ಆಸೆಗಳ ನಿಯಂತ್ರಣ
ತೃಪ್ತಿ ಅಥವಾ ಸಂತೋಷವನ್ನು ತಂದುಕೊಡುವ ಯಾವುದೇ ಒಂದರ ಮೇಲಿರುವ ಹಂಬಲ ಅಥವಾ ಲಾಲಸೆ” ಯನ್ನು ‘ಆಸೆ’ ಎನ್ನಬಹುದು. ಇದನ್ನು ನಂಬುವ ರೀತಿಯಲ್ಲಿ ಆಸೆಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುವ ಪ್ರವೃತ್ತಿಯನ್ನು ಹೊಂದಿವೆ.
ಮಕ್ಕಳಾದ ನಮ್ಮ ಪ್ರಮುಖ ಕರ್ತವ್ಯಗಳು ಯಾವುವು?
- ಒಂದು ಸಾರಿ ಪೂರೈಸಿದರೆ ಅವು ಕಾಣೆಯಾಗುತ್ತವೆ.
- ಅವುಗಳನ್ನು ಪೂರೈಸುವುದರಿಂದ ತೃಪ್ತಿಯನ್ನು ಪಡೆಯಬಹುದು.
ಸಲಹೆ ಮಾಡಲ್ಪಟ್ಟಿರುವ ತರಗತಿಯ ಚಟುವಟಿಕೆ : ಮನೋವೃತ್ತಿಯ ಪರೀಕ್ಷೆ
‘ಆಸೆಗಳು ಹೆಚ್ಚಾದಂತೆ, ಅವರ ಸಂತೋಷವು ಕಡಿಮೆಯಾಗುತ್ತದೆ’ ಎಂಬುದನ್ನು ಜನರು ಅರಿತುಕೊಳ್ಳುವುದಿಲ್ಲ. ಆಸೆಗಳಿಗೆ ಮಿತಿಯಿಲ್ಲ. ಅವು ಹುತ್ತದಲ್ಲಿರುವ ಗೆದ್ದಲು ಹುಳುಗಳಂತೆ ವೃದ್ಧಿ ಹೊಂದುತ್ತವೆ. ಎಷ್ಟೇ ಸಂತೋಷ ಹೊಂದಿದ್ದರೂ ಅಥವಾ ಅನುಭವಿಸಿದ್ದರೂ ತೃಪ್ತಿಯ ಭಾವ ಇರುವುದಿಲ್ಲ.
“ಅತ್ಯಂತ ಬಡವ ಯಾರು? ಯಾರು ಅನೇಕ ಆಸೆಗಳನ್ನು ಹೊಂದಿರುತ್ತಾರೋ ಅವರು ಜಗತ್ತಿನಲ್ಲಿ ಅತ್ಯಂತ ಬಡವರು. ಅತ್ಯಂತ ಶ್ರೀಮಂತರು ಯಾರು? ಯಾರು ಹೆಚ್ಚು ತೃಪ್ತಿಯನ್ನು ಹೊಂದಿರುತ್ತಾರೋ, ಅವರು ಜಗತ್ತಿನ ಅತ್ಯಂತ ಹೆಚ್ಚು ಶ್ರೀಮಂತರು.”
– ಬಾಬಾ
ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಒಂದು ಮಿತಿ ಇದೆ. ಮನುಷ್ಯನ ದೇಹದ ಉಷ್ಣತೆಗೆ ಒಂದು ಮಿತಿ ಇದೆ. ಅದು 98.40 F. ಈ ಮಿತಿಯ ನಂತರ ವ್ಯಕ್ತಿಯು ಜ್ವರದ ತಾಪಕ್ಕೆ ಒಳಗಾಗುತ್ತಾನೆ. ರಕ್ತದ ಒತ್ತಡ / ರಕ್ತದಲ್ಲಿನ ಸಕ್ಕರೆಯ ಅಂಶ ಇವು ಮಿತಿಯನ್ನು ಮೀರಿದರೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ.
