ದಶರಥನ ಮರಣ:
ರಾಮ, ಸೀತೆ ಮತ್ತು ಲಕ್ಷ್ಮಣರು ಕಾಡಿಗೆ ಹೊರಟು ಹೋದಾಗ ದಶರಥನು ತುಂಬಾ ದುಃಖಿತನಾದನು. ಅವನು ರಾಮನಿಗಾಗಿ ಪ್ರಲಾಪಿಸುತ್ತಾ, ಮತ್ತೆ ಮತ್ತೆ ಅಳುತ್ತಲೇ ಇದ್ದನು.
ಅವನು ಸದಾ ರಾಮ, ಸೀತೆ, ಲಕ್ಷ್ಮಣರಿಗಾಗಿ ರೋಧಿಸುತ್ತಿದ್ದನು. ಕೆಲವು ದಿನಗಳಲ್ಲಿ ಇದೇ ಚಿಂತೆಯಿಂದ ಹಾಸಿಗೆ ಹಿಡಿದನು. ಅವನ ಆರೋಗ್ಯದ ಸ್ಥಿತಿ ಅತ್ಯಂತ ಕೆಟ್ಟಿತು ಮತ್ತು ಕೊನೆಯಲ್ಲಿ ‘ರಾಮಾ.. ರಾಮಾ.. ..’ ಎಂದು ಕರೆಯುತ್ತಾ ಪ್ರಾಣಬಿಟ್ಟನು. ಸಂಪೂರ್ಣ ಸಾಮ್ರಾಜ್ಯವೇ ಶೋಕದಲ್ಲಿ ಮುಳುಗಿತು. ರಾಮನು ಕಾಡಿಗೆ ಹೊರಟುಹೋದ ದುಃಖದ ಜೊತೆಯಲ್ಲಿ ಇದು ಇನ್ನೂ ಅತ್ಯಂತ ಹೆಚ್ಚಿನ ನೋವನ್ನುಂಟು ಮಾಡಿತು.