ಓಮ್ – ದೈವಿಕ ಸಂದೇಶ

Print Friendly, PDF & Email
ಓಂಕಾರದ ಕುರಿತಾಗಿ ಭಗವಾನ್ ಬಾಬಾರವರ ದಿವ್ಯ ಉಪನ್ಯಾಸಗಳಿಂದ ಆಯ್ದ ಸಂಗ್ರಹ
  • ಓಂಕಾರವು ಅನಾದಿನಿತ್ಯ ಅವ್ಯಯ ಮತ್ತು ಸರ್ವವನ್ನು ಒಳಗೊಂಡಿರುವ ಭಗವಂತನ ಪ್ರತೀಕವಾಗಿದೆ. ಚಿರಸ್ಥಾಯಿಯಾಗಿ ನಿಂತಿರುವ ನಕ್ಷತ್ರಗಳ ಚಲನ ಶಬ್ದವೇ ಓಂಕಾರವು. ನಿರಾಕಾರ ಪರಬ್ರಹ್ಮನು ಸೃಷ್ಟಿಯ ಸಂಕಲ್ಪವನ್ನು ತಾಳಿದಾಗ ಹೊರಹೊಮ್ಮಿದ ಓಂಕಾರ ಎಂಬ ಸಾಕಾರ ಶಬ್ದದಿಂದ ಈ ಸೃಷ್ಟಿಯ ಪ್ರಾರಂಭವಾಯಿತು. SSS6, ಅಧ್ಯಾಯ 42
  • ಪ್ರತಿಯೊಂದು ಸಣ್ಣ ಚಲನವಲನ ಅಥವಾ ಘಟನೆಯಲ್ಲಿ ಶಬ್ದದ ಪರಿಣಾಮವನ್ನು ನೋಡಬಹುದು. ನಿಮ್ಮ ಕಿವಿಗಳಿಗೆ ಕೇಳಿಸದಷ್ಟು ಸೂಕ್ಷ್ಮವಾಗಿರುತ್ತದೆ. ಕಣ್ಣಿನ ರೆಪ್ಪೆಗಳು ಮಿಟುಕಿಸಿದಾಗಲೂ ಶಬ್ದ ಬರುತ್ತದೆ. ಮಂಜಿನ ಹನಿಗಳು ಹೂವಿನ ದಳಗಳ ಮೇಲೆ ಬೀಳುವಾಗಲೂ ಶಬ್ದ ಬರುತ್ತದೆ. ಶಾಂತ ಸ್ಥಿತಿ ಪ್ರಕ್ಷುಬ್ಧಗೊಂಡಾಗಲೂ ಶಬ್ದ ಬರುತ್ತದೆ. ಈ ಪ್ರಣವ ಶಬ್ದ ಅಥವ ಓಂಕಾರವೆಂಬ ಶಬ್ದದ ಕಂಪನದಿಂದ ಪರಬ್ರಹ್ಮವು ಸ್ವ-ಜನಿತ ಮಾಯೆಯಿಂದ ಆಚ್ಛಾದಿಸಲ್ಪಟ್ಟಿದೆ. ಗಾಯತ್ರಿ ಮಂತ್ರವು ಓಂಕಾರದ ಅರ್ಥ ವಿಸ್ತರಣೆ ಆಗಿದ್ದು ಇದರ ಚಿಂತನೆಯಿಂದ ಆಧ್ಯಾತ್ಮ ಜೀವನಕ್ಕೆ ಪ್ರವೇಶವನ್ನು ಸಾಧಿಸಬಹುದಾದ ಕಾರಣ ಗಾಯತ್ರಿ ಮಂತ್ರವನ್ನು ಅತ್ಯಂತ ಪೂಜನೀಯ ಮತ್ತು ಅಮೂಲ್ಯವಾದ್ದದ್ದು ಎಂದು ಪರಿಗಣಿಸಲಾಗಿದೆ. SSS4, ಅಧ್ಯಾಯ 18