ನಿಮ್ಮ ಕಣ್ಣುಗಳು ಮಿಂಚಿನ ಬೆಳಕನ್ನು ಅಥವಾ ಫೋಟೋ ತೆಗೆಯುವಾಗಿನ ಪ್ರಜ್ವಲಿಸುವ ಬೆಳಕನ್ನು ನೋಡುವ ಸಂದರ್ಭ ಬಂದರೆ, ಅವು ತಾವಾಗಿಯೇ ಮುಚ್ಚಿಕೊಳ್ಳುತ್ತವೆ. ಏಕೆಂದರೆ, ಅವು ಆಷ್ಟೊಂದು ಉನ್ನತವಾದ ಪ್ರಕಾಶವನ್ನು ತಡೆದುಕೊಳ್ಳಲಾರವು. ಒಂದು ನಿರ್ದಿಷ್ಟ ಪ್ರಮಾಣದ ನಂತರ ಕಿವಿಯ ತಮಟೆಗಳೂ ಸಹ ಶಬ್ದವನ್ನು ಸಹಿಸಿಕೊಳ್ಳಲಾರವು. ಆಗ ನಾವು ಕಿವಿಯನ್ನು ಮುಚ್ಚಿಕೊಳ್ಳುತ್ತೇವೆ ಅಥವಾ ಕಿವಿಯ ಒಳಗಡೆ ಹತ್ತಿಯನ್ನು ಇಟ್ಟು ಕೊಳ್ಳುತ್ತೇವೆ. ಇದರಿಂದ ನಾವು ನಮ್ಮ ಜೀವನವು ಒಂದು ನಿಯಮಿತ ಸಂಸ್ಥೆ! [Limited company] ಇದ್ದಂತೆ ಎಂಬುದನ್ನು ಗಮನಿಸುತ್ತೇವೆ. ಹಾಗೆಯೇ ನಮ್ಮ ಆಸೆಗಳಿಗೂ ಸಹ ಒಂದು ಮಿತಿ ಇರಬೇಕು.
[ದಿವ್ಯೋಪನ್ಯಾಸ 1983]
ಆರೋಗ್ಯಕರ ಮತ್ತು ಸಂತೋಷಕರವಾದ ಜೀವನಕ್ಕೆ ಆಸೆಗಳ ನಿಯಂತ್ರಣವು (Ceiling on Desires – C.O .D) ಅತ್ಯವಶ್ಯಕ. ಮಿತಿಯಿಲ್ಲದ ಆಸೆಗಳು ದುಃಖಕ್ಕೆ ಎಡೆಮಾಡಿ ಕೊಡುತ್ತವೆ. ಇವು ಆಧ್ಯಾತ್ಮಿಕ ಪ್ರಗತಿಗೆ ಪ್ರತಿಬಂಧಕಗಳಾಗಿ ವರ್ತಿಸುತ್ತವೆ. ಮಿತಿಯಿಲ್ಲದ ಆಸೆಗಳು, ಸಂತೋಷ ಮತ್ತು ಆರೋಗ್ಯಗಳನ್ನು ನಾಶಗೊಳಿಸುತ್ತವೆ. ಆಸೆಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದೇ, ‘ಆಸೆಗಳ ನಿಯಂತ್ರಣ’ವನ್ನು ಸಾಧಿಸುವ ಮಾರ್ಗ. ನಾವು ಆಸೆಗಳೆಂಬ ಬೀಜಗಳನ್ನು ಹುರಿದರೆ, ಅವು ಮತ್ತೆ ಮೊಳಕೆ ಒಡೆಯುವುದಿಲ್ಲ.
ಮಹಾ ಕಾವ್ಯಗಳು ಮತ್ತು ಪುರಾಣಗಳು ‘ಆಸೆಗಳ ನಿಯಂತ್ರಣ’ದ ಪ್ರಾಮುಖ್ಯತೆಗೆ ಹೆಚ್ಚಿನ ಒತ್ತನ್ನು ನೀಡಿವೆ. ಆಸೆಯು, ಆಸೆಗಳಾಗಿ ಗುಣಿತಗೊಳ್ಳುತ್ತದೆ. ಒಂದು ಆಸೆಯನ್ನು ಪೂರೈಸಿದರೆ, ಅದು ಲೋಭವಾಗಿ ಪರಿಣಮಿಸುತ್ತದೆ. ಆಸೆಯು ಪೂರೈಸಲ್ಪಡದಿದ್ದರೆ, ಅದು ಕೋಪ ಮತ್ತು ಮತ್ಸರಗಳಿಗೆ ಎಡೆಮಾಡಿ ಕೊಡುತ್ತದೆ. ಅಂತಿಮವಾಗಿ ಅದು ಮಾನವೀಯ ಮೌಲ್ಯಗಳ ಪತನವನ್ನು ಉಂಟು ಮಾಡುತ್ತದೆ.
