಲಕ, ನಾವು ಅನೇಕ ಉಡುಪುಗಳನ್ನು, ಆಟಿಕೆಗಳನ್ನು, ಪುಸ್ತಕಗಳನ್ನು ಅಗತ್ಯವಿರುವವರಿಗೆ ಕೊಟ್ಟು,ನಂತರವೂ ನೆಮ್ಮದಿಯ ಮತ್ತು ಸಂತೋಷಕರವಾದ ಜೀವನವನ್ನು ಸಾಗಿಸಬಹುದು” ಎಂಬ ಸಂದೇಶದೊಂದಿಗೆ ಮಕ್ಕಳು ಮನೆಗೆ ಮರಳುವಂತೆ ಮಾಡಬಹುದು.