  • ನಾವು ಗಮನವಿಟ್ಟು ಆಲಿಸಿದ್ದೇ ಆದರೆ, ಪ್ರತಿಯೊಂದು ಶಬ್ದದಲ್ಲಿ ಓಂಕಾರದ ಮೂಲಕ ಭಗವಂತನ ಸಾನ್ನಿಧ್ಯವನ್ನು ನಾವು ಕಾಣಬಹುದು. ಪಂಚಭೂತಗಳಿಂದಲೂ ಓಂಕಾರ ನಾದವು ಕೇಳಬಹುದು. ದೇವಾಲಯದ ಘಂಟಾನಾದದಿಂದ ಹೊಮ್ಮುವ ಓಂಕಾರವು ಸರ್ವವ್ಯಾಪಿಯಾಗಿರುವ ಭಗವಂತನನ್ನು ಕಾಣುವ ಉದ್ದೇಶವಾಗಿದೆ. ಘಂಟಾನಾದದ ಓಂಕಾರದಿಂದ ನಮ್ಮ ಒಳಗಿರುವ ದೈವತ್ವದ ಚೈತನ್ಯವು ಜಾಗೃತಗೊಂಡು, ಭಗವಂತನ ಅಸ್ತಿತ್ವದ ಅರಿವು ಉಂಟಾಗುತ್ತದೆ. ಈ ಕಾರಣದಿಂದಲೇ ದೇವಾಲಯಗಳಲ್ಲಿ ಘಂಟೆಯನ್ನು ಹೊಡೆಯುವುದು SSS1, ಅಧ್ಯಾಯ 9
  • ಓಂಕಾರ ಮತ್ತು ಇತರ ಶಬ್ದಗಳು ಹಾಗೂ ಇತರ ಪದಗಳ ಉಚ್ಚಾರಣೆಯ ವ್ಯತ್ಯಾಸವೇನು? ಓಂಕಾರದ ಸಂಪೂರ್ಣ ಪರಿಣಾಮವನ್ನು ಪಡೆಯಲು ಅದರದೇ ಆದ ವಿನೂತನ ಮತ್ತು ನಿರ್ದಿಷ್ಟವಾದ ಉಚ್ಚಾರಣೆಯ ಕ್ರಮ ಇರುತ್ತದೆ. ಇತರೇ ಶಬ್ದಗಳನ್ನು ಉಚ್ಚರಿಸುವಾಗ ತುಟಿಗಳು ನಾಲಿಗೆ ಕೆನ್ನೆ ಮತ್ತು ದವಡೆಯ ಚಲನೆಯ ಪ್ರಕ್ರಿಯೆ ಇರುತ್ತದೆ. ಆದರೆ ಓಂಕಾರವನ್ನು ಉಚ್ಚರಿಸುವಾಗ ಇದ್ಯಾವುದರ ಚಲನೆಯೂ ಇರುವುದಿಲ್ಲ. ಇದು ಓಂಕಾರದ ವಿಶಿಷ್ಟತೆ. ಈ ಕಾರಣದಿಂದಲೇ ಓಂಕಾರವು ನಿಜವಾಗಿಯೂ “ಅಕ್ಷರ”ವಾದದ್ದು ಅಂದರೆ ನಾಶವಿಲ್ಲದ್ದು. ಬೇರೆ ಎಲ್ಲಾ ಶಬ್ದವೂ ಇತರೆ ಭಾಷೆಯ ಸಂವೇದನೆಗಳು.