ಮಿತಿಯಿಲ್ಲದ ಮತ್ತು ನೀತಿಯುತವಲ್ಲದ ಆಸೆಗಳನ್ನು ನಿರ್ಮೂಲನ ಮಾಡುವುದು ಹೇಗೆ? ಬಾಬಾ ಈ ಕೆಳಗಿನ ಆದೇಶಗಳನ್ನು ನೀಡಿದ್ದಾರೆ:
- ಎ.ಬಿ. ಸಿ.– ಆಲ್ ವೇಸ್ ಬಿ ಕೇರ್ಫುಲ್; ಅವಾಯ್ಡ್ ಬ್ಯಾಡ್ ಕಂಪೆನಿ (ಯಾವಾಗಲೂ ಎಚ್ಚರದಿಂದಿರು; ಕೆಟ್ಟ ಸಹವಾಸ ಮಾಡದಿರು.)
- ಕೆಟ್ಟದ್ದನ್ನು ನೋಡಬೇಡ; ಒಳ್ಳೆಯದನ್ನೇ ನೋಡು,ಕೆಟ್ಟದ್ದನ್ನು ಕೇಳಬೇಡ; ಒಳ್ಳೆಯದನ್ನೇ ಕೇಳು,ಕೆಟ್ಟದ್ದನ್ನು ಮಾತನಾಡಬೇಡ; ಒಳ್ಳೆಯದನ್ನೇ ಮಾತನಾಡು, ಕೆಟ್ಟದ್ದನ್ನು ಯೋಚಿಸಬೇಡ; ಒಳ್ಳೆಯದನ್ನೇ ಯೋಚಿಸು, ಕೆಟ್ಟದ್ದನ್ನು ಮಾಡಬೇಡ; ಒಳ್ಳೆಯದನ್ನೇ ಮಾಡು.
ನಾಲ್ಕು ಮುಖ್ಯ ಸಂಪನ್ಮೂಲಗಳ ಬಳಕೆಯ ಮೇಲೆ ಮಿತಿಯನ್ನು ಹಾಕಿ, ಆಸೆಗಳನ್ನು ಕಡಿಮೆಗೊಳಿಸಲು ಸಹಾಯಕವಾಗುವಂತೆ ಮಾಡಲು ‘ಆಸೆಗಳ ನಿಯಂತ್ರಣ’ವು ಒಂದು ಸಾಧನವಾಗಿದೆ.
- ಹಣ
- ಆಹಾರ
- ಸಮಯ ಮತ್ತು
- ಶಕ್ತಿ
ಹಣ, ಆಹಾರ, ಕಾಲ ಮತ್ತು ಶಕ್ತಿ ಇವು ಮಾನವನಿಗೆ ಕೊಡುಗೆಯಾಗಿ ನೀಡಲ್ಪಟ್ಟಿರುವ ಸಂಪನ್ಮೂಲಗಳು. ಇವು ಭಗವಂತನ ಮೂರ್ತ ರೂಪಗಳಾದ್ದರಿಂದ, ಈ ಸಂಪನ್ಮೂಲಗಳು ಅತ್ಯಂತ ಪವಿತ್ರವಾದುವು.
1. ಸಮಯವೇ ದೇವರು. ಸಮಯವು ವ್ಯರ್ಥವಾದರೆ, ಜೀವನವೇ ವ್ಯರ್ಥವಾದಂತೆ
“ಸಮಯವನ್ನು ವ್ಯರ್ಥ ಮಾಡಬೇಡಿ. ಸಮಯವು ವ್ಯರ್ಥವಾದರೆ ಜೀವನವೇ ವ್ಯರ್ಥವಾದಂತೆ. ಭಗವಂತನನ್ನು “ ಕಾಲಾಯ ನಮಃ, ಕಾಲ ಕಾಲಾಯ ನಮಃ,ಕಾಲಾತೀತಾಯ ನಮಃ, ಕಾಲಸ್ವರೂಪಾಯ ನಮಃ” ಎಂದು ಸ್ತುತಿಸಲಾಗಿದೆ. ಪವಿತ್ರವಾದ ಕಾರ್ಯಗಳ ಮೂಲಕ ಸಮಯವನ್ನು ಕಳೆಯಿರಿ. ಸಮಯವನ್ನು ವ್ಯರ್ಥಗೊಳಿಸಬೇಡಿ.”
