ಆಟ (ಶಿಸ್ತು)
ಆಟ (ಶಿಸ್ತು)
1. ನಿಯಮಬದ್ಧ ಅಥವಾ ನಿಯಮಗಳಿಲ್ಲದ ಆಟ:
ಗುರುಗಳು ವಿದ್ಯಾರ್ಥಿಗಳನ್ನು ಕ್ಯಾರಮ್ ಬೋರ್ಡ್ ಅಥವಾ ಚದುರಂಗ ಅಥವಾ ಇನ್ನಾವುದೇ ಮಣೆಯ ಆಟವನ್ನು ಆಡಲು ಹೇಳಬಹುದು – ಆಟಕ್ಕೆ ಯಾವ ನಿಯಮಗಳನ್ನೂ ಅನುಸರಿಸಬೇಕಾಗಿಲ್ಲ ಎಂಬ ಪೂರ್ವ ಷರತ್ತು ವಿಧಿಸಬೇಕು. ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಈ ಕಲ್ಪನೆಯು ಬಹಳ ಆಕರ್ಷಕವಾಗಿ ಕಾಣುವುದು. ಆದರೆ, ಒಮ್ಮೆ ಅವರು ಆಟವಾಡಲು ಪ್ರಾರಂಭಿಸಿದಾಗ, ಯಾವುದೇ ನಿಯಮಗಳಿಲ್ಲದ ಆಟವನ್ನು ಆಡುವಲ್ಲಿ ನಿಜವಾಗಿಯೂ ಮೋಡಿ ಇಲ್ಲ ಎಂದು ಅವರು ಕಂಡುಕೊಳ್ಳುತ್ತಾರೆ. ಕೊನೆಗೆ, ನಿಯಮಗಳಿಲ್ಲದೆ ಯಾರಾದರೂ ಹೇಗೆ ಬೇಕಾದರೂ ತಮಗಿಷ್ಟ ಬಂದ ರೀತಿಯಲ್ಲಿ ಆಟವಾಡುವುದನ್ನು ನೋಡಿದಾಗ ಅವರಿಗೆ ಅದು ನೀರಸವಾಗಿ ಕಾಣುವುದು. ನಿಯಮಗಳನ್ನು ಹೇಗೆ ನಮ್ಮ ಒಳ್ಳೆಯದಕ್ಕಾಗಿ ರೂಪಿಸಲಾಗಿದೆ ಮತ್ತು ನಿಯಮ-ನಿಬಂಧನೆಗಳಿಲ್ಲದಿದ್ದರೆ ಯಾವುದೇ ಚಟುವಟಿಕೆಯಲ್ಲಾಗಲಿ, ನಮ್ಮ ಜೀವನದಲ್ಲಿಯೂ ಸಹ ಯಾವ ಸ್ವಾರಸ್ಯವೂ ಇಲ್ಲವೆಂದು ಗುರುಗಳು ವಿದ್ಯಾರ್ಥಿಗಳೊಂದಿಗೆ ಚರ್ಚಿಬಹುದು.
2. “ಸರಿಯಾದ ಪ್ರಶ್ನೆ– ತಪ್ಪಾದ ಉತ್ತರ” ಆಟ:
ಗುರುಗಳು ಪ್ರಶ್ನೆಗಳ ಪಟ್ಟಿಯನ್ನು ತಯಾರಿಸಬೇಕು. ಮೊದಲ ಪ್ರಶ್ನೆಗೆ ಉತ್ತರ “ಸಾಯಿರಾಂ” ಮಾತ್ರ ಎಂದು ಗುರುಗಳು ಮಕ್ಕಳಿಗೆ ಸೂಚಿಸಬೇಕು. ಎರಡನೆಯ ಪ್ರಶ್ನೆಯನ್ನು ಕೇಳಿದಾಗ, ಮಕ್ಕಳು ಮೊದಲ ಪ್ರಶ್ನೆಗೆ ಉತ್ತರಿಸಬೇಕು, ಮತ್ತು ಮೂರನೆಯ ಪ್ರಶ್ನೆಯನ್ನು ಕೇಳಿದಾಗ, ಅವರು ಎರಡನೆಯದಕ್ಕೆ ಉತ್ತರಿಸಬೇಕು. ಉತ್ತರಗಳು ತುಂಬಾ ತಮಾಷೆಯಾಗಿ ಕಾಣಿಸುತ್ತವೆ, ಮತ್ತು ಮಕ್ಕಳು ಈ ರೀತಿಯ ಅಭ್ಯಾಸವನ್ನು ಆನಂದಿಸುವರು.
