ಸುಪ್ರಭಾತಂ ಇದಂ ಪುಣ್ಯಂ
ಆಡಿಯೋ
ಶ್ಲೋಕ
- ಸುಪ್ರಭಾತಂ ಇದಂ ಪುಣ್ಯಂ
- ಯೇ ಪಠಂತಿ ದಿನೇ ದಿನೇ
- ತೇ ವಿಶಂತಿ ಪರಂಧಾಮ
- ಜ್ಞಾನ ವಿಜ್ಞಾನ ಶೋಭಿತಾಃ
ಅರ್ಥ
ಯಾರು ಈ ಸುಪ್ರಭಾತವನ್ನು ಪ್ರತಿದಿನ (ಶ್ರದ್ಧೆ ಮತ್ತು ಭಕ್ತಿಪೂರ್ವಕ) ಪಠಿಸುತ್ತಾರೋ ಅವರು ಪರಮೋಚ್ಚ ನೆಲೆ (ಗುರಿ) ಯನ್ನು ಪಡೆಯುತ್ತಾರೆ.
ವಿವರಣೆ
| ಸುಪ್ರಭಾತಂ | ಸುಪ್ರಭಾತ ಶ್ಲೋಕಗಳನ್ನು |
|---|---|
| ಇದಂ | ಈ |
| ಪುಣ್ಯಂ | ಪವಿತ್ರ |
| ಯೇ | ಯಾರು |
| ಪಠಂತಿ | ಪಠಿಸುತ್ತಾರೋ |
| ದಿನೇ ದಿನೇ | ಪ್ರತಿದಿನ |
| TEY | ಅವರು |
| ವಿಶಂತಿ | ಪಡೆಯುತ್ತಾರೆ |
| ಪರಂ | ಆತ್ಮ ಸಾಕ್ಷಾತ್ಕಾರ |
| ಧಾಮ | ಅತ್ತ್ಯುನ್ನತ ನೆಲೆ |
| ಜ್ಞಾನ | ಜ್ಞಾನ |
| ವಿಜ್ಞಾನ | ವಿವೇಕ |
| ಶೋಭಿತಾಃ | ಪ್ರಕಾಶಿಸುತ್ತದೆ |

ಅಂತರಾರ್ಥ:
ಪರಂಧಾಮ: ಮಾನವ ಜನ್ಮದ ಗುರಿ ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗದೆ ಹೊಂದುವುದು, ಅಥವಾ ಮೋಕ್ಷ ಎಂದು ವೇದಾಂತ ಸಾರಿ ಹೇಳುತ್ತದೆ. ಜೀವನದ ಅರ್ಥ ಹಾಗೂ ಉದ್ದೇಶದ ಬಗ್ಗೆ ಅಜ್ಞಾನ-”ತಪ್ಪಾದ ತಿಳಿವಳಿಕೆ, ತಪ್ಪಾದ ಆಲೋಚನೆ ಹಾಗೂ ತಪ್ಪಾದ ಕರ್ಮಾನುಷ್ಠಾನ” ದಲ್ಲಿ ಪರ್ಯವಸಾನವಾಗುತ್ತದೆ.ಹಾಗೂ ಅದರ ಮೂಲಕ ಬಂಧನ ಹಾಗೂ ದುಃಖಾನುಭವ ಪ್ರಾಪ್ತಿಯಾತ್ತದೆ. ಜ್ಞಾನ ಹಾಗೂ ವಿವೇಕ ನಮಗೆ ಮುಕ್ತಿಯನ್ನೂ ಹರ್ಷವನ್ನೂ ಒದಗಿಸುತ್ತದೆ.
ಜ್ಞಾನ ಮತ್ತು ವಿಜ್ಞಾನ: ಗುರುಗಳ ಆಶ್ರಯದಲ್ಲಿ ನಾವು ಏನು ಕಲಿಯುತ್ತೇವೆಯೋ ಅದೇ ‘ಜ್ಞಾನ’. ನಾವು ಗುರುಗಳಿಂದ ಕೇಳಿದ್ದನ್ನು ಚಿಂತನೆ ಮತ್ತು ಅನುಷ್ಠಾನ ಮಾಡಿದಾಗ ಅದು ವಿಜ್ಞಾನ ಅಥವಾ ವಿವೇಕವಾಗುತ್ತದೆ. ಪ್ರತಿದಿನ ಈ ಸುಪ್ರಭಾತ ಶ್ಲೋಕಗಳ ಅರ್ಥಪೂರ್ಣ ಪಠಣ ಮತ್ತು ಅಂತರಾರ್ಥದ ಚಿಂತನೆಯ ಮೂಲಕ ನಾವು ದಿನವಿಡೀ ನಮ್ಮ ಅಂತರಂಗದಲ್ಲಿರುವ ದಿವ್ಯ ಶಕ್ತಿಯೊಂದಿಗೆ ಸಂಬಂಧವನ್ನು ಜೋಡಿಸಿಕೊಳ್ಳುತ್ತೇವೆ.
ಹೆಚ್ಚಿನ ಓದುವಿಕೆ
Explanation :
Whoever recites this awakening hymn every day will attain the Highest Abode, resplendent with knowledge and supreme wisdom.
May our Sadguru Sai daily awaken in us our Atmic Consciousness.