– ಭಗವಾನ್ ಬಾಬಾ – Summer Showers 1993.
2. ಶಕ್ತಿಯೇ ದೇವರು
ಕೋಪ, ಆಸೆಗಳು ಮತ್ತು ಕೆಟ್ಟ ಆಲೋಚನೆಗಳು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ನಷ್ಟಗೊಳಿಸುತ್ತವೆ. “ಶಕ್ತಿಯ ಅಪವ್ಯಯ ಮಾಡಬೇಡಿ” ಜನರು ಕೆಟ್ಟ ಆಲೋಚನೆಗಳು, ಕೆಟ್ಟ ನೋಟಗಳು, ಕೆಟ್ಟದ್ದನ್ನು ಕೇಳುವಿಕೆ ಮತ್ತು ಕೆಟ್ಟ ವರ್ತನೆಗಳಿಂದ ತೃಪ್ತಿ ಪಟ್ಟು ಕೊಳ್ಳುವುದರ ಮೂಲಕ ತಮ್ಮ ಶಕ್ತಿಯ ಅಪವ್ಯಯ ಮಾಡುತ್ತಿದ್ದಾರೆ.
– Summer Showers 1993
3. ಹಣವೇ ದೇವರು
ಹಣವೇ ದೇವರಾಗಿರುವುದರಿಂದ ಹಣದ ದುರ್ಬಳಕೆ ಕೆಟ್ಟದ್ದು. ಹಣವನ್ನು ದುಂದು ವೆಚ್ಚಮಾಡಿ ದುರ್ಬಳಕೆ ಮಾಡುವುದರ ಬದಲಾಗಿ, ಆಹಾರ, ಹಣ, ಬಟ್ಟೆ, ಮನೆ ಇತ್ಯಾದಿಗಳನ್ನು ಕೊಡುಗೆಯಾಗಿ ನೀಡುವುದರ ಮೂಲಕ ದಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. “ಹಣದ ದುರ್ಬಳಕೆಯು ಕೇವಲ ಕೆಟ್ಟದ್ದು ಮಾತ್ರವಲ್ಲ; ಪಾಪವೂ ಹೌದು”.
– Summer Showers 1993
4. ಆಹಾರವೇ ದೇವರು
ಒಬ್ಬ ವ್ಯಕ್ತಿಯು ಚೆಲ್ಲಿದ ಆಹಾರವು, ಉಪವಾಸವಿರುವ ಒಂದು ಮಗುವಿನ ಹಸಿವೆಯನ್ನು ತಣಿಸಬಲ್ಲದು.“ ಆಹಾರವನ್ನು ವ್ಯರ್ಥ ಮಾಡಬೇಡಿ; ಆಹಾರವೇ ದೇವರು “ನಿಮ್ಮ ದೇಹವು ಆಹಾರದಿಂದ ಉಂಟಾಗಿದೆ, ನಿಮ್ಮ ಪಾಲಕರು ಸೇವಿಸಿದ ಆಹಾರದ ಪ್ರತಿಫಲವೇ ನೀವಾಗಿದ್ದೀರಿ. “ಅನ್ನಂ ಬ್ರಹ್ಮ” (ಆಹಾರವೇ ದೇವರು). ‘ಮಿತ ತಿಂಡಿ, ಅತಿಹಾಯಿ’. ‘ಮಿತವಾದ ಆಹಾರವು ಅಪಾರವಾದ ಆರಾಮವನ್ನು ನೀಡುತ್ತದೆ’ ಅಗತ್ಯವಿರುವಷ್ಟು ಆಹಾರವನ್ನು ಸೇವಿಸಿರಿ. ಆದರೆ ನಿಮ್ಮ ತಟ್ಟೆಗೆ ತುಂಬಾ ಆಹಾರವನ್ನು ಹಾಕಿಸಿಕೊಂಡು ಎಸೆಯ ಬೇಡಿ.”
