ಜಲ – 2

Print Friendly, PDF & Email
ಜಲ – 2

ಕಥೆ:

ರಮೇಶ ಎಂಬ ಹುಡುಗನಿದ್ದನು. ಅವನು ತನ್ನ ವಿರಾಮದ ಸಮಯವನ್ನು ಕೈತೋಟದಲ್ಲಿ ಕಳೆಯಲು ಇಚ್ಛಿಸುತ್ತಿದ್ದನು. ಒಂದು ದಿನ ಅವನು ಮಾರುಕಟ್ಟೆಯಿಂದ ಕೆಲವು ಹೂವಿನ ಗಿಡಗಳನ್ನು ತಂದು ಕೈ ತೋಟದಲ್ಲಿ ನೆಟ್ಟನು. ಅವುಗಳನ್ನು ಬಹಳ ಕಾಳಜಿ ವಹಿಸಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಒಂದು ವಾರದ ನಂತರ, ಅವನ ಪಾಲಕರು ದಕ್ಷಿಣದ ಕೆಲವು ಸ್ಥಳಗಳಿಗೆ ಹೋಗಬೇಕಾದ ಸಂದರ್ಭ ಬರುತ್ತದೆ. ರಮೇಶನೂ ಅವರ ಜೊತೆಗೆ ಹೋಗಬೇಕಾಗುತ್ತದೆ. ಅವರು ಹದಿನೈದು ದಿನಗಳ ನಂತರ ಊರಿಗೆ ಹಿಂದಿರುಗಿ ಬರುತ್ತಾರೆ. ಅವನು ನೋಡುವಾಗ ಎಲ್ಲ ಗಿಡಗಳೂ ಸತ್ತು ಹೋಗಿರುತ್ತವೆ.

  • ಹೇಳಿ, ಗಿಡಗಳು ಸಾಯಲು ಕಾರಣವೇನು?
  • ರಮೇಶನು ಏನು ಮಾಡಬಹುದಾಗಿತ್ತು?
  • ನೀರಿಲ್ಲದಿದ್ದರೆ ನೀವು ಯಾವ ಯಾವ ಸಮಸ್ಯೆಗಳನ್ನು ಎದುರಿಸುತ್ತೀರಿ?
ಗುಂಪು ಚಟುವಟಿಕೆ:

ಐದರಿಂದ ಎಂಟು ವಿದ್ಯಾರ್ಥಿಗಳನ್ನು ಒಂದು ಗುಂಪಾಗಿ ವಿಭಾಗ ಮಾಡಿ. ಅವರಿಗೆ ನೀರಿನ ಉಪಯೋಗದ ಬಗ್ಗೆ ಚರ್ಚಿಸಲು ಮತ್ತು ಪಟ್ಟಿ ಮಾಡಲು ತಿಳಿಸಿ. ನೀರಿನ ಉಪಯೋಗದ ಬಗ್ಗೆ ಸಾಮಾನ್ಯವಾದ ರೇಖಾಚಿತ್ರವನ್ನು ಬರೆದು, ಪ್ರತಿಯೊಂದು ಚಿತ್ರಕ್ಕೂ ಶೀರ್ಷಿಕೆ ನೀಡುವಂತೆ ತಿಳಿಸಿ. ಪ್ರತಿಯೊಂದು ಗುಂಪು ತಾನು ಬರೆದಿದ್ದನ್ನು ಪೂರ್ಣ ತರಗತಿಯ ಮುಂದೆ ಪ್ರಸ್ತುತ ಪಡಿಸಬೇಕು. ಅಂತಿಮವಾಗಿ ಗುರುಗಳು ಅದನ್ನು ಒಟ್ಟುಗೂಡಿಸಿ, ಕಪ್ಪು ಹಲಗೆಯ ಮೇಲೆ ಬರೆಯಬೇಕು. ನಂತರ ಗೋಡೆಯ ಮೇಲೆ ರೇಖಾಚಿತ್ರಗಳನ್ನು ಪ್ರದರ್ಶಿಸಬೇಕು.ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಗಮನಿಸಿ ಟಿಪ್ಪಣಿ ಮಾಡುವಂತೆ ತಿಳಿಸುವುದು.

ಸಮೂಹ ಗೀತೆ:

ನೀರು, ನೀರು, ನೀರು, ಆ ದೇವರ ಸೃಷ್ಟಿಯು ನೀರು.
ನೀನಿಲ್ಲದಿರೆ ಎಮಗೆ ಜೀವನವಿಲ್ಲ, ನೀನೇ ನಮಗೆ ಜೀವನವೆಲ್ಲ;
ಿನ್ನಿಂದಲೇ ಎಲ್ಲರ ಜೀವನ ಸುಗಮ, ನಿನ್ನ ಸ್ವಚ್ಛತೆಗೆ ನಾವ್ ತೊಡುವೆವು ಪಣವ; ನೀರು, ನೀರು, ನೀರು.

ಕಥೆ:

ರಾಜಾ ದಿಲೀಪನ ಮಗ ಭಗೀರಥ. ಅವನು ರಾಜನಾದ ಮೇಲೆ ಪವಿತ್ರ ಗಂಗಾಮಾತೆಯನ್ನು ಭೂಮಿಯ ಮೇಲೆ ಹರಿಸುತ್ತೇನೆಂದು ಪ್ರತಿಜ್ಞೆ ಮಾಡಿದ. ಬ್ರಹ್ಮ ಮತ್ತು ಶಿವ ದೇವರನ್ನು ಒಲಿಸಿಕೊಳ್ಳಲು ಅವನು ಘೋರವಾದ ತಪಸ್ಸನ್ನು ಮಾಡಿದ.