ಕೆಲವು ಮಾದರಿ ಪ್ರಶ್ನೆಗಳು ಮತ್ತು ಉತ್ತರಗಳು ಈ ಕೆಳಗಿನಂತಿವೆ:
1. | ನೀವು ಯಾವಾಗ ಹಲ್ಲುಜ್ಜುತ್ತೀರಿ? | ಸಾಯಿರಾಂ |
2. | ನೀವು ಯಾವ ಸಮಯದಲ್ಲಿ ಟಿವಿ ನೋಡುತ್ತೀರಿ? | ಮುಂಜಾನೆ |
3. | ನೀವು ಕರಾಗ್ರೇ ಅನ್ನು ಯಾವಾಗ ಜಪಿಸುತ್ತೀರಿ? | ಸಂಜೆ ನಾನು ಶಾಲೆಯಿಂದ ಹಿಂದಿರುಗಿದಾಗ |
4. | ನೀವು ಯಾವಾಗ ಬ್ರಹ್ಮಾರ್ಪಣಂ ಎಂದು ಹೇಳುತ್ತೀರಿ? | ನಾನು ನಿದ್ರೆಯಿಂದ ಎದ್ದಾಗ, ದಿನವನ್ನು ಪ್ರಾರಂಭಿಸುವ ಮೊದಲು |
5. | ನಿಮ್ಮ ಕಪಾಟನ್ನು ಸ್ವಚ್ಛ ಗೊಳಿಸಲು ಯಾವ ಸಮಯವನ್ನು ನಿಗದಿಪಡಿಸಿರುವಿರಿ? | ್ರತಿದಿನ ನಾನು ಆಹಾರವನ್ನು ಸೇವಿಸುವ ಮುನ್ನ |
6. | ನೀವು ನಗರಸಂಕೀರ್ತನೆಯಲ್ಲಿ ಪಾಲ್ಗೊಳ್ಳುವಿರಾ? ಹಾಗಾದರೆ ಯಾವಾಗ? | ಪ್ರತಿ ಭಾನುವಾರ, ಸಂಜೆ 3 ರಿಂದ 4 ರವರೆಗೆ |
ಮಕ್ಕಳಿಗೆ ಉತ್ತರಗಳು ತಮಾಷೆಯಾಗಿ ಏಕೆ ಕಂಡು ಬಂತು?
ಕಲಿಕೆ
ಅವರು ತಮ್ಮ ದೈನಂದಿನ ಜೀವನದಲ್ಲಿ ಈ ಕೆಲಸಗಳನ್ನು ನಿಜವಾಗಿಯೂ ಮಾಡಿದಾಗ ಏನಾಗಬಹುದು? ಎಂಬುದರ ಬಗ್ಗೆ ಗುರುಗಳು ವಿವರವಾಗಿ ಚರ್ಚಿಸಬೇಕು. ಜೀವನದಲ್ಲಿ, ಯಾವುದೇ ಶಿಸ್ತು ಇಲ್ಲದಿದ್ದರೆ ನಾವು ನಗೆಪಾಟಲಾಗಬೇಕಾಗುವುದು ಎಂಬ ವಿಶ್ಲೇಷಣೆಯು ಮಹತ್ವದ್ದಾಗಿದೆ- ಇದರಿಂದಾಗಿ ಶಿಸ್ತು ಇಲ್ಲದ ಜೀವನವನ್ನು, ದಾರವಿಲ್ಲದ ಗಾಳಿಪಟಕ್ಕೆ ಹೋಲಿಸಬಹುದು ಎಂಬ ಅಂಶವನ್ನು ಗುರುಗಳು ಮನವರಿಕೆ ಮಾಡಿಸಬಹುದು.