  • ಓಂಕಾರದ ಉಪದೇಶವು ಅತ್ಯುನ್ನತವಾದದ್ದು. ಓಂಕಾರದಲ್ಲಿ ಸಕಲ ಧರ್ಮಶಾಸ್ತ್ರ, ತತ್ವಶಾಸ್ತ್ರ ಮತ್ತು ಪಾರಮಾರ್ಥಿಕ ವಿಜ್ಞಾನವು ಒಳಗೊಂಡಿದೆ. ಚಿಕ್ಕಮಗು ನಡೆಯಲು ಕಲಿಯುವಾಗ ಮೂರು ಚಕ್ರದ ಒಂದು ಆಟಿಕೆಯನ್ನು ಕೊಡುತ್ತಾರೆ. ಓಂಕಾರವು ಅಧ್ಯಾತ್ಮದ ಶಿಶುವಿಗೆ ಅದೇ ರೀತಿಯ ಒಂದು ‘ಮಾಧ್ಯಮ.’ ಈ ಆಟಿಕೆಯ ಮೂರು ಚಕ್ರಗಳೇ ಓಂಕಾರದ ಮೂರು ಅಕ್ಷರಗಳಾದ ಆ-ಕಾರ, ಉ-ಕಾರ ಮತ್ತು ಮ-ಕಾರ. ಓಂಕಾರವು ಪ್ರಾಣಶಕ್ತಿಯ ಅಂತರ್ಗತವಾದ ಶಬ್ದ.
    SSS5, ಅಧ್ಯಾಯ 46
  • ಕೃಷ್ಣನ ಮುರಳಿಯ ನಾದವು ನಾಲ್ಕು ವೇದಗಳ ಸ್ಪಷ್ಟ ನಿರ್ಣಯ ಮತ್ತು ಅಭಿವ್ಯಕ್ತಿ. ಓಂಕಾರವು ಅದೆಲ್ಲದರ ಮೂಲಾಧಾರ.
  • ಓಂಕಾರದ ಅ-ಕಾರ, ಉ-ಕಾರ, ಮ-ಕಾರ ಮತ್ತು ಬಿಂದು (ಹೃದಯದಲ್ಲಿ ಪ್ರಣವದ ಅನುರಣನೆ) ಚತುರ್ವೇದಗಳನ್ನು ಪ್ರತಿನಿಧಿಸುತ್ತದೆ. ಓಂಕಾರವು ರಾಮ ತತ್ವವನ್ನು ಪ್ರತಿನಿಧಿಸುತ್ತದೆ. ರಾಮಾಯಣದಲ್ಲಿ ಬರುವ ನಾಲ್ಕು ಸಹೋದರರಾದ ರಾಮ, ಲಕ್ಷ್ಮಣ, ಭರತ, ಶತ್ರುಘ್ನರು, ನಾಲ್ಕು ವೇದಗಳಾದ ಋಗ್, ಯಜುಸ್, ಸಾಮ ಮತ್ತು ಅಥರ್ವಣವನ್ನು ಪ್ರತಿನಿಧಿಸುತ್ತದೆ SSS14, ಅಧ್ಯಾಯ 9
  • ಓಂಕಾರ ಜಪದಿಂದ ಮನಸ್ಸಿನಲ್ಲಿ ಏಳುವ ವಿಚಾರಗಳ ಪ್ರಕ್ಷುಬ್ಧ ಅಲೆಗಳು ಶಮನವಾಗುತ್ತದೆ. ಓಂಕಾರವು ಭಗವಂತನ ಕುರಿತಾಗಿ ವೇದದಲ್ಲಿ ಬರುವ ತತ್ವ ಉಪದೇಶಗಳು ಮತ್ತು ಅವನನ್ನು ಆರಾಧಿಸುವುದರ ಎಲ್ಲಾ ವಿಧದ ಸಾರವಾಗಿದೆ. “ಓಮಿತ್ಯೇಕಾಕ್ಷರಂ ಬ್ರಹ್ಮ” ಓಂಕಾರವು ಪರಬ್ರಹ್ಮನ ಸಂಕೇತ.
