ಪಿತೃವಾಕ್ಯಪರಿಪಾಲನೆ:
ರಾಮನಿಗೆ ತನ್ನ ತಂದೆಯ ಮಾತಿಗೆ ವಿಧೇಯನಾಗಿರುವುದು ಬಹಳ ಮುಖ್ಯವಾಗಿತ್ತು. ಆದ್ದರಿಂದ ಅವನು ಆ ಮಾತನ್ನು ಸಂತೋಷದಿದ ಒಪ್ಪಿಕೊಂಡನು.
ರಾಮನಿಗೆ ರಾಜ್ಯಪಟ್ಟಾಭಿಷೇಕ ಮಾಡುವುದರ ಬದಲಾಗಿ ಕಾಡಿಗೆ ಕಳಿಸುವುದನ್ನು ತಿಳಿದು, ಪ್ರತಿಯೊಬ್ಬರಿಗೂ ಬಹಳ ಆಘಾತ ಮತ್ತು ಸಂಕಟವಾಯಿತು, ಆದರೆ ರಾಮನು ಆ ಮಾತುಗಳನ್ನು ಬಹಳ ಸಮಾಧಾನವಾಗಿ ಸ್ವೀಕರಿಸಿದನು ಮತ್ತು ಯಾವುದೇ ಸಂದರ್ಭ ಎದುರಾದರೂ, ತಂದೆಯ ಅಪೇಕ್ಷೆಯನ್ನು ಪೂರ್ಣಗೊಳಿಸಲು ತಾನು ಸಿದ್ಧನಾಗಿರುವುದಾಗಿ ಘೋಷಿಸಿದನು. ಸೀತೆಯೂ ಸಹ ರಾಮನ ಹೆಜ್ಜೆಯನ್ನು ಅನುಸರಿಸಿ ಕಾಡಿಗೆ ಹೋಗಲು ಸಿದ್ಧಳಾದಳು. ಲಕ್ಷ್ಮಣನೂ ಸಹ ಮರು ಯೋಚನೆಯನ್ನೇ ಮಾಡದೆ, ಅಣ್ಣನಾದ ರಾಮನ ಜೊತೆಗಿದ್ದು, ಅಗತ್ಯ ಸೇವೆಯನ್ನು ಒದಗಿಸುವುದಾಗಿ ನಿರ್ಧರಿಸಿದನು. ರಾಮನ ಮೇಲಿನ ಅವನ ಭ್ರಾತೃಪ್ರೇಮ ಅಂಥಹದಾಗಿತ್ತು.