ಬ್ರಹ್ಮಾರ್ಪಣಂ – ಹೆಚ್ಚಿನ ಓದುವಿಕೆ

Print Friendly, PDF & Email
ಬ್ರಹ್ಮಾರ್ಪಣಂ – ಹೆಚ್ಚಿನ ಓದುವಿಕೆ
ಬ್ರಹ್ಮಾರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಂ
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮ ಕರ್ಮ ಸಮಾಧಿನಾ ||

(ಅಧ್ಯಾಯ ೪, ಶ್ಲೋಕ ೨೪)

ಯಜ್ಞದಲ್ಲಿ ಎಲ್ಲವೂ ಬ್ರಹ್ಮಮಯ (ದಿವ್ಯ) ವಾದುದು. ಯಜ್ಞ, ಯಜ್ಞಾಗ್ನಿ, ಯಜ್ಞೋಪಕರಣಗಳು, ಅರ್ಪಿಸುವ ಎಲ್ಲಾ ಹವಿಸ್ಸೂ ಬ್ರಹ್ಮವೇ. ಅರ್ಪಣೆಯೂ ಬ್ರಹ್ಮ, ಅರ್ಪಿಸುವವನೂ ಬ್ರಹ್ಮ, ಕರ್ಮವೂ ಬ್ರಹ್ಮ, ಗುರಿಯೂ ಬ್ರಹ್ಮ, ಅಂದರೆ ಎಲ್ಲವೂ ಬ್ರಹ್ಮವೆಂದೇ ತಿಳಿಯುವುದು.

ಯಜ್ಞವೆಂದರೆ ‘ತ್ಯಾಗ’ ಎಂದು ಅರ್ಥ. ಭಗವಂತನನ್ನು ಸಂತೋಷಪಡಿಸುವುದಕ್ಕಾಗಿ ಇದನ್ನು ನಡೆಸಲಾಗುತ್ತದೆ. ವೈದಿಕ ಯಜ್ಞದ ಶಾಸ್ತ್ರವಿಧಿಯಲ್ಲಿ ಒಂದು ಯಾಗಾಗ್ನಿ ಇದ್ದು ಅದಕ್ಕೆ ಆಹುತಿಯನ್ನು ಅರ್ಪಿಸಲಾಗುತ್ತದೆ. ಅಗಿಗೆ ಅರ್ಪಿಸಿದ್ದೆಲ್ಲವೂ ಭಗವಂತನಿಗೆ ಸೇರುತ್ತದೆಯೆಂಬ ನಂಬಿಕೆ ಇದೆ.

“ಯಜ್ಞವು ಒಂದು ದೈವಿಕ ಅಂಚೆ ವ್ಯವಸ್ಥೆಯಾಗಿದೆ. ಪವಿತ್ರಾಗ್ನಿಯೇ ಅಂಚೆ ಪೆಟ್ಟಿಗೆ. ಹವಿಸ್ಸುಗಳು ಪತ್ರದ ವಿಷಯಗಳು. ವೇದಮಂತ್ರಗಳೇ ವಿಳಾಸಗಳು. ಆಚರಿಸುವವನ ನಂಬಿಕೆಯೇ ಲಕೋಟೆಯ ಮೇಲಿನ ಅಂಚೆಚೀಟಿ. ಪತ್ರಗಳು ಭಗವಂತನಿಗೆ ತಲುಪಿದಾಗ ಅವನು ಮಾನವಕುಲಕ್ಕೆ ಶಾಂತಿ ಮತ್ತು ಸಮೃದ್ಧಿಯನ್ನು ಅನುಗ್ರಹಿಸುತ್ತಾನೆ”. ಎಂದು ಬಾಬಾ ಹೇಳಿದ್ದಾರೆ.

ಯಾರು ಸದಾ ದೈವ ಪ್ರಜ್ಞೆಯಲ್ಲಿ ಜಾಗೃತರಾಗಿರುತ್ತಾರೋ ಮತ್ತು ಎಲ್ಲ ಕಾರ್ಯಗಳನ್ನು ಭಗವಂತನಿಗೆ ಅರ್ಪಿತವೆಂದು ಮಾಡುತ್ತಾರೋ ಅವರು ಯಜ್ಞದಲ್ಲಿಯೇ ನಿರತರಾಗಿರುತ್ತಾರೆ. ಪ್ರತಿನಿತ್ಯ ನಿಮ್ಮ ಸ್ವಾರ್ಥಪೂರ್ಣವಾದ ಅಪೇಕ್ಷೆಗಳನ್ನು, ಭಾವನೆಗಳನ್ನು, ಉದ್ವೇಗಗಳನ್ನು, ಪ್ರಚೋದನೆಗಳನ್ನು ಮತ್ತು ವರ್ತನೆಗಳನ್ನು ಭಕ್ತಿ ಮತ್ತು ಸಮರ್ಪಣೆಯ ಜ್ವಾಲೆಗೆ ಅರ್ಪಿಸುವ ಯಜ್ಞವನ್ನು ಮಾಡಿರಿ.

Leave a Reply

Your email address will not be published. Required fields are marked *