ರಾಮಸೇತುವಿನ ನಿರ್ಮಾಣ:
ಸುಗ್ರೀವ, ಹನುಮಂತ, ಜಾಂಬವ, ಅಂಗದ, ಎಲ್ಲ ವಾನರರು ಮತ್ತು ರಾಮ, ಲಕ್ಷ್ಮಣರು ಸಭೆಸೇರಿ ಲಂಕೆಯ ಮೇಲೆ ಹೇಗೆ ಆಕ್ರಮಣ ನಡೆಸುವುದೆಂದು ಸಮಾಲೋಚನೆ ಮಾಡಿದರು. ಸಮುದ್ರಕ್ಕೆ ಒಂದು ಸೇತುವೆ ಕಟ್ಟಬೇಕೆಂದು ಅವರು ತೀರ್ಮಾನಿಸಿದರು. ನಳ ಮತ್ತು ನೀಲ ಎಂಬ ಕಪಿವೀರರು, ನಿರ್ಮಾಣ ಕಾರ್ಯದಲ್ಲಿ ಪರಿಣಿತರಾದ ಶಿಲ್ಪಿಗಳಾಗಿದ್ದರು. ಅವರ ನೇತೃತ್ವದಲ್ಲಿ ಸೇತುವೆ ಕಟ್ಟುವ ಕೆಲಸ ಪ್ರಾರಂಭವಾಯಿತು. ಸಾವಿರಾರು ಸಂಖ್ಯೆಯಲ್ಲಿದ್ದ ಕಪಿವೀರರು ಉತ್ಸಾಹದಿಂದ ದೊಡ್ಡ ದೊಡ್ಡ ಬಂಡೆಗಳನ್ನೂ, ಹೆಮ್ಮರಗಳನ್ನೂ ಹೊತ್ತು ತರತೊಡಗಿದರು. ಆದರೆ, ದೊಡ್ಡ ಬಂಡೆಗಳನ್ನು ನೀರಿನಲ್ಲಿ ತೇಲುವಂತೆ ಮಾಡುವುದು ಕಷ್ಟಕರವಾಗಿತ್ತು. ರಾಮನಾಮದಲ್ಲಿರುವ ಪ್ರೇಮ ಮತ್ತು ದಿವ್ಯಶಕ್ತಿಗಳ ಅನುಭವವನ್ನು ಹೊಂದಿದ್ದ ಹನುಮಂತನು, ‘ರಾ’ ಮತ್ತು ‘ಮ’ ಅಕ್ಷರಗಳನ್ನು ಬೇರೆಬೇರೆ ಬಂಡೆಗಳ ಮೇಲೆ ಬರೆಯುವುದರಿಂದ ಅವು ಒಟ್ಟುಸೇರುವಂತೆ ಮಾಡಬಹುದೆಂದು ನಿರ್ಧರಿಸಿದನು. ಅವರೆಲ್ಲರ ಪ್ರಯತ್ನದಿಂದ ಸಮುದ್ರಕ್ಕೆ ಸೇತುವೆ ನಿರ್ಮಾಣವಾಯಿತು.