ಭೂಮಿ –2

Print Friendly, PDF & Email
ಭೂಮಿ –2

ಪರಿಚಯ

ಭೂಮಿ ನಮ್ಮ ತಾಯಿ. ಮಹಾ ಪರ್ವತಗಳು, ಆಳವಾದ ಸಾಗರಗಳು, ವಿಶಾಲವಾಗಿ ಪಸರಿಸಿರುವ ಕಾಡುಗಳು, ನದಿಗಳು, ಸರೋವರಗಳ ಭಾರವನ್ನು ಅವಳು ಸಹಿಸಿದ್ದಾಳೆ. ಕೃಷಿ, ಗಣಿಗಾರಿಕೆ, ಕೈಗಾರಿಕೆಗಳಿಗಾಗಿ ಭೂಮಿಯ ಮೇಲ್ಮೈ ಮೇಲೆ ಧಾಳಿ ಮಾಡಿ ಘಾಸಿಗೊಳಿಸಿರುವುದನ್ನು ಅವಳು ಸಹಿಸಿಕೊಂಡಿದ್ದಾಳೆ. ಅಲ್ಲದೆ, ಆಹಾರ ಮತ್ತು ಇತರ ವಸ್ತುಗಳನ್ನೂ, ಒಳ್ಳೆಯ ಪರಿಸರ ಮತ್ತು ಕಟ್ಟಡಗಳನ್ನು ನಮ್ಮ ವಸತಿಗೋಸ್ಕರವಾಗಿಯೂ ಕರುಣಿಸುತ್ತಿದ್ದಾಳೆ.

ಕಥೆ

ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದನು. ಅವನ ಜೊತೆಯಲ್ಲಿ ಅವನ ಯುವ ಮೊಮ್ಮಗನೂ ಪ್ರತಿದಿನ ಗದ್ದೆಗೆ ಹೋಗುತ್ತಿದ್ದನು. ಅವನಿಗೆ ಏನನ್ನೇ ನೋಡಿದರೂ, ಆ ಬಗ್ಗೆ ಪ್ರಶ್ನೆ ಕೇಳುವ ಹವ್ಯಾಸವಿತ್ತು. ಅವನ ಅಜ್ಜ ಹೊಲದಲ್ಲಿ ಭತ್ತವನ್ನು ಬಿತ್ತನೆ ಮಾಡುವಾಗ, ಅದರ ಬಗ್ಗೆ ಪ್ರಶ್ನೆ ಮಾಡಿದ. ಅಜ್ಜ ಅವನಿಗೆ ಬೀಜ ಬಿತ್ತನೆಯ ಬಗ್ಗೆ ವಿವರ ನೀಡಿದ. ಮತ್ತೆ ಮೊಮ್ಮಗ, ‘ಏಕೆ’ ಎಂಬ ಪ್ರಶ್ನೆ ಹಾಕಿದ. ಈ ಸಲ ಅಜ್ಜ ಅವನಿಗೆ, ‘ಆರು ತಿಂಗಳು ನಿರೀಕ್ಷಿಸು, ಆಮೇಲೆ ನೋಡು,’ ಎಂದು ಹೇಳಿದ. ಆರು ತಿಂಗಳ ನಂತರ ಭತ್ತದ ಚೀಲಗಳನ್ನು ಮನೆಗೆ ತಂದಾಗ, ಮೊಮ್ಮಗನು ಮತ್ತೆ, ‘ಈ ಚೀಲಗಳು ಎಲ್ಲಿಂದ ಬಂದವು?’ ಎಂದು ಪ್ರಶ್ನೆ ಮಾಡಿದ. ಈಗ ಅಜ್ಜನಿಗೆ ವಿವರಿಸಲು ಅವಕಾಶ ಸಿಕ್ಕಿತು. ಅವನು “ಆರು ತಿಂಗಳ ಹಿಂದೆ ಬೀಜ ಬಿತ್ತಿದುದರ ಫಲವೇ ಇದು” ಎಂದು ವಿವರಿಸಿದ. ಮೊಮ್ಮಗನು ಒಂದು ನಿಮಿಷ ಯೋಚಿಸಿ, “ ನಮ್ಮ ಹೊಲ ಒಂದು ಒಳ್ಳೆಯ ಬ್ಯಾಂಕ್ ಇದ್ದಂತೆ, ಇದು ನಮಗೆ ಅತ್ಯಧಿಕ ಬಡ್ಡಿಯನ್ನು ಠೇವಣಿಯ ಮೇಲೆ ಅಲ್ಪಾವಧಿಗೆ ನೀಡಿದೆ.” ಎಂದು ಹೇಳಿದ.

