ದೈವಿಕ ಭವ್ಯತೆ

Print Friendly, PDF & Email
ದಿವ್ಯ ಮಾಗ೵ದಶ೵ನ

ಮಕ್ಕಳಲ್ಲಿ ಧಮ೵ಗಳ ಬಗ್ಗೆ ಗೊಂದಲಗಳು ಮೂಡಬಾರದೆಂಬ ಉದ್ದೇಶದಿಂದ ಬಾಲವಿಕಾಸದ ಆರಂಭದ ತರಗತಿಗಳಲ್ಲಿ ವಿವಿಧ ಧಮ೵ಗಳು, ಅವುಗಳ ವಿಶೇಷತೆಗಳ ಬಗ್ಗೆ ಪಾಠಗಳನ್ನು ಮಾಡಬಹುದು. ಧಾಮಿ೵ಕ ಆಚರಣೆಗಳು, ಕಟ್ಟುಪಾಡುಗಳು, ಬೆರೆ ಬೇರೆ ಧಮ೵ಗಳಲ್ಲಿ ಬೇರೆ ಬೇರೆ ರೀತಿಯದಾಗಿದ್ದರೂ, ಒಂದಕ್ಕೊಂದು ಭಿನ್ನಾಭಿಪ್ರಾಯಗಳನ್ನು ಉಂಟು ಮಾಡುವಂತಿದ್ದರೂ, ವಾಸ್ತವವಾಗಿ ಎಲ್ಲಾ ಧಮ೵ಗಳ ಮೂಲತತ್ವಗಳು ಒಂದೇ ಆಗಿರುತ್ತವೆ. ಮಕ್ಕಳಿಗೆ ಧಮ೵ಗಳ ನಡುವಿನ ಸಾಮರಸ್ಯ, ಅವುಗಳ ಸ್ಪಷ್ಟ ಚಿತ್ರಣ, ವ್ಯತ್ಯಾಸ ಇವುಗಳ ಬಗ್ಗೆ ಅಥ೵ಮಾಡಿಕೊಳ್ಳಲು ಕಷ್ಟಸಾಧ್ಯವಾಗುವುದರಿಂದ, ಧಮ೵ಗಳ ಆಳವಾದ ಅಧ್ಯಯನವನ್ನು ಮಾಡುವುದಿಲ್ಲ. ಬದಲಾಗಿ ನಾವು ಎಲ್ಲಾ ಧಮ೵ಗಳಲ್ಲಿ ಹೇಳಿರುವ ಸಮಾನ ಉದ್ದೇಶ ತತ್ವಗಳನ್ನು ತಿಳಿಸುತ್ತೇವೆ.

ಪ್ರಾಥ೵ನೆಯ ಪ್ರಾಮುಖ್ಯತೆ, ಆರಾಧನೆಯ ಅಗತ್ಯತೆ, ಸೋದರತ್ವ ಹಾಗೂ ಪಿತೃತ್ವದ ಸಿದ್ಧಾಂತ, ಎಲ್ಲದರಲ್ಲೂ ಪ್ರೀತಿಯನ್ನು ಬೆಳೆಸಿಕೊಳ್ಳುವ ಗುಣ ಇತ್ಯಾದಿಗಳನ್ನು ಎಲ್ಲಾ ಧಮ೵ಗಳಲ್ಲಿಯೂ ಕಾಣಬಹುದಾಗಿದೆ. ಅಷ್ಟೇ ಅಲ್ಲದೆ ಇವುಗಳನ್ನು ಎಲ್ಲಾ ಧಮ೵ಗಳೂ ಪಾಲಿಸಿಕೊಂಡು ಬರುತ್ತಿವೆ.

