ಅಗ್ನಿ – 1

Print Friendly, PDF & Email
ಅಗ್ನಿ – 1

ಪರಿಚಯ

ಪಂಚಭೂತಗಳಲ್ಲೊಂದಾದ ಅಗ್ನಿಯು ಬೆಳಕನ್ನು ಪ್ರತಿನಿಧಿಸುತ್ತದೆ. ನಾವು ಅಗ್ನಿಯನ್ನು, ‘ಅಗ್ನಿದೇವ’ ಎಂದು ಪೂಜಿಸುತ್ತೇವೆ. ಅಗ್ನಿಯಿಂದ ಹೋಮವನ್ನೂ ಮತ್ತು ಎಲ್ಲಾ ದೇವರುಗಳಿಗೆ ಆರತಿಯನ್ನೂ ಮಾಡುತ್ತೇವೆ.

ಗುಣ ಲಕ್ಷಣಗಳು

“ಶಬ್ದ”, “ಸ್ಪರ್ಶ” ಮತ್ತು “ರೂಪ” ಇವು ಅಗ್ನಿಯ ಗುಣ ಲಕ್ಷಣಗಳು. ಅಗ್ನಿ ತಾನು ಉರಿದು ಇತರರಿಗೆ ಬೆಳಕನ್ನು ನೀಡುತ್ತದೆ. ಇದು ಚೈತನ್ಯದ ವಾಹಕವಾಗಿದೆ. (It transmits energy also). ಸೂರ್ಯನೂ ಒಂದು ತರಹ ಅಗ್ನಿಯ ಚೆಂಡಿನಂತೆ. ಇದು ನಮಗೆ ಚೈತನ್ಯ ಮತ್ತು ಬೆಳಕನ್ನು ನೀಡುತ್ತದೆ. ಬೆಳಕು ಜ್ಞಾನದ ಸಂಕೇತ. ಹೇಗೆ ಬೆಳಕು ಕತ್ತಲೆಯನ್ನು ನಿವಾರಿಸುತ್ತದೆಯೋ, ಹಾಗೆಯೇ, ಜ್ಞಾನವು ಅಜ್ಞಾನವೆಂಬ ಕತ್ತಲೆಯನ್ನು ತೆಗೆದು ಹಾಕುತ್ತದೆ. ಅಗ್ನಿ ಯಾವುದೇ ವಸ್ತುವಿನಲ್ಲಿರುವ ಕಲ್ಮಶಗಳನ್ನು ತೆಗೆದು ಹಾಕಿ, ಅದನ್ನು ಪರಿಶುದ್ಧಗೊಳಿಸುತ್ತದೆ. ಉದಾ: ಚಿನ್ನವನ್ನು ಪರಿಶುದ್ಧಗೊಳಿಸುವುದು. ಆದ್ದರಿಂದಲೇ ಇದು ಪರಿಶುದ್ಧತೆಯ ಸಂಕೇತ. ಯಾವಾಗ ಜ್ಞಾನವೆಂಬ ಬೆಳಕು ಪ್ರಕಾಶಿಸುತ್ತದೆಯೋ, ಆಗ ಕೆಟ್ಟ ಗುಣಗಳಾದ ದ್ವೇಷ, ಹೊಟ್ಟೆಕಿಚ್ಚು, ದುರಾಸೆ ಇತ್ಯಾದಿಗಳು ತೊಲಗಿ, ಒಳ್ಳೆಯ ಗುಣಗಳು ಆ ಸ್ಥಳವನ್ನು ಆವರಿಸುತ್ತವೆ. ಅಗ್ನಿಯ ಜ್ವಾಲೆಗಳು ಯಾವಾಗಲೂ ಮೇಲೆ ಹೋಗುತ್ತವೆ. ಹಾಗೆಯೇ ನಾವೂ ಸಹ ಯಾವಾಗಲೂ ಉನ್ನತ, ಉದಾತ್ತ ಮತ್ತು ಆದರ್ಶ ಆಲೋಚನೆಗಳನ್ನು ಹೊಂದಬೇಕು.

