ಗಾಯತ್ರಿ – ವೇದಗಳ ಮಾತೆ
ಗಾಯತ್ರಿ ಎಲ್ಲಾ ಗ್ರಂಥಗಳ (ವೇದಗಳು) ಮಾತೆಯಂತೆ. ಎಲ್ಲೆಲ್ಲಿ ಅವಳ ನಾಮವನ್ನು ಪಠಿಸುತ್ತಾರೆಯೋ ಅಲ್ಲೆಲ್ಲ ಅವಳಿರುತ್ತಾಳೆ. ಅವಳು ಬಹಳ ಪ್ರಬಲ (ಶಕ್ತಿಯುತ) ವಾಗಿದ್ದಾಳೆ. ವೈಯಕ್ತಿಕ ಅಸ್ತಿತ್ವವನ್ನು ಪೋಷಿಸುವವಳೆ ಗಾಯತ್ರಿ. ಯಾರು ಅವಳನ್ನು ಆರಾಧಿಸುತ್ತಾರೆಯೋ, ಅವರ ಮೇಲೆ ಪರಿಶುದ್ಧ ಆಲೋಚನೆಗಳ ಸುರಿಮಳೆಯನ್ನೇ ಹರಿಸುತ್ತಾಳೆ. ಅವಳು ಎಲ್ಲಾ ದೇವತೆಗಳ ಸಾಕಾರ. ನಮ್ಮ ಉಸಿರೇ ಗಾಯತ್ರಿ. ಅಸ್ತಿತ್ವದಲ್ಲಿ ನಮ್ಮ ನಂಬಿಕೆಯೇ ಗಾಯತ್ರಿ. ಗಾಯತ್ರಿಗೆ ಐದು ಮುಖಗಳಿವೆ. ಅವುಗಳು ಜೀವನದ ಐದು ತತ್ವಗಳು. ಅವಳಿಗೆ ಒಂಬತ್ತು ವಿವರಣೆಗಳಿವೆ. ಅವುಗಳೆಂದರೆ – ಓಂ, ಭೂರ್, ಭುವ, ಸ್ವ:, ತತ್, ಸವಿತ್ರ, ವರೇಣ್ಯಂ, ಭರ್ಗೋ, ದೇವಸ್ಯ. ಗಾಯತ್ರಿ ಮಾತೆ ಎಲ್ಲರನ್ನೂ ಘೋಷಿಸುತ್ತಾಳೆ ಮತ್ತು ರಕ್ಷಿಸುತ್ತಾಳೆ. ಅವಳು ನಮ್ಮ ಇಂದ್ರಿಯಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಾಳೆ. ಧೀಮಹಿ ಎಂದರೆ ಧ್ಯಾನ. ಉತ್ತಮ ಬುದ್ಧಿವಂತಿಕೆಯಿಂದ ನಮಗೆ ಸ್ಫೂರ್ತಿ ನೀಡುವಂತೆ ನಾವು ದೇವಿಯನ್ನು ಪ್ರಾರ್ಥಿಸೋಣ. “ಧಿಯೋ ಯೋನಃ ಪ್ರಚೋದಯಾತ್” – ನಮಗೆ ಅಗತ್ಯವಿದ್ದಿದ್ದನ್ನೆಲ್ಲ ನೀಡುವಂತೆ ಅವಳನ್ನು ಬೇಡಿಕೊಳ್ಳುತ್ತೇವೆ. ಆದ್ದರಿಂದ ಗಾಯತ್ರಿಯನ್ನು ರಕ್ಷಣೆಗಾಗಿ, ಪೋಷಣೆಗಾಗಿ ಮತ್ತು ಅಂತಿಮವಾಗಿ ಮುಕ್ತಿಗಾಗಿ ಸಂಪೂರ್ಣವಾಗಿ ಪ್ರಾರ್ಥನೆ ಮಾಡುತ್ತೇವೆ.