ಗುರುರ್ಬ್ರಹ್ಮಾ
ಆಡಿಯೋ
ಶ್ಲೋಕ:
- ಗುರುರ್ಬ್ರಹ್ಮಾ ಗುರುರ್ವಿಷ್ಣುಃ
- ಗುರುರ್ದೇವೋ ಮಹೇಶ್ವರಃ
- ಗುರುಸ್ಸಾಕ್ಷಾತ್ ಪರಬ್ರಹ್ಮ
- ತಸ್ಮೈ ಶ್ರೀ ಗುರವೇ ನಮಃ ||
ಅರ್ಥ:
ಗುರುವು ಬ್ರಹ್ಮನಾಗಿದ್ದಾನೆ, ಗುರುವು ವಿಷ್ಣುವಾಗಿದ್ದಾನೆ, ಗುರುವೇ ದೇವ ಮಹೇಶ್ವರನಾಗಿದ್ದಾನೆ. ಅವನೇ ಸಾಕ್ಷಾತ್ ಪರಬ್ರಹ್ಮನಾಗಿದ್ದಾನೆ. ಆದ್ದರಿಂದ ಅಂತಹ ಶ್ರೀ ಗುರುವಿಗೆ ನಮಸ್ಕಾರಗಳು.
ವೀಡಿಯೋ
ವಿವರಣೆ
ಗುರುರ್ | ನಿಜವಾದ ಗುರುವು ಅನುಭವದಿಂದ ಸತ್ಯವನ್ನು ಕಂಡುಕೊಂಡಿರುತ್ತಾನೆ ಮತ್ತು ಅದು ಅವನ ಮಾತು, ಕೃತಿ, ಯೋಚನೆಗಳಲ್ಲಿ ಪ್ರತಿಫಲಿಸುತ್ತದೆ. |
---|---|
ಬ್ರಹ್ಮಾ | ಗುರುವು ಮಕ್ಕಳಲ್ಲಿ ರಚನಶೀಲತೆಯನ್ನು ಸೃಷ್ಟಿಸುವುದರಿಂದ ಬ್ರಹ್ಮನಾಗಿದ್ದಾನೆ. |
ವಿಷ್ಣು | ಅವರಲ್ಲಿ ಸದ್ಗುಣಗಳನ್ನು ಪೋಷಿಸುವುದರಿಂದ ವಿಷ್ಣುವಾಗಿದ್ದಾನೆ. |
ಗುರುರ್ದೇವೋ ಮಹೇಶ್ವರಃ | ಅವರಲ್ಲಿರುವ ದುಗುಣಗಳನ್ನೂ, ದುಷ್ಟ ಅಭ್ಯಾಸಗಳನ್ನೂ ನಾಶ ಮಾಡುವುದರಿಮದ ಮಹೇಶ್ವರನಾಗಿದ್ದಾನೆ. |
ಗುರುಸ್ಸಾಕ್ಷಾತ್ ಪರಬ್ರಹ್ಮ | ಸೃಷ್ಟಿ, ಸ್ಥಿತಿ, ಲಯಕತರಾದ ಬ್ರಹ್ಮ, ವಿಷ್ಣು, ಮಹೇಶ್ವರ ಈ ತ್ರಿಮೂತಿಗಳಿಗಿಂತಲೂ ಅಧಿಕನಾದ ಪರಬ್ರಹ್ಮವೇ ಆಗಿದ್ದಾನೆ. |
ತಸ್ಮೈ ಶ್ರೀ ಗುರವೇ ನಮಃ | ಅಂತಹ ಗುರುವಿಗೆ ನಮಸ್ಕಾರಗಳು. |
Overview
- Be the first student
- Language: English
- Duration: 10 weeks
- Skill level: Any level
- Lectures: 4
-
ಚಟುವಟಿಕೆ
-
ಮತ್ತಷ್ಟು ಓದುವಿಕೆ