ಎಲ್ಲ ಧಮ೵ಗಳ ಗುರಿ ಒಂದೇ ಆಗಿದ್ದರೂ ಅದನ್ನು ಸಾಧಿಸುವ ಮಾಗ೵ಗಳು ಮಾತ್ರ ಬೇರೆ ಬೇರೆಯದಾಗಿರುತ್ತದೆ. (ಭಿನ್ನವಾಗಿರುತ್ತದೆ). ಆಭರಣಗಳ ವಿನ್ಯಾಸ ಬೇರೆ ಬೇರೆಯದಾಗಿದ್ದರೂ, ಅವುಗಳಿಗೆ ಉಪಯೋಗಿಸಲ್ಪಡುವ ಮೂಲ ಕಚ್ಚಾ ವಸ್ತು ಅಂದರೆ `ಚಿನ್ನ’ ಒಂದೇ. ಬಣ್ಣ ಬಣ್ಣದ ದನಗಳಿರಬಹುದು, ಆದರೆ ಅವುಗಳು ನೀಡುವ ಹಾಲು ಒಂದೇ. ಅದು ಬಿಳಿ ಮಾತ್ರ. ಅಂತೆಯೇ ಜನರು ಧರಿಸುವ ಉಡುಪುಗಳು ಬೇರೆ ಬೇರೆ ಹೆಸರು, ಬಣ್ಣ, ಆಕಾರಗಳಿಂದ ಕೂಡಿದ್ದರೂ, ಇವೆಲ್ಲವುಗಳನ್ನು ಬಟ್ಟೆಯಿಂದಲೇ ತಯಾರಿಸಲಾಗುತ್ತದೆ. ಅಂತೆಯೇ ಧಮ೵ಗಳು ವಿಭಿನ್ನವಾಗಿದ್ದರೂ, ಅವುಗಳ ತತ್ವ, ಆದಶ೵, ಸಿದ್ಧಾಂತ, ಗುರಿ ಎಲ್ಲವೂ ಒಂದೇ ಆಗಿದೆ. ಅವರವರ ಸಂಪ್ರದಾಯಕ್ಕೆ ಅನುಸಾರವಾಗಿ ವೇದಗಳಲ್ಲಿ ಉಲ್ಲೇಖಿಸಿರುವಂತೆ ಹಿಂದೂಗಳು, ಖುರಾನ್‍ನಂತೆ ಮುಸ್ಲಿಮರೂ, ಬೈಬಲಿನಂತೆ ಕ್ರೈಸ್ತರೂ ತಮ್ಮ ತಮ್ಮ ಸಂಪ್ರದಾಯವನ್ನು ಅನುಸರಿಸಿ ದೇವರನ್ನು ಆರಾಧಿಸುತ್ತಾರೆ. ಹೊರಗಿನಿಂದ ನೋಡುವಾಗ ನಾನಾ ಧಮ೵ದವರು ವಿಧವಿಧವಾಗಿ ಆರಾಧಿಸಿಕೊಂಡು ಬಂದರೂ ಎಲ್ಲರ ಗುರಿ ದೇವರ ಆಶೀವಾ೵ದವನ್ನು ಪಡೆಯುವುದೇ ಆಗಿದೆ.

ಎಲ್ಲಾ ಧಮ೵ಗಳೂ ಮೂಲಭೂತವಾಗಿ ಪ್ರೀತಿ, ದಯೆ, ಸಹೋದರತ್ವದ ಗುಣಗಳನ್ನೇ ಬೋಧಿಸುತ್ತವೆ. ಮನುಷ್ಯ ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡಬೇಕು, ಪ್ರೀತಿಸಬೇಕು, ಎಂಬುದಾಗಿ ಎಲ್ಲ ಧಮ೵ಗಳೂ ಬೋಧಿಸುತ್ತವೆ. ಸದ್ಗುಣ ಹಾಗೂ ಸಹಿಷ್ಣುತೆಗೆ ಮಹತ್ವವನ್ನು ನೀಡುತ್ತವೆ. ವೇದ, ಕುರಾನ್, ಬೈಬಲ್‍ಗಳಲ್ಲಿಯೂ ಇದನ್ನೇ ಬೋಧಿಸಲಾಗುತ್ತದೆ. ಜೋರಾಷ್ಟರ್ ಹೇಳುವಂತೆ, ಜೀವನದಲ್ಲಿ ಪ್ರಾಥ೵ನೆಯು ಅತ್ಯಗತ್ಯವಾಗಿದೆ. ಪ್ರಾಥ೵ನೆ ನಮ್ಮ ಮನಸ್ಸನ್ನು ಶಾಂತಗೊಳಿಸುವುದಲ್ಲದೆ, ದುಷ್ಟ ಪ್ರವೃತ್ತಿಯನ್ನೂ ಹೋಗಲಾಡಿಸುತ್ತದೆ. ನಮ್ಮಲ್ಲಿರುವ ದುಗು೵ಣಗಳನ್ನು ಬೆಂಕಿಗೆ ಆಹುತಿ ನೀಡುವುದೇ ನಾವು ದೇವರಿಗೆ ನೀಡುವ ದೊಡ್ಡ ಸಮಪ೵ಣೆ. ಒಳ್ಳೆಯ ಆಲೋಚನೆ, ಒಳ್ಳೆಯ ಮಾತು, ಒಳ್ಳೆಯ ಕೆಲಸ ಈ ಮೂರು ಧಾಮಿ೵ಕ ಬದುಕಿಗೆ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ಉಪನಿಷತ್ತಿನಲ್ಲಿ ಉಲ್ಲೇಖಿಸಿರುವಂತೆ, ಗೌತಮ ಬುದ್ಧರು ಇಡೀ ಪ್ರಪಂಚ ಹಾಗೂ ಜೀವನ ದು:ಖಮಯವಾಗಿದೆ “ಸವ೵ಂ ದು:ಖಂ” ಎಂದಿದ್ದಾರೆ. ಮಾತ್ರವಲ್ಲದೆ ಈ ದು:ಖದಿಂದ ಮುಕ್ತರಾಗಲು ಅವರು ೮ ಮಾಗೋ೵ಪಾಯಗಳನ್ನು ಹೇಳಿದ್ದಾರೆ.