ಹಾಡು

ಭೂಮಿ ನಾನು, ಕರೆವರೆನ್ನನು ‘ಭೂಮಾತೆ’ ಯೆಂದು, ಈ ಜಗದ ಸೇವೆಗಾಗಿಯೇ ನಾನಿರುವೆ, ಬದಲಾಗಿ ಏನನ್ನೂ ನಾ ಬಯಸದಿರುವೆ, ಸಮರ್ಪಿತವೆನ್ನ ಜೀವನವು ಸಕಲ ಜನಸೇವೆಗೆ (1)
ಸಕಲವನು ಸಹಿಸಿಕೊಳಲೆಂದೇ ಆಗಿಹುದಂತೆ ನನ್ನ ಸೃಷ್ಟಿ, ದೇವ ನೀಡಿಹನೆನಗೆ ಆ ಸಹನ ಶಕ್ತಿ, ಎಲ್ಲದಕು ಹೊಂದಿಕೊಳಲೆನಗಾಗಿಹುದು ತರಬೇತಿ, ಎಲ್ಲ ಬದುಕನು ಸುಗಮ/ಸರಾಗ ಗೊಳಿಸುವ ರೀತಿ, (2)
ಮುಗಿಲೆತ್ತರದ ಪರ್ವತಗಳ ಭಾರ ಹೊತ್ತಿರುವೆ, ವಿಶಾಲ, ಉದ್ದ ನದಿಗಳೆನ್ನ ಒಡಲಿನಲ್ಲಿ ಹರಿದಿವೆ, ಮುಗಿಲೆತ್ತರದ ಭವನಗಳು ನನ್ನ ಮೇಲೆ ನಿಂತಿವೆ, ಜೀವ ಕೊಡುವ ಬೆಳೆಗಳು ನನ್ನ ಮೇಲೆ ಬೆಳೆದಿವೆ (3)

ಮೌನಾಸನ

ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ, ಅವರ ಎದುರು ಒಂದು ಭೂಗೋಲ {Globe} ವನ್ನು ಇಡಬೇಕು. ಅವರಿಗೆ ಭೂಗೋಲದ ಅಂಗುಲಂಗುಲವನ್ನೂ ಗಮನವಿಟ್ಟು ವೀಕ್ಷಿಸುವಂತೆ ತಿಳಿಸಬೇಕು. ಒಂದು ಅಥವಾ ಎರಡು ನಿಮಿಷಗಳ ತೀಕ್ಷ್ಣ ವೀಕ್ಷಣೆಯ ಬಳಿಕ, ಮಕ್ಕಳಿಗೆ ಕಣ್ಣುಗಳನ್ನು ಮುಚ್ಚಿಕೊಳ್ಳುವಂತೆ ಹೇಳಬೇಕು ಮತ್ತು ಭೂಪ್ರದೇಶ, ದೇಶಗಳು ಮತ್ತು ಖಂಡಗಳ ಉದ್ದ, ಅಗಲಗಳ ಬಗ್ಗೆ ದೃಶ್ಶೀಕರಿಸಿಕೊಳ್ಳುವಂತೆ ಹೇಳಬೇಕು.

ಪ್ರಶ್ನೆಗಳು
  1. ಬೆಳೆಗಳನ್ನು ಎಲ್ಲಿ ಬೆಳೆಯುತ್ತಾರೆ?
  2. ಇಟ್ಟಿಗೆಯನ್ನು ಯಾವುದರಿಂದ ಮಾಡಿರುತ್ತಾರೆ?
  3. ಖನಿಜವನ್ನು ಪಡೆಯುವ ಗಣಿಗಳು ಎಲ್ಲಿವೆ?
  4. ನೀರನ್ನು ಪಡೆಯಲು ಬಾವಿಯನ್ನು ಎಲ್ಲಿ ತೋಡಬೇಕು?
  5. ತರಕಾರಿಗಳನ್ನು ಎಲ್ಲಿ ಬೆಳೆಯುವರು?

“ನನ್ನನ್ನು ಸೃಷ್ಟಿಸಿರುವುದೇ ಎಲ್ಲವನ್ನು ತಡೆಯುವ ಶಕ್ತಿ ಹೊಂದಲು.”

ಕಥೆ

ಒಂದು ಹಳ್ಳಿಯಲ್ಲಿ ಒಬ್ಬ ಆಗರ್ಭ ಶ್ರೀಮಂತ ವಾಸವಾಗಿದ್ದನು. ಅವನಿಗೆ ಮೂವರು ಗಂಡು ಮಕ್ಕಳಿದ್ದರು. ಶ್ರೀಮಂತನಿಗೆ ವಯಸ್ಸಾಗುತ್ತಾ ಬಂದಿತು. ಅವನು ತಾನು ಸಾಯುವ ಮೊದಲು, ಆಸ್ತಿಯನ್ನು ತನ್ನ ಮೂರು ಮಕ್ಕಳಿಗೆ ಹಂಚಲು ಬಯಸಿದನು. ಅವನ ಹತ್ತಿರ ಬೇಕಾದಷ್ಟು ಭೂಮಿ, ಬಂಗಾರ, ಆಭರಣಗಳು, ಆಕಳುಗಳು, ಎಮ್ಮೆಗಳು ಇದ್ದವು. ಹಿರಿಯ ಮಗನಿಗೆ ಎಲ್ಲ ಬಂಗಾರದ ಆಭರಣಗಳನ್ನು ಪಡೆದು ಪಟ್ಟಣದಲ್ಲಿ ವಾಸಿಸುವ ಅಪೇಕ್ಷೆ ಇತ್ತು. ಮಧ್ಯದವನಿಗೆ ಆಕಳುಗಳು ಮತ್ತು ಎಮ್ಮೆಗಳ ಬಗ್ಗೆ ಆಸೆ ಇತ್ತು. ಆದ್ದರಿಂದ ಅವೆಲ್ಲವುಗಳನ್ನು ಮತ್ತು ಅವುಗಳನ್ನು ನೋಡಿಕೊಳ್ಳುವ ಎಲ್ಲ ಕೆಲಸದವರನ್ನು ತನ್ನ ಜೊತೆಗೆ ಕರೆದೊಯ್ದನು. ಕೊನೆಯವನಿಗೆ ಯಾವ ಆಯ್ಕೆಯೂ ಇರಲಿಲ್ಲ.

