ಹೃತ್ಪೂರ್ವಕ ಪ್ರಾರ್ಥನೆ
ಒಂದು ದ್ವೀಪದಲ್ಲಿ ಮೂವರು ಸನ್ಯಾಸಿಗಳಿದ್ದರು. ಅವರು ಎಷ್ಟು ಸರಳವಾಗಿದ್ದರೆಂದರೆ ಅವರು ದಿನವೂ ಮಾಡುತ್ತಿದ್ದ ದೇವತಾ ಪ್ರಾರ್ಥನೆ ಇಷ್ಟೆ, “ನಾವು ಮೂವರಿದ್ದೇವೆ; ನೀನೂ ಮೂರು ರೂಪದಲ್ಲಿದ್ದೀಯೆ; ನಮ್ಮ ಮೇಲೆ ಕೃಪೆ ತೋರಿಸು.” ಅವರು ಈ ಸರಳವಾದ ಪ್ರಾರ್ಥನೆ ಸಲ್ಲಿಸುವಾಗ ಅನೇಕ ಅದ್ಭುತಗಳು ಪ್ರಕಟವಾಗುತ್ತಿದ್ದುವು.
ಅಲ್ಲಿಗೆ ಸಮೀಪದಲ್ಲಿದ್ದ ಒಬ್ಬ ಬಿಷಪ್ನಿಗೆ ಈ ಸನ್ಯಾಸಿಗಳ ಹಾಗು ಅವರು ಮಾಡುವ ಸರಳ ಪ್ರಾರ್ಥನೆಯ ವಿಷಯ ತಿಳಿಯಿತು. ಅವರಿಗೆ ಸಾಂಪ್ರದಾಯಿಕವಾಗಿ ಹೇಗೆ ಪ್ರಾರ್ಥನೆ ಸಲ್ಲಿಸಬೇಕೆಂಬುದನ್ನು ಕಲಿಸಬೇಕು ಎಂದು ಅವನು ನಿರ್ಧರಿಸಿದನು. ಒಂದು ಹಡಗು ಹತ್ತಿಕೊಂಡು ಆ ದ್ದೀಪಕ್ಕೆ ಬಂದನು. ಆ ಸನ್ಯಾಸಿಗಳೊಂದಿಗೆ ಮಾತನಾಡುತ್ತಾ ಅವರು ಮಾಡುವ ಪ್ರಾರ್ಥನೆ ಗೌರವಾನ್ವಿತವಾಗಿಲ್ಲ ಎಂದು ಹೇಳಿ ಹೇಗೆ ಪ್ರಾರ್ಥನೆ ಮಾಡಬೇಕು ಎಂಬುದನ್ನು ಹೇಳಿಕೊಟ್ಟನು. ಅನೇಕ ಸಾಂಪ್ರದಾಯಿಕ ಸ್ತುತಿ ವಾಕ್ಯಗಳನ್ನು ಕಲಿಸಿದನು. ಅಷ್ಟು ಮಾಡಿ ಒಂದು ದೋಣಿಯನ್ನು ಹತ್ತಿಕೊಂಡು ತಾನು ಬಂದಿದ್ದ ಹಡಗಿಗೆ ಹೊರಟನು. ಸ್ವಲ್ಪದರಲ್ಲೇ ಹಡಗಿನ ಹಿಂದೆಯೇ ಒಂದು ಪ್ರಕಾಶಮಾನವಾದ ಬೆಳಕಿನ ಕಿರಣ ಕಾಣಿಸಿತು. ಆ ಮೂವರು ಸನ್ಯಾಸಿಗಳು ಚಲಿಸುತ್ತಿರುವ ಹಡಗನ್ನು ನಿಲ್ಲಿಸುವುದಕ್ಕಾಗಿ ಕೈ ಕೈ ಹಿಡಿದುಕೊಂಡು ವೇಗವಾಗಿ ಸಮುದ್ರದ ಅಲೆಗಳ ಮೇಲೆ ಓಡಿಬರುತ್ತಿರುವುದನ್ನು ಅವನು ಕಂಡನು.
ಬಿಷಪ್ನ ಹತ್ತಿರಕ್ಕೆ ಬಂದವರೇ ಅವರು ಕೂಗಿ ಹೇಳಿದರು, “ಅಯ್ಯಾ, ನೀವು ಹೇಳಿಕೊಟ್ಟ ಪ್ರಾರ್ಥನೆಗಳು ನಮಗೆ ಮರೆತುಹೋದುವು. ದಯವಿಟ್ಟು ಮತ್ತೊಮ್ಮೆ ಹೇಳುವಿರಾ?”
ಅದನ್ನು ನೋಡಿ ಬೆರಗಾದ ಬಿಷಪ್ ತಲೆಯಾಡಿಸಿದನು. “ಅಯ್ಯಾ, ನೀವು ಮಾಡುತ್ತಿದ್ದ ಪ್ರಾರ್ಥನೆಯನ್ನೇ ಮುಂದುವರಿಸಿರಿ. ಮೂವರು ಸನ್ಯಾಸಿಗಳು ನೀರಿನ ಮೇಲೆ ನಡೆಯಲು ಸರಳ ಪ್ರಾರ್ಥನೆಯಲ್ಲದೆ ಬೇರೆ ಹೇಗೆ ತಾನೆ ಸಾಧ್ಯ?” ಹೌದು! ಅವರ ಆ ಸರಳ ಹೃತ್ಪೂರ್ವಕ ಪ್ರಾರ್ಥನೆಯೇ, ಆ ಮೂವರು ನೀರಿನ ಮೇಲೆ ನಡೆದು ಬರುವಂತೆ ಮಾಡಿತ್ತು. ಹೃತ್ಪೂರ್ವಕ ಪ್ರಾರ್ಥನೆಗೆ ಅಂತಹ ಅಪಾರ ಶಕ್ತಿ ಇದೆ!
ಪ್ರಶ್ನೆಗಳು:
- ಷಪ್ ನು ಮಾಡಿದ ತಪ್ಪೇನು?
- ಅವನು ಸನ್ಯಾಸಿಗಳಿಂದ ಯಾವ ಪಾಠ ಕಲಿತನು?
- ನೀವು ಯಾವಾಗಲೂ ದೇವರಿಗೆ ಸಲ್ಲಿಸುವ ಪ್ರಾಥನೆ ಯಾವುದು? ಅದು ಹೃತ್ಪೂವಕ ಪ್ರಾಥನೆ ಎಂದು ನಿಮಗೆ ಅನ್ನಿಸುತ್ತದೆಯೇ? ವಿವರಿಸಿ.