Home

Print Friendly, PDF & Email
ಶೀರ್ಷಿಕೆ: ಎಲ್ಲರೂ ಒಂದೇ! ಎಲ್ಲರೊಂದಿಗೆ ಸಮಾನವಾಗಿರಿ!
ಸೆಟ್ಟಿಂಗ್: ಮನೆಯ ಪರಿಸರ - ವಾಸದ ಕೋಣೆ.
ಪಾತ್ರಗಳು: ಅಜ್ಜಿ, ತಂದೆ, ತಾಯಿ, ಹರಿ ಮತ್ತು ರಾಮು (ಕೆಲಸದ ಹುಡುಗ) 
ಸಂಬಂಧಿತ ಮೌಲ್ಯಗಳು: ಪರಾನುಭೂತಿ, ಸ್ವ-ಸಹಾಯ, ಸಹ ಜೀವಿಯನ್ನು ಗೌರವಿಸಿ.
ದೃಶ್ಯ 1:
(ಇದು ಹರಿ ಮನೆಯಲ್ಲಿ ಬಿಡುವಿಲ್ಲದ ಬೆಳಿಗ್ಗೆ ಸಮಯ - ಹರಿ ಶಾಲೆಗೆ ತಯಾರಾಗುತ್ತಿದ್ದಾನೆ. ರಾಮು, ಕೆಲಸದ  ಹುಡುಗ ಮನೆಯಲ್ಲಿ ಎಲ್ಲರಿಗೂ ಸಹಾಯ ಮಾಡುತ್ತಿರುತ್ತಾನೆ)
ತಾಯಿ: (ಕಿರುಚುತ್ತಾ) ರಾಮು.!  ರಾಮು.!  ನೀನು ಎಲ್ಲಿದ್ದೀಯಾ?  ಹರಿ ಶಾಲೆಗೆ ಹೋಗುವ ಸಮಯ ಎಂದು ನಿನಗೆ ತಿಳಿದಿಲ್ಲವೇ?
ರಾಮು: ಬರುತ್ತಿದ್ದೇನೆ, ಆಂಟಿ (aunty). ನಾನು ಗಿಡಗಳಿಗೆ ನೀರು ಹಾಕುತ್ತಿದ್ದೆ.
ತಾಯಿ: ಅದು ತುರ್ತಿನ ಕೆಲಸವೇ?  ಸ್ಕೂಲ್ ಬಸ್ ಹಾರ್ನ್ ನಿನಗೆ ಕೇಳಿಸುತ್ತಿಲ್ಲವೇ?
ಹರಿ: ಅಮ್ಮ!  ನೋಡಿ!  ರಾಮು ನನ್ನ ಬೂಟುಗಳನ್ನು ಪಾಲಿಷ್(polish) ಮಾಡಿಲ್ಲ.
ತಾಯಿ: ಈ ದಿನಗಳಲ್ಲಿ ಅವನು ತುಂಬಾ ಸೋಮಾರಿಯಾಗಿದ್ದಾನೆ. ಹರಿ ಊಟದ ಡಬ್ಬಿ ಎಲ್ಲಿ?  (ರಾಮು ಊಟದ ಡಬ್ಬಿಯನ್ನು ತರಲು ಅಡುಗೆ ಮನೆಗೆ ಧಾವಿಸುತ್ತಾನೆ)
ತಂದೆ: (ಕೋಪದಿಂದ) ನೀನು ಏಕೆ ಕಂಬದಂತೆ ನಿಂತಿದ್ದೀಯಾ? ನೀನು ಅವನ ಚೀಲವನ್ನು ಹೊರಲು  ಸಾಧ್ಯವಿಲ್ಲವೇ? ಅದು ತುಂಬಾ ಭಾರವಾಗಿರುತ್ತದೆ.
ರಾಮು: ಸರಿ ... .  ಹರಿ.!  ನನಗೆ ಚೀಲ ಕೊಡಿಲ್ಲಿ. (ಇಬ್ಬರೂ ಹೊರಗೆ ಓಡುತ್ತಾರೆ)
ತಂದೆ: ಓಹ್, ಈಗ ನನಗೆ ನೆನಪಾಯಿತು. ಅವನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಅವನನ್ನು ನೋಡಲು ಬಯಸುತ್ತಿದ್ದಾರೆ ಎಂದು ಹೇಳಲು ಅವನ ಚಿಕ್ಕಪ್ಪ ಕರೆ ಮಾಡಿದ್ದರು.
ಅಜ್ಜಿ: ಪಾಪ, ಹೋಗಿ ಅವಳೊಂದಿಗೆ 4, 5 ದಿನಗಳು ಇದ್ದು ಬರಲಿ.
ತಂದೆ: ಸರಿ. (ರಾಮು ಅವರ ಚಿಕ್ಕಪ್ಪ ಬಂದು ಅವನ ಹಳ್ಳಿಗೆ ಕರೆದೊಯ್ಯುತ್ತಾರೆ…. 3 ದಿನಗಳ ನಂತರ.)
ದೃಶ್ಯ 2:
