ರಾಷ್ಟ್ರೀಯ ಹೂವು – ತಾವರೆ
- ನೀಲಂಬೋನೂಸಿಫೆರಾ’, ವೈಜ್ಞಾನಿಕ ಹೆಸರಿನ ಕಮಲ ನಮ್ಮ ರಾಷ್ಟ್ರೀಯ ಪುಷ್ಪ.
- ಕೆರೆ, ಕೊಳಗಳಲ್ಲಿ ಬೆಳೆಯುವ ಈ ಸುಂದರ ಪುಷ್ಪ ನಮ್ಮ ರಾಷ್ಟ್ರಪುಷ್ಪ.
- ಈ ಹೂ ಭಾರತೀಯರಿಗೆ ಪವಿತ್ರವೆನಿಸಿದೆ. ಭಾರತೀಯ ಸಂಸ್ಕೃತಿ, ಸಾಹಿತ್ಯ, ಕಲೆಗಳಲ್ಲಿ ಹಾಸುಹೊಕ್ಕಾಗಿ ಹೆಣೆದುಕೊಂಡು ಬಂದಿದೆ ಕಮಲ ಪುಷ್ಪ.
- ಕೆಸರಿನಲ್ಲಿ ಹುಟ್ಟಿದರೂ ತನ್ನದೇ ಆದ ವಿಶಿಷ್ಟತೆಯಿಂದ ಜಗತ್ತಿನಾದ್ಯಂತ ಜನಮನ್ನಣೆಯನ್ನು ಗಳಿಸಿರುವ ಕಮಲ, ವ್ಯಕ್ತಿಯ ಹಿನ್ನೆಲೆಗಿಂತ ಅವನ ವ್ಯಕ್ತಿತ್ವ, ಸಂಸ್ಕಾರ, ಸುಸಂಸ್ಕೃತ ನಡವಳಿಕೆ ಅವನನ್ನು ದೈವತ್ವದತ್ತ ಕೊಂಡೊಯ್ಯುತ್ತದೆ ಎಂಬುದನ್ನು ತಿಳಿಸುತ್ತದೆ. ಕೆಸರಿನಲ್ಲಿ ಜನಿಸಿದ್ದರೂ ಅದನ್ನು ಅಂಟಿಸಿಕೊಳ್ಳದ ಕಮಲ ಹೃದಯ ಮತ್ತು ಬುದ್ಧಿಯ ಪರಿಶುದ್ಧತೆಯ ಸಂಕೇತ.