ವರ್ತನೆಯ ಪರೀಕ್ಷೆ (ಕರ್ತವ್ಯ)
ವರ್ತನೆಯ ಪರೀಕ್ಷೆ
ಪ್ರಶ್ನೆ 1– ನಿಮ್ಮ ಮನೆಕೆಲಸ (homework) ಮಾಡುವಾಗ,
- ಅದನ್ನು ನೀವೇ ಸ್ವತಃ ಮಾಡುವಿರಾ?
- ಪೋಷಕರ ಸೂಚನೆಯ ಮೇರೆಗೆ ಮಾತ್ರ ಮಾಡುವಿರಾ?
- ಅದನ್ನು ಪೂರ್ಣಗೊಳಿಸುವ ಬಗ್ಗೆ ಅನಾಸಕ್ತರಾಗಿರುವಿರಾ?
- ನಿಮ್ಮ ತಾಯಿ ಅಥವಾ ಸಹೋದರಿ ನಿಮ್ಮ ಮನೆಕೆಲಸ ಮಾಡಿ ಕೊಡುವರೆಂದು ನಿರೀಕ್ಷಿಸುವಿರಾ?
ಪ್ರಶ್ನೆ 2– ನೀವು ಮನೆಯಲ್ಲಿ ಕೆಲವು ಸಸ್ಯಗಳು/ಸಣ್ಣ ಉದ್ಯಾನವನ್ನು ಹೊಂದಿರುವಿರಿ. ನಿಮ್ಮ ತಾಯಿ ಕೆಲವು ದಿನಗಳವರೆಗೆ ತುರ್ತಾಗಿ ಬೇರೆ ಊರಿಗೆ ಹೋಗಬೇಕಾಗುವುದು. ನೀವು, ಆಕೆಯ ಅನುಪಸ್ಥಿತಿಯಲ್ಲಿ,
- ಗಿಡಗಳಿಗೆ ನೀರು ಹಾಕುವಿರಾ?
- ಗಿಡಗಳಿಗೆ ನೀರುಣಿಸಲು ನಿಮ್ಮ ತಂದೆಗೆ ಹೇಳುವಿರಾ?
- ಗಿಡಗಳಿಗೆ ನೀರು ಹಾಕುವ ಬಗ್ಗೆ ಚಿಂತಿಸದೇ ಇರುವಿರಾ?
- ಮನೆಯಲ್ಲಿ ಗಿಡಗಳಿವೆ ಎಂದು ನಿಮಗೆ ತಿಳಿದೇ ಇಲ್ಲವೋ?
ಪ್ರಶ್ನೆ 3– ನಿಮ್ಮ ಅಣ್ಣ ಮರೆತು ಫ್ಯಾನ್ ನ್ನು ಆಡಲು ಬಿಟ್ಟಿದ್ದಾರೆ. ಇದನ್ನು ಗಮನಿಸಿದಾಗ, ನೀವು
- ತಕ್ಷಣ ಫ್ಯಾನ್ ಸ್ವಿಚ್ ಆರಿಸುವಿರಾ?
- ನಿಮ್ಮ ಸಹೋದರನ ಬಗ್ಗೆ ದೂರು ನೀಡಲು ತಾಯಿಯ ಬಳಿಗೆ ಹೋಗುವಿರಾ?
- ಮೊದಲು ಫ್ಯಾನ್ ನ್ನು ಆರಿಸಿ ನಂತರ ತಾಯಿಗೆ ದೂರು ನೀಡುವಿರಾ?
- ಫ್ಯಾನ್ ಬಗ್ಗೆ ತಲೆಕೆಡಿಸಿಕೊಳ್ಳದೆ, ನಿಮ್ಮ ಸ್ನೇಹಿತರೊಂದಿಗೆ ಆಟವಾಡಲು ಹೋಗುವಿರಾ?