ತಾಯಿ: ನಾನು ಕೆಲಸ ಮಾಡಿ ತುಂಬಾ ದಣಿದಿದ್ದೇನೆ. ಅವನು ನನಗೆ ತುಂಬಾ ಸಹಾಯ ಮಾಡುತ್ತಿದ್ದ.
ಹರಿ: ಅವನು ಶಾಲೆಗೆ ಎಲ್ಲವನ್ನೂ ಸಿದ್ಧಪಡಿಸಿಡುತ್ತಿದ್ದ. ಓಹ್, ತುಂಬಾ ನೆನಪಿಗೆ ಬರುತ್ತಿದ್ದಾನೆ.
ಅಜ್ಜಿ: ನೀವೆಲ್ಲರೂ ಅವನ ಮೇಲೆ ಹೆಚ್ಚು ಅವಲಂಬಿತರಾಗಿದ್ದೀರಿ
ತಂದೆ: ನಿಜ. ತೋಟವನ್ನು ನೋಡಿ. ರಾಮು ಇಲ್ಲದೆ ಗಿಡಗಳು ಬಹುತೇಕ ಒಣಗಿ ಹೋಗಿವೆ.
ಅಜ್ಜಿ: ಆದರೆ, ನಿಮ್ಮಲ್ಲಿ ಯಾರಾದರೂ ಗಿಡಗಳಿಗೆ ನೀರು ಹಾಕಬಹುದು. ಇದು ನಮ್ಮ ತೋಟ, ಅದನ್ನು ಸರಿಯಾಗಿ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.
ತಂದೆ: ಹರಿ, ರಾಮು ನಿನ್ನ ವಯಸ್ಸಿನವನೇ. ನಿನ್ನ ಎಲ್ಲಾ ಕೆಲಸಗಳಿಗೆ ರಾಮು ಮೇಲೆ ಅವಲಂಬಿತನಾಗದೇ ಸ್ವತಂತ್ರವಾಗಿ ಮಾಡಲು ಪ್ರಯತ್ನಿಸು.
ತಂದೆ: ನಂತರ, ನೀನು ಹಾಸ್ಟೆಲ್‌ಗೆ ಹೋಗಬೇಕಾಗಬಹುದು ಎಂದು ಭಾವಿಸೋಣ. ಆಗ ಅಲ್ಲಿ ನಿನ್ನ ಕೆಲಸ ನೀನೆ ಹೇಗೆ ಮಾಡಿಕೊಳ್ಳುವೆ?
ಅಜ್ಜಿ: ಅಥವಾ, ಅವನು ಇನ್ನು ಮುಂದೆ ನಮ್ಮ ಮನೆಯಲ್ಲಿ ಮುಂದುವರಿಯದಿದ್ದರೆ, ಆಗ?
ತಾಯಿ: ದೇವರೇ, ನನಗೆ ಉಹಿಸಲೂ ಸಾಧ್ಯವಿಲ್ಲ. 
ಅಜ್ಜಿ: ನಾವು ಅವನ ಮೇಲೆ ಎಲ್ಲಾ ಕೆಲಸಗಳನ್ನು ಹೊರಿಸಬಾರದು.
ತಂದೆ: ಅಮ್ಮಾ, ನೀವು ಹೇಳಿದ್ದು ನಿಜ.
ತಾಯಿ: ಅವನು ಹಿಂದಿರುಗಿದ ನಂತರ ಇನ್ನು ಮುಂದೆ ನಾವು ಹಾಗೆ ಮಾಡಬಾರದು. ಇಲ್ಲದಿದ್ದರೆ, ಕಾಲಕ್ರಮೇಣ ನಾವು ತುಂಬಾ ಸೋಮಾರಿಗಳಾಗುವುದು ಖಂಡಿತ.
ಹರಿ: ಬೆಳಿಗ್ಗೆ ಎದ್ದ ನಂತರ ನನ್ನ ಹಾಸಿಗೆಯನ್ನು ಮಡಚಿ, ನನ್ನ ಬೂಟುಗಳನ್ನು ಪಾಲಿಷ್ ಮಾಡಿ, ನನ್ನ ನೀರಿನ ಬಾಟಲಿಯನ್ನು ಮತ್ತು ನನ್ನ ಊಟದ ಡಬ್ಬಿಯನ್ನು, ಚೀಲವನ್ನು ನಾನೇ ಜೋಡಿಸಿಕೊಳ್ಳುವೆ.
ತಂದೆ: ಅದು ಒಳ್ಳೆಯದು. ನಾವು ಅವನ ಕೆಲಸವನ್ನು ಹಂಚಿಕೊಂಡರೆ ಅವನಿಗೆ ಹೆಚ್ಚಿನ ಬಿಡುವಿನ ಸಮಯವೂ ಇರುತ್ತದೆ. ಮುಂದಿನ ವರ್ಷ ಅವನನ್ನು ಶಾಲೆಗೆ ಸೇರಿಸಬೇಕೆಂದು ನಿರ್ಧರಿಸಿದ್ದೇನೆ.
ಅಜ್ಜಿ: (ಸಂತೋಷ) ಒಳ್ಳೆಯ ವಿಚಾರ.

Leave a Reply

Your email address will not be published. Required fields are marked *