ಭಕ್ತಿ
ಭಕ್ತಿ
ಪ್ರೇಮವನ್ನು ವಿಭಿನ್ನ ರೂಪಗಳಲ್ಲಿ ವ್ಯಕ್ತಪಡಿಸಬಹುದು ಹಾಗೂ ಅನುಭವಿಸಬಹುದು.
- ಸ್ನೇಹಿತರ ಬಗೆಗಿನ ಪ್ರೇಮ – ಸ್ನೇಹ
- ತಾಯಿಯ ಪ್ರೇಮ – ವಾತ್ಸಲ್ಯ
- ಬಡವರು ಮತ್ತು ನಿರ್ಗತಿಕರ ಬಗ್ಗೆ ಪ್ರೇಮ – ಸಹಾನುಭೂತಿ
- ಹಿರಿಯರ ಬಗ್ಗೆ ಪ್ರೇಮ – ಗೌರವ
- ದೇಶದೆಡೆಗಿನ ಪ್ರೇಮ- ದೇಶಭಕ್ತಿ
- ದೇವರ ಮೇಲಿನ ಪ್ರೀತಿ – ಭಕ್ತಿ
ದೇವರ ಮೇಲಿನ ಪ್ರೇಮವೇ ಭಕ್ತಿ
ನಾವೆಲ್ಲರೂ ನಮ್ಮ ಹೆತ್ತವರನ್ನು ಪ್ರೀತಿಸುತ್ತೇವೆ, ಅಲ್ಲವೇ? ದೇಹ ಮಾತೆಯಾದ ತಾಯಿಗೆ ಪ್ರೇಮವನ್ನು ಹೇಗೆ ವ್ಯಕ್ತಪಡಿಸುವಿರಿ? ಆಕೆಯನ್ನು ಮೆಚ್ಚಿಸುವಂತಹ ಎಲ್ಲಾ ಕೆಲಸಗಳನ್ನು ಮಾಡುವ ಮೂಲಕ – ಅಲ್ಲವೇ? ಹಾಗೆಯೇ, ಭಗವಂತ ಪಂಚಭೂತಗಳನ್ನು, ಪಂಚೇಂದ್ರಿಯಗಳನ್ನು ನೀಡಿರುವ ಲೋಕ ಮಾತೆ.
- ಪ್ರಾರ್ಥನೆಯ ಮೂಲಕ– ನಾವು ಭಗವಂತನನ್ನು ಆರಾಧಿಸಿ ಆತನ ದೈವಿಕ ಗುಣಗಳನ್ನು ಸ್ತುತಿಸಿ ಆತನೊಂದಿಗೆ ಸಂಭಾಷಿಸಬಹುದು. ಆಂತರಿಕ ಶಾಂತಿ, ಸಾಮರಸ್ಯ ಮತ್ತು ಸಮತೋಲನವನ್ನು ಸಾಧಿಸಲು ದೇವರ ಹೆಸರನ್ನು ಜಪಿಸುವುದು ಸಹಕಾರಿಯಾಗಿದೆ. ನಾವು ಯಾವುದೇ ಕೆಲಸ ಪ್ರಾರಂಭಿಸುವ ಮೊದಲು ಧರ್ಮಸ್ವರೂಪವಾದ ದೇವರನ್ನು ಪ್ರಾರ್ಥಿಸಬೇಕು.
ನಾವು ಹೇಗೆ ಪ್ರಾರ್ಥಿಸಬೇಕು?
- ಭಕ್ತಿ ನೈಜವಾಗಿಯೂ ಆಳವಾಗಿಯೂ ಇರಬೇಕು. ಆಗ ದೇವರು ನಮ್ಮ ರಕ್ಷಣೆಗೆ ಬೇಗನೆ ಬರುತ್ತಾನೆ.
- ಭಕ್ತಿಯು ಪರಿಶುದ್ಧ ಪ್ರೇಮ, ದೃಢ ನಂಬಿಕೆ, ಉತ್ತಮ ನಡವಳಿಕೆ, ಉದಾತ್ತ ಚಿಂತನೆ ಮತ್ತು ಸಂಪೂರ್ಣ ಶರಣಾಗತಿಯನ್ನು ವೃದ್ಧಿಸುತ್ತದೆ.
- ಪ್ರೇಮ ಮತ್ತು ಶ್ರದ್ಧೆಯಿಂದ ಜಪಿಸಿದ ಭಗವಂತನ ನಾಮವು, ಆತನ ಕೃಪೆಯನ್ನು ತರಿಸುವ ಶಕ್ತಿಯನ್ನು ಹೊಂದಿದೆ.
(ದಿವ್ಯೋಪನ್ಯಾಸ- 23, ನವೆಂಬರ್ 1968)
ಗುರುಗಳು ಪ್ರಹ್ಲಾದ, ದ್ರೌಪದಿ, ಗಜೇಂದ್ರ, ನಾರದ, ಹನುಮಂತ, ಶಬರಿಯ ಭಕ್ತಿ ಮತ್ತು ನವ ವಿಧ ಭಕ್ತಿಯ ಕಥೆಗಳನ್ನು ನಿರೂಪಿಸಬಹುದು.
- ಧನ್ಯವಾದ ಹೇಳುವುದರ ಮೂಲಕ– ನಾವು ಭಗವಂತನ ಪಾದಾರವಿಂದಗಳಲ್ಲಿ ಪ್ರೀತಿ ಮತ್ತು ಕೃತಜ್ಞತೆಯ ಪುಷ್ಪಗಳನ್ನು ಸಲ್ಲಿಸಬೇಕು. ನಾವು ಕೆಲಸವನ್ನು ಪ್ರಾರಂಭಿಸುವಾಗ ದೇವರನ್ನು ಸ್ಮರಿಸುವಂತೆ, ಕೆಲಸ ಪೂರ್ಣವಾದ ಬಳಿಕವೂ ದೇವರಿಗೆ ಧನ್ಯವಾದಗಳನ್ನು ಅರ್ಪಿಸಬೇಕು.
- ಹೆತ್ತವರನ್ನು ಆದರಿಸುವ ಮೂಲಕ– ‘ಮಾತೃ ದೇವೋ ಭವ, ಪಿತೃ ದೇವೋ ಭವ’ ಎಂಬ ತೈತ್ತರೀಯ ಉಪನಿಷತ್ತಿನ ಆಜ್ಞೆಯನ್ನು ಪಾಲಿಸಬೇಕು. ನಮ್ಮ ಹೆತ್ತವರೇ ಈ ಭುವಿಯ ಪ್ರತ್ಯಕ್ಷ ದೇವರು. ಆದ್ದರಿಂದ ನಾವು ಅವರನ್ನು ಗೌರವಿಸಬೇಕು.
- ನಮ್ಮ ಕೆಲಸದಲ್ಲಿ ಸಮರ್ಪಣೆಯ ಮೂಲಕ– ನಮ್ಮ ಕೆಲಸವೇ ಪೂಜೆಯಾಗಬೇಕು. ನಾವು ನಮ್ಮ ಕರ್ತವ್ಯವನ್ನು ಆಸಕ್ತಿಯಿಂದ ಹೃತ್ಪೂರ್ವಕವಾಗಿ ನಿರ್ವಹಿಸಿದಾಗ, ಅದು ಕೂಡ ಒಂದು ರೀತಿಯ ಭಕ್ತಿಯಾಗುವುದು. ಕರ್ಮವೇ ಪೂಜೆ. ಕರ್ತವ್ಯವೇ ದೇವರು.