  • ರಾಮಕೃಷ್ಣ ಪರಮಹಂಸರು ಒಬ್ಬನಿಗೆ ನಿರ್ದಿಷ್ಟ ಪ್ರಮಾಣದ ಆಫೀಮುಗಿಂತ ಹೆಚ್ಚಾಗಿ ಸೇವಿಸಬಾರದು ಎಂದು ಹೇಳಿದರು. ಅವರು ಅವನಿಗೆ ಒಂದು ಸೀಮೆಸುಣ್ಣದ ತುಂಡನ್ನು ಕೊಟ್ಟು ಅಷ್ಟೇ ಪ್ರಮಾಣದ ಅಫೀಮನ್ನು ಪ್ರತಿನಿತ್ಯ ಸೇವಿಸುವಂತೆ ಹೇಳಿದರು. ಆದರೆ ಅವರು ಅವನಿಗೆ ಒಂದು ಷರತ್ತನ್ನು ವಿಧಿಸಿದರು. ಆ ಸೀಮೆಸುಣ್ಣದ ತುಂಡನ್ನು ತೂಕ ಮಾಡುವ ಮೊದಲು ಒಂದು ಸ್ಲೇಟ್ ನ ಮೇಲೆ ಓಂಕಾರವನ್ನು ಬರೆದು ನಂತರ ತೂಕಮಾಡಿ ಆ ಪ್ರಮಾಣದ ಅಫೀಮು ಸ್ವೀಕರಿಸಬೇಕು ಎಂದು ಷರತ್ತು ವಿಧಿಸಿದ್ದರು. ಆ ವ್ಯಕ್ತಿಯು ಅದರಂತೆ ಮಾಡಲು ಸೀಮೆಸುಣ್ಣದ ತುಂಡು ಪ್ರತಿನಿತ್ಯವೂ ತನ್ನ ಗಾತ್ರದಲ್ಲಿ ಮತ್ತು ತೂಕದಲ್ಲಿ ಕಡಿಮೆಯಾಗುತ್ತಾ ಬಂದಂತೆ ತಾನು ಸೇವಿಸುವ ಅಫೀಮಿನ ತೂಕವು ಕಡಿಮೆಯಾಗುತ್ತ ಬಂದು ಒಂದು ದಿನ ಅಫೀಮಿನ ದುರಾಭ್ಯಾಸವು ಬಿಟ್ಟುಹೋಯಿತು. ಈ ರೀತಿಯಲ್ಲಿ ರಾಮಕೃಷ್ಣ ಪರಮಹಂಸರು ಅವನಿಗೆ ತಿಳಿಯದಂತೆ ಈ ದುರಾಭ್ಯಾಸವನ್ನು ಬಿಡಿಸಿದರು. ಪ್ರತಿಬಾರಿಯೂ ಓಂಕಾರವನ್ನು ಬರೆಯುವ ಕಾರಣದಿಂದ ಅವನಿಗೆ ಅಫೀಮಿನ ಮತ್ತಿಗಿಂತ ಭಗವಂತನ ಆನಂದವು ಹೆಚ್ಚು ರುಚಿಸಿತು. SSS7, ಅಧ್ಯಾಯ 43
  • ಓಂಕಾರವು ಮೂರು ಶಬ್ದಗಳ ಸಂಕೀರ್ಣ
  • ಅಕಾರವು ನಾಭಿಯಿಂದ ಹೊಮ್ಮಿ, ಉಕಾರವು ಗಂಟಲು ಮತ್ತು ನಾಲಿಗೆಯ ಮೂಲಕ ಸಾಗಿ, ಮಕಾರವು ಮುಚ್ಚಿದ ತುಟಿಗಳಿಂದ ಹೊರಹೊಮ್ಮುವುದು.