– Summer Showers 1993
ಸ್ವಾಮಿ ಕಾರುಣ್ಯಾನಂದ ಒಮ್ಮೆ ಹೀಗೆ ಕೇಳಿದರು “ಸ್ವಾಮೀ, ತಾವು ಭಗವಂತನ ಅವತಾರ ಮತ್ತು ಈಗ ಶಾರೀರಿಕವಾಗಿ ಇಲ್ಲಿಯೇ ಇದ್ದೀರಿ. ಅಲ್ಲಿ ಗೋಡೆಯ ಹಿಂಭಾಗದಲ್ಲಿ, ಮಕ್ಕಳು ಕಸದ ತೊಟ್ಟಿಯಿಂದ ಆಹಾರದ ಒಂದು ಕನಿಷ್ಠ ತುಣುಕನ್ನು ಎತ್ತಿಕೊಳ್ಳಲು ಬೀದಿ ನಾಯಿಗಳೊಂದಿಗೆ ಹೋರಾಡುತ್ತಿದ್ದಾರೆ. ಇದು ಏಕೆ ಹೀಗೆ ಸ್ವಾಮೀ?“
ಭಗವಾನ್ ಬಾಬಾ: “ಅವರು ತಮ್ಮ ಹಿಂದಿನ ಜೀವನವನ್ನು ಬಹಳ ಆರಾಮವಾಗಿ ಮತ್ತು ಸುಖಭೋಗದಿಂದ ಕಳೆದಿದ್ದಾರೆ. ಅವರು ಪ್ರತಿಯೊಂದು ಬಗೆಯ ಶ್ರೀಮಂತ ಆಹಾರಗಳಿಂದ ತುಂಬಿದ ತಟ್ಟೆಗಳಿಂದ, ಇದರಿಂದ ಸ್ವಲ್ಪ, ಅದರಿಂದ ಸ್ವಲ್ಪ ಹೆಕ್ಕಿ ತಿರಸ್ಕಾರದಿಂದ ತಿಂದಿದ್ದಾರೆ. ಅವರು ದುರಹಂಕಾರದಿಂದ ಉತ್ತಮ ಆಹಾರವನ್ನು ತಿರಸ್ಕರಿಸಿ, ತಾವು ತಿಂದದ್ದಕ್ಕಿಂತ ಹೆಚ್ಚಿನ ಆಹಾರವನ್ನು ಎಸೆದಿದ್ದಾರೆ. ಅವರು ಹಿಂದೆ ಹೊಣೆಗೇಡಿಗಳಾಗಿ ಕಸದ ರಾಶಿಗೆ ರವಾನಿಸಿದ್ದನ್ನು, ಈ ಜನ್ಮದಲ್ಲಿ ಆರಿಸಿಕೊಳ್ಳುತ್ತಿದ್ದಾರೆ”.
ಸಂಪನ್ಮೂಲಗಳ ಮಿತವಾದ ಬಳಕೆ, ನಿಸ್ವಾರ್ಥತೆ, ಪರಸ್ಪರ ಹಂಚಿಕೊಳ್ಳುವಿಕೆ, ಇತರರ ಬಗ್ಗೆ ಕಾಳಜಿ, ಇವು ‘ಆಸೆಗಳ ಮೇಲೆ ನಿಯಂತ್ರಣವನ್ನು (COD) ಉಳಿಸಿಕೊಳ್ಳಲು ಅಗತ್ಯವಾದ ಮೌಲ್ಯಗಳು. ಮಕ್ಕಳ ಮನಸ್ಸಿನಲ್ಲಿ ‘ಆಸೆಗಳ ನಿಯಂತ್ರಣ’ ಭಾವವನ್ನು ಮೂಡಿಸಲು, ಪಾಲಕರು, ಶಿಕ್ಷಕರು ಮತ್ತು ಬಾಲವಿಕಾಸ ಗುರುಗಳು ಸೂಕ್ತವಾದ ನೀತಿ ಕತೆಗಳನ್ನು ಆರಿಸಿಕೊಳ್ಳಬೇಕು.