ಕಥೆ

ಒಂದು ದಿನ ಒಬ್ಬ ಸಂತರು, ಒಂದು ತಂತಿವಾದ್ಯದೊಡನೆ ಒಂದು ಕೆಟ್ಟಹಾಡನ್ನು ಹಾಡುತ್ತಿದ್ದ ಒಬ್ಬ ಬಾಲಕನನ್ನು ನೋಡಿದರು. ಸಂತರು ಅದನ್ನು ನಿಲ್ಲಿಸಿ, “ಓ ದೇವರೇ, ನೀನು ದೊಡ್ಡವನು. ನಿನ್ನ ಇಚ್ಛೆಯಿಲ್ಲದೆ ಒಂದು ಎಲೆಯೂ ಕೂಡ ಚಲಿಸಲಾರದು” ಎಂದು ಜೋರಾಗಿ ಕೂಗಿ ಹೇಳಿದರು. ಆಗ ಆ ಬಾಲಕನು ಕೋಪಗೊಂಡು, ಆ ತಂತೀವಾದ್ಯದಿಂದ ಸಂತರ ತಲೆಗೆ ಹೊಡೆದನು. ಆ ವಾದ್ಯ ಮುರಿದು ಹೋಯಿತು. ಸಂತರು ನಕ್ಕು ಮುಂದಕ್ಕೆ ಹೋದರು. ಗುಡಿಸಿಲಿಗೆ ಹಿತಿರುಗಿದ ಮೇಲೆ ಸಂತರು ತಮ್ಮ ಶಿಷ್ಯನಿಗೆ ಆ ಘಟನೆಯ ಪೂರ್ಣ ವಿವರವನ್ನು ಹೇಳಿ.

ಅವನನ್ನು ಆ ಬಾಲಕ ಇರುವಲ್ಲಿಗೆ ಹೋಗಿ, ತಂತೀವಾದ್ಯಕ್ಕೆ ತಗಲುವ ಹಣ ಮತ್ತು ಒಂದಷ್ಟು ಸಿಹಿತಿಂಡಿಗಳನ್ನು ಕೊಟ್ಟು ಬರಲು ತಿಳಿಸಿದರು. ಅಲ್ಲದೆ, ಆ ಬಾಲಕನಿಗೆ, “ಕೋಪಮಾಡುವುದು ಆರೋಗ್ಯಕ್ಕೆ ಹಾನಿಕರ, ತಮ್ಮಿಂದಾಗಿ ಬಾಲಕನು ಕೋಪಮಾಡುವಂತಾದುದಕ್ಕೆ ತಾವು ವಿಷಾದ ವ್ಯಕ್ತಪಡಿಸಿರುವುದಗಿಯೂ” ತಿಳಿಸುವಂತೆ ಹೇಳಿದರು. ಸಿಹಿತಿಂಡಿಗಳನ್ನು ಮತ್ತು ಮೃದುವಾದ ಹಿತವಚನಗಳನ್ನೂ ಸಂತರಿಂದ ಪಡೆದು, ಬಾಲಕನ ಕಣ್ಣಾಲಿಗಳಲ್ಲಿ ಪಶ್ಚಾತ್ತಾಪದ ಹನಿಗಳುದುರಿದವು. ಅವನು ಸಂತರ ಬಳಿ ಬಂದು, ತಾನು ಅವರನ್ನು ನೋಯಿಸಿದ್ದಕ್ಕೆ ಕ್ಷಮೆ ಯಾಚಿಸಿದನು.

ಉದ್ದರಣ

ಅಗ್ನಿಯು ಬಲವಾಗಿ ಮತ್ತು ಪ್ರಕಾಶಮಾನವಾಗಿ ಉರಿಯುತ್ತದೆ. ಹಾಗೆಯೇ ನನ್ನ ಆಲೋಚನೆಗಳು ಯಾವಾಗಲೂ ಉನ್ನತವಾಗಿರಲಿ.

