ಸೂಚಿಸಲಾದ ತರಗತಿ ಚಟುವಟಿಕೆಗಳು
ವಿವಿಧ ವರಿಷ್ಠರ ಪೌರಾಣಿಕ ಮೌಲ್ಯಗಳ ಕಥೆಗಳು
ತರಗತಿಗಳಲ್ಲಿ ನಂಬಿಕೆಯ ಐಕ್ಯತೆ ವಿಷಯವನ್ನು ನಿವಹಿಸುವಾಗ ಬಾಲ ವಿಕಾಸ ಗುರುಗಳು “ಲೈಫ್ ಆಫ್ ಯಂಗ್ ಸಾಯಿ” (Life of Young Sai) ಪುಸ್ತಕದ ಘಟನೆಗಳು ಮತ್ತು “ಯುನಿವರ್ಸಲ್ ಲವ್” (Universal Love) ನಂತಹ ಕಥೆಗಳನ್ನು ಆಯ್ದುಕೊಳ್ಳಬೇಕು. “[(ಪ್ರವಾದಿ ಮೊಹಮ್ಮದ್ ಅವರ ಜೀವನದ ಘಟನೆಯಾದ ಪ್ರೇಮ ಮತ್ತು ತಾಳ್ಮೆಯ ಮೌಲ್ಯಗಳನ್ನು ವಿವರಿಸಬಹುದು)]”.
“ದಿ ಗುಡ್ ಸಮರಿಟನ್” (The Good Samaritan) [ಯೇಸುಕ್ರಿಸ್ತನ ದೃಷ್ಟಾಂತಗಳಲ್ಲಿ ಒಂದು ಪ್ರೀತಿ ಮತ್ತು ಸಹಾನುಭುತಿಯ ಮೌಲ್ಯವನ್ನು ವಿವರಿಸುತ್ತದೆ] ಮತ್ತು “ಸಂತೃಪ್ತಿ ಮತ್ತು ಶಾಂತಿ” (Contentment and Peace) [ತಾಳ್ಮೆ ಮತ್ತು ಸಂತೃಪ್ತಿಯ ಮೌಲ್ಯವನ್ನು ವಿವರಿಸುವ ಭಗವಾನ್ ಬುದ್ಧನ ಜೀವನದ ಘಟನೆಗಳು] ಈ ಕಥೆಗಳು ನಮ್ಮ ಬಾಲವಿಕಾಸ ಪಠ್ಯಕ್ರಮದ ಭಾಗವಾಗಿದೆ. ಈ ಕಥೆಗಳನ್ನು ಹೊರತುಪಡಿಸಿ ಗುರುಗಳು ಎಲ್ಲಾ ಧಮಗಳು, ಮಾನವೀಯ ಮೌಲ್ಯಗಳನ್ನು ಭೋಧಿಸುವ ಇತರ ಕಥೆಗಳನ್ನು ಕೂಡಾ ಹೇಳಬಹುದು.
ಸೂಚಿಸಲಾದ ತರಗತಿ ಚಟುವಟಿಕೆಗಳು:
ಸವ ಧಮ ಭಜನೆಗಳನ್ನು ಹಾಡುವುದು
ಸವ ಧಮ ಪ್ರಾಥನೆ (ಓಂ ತತ್ ಸತ್)
ಚಿತ್ರ ಹೊಂದಾಣಿಕೆ
ಪೂಜಾ ಸ್ಥಳಗಳ ಗುರುತಿಸುವಿಕೆ
- ವಿವಿಧ ಧಮಗಳ ಪೂಜಾ ಚಿತ್ರಗಳನ್ನು ಮಕ್ಕಳಿಗೆ ತೋರಿಸಿ. (ಉದಾ: ದೇವಾಲಯ/ ಚಚ್/ ಮಸೀದಿ ಉದಾ:)
- ಈ ಚಿತ್ರಗಳು ಯಾವ ಧಮಕ್ಕೆ ಸೇರಿದ್ದು ಎಂದು ಗುರುತಿಸಲು ಮಕ್ಕಳನ್ನು ಕೇಳಿ.
ಪವಿತ್ರ ಗ್ರಂಥಗಳನ್ನು ಗುರುತಿಸುವುದು
- ಮಕ್ಕಳಿಗೆ ವಿವಿಧ ಧಮಗಳ ಪವಿತ್ರ ಗ್ರಂಥಗಳನ್ನು ತೋರಿಸಿ. (ಉದಾ: ಭಗವದ್ಗೀತೆ, ಬೈಬಲ್, ಕುರಾನ್ ಇತ್ಯಾದಿ)
- ಈ ಗ್ರಂಥಗಳು ಯಾವ ಧಮಕ್ಕೆ ಸೇರಿದ್ದು ಎಂದು ಗುರುತಿಸಲು ಮಕ್ಕಳನ್ನು ಕೇಳಿ.
ಗುರುಗಳಿಗೆ ಸೂಚನೆ
Gurus may refer to the topic: Broad details of major religions for reference materials on the topic of religions