  • ಓಂಕಾರದ ವರ್ಣಗಳ ಉಚ್ಚಾರಣೆಯು ಎಷ್ಟು ಸಾಧ್ಯವೋ ಅಷ್ಟು ನಿಧಾನವಾಗಿ ಒಂದು ನಿರ್ದಿಷ್ಟ ವೇಗದಲ್ಲಿ ಮೇಲಕ್ಕೆ ಹೋಗುತ್ತಾ, ಹಾಗೇ ಅದೇ ಪ್ರಮಾಣದಲ್ಲಿ ಕ್ರಮೇಣ ಕೆಳಗಿಳಿದು ಮಕಾರದೊಂದಿಗೆ ಕೊನೆಗೊಂಡು, ನಿಶ್ಶಬ್ದದಲ್ಲಿ ಅದರ ನಾದವು ಹೃದಯದಲ್ಲಿ ಅನುರಣಿಸುತ್ತಿರಬೇಕು.
  • ಉಸಿರಾಟವನ್ನು ಹಿಡಿಯಲು ಸಾಧ್ಯವಾಗದ ನೆಪವನ್ನಿಟ್ಟುಕೊಂಡು ಎರಡು ಹಂತವಾಗಿ ಮಾಡಬಾರದು.
  • ಓಂಕಾರದ ಉಚ್ಚಾರಣೆಯ ಏರು ಕ್ರಮ, ಇಳಿಕೆಯ ಕ್ರಮ ಮತ್ತು ನಿಶ್ಯಬ್ದದ ಪ್ರಶಾಂತತೆಯನ್ನು ಒಂದೇ ಹಂತದಲ್ಲಿ ಧಾರಣೆ ಮಾಡಬೇಕು.
  • ಓಂಕಾರದ ನಾಲ್ಕು ವರ್ಣಗಳು ಎಚ್ಚರ, ಕನಸು, ನಿದ್ರೆ ಮತ್ತು ಈ ಮೂರಕ್ಕಿಂತ ಅತೀತವಾದ ಹಂತವನ್ನು ಪ್ರತಿನಿಧಿಸುತ್ತದೆ. ಇದು ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ವಿಕಸನದ ಹೂವಿನ ಹಂತವು ಹಣ್ಣಾಗಿ ಅದರಲ್ಲಿ ಅಂತಃಸತ್ವದ ರಸವನ್ನು ತುಂಬಿ ಸಂಪೂರ್ಣವಾಗಿ ಮಾಗಿ, ಕೊನೆಯದಾಗಿ ಮರದಿಂದ ಬೀಳುವುದು ಆಗಿರುತ್ತದೆ. SSS10, ಅಧ್ಯಾಯ13
  • ಪ್ರಶಾಂತಿ ನಿಲಯದಲ್ಲಿ ಓಂಕಾರವನ್ನು ನಿತ್ಯವೂ ಬ್ರಾಹ್ಮೀ ಮುಹೂರ್ತದಲ್ಲಿ 21 ಬಾರಿ ಹೇಳಲಾಗುತ್ತದೆ.
  • ಈ ಸಂಖ್ಯೆಗೆ ನಿರ್ದಿಷ್ಟವಾದ ಕಾರಣವಿದೆ.
  • ಮಾನವ ಶರೀರವು ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು ಮತ್ತು ಪಂಚಪ್ರಾಣಗಳನ್ನು ಒಳಗೊಂಡಿದೆ. ಪಂಚ ಕೋಶದ ಒಳಗೆ ದೈವತ್ವವು ಅಡಗಿದೆ. ಇದೆಲ್ಲವು ಸೇರಿ 20 ಆಗುತ್ತದೆ.
  • ಆ ಕಾರಣದಿಂದ 21 ಬಾರಿ ಓಂಕಾರ ಜಪಿಸುವುದರಿಂದ ಈ 20 ತತ್ವಗಳು ಪರಿಶುದ್ಧಗೊಂಡು 21ನೇ ತತ್ವವಾದ ಆ ವ್ಯಕ್ತಿಯನ್ನು ಭಗವಂತನಲ್ಲಿ ಲೀನವಾಗಲು ಸಹಾಯ ಮಾಡುತ್ತದೆ.