ಮೌನಾಸನ

ಮಕ್ಕಳನ್ನು ಸುಖಾಸನದಲ್ಲಿ, ನೇರವಾಗಿ ಮತ್ತು ನಿಶ್ಶಬ್ದವಾಗಿ ಕುಳಿತುಕೊಳ್ಳಲು ತಿಳಿಸಿ. ನಂತರ ಕಣ್ಣು ಮುಚ್ಚಿಕೊಂಡು ಈ ಕೆಳಗಿನಂತೆ ಆಲೋಚಿಸಲು ತಿಳಿಸಿ. ನಿಮ್ಮ ಎದುರು ಉರಿಯುತ್ತಿರುವ ದೀಪವಿದೆಯೆಂದು ತಿಳಿಯಿರಿ. ಕಣ್ಣುಗಳನ್ನು ಮುಚ್ಚಿಕೊಂಡಿರುವಂತೆಯೇ ಆ ದೀಪದ ಜ್ವಾಲೆಯನ್ನು ನಿಧಾನವಾಗಿ ನಿಮ್ಮ ಹಣೆಯ ಬಳಿ, ಮತ್ತು ನಂತರ ನಿಮ್ಮ ತಲೆಯೊಳಗೆ ತೆಗೆದುಕೊಂಡು ಹೋಗುತ್ತಿರುವಂತೆ ಕಲ್ಪಿಸಿಕೊಳ್ಳಿ ಮತ್ತು ಹಾಗೆಯೇ ಹೇಳಿಕೊಳ್ಳಿ. ಎಲ್ಲಿ ಬೆಳಕಿದೆಯೋ, ಅಲ್ಲಿ ಕತ್ತಲಿರಲು ಸಾಧ್ಯವಿಲ್ಲ. ಎಲ್ಲ ಕೆಟ್ಟ ಆಲೋಚನೆಗಳನ್ನು ಹೊರಹಾಕಿ, ಎಲ್ಲ ಒಳ್ಳೆಯ ಆಲೋಚನೆಗಳನ್ನು ಒಳಕ್ಕೆ ತನ್ನಿ. ನಾನು ಯಾವಾಗಲೂ ಒಳ್ಳೆಯ ಆಲೋಚನೆಗಳನ್ನೇ ಹೊಂದುವೆ ಎಂದು ದೃಢ ನಿರ್ಧಾರ ಮಾಡಿ.

ಚಟುವಟಿಕೆಗಳು

ಮೂರು ಜೊತೆ ಕಾಡ್೵ ಗಳನ್ನು ಸಿದ್ಧಮಾಡಿಟ್ಟುಕೊಳ್ಳಿ. ಮಕ್ಕಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಿ, ಕಾರ್ಡ್ ಗಳನ್ನು ನೀಡಿರಿ. ಪ್ರತಿಯೊಂದು ಜೊತೆಗೆ, ಎ) ವೃತ್ತಿಪರರು, ಬಿ) ಅವರು ಮಾಡುವ ವೃತ್ತಿ ಮತ್ತು ಸಿ) ಶಾಖ ಅಥವಾ ಅಗ್ನಿಯ ಮೂಲ ಎಂದು ಹೆಸರಿಸಲಾಗಿದೆ. ಮಕ್ಕಳು ಕಾರ್ಡ್ ಗಳನ್ನು ಹೊಂದಿಸಬೇಕು.

ಚರ್ಚಿಸಲು ಪ್ರಶ್ನೆಗಳು
  • ಮಾನವನ ದೇಹದೊಳಗೆ ಅಗ್ನಿ ಇದೆ. ಉಷ್ಣಮಾಪಕ [ಥರ್ಮಾ ಮೀಟರ್] ದೇಹದ ಉಷ್ಣತೆಯನ್ನು ತೋರಿಸುತ್ತದೆ. ಮರಣ ಹೊಂದಿದಾಗ ದೇಹ ತಣ್ಣಗಾಗುತ್ತದೆ.
  • ಸೂರ್ಯನಲ್ಲಿ ಅಗ್ನಿ ಇದೆ. (ಮಸೂರವನ್ನು ಬಳಸಿಕೊಂಡು ಕಿರಣಗಳನ್ನು ಒಣ ಕಾಗದದ ಮೇಲೆ ಕೇಂದ್ರೀಕರಿಸಿ ಹೊತ್ತಿಸಬಹುದು)
  • ಮರ ಮತ್ತು ಕಲ್ಲುಗಳಲ್ಲು ಅಗ್ನಿ ಇದೆ. (ಎರಡು ಮರದ ರೆಂಬೆಗಳು ಜೋರಾಗಿ ಉಜ್ಜಲ್ಪಟ್ಟಾಗ, ಎರಡು ಕಲ್ಲುಗಳನ್ನು ಪರಸ್ಪರ ಉಜ್ಜಿದಾಗ ಅಗ್ನಿ ಉತ್ಪತ್ತಿಯಾಗುತ್ತದೆ).

Leave a Reply

Your email address will not be published. Required fields are marked *