ಹನುಮಂತ ಸಂಜೀವಿನಿಯನ್ನು ತಂದದ್ದು
ರಾವಣನ ಮಗ ಮೇಘನಾಥ ಲಂಕೆಯಲ್ಲಿ ವಾನರರ ಪ್ರಗತಿಯನ್ನು ಕಂಡು ಕೋಪಗೊಂಡಿದ್ದನು. ಅವನು ಹೆಸರುವಾಸಿಯಾದ ಯೋಧನಾಗಿದ್ದನು. ವಾನರರು ಅವನ ಸಾಲು, ಸಾಲು ಬಾಣಗಳನ್ನು ನೋಡಿ ಭೀತಿಗೊಂಡು ಯುದ್ಧ ಮಾಡುವುದನ್ನು ಬಿಟ್ಟರು. ಆಗ ಲಕ್ಷ್ಮಣನು ಮೇಘನಾಥನೊಡನೆ ಯುದ್ಧ ಮಾಡತೊಡಗಿದನು. ಮೇಘನಾಥನು ಬ್ರಹ್ಮನಿಂದ ವರವಾಗಿ ಪಡೆದ ಶಕ್ತಿಯುತವಾದಂತಹ ಬಾಣವನ್ನು ಲಕ್ಷ್ಮಣನ ಮೇಲೆ ಪ್ರಯೋಗ ಮಾಡಿದನು. ಬಾಣ ನೇರವಾಗಿ ಲಕ್ಷ್ಮಣನ ಎದೆಗೆ ತಾಗಿ, ಲಕ್ಷ್ಮಣ ಮೂರ್ಛೆ ಹೋಗಿ ನೆಲದ ಮೇಲೆ ಉರುಳಿದನು. ಆದರೆ ಹನುಮಾನನು ಅವನನ್ನು ಎತ್ತಿಕೊಂಡು ರಾಮನ ಎದುರಿಗೆ ಬಂದನು. ಲಂಕೆಯಲ್ಲಿ ವೈದ್ಯರಾದ ‘ಸುಷೇನ’ರ ಜೊತೆ ಅವರ ಮನೆಯನ್ನೂ ಹೊತ್ತು ತಂದು, ರಾಮನ ಎದುರಿಗೆ ಇಟ್ಟನು. ‘ಹಿಮಾಲಯದಲ್ಲಿ ಇರುವಂತಹ ಸಂಜೀವಿನಿ ಪರ್ವತದಲ್ಲಿ ಇದಕ್ಕೆ ಔಷಧಿ ಇದೆ. ಅದರಿಂದ ಲಕ್ಷ್ಮಣನನ್ನು ಗುಣಪಡಿಸಬಹುದು’ ಎಂದನು. ತಕ್ಷಣ ಹನುಮಂತನು ದ್ರೋಣ ಪರ್ವತವನ್ನು ದಾಟಿ, ಸಂಜೀವಿನಿ ಪರ್ವತದಲ್ಲಿ ಔಷಧಿ ಸಸ್ಯವನ್ನು ಹುಡುಕಿದನು. ಆ ಪರ್ವತದ ಅನೇಕ ಔಷಧಿ ಸಸ್ಯಗಳಲ್ಲಿ ಅವನಿಗೆ ಹುಡುಕಲು ಸಾಧ್ಯವಾಗದೆ, ತನ್ನ ಅಂಗೈ ಮೇಲೆ ಸಂಜೀವಿನಿ ಪರ್ವತವನ್ನೇ ಲಂಕೆಗೆ ಹೊತ್ತು ತಂದನು. ಆಗ ಸುಷೇನರು ಔಷಧಿ ಸಸ್ಯದಿಂದ ಲಕ್ಷ್ಮಣನಿಗೆ ಔಷಧ ನೀಡಿದರು. ತಕ್ಷಣ ಲಕ್ಷ್ಮಣನಿಗೆ ಪ್ರಜ್ಞೆ ಬಂತು. ಶ್ರೀರಾಮನು ಲಕ್ಷ್ಮಣನನ್ನು ಅಪ್ಪಿಕೊಂಡನು. ಲಕ್ಷ್ಮಣ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿ, ಸುಷೇನರಿಗೆ ಆಶೀರ್ವಾದ ಮಾಡಿ, ‘ನೀವು ಸಂಕಷ್ಟದಲ್ಲಿದ್ದಾಗ ನಾನು ನಿಮ್ಮನ್ನು ರಕ್ಷಣೆ ಮಾಡುತ್ತೇನೆ’ ಎಂದು ಶ್ರೀ ರಾಮನು ಹೇಳಿದನು.