ಆದ್ದರಿಂದ ಅವನು ಭೂಮಿಯನ್ನು ಸ್ವೀಕರಿಸಿದ. ಕಾಲಾಂತರದಲ್ಲಿ ಶ್ರೀಮಂತ ನಿಧನ ಹೊಂದಿದ. ಮಕ್ಕಳು ತಮ್ಮ ಆಯ್ಕೆಯ ಪ್ರಕಾರ ಜೀವಿಸಿದರು. ಒಂದು ಸಾರಿ ಅವರ ಜಿಲ್ಲೆಯಲ್ಲಿ ಪ್ರವಾಹ ಉಂಟಾಯಿತು. ಆಕಳುಗಳನ್ನು ಉಳಿಸಿಕೊಳ್ಳುವ ಅವಕಾಶವಿರಲಿಲ್ಲ. ಆದ್ದರಿಂದ ಅವನು ಕೆಲವು ಆಕಳುಗಳನ್ನು ಮತ್ತು ಎಮ್ಮೆಗಳನ್ನು ಕಳೆದುಕೊಂಡ. ಬದುಕುಳಿದವುಗಳಿಗೆ ತಿನ್ನಲು ಯಾವುದೇ ಆಹಾರ ಸಿಗಲಿಲ್ಲ. ನಂತರದಲ್ಲಿ ಕೆಲವು ಮರಣ ಹೊಂದಿದವು.

ಎರಡನೆಯ ಮಗ ಬಹಳ ನಷ್ಟವನ್ನು ಅನುಭವಿಸಬೇಕಾಯಿತು. ಯಾವುದೇ ಕೆಲಸವಿಲ್ಲದೆ ಮತ್ತು ಆಹಾರವು ದೊರೆಯದೆ, ಆ ಹಳ್ಳಿಯವರೆಲ್ಲ ಹತ್ತಿರದ ಪಟ್ಟಣಕ್ಕೆ ವಲಸೆ ಹೋದರು. ಕೆಲವರು ಕದಿಯುವುದನ್ನು ಪ್ರಾರಂಭಮಾಡಿದರು. ಆ ಊರಿನಲ್ಲಿದ್ದ ಹಿರಿಯ ಮಗನ ಮನೆಯಲ್ಲಿ ಒಮ್ಮೆ ಕಳ್ಳತನವಾಯಿತು. ಅವನೂ ಸಹ ಸಾಕಷ್ಟು ಆಭರಣಗಳನ್ನು ಕಳೆದುಕೊಂಡನು. ಪ್ರವಾಹದ ನಂತರ ಹಳ್ಳಿಯಲ್ಲಿನ ಜನರು ಮುಂದಿನ ಬೆಳೆಗಾಗಿ ಬಹಳ ಕಷ್ಟಪಟ್ಟರು. ಅವರ ಶ್ರಮಕ್ಕೆ ಫಲವೋ ಎಂಬಂತೆ, ಉತ್ತಮ ಸುಗ್ಗಿಯಾಗಿ ಜನರು ಸಂತೋಷದಿಂದ ಜೀವಿಸುವಂತಾಯಿತು. ಕಿರಿಯ ಮಗ ಭೂಮಿಗೆ, ಅದು ನೀಡಿದ ಕೊಡುಗೆಗಾಗಿ ಧನ್ಯವಾದಗಳನ್ನು ಅರ್ಪಿಸಿದ.

ಗುಂಪು ಚಟುವಟಿಕೆ

ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅವರಿಗೆ ಈ ಕೆಳಕಂಡ ಕಾರ್ಯಗಳನ್ನು ನೀಡಲಾಗಿದೆ. ಒಂದು ಗುಂಪು ಪದದ ಸುಳಿವು ನೀಡುತ್ತದೆ. ಇನ್ನೊಂದು ಗುಂಪು, ಅದರ ಉಪಯೋಗದ ಬಗ್ಗೆ ಹೇಳುತ್ತದೆ. ಅಂಕಗಳನ್ನು ನೀಡಲಾಗುತ್ತದೆ.

Leave a Reply

Your email address will not be published. Required fields are marked *