ಹೊರಗಿನಿಂದ ನೋಡುವಾಗ ಧಾಮಿ೵ಕ ಆಚರಣೆ, ಕಟ್ಟುಪಾಡುಗಳು ಬೇರೆ ಬೇರೆಯಾಗಿದ್ದರೂ ಮೂಲ ಉದ್ದೇಶ ಎಲ್ಲಾ ಧಮ೵ಗಳದ್ದೂ ಒಂದೇ ಆಗಿದೆ.

ಆದರೆ ನಮ್ಮ ಮನಸ್ಸಿನ ಆಲೋಚನೆಗಳು ಭಿನ್ನವಾಗಿರುವುದರಿಂದ, ನಾವು ಇವೆಲ್ಲವುಗಳನ್ನು ಭಿನ್ನವಾಗಿ ಕಾಣುತ್ತೇವೆ. ಎಲ್ಲಾ ಧಮ೵ಗಳ ಮೂಲ ಅಥ೵, ಧಮ೵ಗಳಲ್ಲಿನ ಏಕತೆಯನ್ನು ಅರಿತುಕೊಂಡು ನಾವು ಮಕ್ಕಳಿಗೆ ಬೋಧಿಸಬೇಕು. ಅವರಿಗೆ ಅವರವರ ಧಮ೵ದ ಮೇಲೆ ಪ್ರೀತಿ ಮಾತ್ರವಲ್ಲದೆ, ಎಲ್ಲಾ ಧಮ೵ಗಳ ಬಗ್ಗೆ ಗೌರವ ಮೂಡುವಂತೆ ಮಾಡಬೇಕು. ಆಲೋಚನೆಗಳಲ್ಲಿ ವ್ಯತ್ಯಾಸ, ಇಷ್ಟಪಡದಿರುವುದು, ಅಸಹಿಷ್ಣುತೆ ಇತ್ಯಾದಿಗಳು ಮಕ್ಕಳ ಮನಸ್ಸಿಗೆ ಬಾರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅಂತಹ ಗುಣಗಳು ಕಂಡುಬಂದರೆ, ಅವುಗಳನ್ನು ಸಮಾಜದ ಒಳಿತಿಗಾಗಿ ತೊಡೆದು ಹಾಕಬೇಕು.

ನೈತಿಕ ಹಾಗೂ ಆಧ್ಯಾತ್ಮಿಕ ಸತ್ಯಗಳನ್ನು ತಿಳಿಸಲು ಭಗವಂತನೂ, ಧಮ೵ಗುರುಗಳೂ, ಜನ್ಮ ತಳೆಯುತ್ತಾರೆ. ಪ್ರತಿಯೊಬ್ಬರೂ ಬೇರೆ ಬೇರೆ ಆಯಾಮಗಳಲ್ಲಿ ಸಮಯ, ಸಂದಭ೵ಗಳಿಗೆ ಅನುಸಾರವಾಗಿ, ಜನರ ಪರಿಸ್ಥಿತಿಗೆ ಅನುಗುಣವಾಗಿ ಅಥವಾ ಆಕಸ್ಮಿಕವಾಗಿ ಕೆಲವು ವಿಷಯಗಳಿಗೆ ಒತ್ತು ನೀಡಿದರೂ, ಮೂಲಭೂತ ತತ್ವಗಳು ಎಲ್ಲರದ್ದು ಒಂದೇ ಆಗಿದೆ. ಎಲ್ಲಾ ಧಮ೵ಗಳೂ ಸತ್ಯದ ವಿವಿಧ ಆಯಾಮಗಳು. ಬಾಲವಿಕಾಸದಲ್ಲಿ ಇಂತಹ ಮೂಲ ಸತ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಮೂಡುವಂತೆ ಮಾಡಿ, ಬೆಳೆಸಿ, ಪೋಷಿಸಿದರೆ ಭವಿಷ್ಯದಲ್ಲಿ ಮಕ್ಕಳು ಎಲ್ಲಾ ಧಮ೵ಗಳ ಮೇಲೆ ನಂಬಿಕೆ ಹಾಗೂ ಒಂದೇ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತಾರೆ.

ಎಲ್ಲಾ ಕಡೆಗಳಲ್ಲಿಯೂ ಬಾಲವಿಕಾಸದ ತರಗತಿಗಳಲ್ಲಿ ಬೇರೆ ಬೇರೆ ಧಮ೵ದ ಮಕ್ಕಳು ಇರುವುದಿಲ್ಲ. ಆದರೆ ಎಲ್ಲೆಲ್ಲಿ ಅಂತಹ ತರಗತಿಗಳು ಇವೆಯೋ, ಅಂತಹ ತರಗತಿಗಳಲ್ಲಿ ಬಾಲವಿಕಾಸದ ಗುರುಗಳು ಎಲ್ಲಾ ಧಮ೵ಗಳ ಕುರಿತು ಅಧ್ಯಯನ ನಡೆಸಿ ಮಕ್ಕಳಿಗೆ ಬೋಧಿಸಬೇಕು.

Divine Guidelines to Balvikas [Balvikas gurus’ Conference-1978]

Leave a Reply

Your email address will not be published. Required fields are marked *