ಭಗೀರಥನ ದೃಢ ನಿರ್ಧಾರ ಮತ್ತು ಭಕ್ತಿ ಅವರನ್ನು ಸಂತುಷ್ಟಗೊಳಿಸಿತು. ಶಿವನು ತನ್ನ ಜಟೆಯ ಕೂದಲಿನಲ್ಲಿ ಗಂಗೆಯ ರೂಪವನ್ನು ಧರಿಸಿದನು. ನಂತರ ಪವಿತ್ರಗಂಗೆ ಅಲ್ಲಿಂದ ಕೆಳಗೆ ಹರಿಯಲಾರಂಭಿಸಿದಳು. ಎಲ್ಲೆಲ್ಲಿ ಶುದ್ಧ ಮತ್ತು ಪವಿತ್ರ ಗಂಗೆ ಹರಿದಳೋ, ಅಲ್ಲೆಲ್ಲ ಸಂತೋಷ, ಸಮೃದ್ಧಿ ಮತ್ತು ಪ್ರೇಮ ನೆಲೆಯಾಯಿತು. ಭೂಮಿ ಫಲವತ್ತಾಯಿತು. ನದಿಯ ದಂಡೆಗಳ ಮೇಲೆ ನಾಗರೀಕತೆ ಬೆಳೆಯಿತು. ಗಂಗಾಮಾತೆ ದಿವ್ಯ ಮತ್ತು ಪರಿಶುದ್ಧ ಜೀವನದ ಸಂಕೇತವೆನಿಸಿದಳು.

ಮೌನಾಸನ:

“ಬೆಳಗ್ಗೆ ಬೇಗ ಹಾಸಿಗೆಯಿಂದ ಎದ್ದು, ದೇವರಿಗೆ ಪ್ರಾರ್ಥನೆ ಸಲ್ಲಿಸಿದೆ. ಹೊರಬಂದು ನೀರಿನಿಂದ ಮುಖವನ್ನು ತೊಳೆದು, ಹಲ್ಲುಗಳನ್ನು ಉಜ್ಜಿದೆ. ಪ್ರಾತರ್ವಿಧಿಗಳನ್ನು ಮುಗಿಸಿ, ನೀರನ್ನು ‘ಹವಣ’ಮಾಡಿಕೊಂಡು ಸ್ನಾನ ಮಾಡಿದೆ. ನೀರಿನಲ್ಲಿ ನನ್ನ ಬಟ್ಟೆಗಳನ್ನು ಒಗೆದು ಶುಚಿಗೊಳಿಸಿದೆ. ನಂತರ ದೇವರಮನೆಗೆ ಬಂದು ದೇವರಿಗೆ ನಮಸ್ಕರಿಸಿದೆ. ಹಾಗೆಯೇ ಮನೆಯಲ್ಲಿನ ಹಿರಿಯರ ಚರಣಗಳಿಗೆ ನಮಸ್ಕರಿಸಿದೆ. ಅಷ್ಟರಲ್ಲಿ ನನ್ನ ಅಮ್ಮ ನೀರಿನಿಂದ ಪಾತ್ರೆಗಳನ್ನು ತೊಳೆದು, ಅಂಗಳಕ್ಕೆ ನೀರನ್ನು ಸಿಂಪಡಿಸಿ ಶುಚಿಗೊಳಿಸಿದ್ದರು. ಮನೆಯವರೆಲ್ಲ ನನ್ನಂತೆಯೇ ನೀರನ್ನು ಬಳಸಿ ದಿನನಿತ್ಯದ ಕಾರ್ಯಗಳನ್ನು ಮಾಡಿ ಮುಗಿಸಿದರು. ಮುಖ್ಯವಾಗಿ, ನನ್ನ ಅಮ್ಮ ನೀರನ್ನು ಉಪಯೋಗಿಸಿ ಅಡುಗೆಯನ್ನು ಮಾಡಿದರು. ಶಾಲೆಯಿಂದ ಬಂದ ನಂತರ, ನೀರಿನಿಂದ ಕೈಕಾಲು ಮುಖ ತೊಳೆದು ಗಿಡಗಳಿಗೆ ನೀರುಣಿಸಿದೆ. ನಾನು ಉಪಾಹಾರ ಸೇವಿಸಿದಾಗಲೂ ನೀರನ್ನು ಕುಡಿಯುತ್ತೇನೆ. ಓ ನೀರೇ! ನೀನಿಲ್ಲದೆ ಈ ಜಗತ್ತಿನಲ್ಲಿ ನನ್ನ ಅಸ್ತಿತ್ವವೇ ಇಲ್ಲ. ನಿಜವಾಗಿಯೂ ನೀನು ಅದ್ಭುತ. ನಮಗಾಗಿ ನಿನ್ನನ್ನು ಸೃಷ್ಟಿಸಿದ ಆ ದೇವರಿಗೆ ನಾನು ಚಿರಋಣಿ. ನಾನು ಅನವಶ್ಯಕವಾಗಿ ನಿನ್ನ ಉಪಯೋಗವನ್ನು ಪಡೆಯುವುದಿಲ್ಲ. ನಿನ್ನ ಪರಿಶುದ್ಧತೆಗೆ ಭಂಗವನ್ನುಂಟು ಮಾಡುವುದಿಲ್ಲವೆಂದು ಭರವಸೆ ನೀಡುತ್ತೇನೆ.” ಓಂ ಶಾಂತಿಃ ಶಾಂತಿಃ ಶಾಂತಿಃ |

Leave a Reply

Your email address will not be published. Required fields are marked *