ಚಟುವಟಿಕೆ : ಕಲೆ ಹಾಗೂ ಕರಕುಶಲ ಕೆಲಸ – ಹಳೆಯ ವರ್ತಮಾನ ಪತ್ರಿಕೆಯ ಮೂಲಕ ಕೃಷ್ಣನ ಕೊಳಲು ಮಾಡುವುದು
ಬೇಕಾಗಿರುವ ಸಾಮಗ್ರಿಗಳು:
- 10 ಹಳೆಯ ವರ್ತಮಾನ ಪತ್ರಿಕೆಯ ಹಾಳೆಗಳು
- ಬಟ್ಟೆ /ಲೈನಿಂಗ್ ಪಟ್ಟಿ/ ಕಾಗದ
- ಬಂಗಾರ ಬಣ್ಣದ ದಾರ
- ಸೂಜಿ ಹಾಗೂ ದಾರದ ಮಣಿಗಳು
- ಥರ್ಮೋಕೋಲ್ ಅಥವಾ ಕಾಗದದ ಮಣಿಗಳು.
- ರೂಲರ್, ಪೆನ್ಸಿಲ್, ಗೋಂದು.
ವಿಧಾನ :<
- 5 ವೃತ್ತಪತ್ರಿಕೆ ಹಾಳೆಗಳನ್ನು ತೆಗೆದುಕೊಂಡು ಒಂದರ ಮೇಲೊಂದು ಇರಿಸಿ
- ಈಗ ಹಾಳೆಗಳನ್ನು ಸರಿಯಾಗಿ ಮಧ್ಯಕ್ಕೆ ಮಡಚಿ, ತೆರೆದ ಅಂಚಿನಿಂದಮಡಚಿದ ಅಂಚಿನವರೆಗೆ, ಸುರುಳಿ ಸುತ್ತಿರಿ.
- ಈ ಸುರುಳಿಯನ್ನು ಗೋಂದಿನ ಮೂಲಕ ಅಂಟಿಸಿರಿ.
- ಈ ಕಾಗದ ಕೊಳಲು 36 ಸೆಂ.ಮೀ. ಉದ್ದವಿರಲಿ.ಈಗ ರೂಲರ್ ಹಾಗೂ ಪೆನ್ಸಿಲಿನ ಮೂಲಕ, ಕೊಳಲಿನ ಒಂದು ತುದಿಯಿಂದ 8,11,14,18 ಸೆಂ.ಮೀ.ನಷ್ಟುಅಂತರದಲ್ಲಿ ವರ್ತುಲಾಕಾರಗಳನ್ನು ಚಿತ್ರಿಸಿರಿ.
- ಜಾಗ್ರತೆಯಿಂದ,ಒಂದು ಚೂರಿಯ ಸಹಾಯದಿಂದ (ಹಿರಿಯರ ಮೇಲ್ವಿಚಾರಣೆ ಇರಲಿ) ನಿಧಾನವಾಗಿ ವರ್ತುಲಾಕಾರದ ರಂಧ್ರಗಳನ್ನು ಕೊರೆಯಿರಿ. ಪೂರ್ತಿ ಕತ್ತರಿಸುವ ಅಗತ್ಯವಿಲ್ಲ. ಹಾಗೆಯೇ ಹಿಂಭಾದಲ್ಲಿ ಕತ್ತರಿಸಬೇಡಿ.
- ಒಂದು ಪೆನ್ಸಿಲ್ ತೆಗೆದುಕೊಂಡು ಆ ರಂಧ್ರಗಳನ್ನು ನಿರ್ದಿಷ್ಟ ಅಳತೆಗೆ ವಿಸ್ತರಿಸಿರಿ.
- ಆ ಕೊಳಲಿನ ಉದ್ದದಷ್ಟೇ ಅಳತೆಯ ಚಿನ್ನಾರಿ ಬಟ್ಟೆ ತೆಗೆದುಕೊಳ್ಳಿರಿ. ಕಾಗದದ ಕೊಳಲಿನಲ್ಲಿರುವ 4 ರಂಧ್ರಗಳಿಗೆ ಸರಿ ಸಮಾನವಾಗಿ ಬಟ್ಟೆಯಲ್ಲಿ ಕೂಡ 4 ರಂಧ್ರಗಳನ್ನು ಮಾಡಿರಿ. ಅನಂತರ ಬಟ್ಟೆಯನ್ನು ಕಾಗದದ ಕೊಳಲಿಗೆ ಅಂಟಿಸಿರಿ.
- ಅಲಂಕರಣ ಗೊಂಡೆಗಾಗಿ, ಒಂದು ಥರ್ಮಕೋಲಿನ ಚಿಕ್ಕ ಚೆಂಡಿನೊಳಗೆ, ಸೂಜಿಯ ಮೂಲಕ ದಾರವನ್ನು ಸುರಿಯಿರಿ. ಅದರ ಮೇಲೆ ಚಿನ್ನಾರಿ ಬಟ್ಟೆಯನ್ನು ಅಂಟಿಸಿರಿ. ನಂತರ ದಾರದಲ್ಲಿ ಮಣಿಯನ್ನು ಪೋಣಿಸಿರಿ.
- ಲೈನಿಂಗ್ ಪಟ್ಟಿ ಅಥವಾ ಕಸೂತಿ ಬಟ್ಟೆಯನ್ನು ಕೊಳಲಿನ ಒಂದು ತುದಿಗೆ ಹಾಗೂ ಮಧ್ಯಕ್ಕೆ ಅಂಟಿಸಿರಿ. ಬಂಗಾರ ಬಣ್ಣದ ದಾರವನ್ನು ಕೊಳಲಿನ 4 ರಂಧ್ರಗಳ ಸುತ್ತಲೂ ಅಂಟಿಸಿರಿ. ಈಗ ಕೊಳಲು ತಯಾರಾಗಿದೆ.