ಶಿವ ಶಂಭೋ- ಚಟುವಟಿಕೆ
ಗುಂಪು ಚಟುವಟಿಕೆ – ಶಿವನ ವಿವಿಧ ನಾಮಗಳನ್ನು ಸೂಚಿಸುವ ಚಾರ್ಟ್
ಮೌಲ್ಯ ಬೋಧನೆ: ತಂಡದ ಮನೋಭಾವ ಹಾಗೂ ಪರಸ್ಪರ ಸಹಕಾರ.
ಬೇಕಾಗಿರುವ ಸಾಮಗ್ರಿಗಳು: 1 ಚಾರ್ಟ್, 1 ಶಿವನ ಚಿತ್ರ, ಗುಂಪಿಗೊಂದು ಮಾರ್ಕರ್ ಪೆನ್.
ಪೂರ್ವ ತಯಾರಿ: ಹಳೆಯ ಕ್ಯಾಲೆಂಡರ್ ಅಥವಾ ಹಳೆಯ ಪತ್ರಿಕೆಯಿಂದ ಶಿವನ ಚಿತ್ರವನ್ನು ಸಂಗ್ರಹಿಸಿರಿ. ಮಕ್ಕಳನ್ನು ತಂಡಗಳಾಗಿ ವಿಂಗಡನೆ ಮಾಡಿರಿ. ತಂಡದ ಮುಖಂಡನು ಶಿವನ ಚಿತ್ರವನ್ನು ಚಾರ್ಟ್ ನಲ್ಲಿ ಅಂಟಿಸಬೇಕು. ಒಬ್ಬ ಅಥವಾ ಇಬ್ಬರು ಮಕ್ಕಳು ಶಿವನ ಚಿತ್ರದ ಸುತ್ತಲೂ ವಿವಿಧ ನಾಮಗಳನ್ನು ಬರೆಯಬೇಕು. ಇನ್ನುಳಿದ ಮಕ್ಕಳು ನಿಗದಿತ ಸಮಯದಲ್ಲಿ ಶಿವನ ನಾಮವನ್ನು ಸೂಚಿಸಬೇಕು. ಯಾವ ತಂಡದವರು ಅತ್ಯಂತ ಅಧಿಕ ನಾಮಗಳನ್ನು ಚಾರ್ಟ್ ನಲ್ಲಿ ಬರೆದಿರುವರೋ, ಅವರೇ ವಿಜೇತರು.