  • ಜೀವತತ್ವವು ಪರತತ್ವದಲ್ಲಿ ಲೀನವಾಗುತ್ತದೆ SSS14, ಅಧ್ಯಾಯ 3.
  • ಜೀವ ತತ್ವವನ್ನು 20 ತಲೆಯ ಕುದುರೆ ಏರಿದ ಸವಾರನನ್ನಾಗಿ ಚಿತ್ರಿಸಬಹುದು.
  • ಕೊನೆಯದಾಗಿ ಶಾಂತಿ ಮಂತ್ರವನ್ನು ಮೂರು ಬಾರಿ ಪಠನೆಯನ್ನು ಮಾಡುವುದರ ಮೂಲಕ ಸಮಾಪ್ತಿಗೊಳಿಸಬೇಕು. ಈ ಪ್ರಕ್ರಿಯೆಯ ಮೂಲಕ ಪರಿಶೋಧನೆ ಮತ್ತು ಸಂಸ್ಕರಣೆಯು ಕೊನೆಗೊಳ್ಳುವುದು.
  • ಮೂರು ಬಾರಿ ಶಾಂತಿಮಂತ್ರವನ್ನು ಪಠಿಸುವಾಗ, ಮೊದಲನೆಯ ಶಾಂತಿಯು ಆಧಿಭೌತಿಕ (ದೇಹ), ಎರಡನೆಯ ಶಾಂತಿಯು ಆಧಿದೈವಿಕ (ಮನಸ್ಸು), ಮೂರನೆ ಶಾಂತಿಯು ಆಧ್ಯಾತ್ಮಿಕದ (ಆತ್ಮ) ಸಂಸ್ಕರಣೆಗೆ ಇರುತ್ತದೆ
  • ಓಂಕಾರ ಜಪವೂ ನಮ್ಮ ಮನಸ್ಸಿನ ಪ್ರಕ್ಷುಬ್ಧತೆಯನ್ನು ಶಮನಗೊಳಿಸಿ ಭಗವಂತನ ಅನುಗ್ರಹದ ವರ್ಷವು ನಮ್ಮ ಮೇಲೆ ಹರಿಯುವಂತೆ ಮಾಡುತ್ತದೆ SSS14, ಅಧ್ಯಾಯ3
Audio
ವಿಷಯಕ್ಕೆ ಸಂಬಂಧಿಸಿದ ಸಂಪನ್ಮೂಲಗಳು

ಡಾ.ಶ್ರೀಕಾಂತ್ ಸೋಲಾ ಅವರು ಬೆಂಗಳೂರಿನ ಶ್ರೀ ಸತ್ಯ ಸಾಯಿ ಉನ್ನತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೃದ್ರೋಗ ತಜ್ಞರಾಗಿದ್ದಾರೆ. ಅವರು 12-14 ಅಕ್ಟೋಬರ್ 2012 ರಂದು ಅಮೆರಿಕಾದ ಶ್ರೀ ಸತ್ಯಸಾಯಿ ಸಂಸ್ಥೆಯ (Region) ಇವರಿಂದ ನಡೆದ ಸೈಲೆಂಟ್ ರಿಟ್ರೀಟ್ ನಲ್ಲಿ ಮಾತನಾಡಿದರು. 4ನೇ ಅವಧಿಯಲ್ಲಿ, ಡಾ. ಸೋಲಾ ಅವರು ಸಾಯಿ ಬೋಧನೆಯ ನುಡಿ ಮುತ್ತುಗಳ ಮೂಲಕ ನಮಗೆ ಓಂಕಾರದ ಉಚ್ಚಾರಣೆಯ ವಿಧಾನ ಮತ್ತು ಅದರ ಪರಿಣಾಮಗಳನ್ನು ತಿಳಿಸಿದರು. ಡಾ.ಸೋಲಾ ಅವರ ಭಾಷಣದ ವೀಡಿಯೋ ನೋಡಲು ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:

Leave a Reply

Your email address will not be published. Required fields are marked *

error: